ಸಿಎಂ ಬೊಮ್ಮಾಯಿ ಜತೆ ಫೋನ್ ಮೂಲಕ ಚರ್ಚಿಸಿದೆ; ನಂಜನಗೂಡು ದಂಡಾಧಿಕಾರಿ ವಿರುದ್ಧ ಕ್ರಮಕ್ಕೆ ಮನವಿ ಮಾಡಿರುವೆ: ಸಂಸದ ಪ್ರತಾಪ್

TV9 Digital Desk

| Edited By: sandhya thejappa

Updated on:Sep 13, 2021 | 2:29 PM

ಸಿಎಂ ಬೊಮ್ಮಾಯಿಯವರೇ ಈ ವಿಚಾರಕ್ಕೆ ಸ್ಪಂದಿಸಿದ್ದಾರೆ. ನನಗೆ ಉಳಿದವರ ಸಹಕಾರ ಬೇಡ. ನಮ್ಮ ಭಾವನೆಗಳಿಗೆ ಸ್ಪಂದಿಸುವಂತ ಮುಖ್ಯಮಂತ್ರಿ ಇದ್ದಾರೆ. ನಾನು ರಾಜಕಾರಣ ಮಾಡಲು ಬಿಜೆಪಿಗೆ ಬಂದಿಲ್ಲ.

ಸಿಎಂ ಬೊಮ್ಮಾಯಿ ಜತೆ ಫೋನ್ ಮೂಲಕ ಚರ್ಚಿಸಿದೆ; ನಂಜನಗೂಡು ದಂಡಾಧಿಕಾರಿ ವಿರುದ್ಧ ಕ್ರಮಕ್ಕೆ ಮನವಿ ಮಾಡಿರುವೆ: ಸಂಸದ ಪ್ರತಾಪ್
ಸಂಸದ ಪ್ರತಾಪ್ ಸಿಂಹ
Follow us


ಮೈಸೂರು: ಜಿಲ್ಲೆಯಲ್ಲಿ ದೇಗುಲಗಳ ತೆರವು ಕಾರ್ಯಾಚರಣೆ ವಿಚಾರ ಬಗ್ಗೆ ಸಿಎಂ ಬೊಮ್ಮಾಯಿ ಜತೆ ದೂರವಾಣಿ ಮೂಲಕ ಚರ್ಚಿಸಿದ್ದೇನೆ ಎಂದು ತಿಳಿಸಿದ ಬಿಜೆಪಿ ಸಂಸದ ಪ್ರತಾಪ್ ಸಿಂಹ (Prathap Simha), ಸುಪ್ರೀಂಕೋರ್ಟ್ ಆದೇಶ ಏನಿದೆ ಎಂದು ಸಿಎಂಗೆ ಹೇಳಿದ್ದೇನೆ. ಸುಪ್ರೀಂಕೋರ್ಟ್ ದೇವಾಲಯವನ್ನು ಒಡೆಯಲು ಹೇಳಿಲ್ಲ. ಉಚ್ಚಗನಿ ಮಹದೇವಮ್ಮ ದೇಗುಲ ರಸ್ತೆಗೆ ಅಡ್ಡಿಯಾಗುತ್ತಿರಲಿಲ್ಲ. ಅದು ಐತಿಹಾಸಿಕ ದೇಗುಲ, ಅದನ್ನು ತೆರವು ಮಾಡಿದ್ದಾರೆ. ಮೂಲ ವಿಗ್ರಹ ಸ್ಥಳಾಂತರಿಸದೆ ನೆಲಸಮ ಮಾಡಿದ್ದಾರೆ. ಈ ಎಲ್ಲ ವಿಚಾರಗಳನ್ನು ಸಿಎಂ ಬೊಮ್ಮಾಯಿಗೆ (Basavaraj Bommai) ತಿಳಿಸಿದ್ದೇನೆ. ನಂಜನಗೂಡು ದಂಡಾಧಿಕಾರಿ ವಿರುದ್ಧ ಕ್ರಮಕ್ಕೆ ಮನವಿ ಮಾಡಿದ್ದೇನೆ. ಜಿಲ್ಲಾಡಳಿತಕ್ಕೂ ಸೂಚನೆ ನೀಡಬೇಕೆಂದು ಸಿಎಂಗೆ ಕೇಳಿದ್ದೇನೆ ಎಂದು ಹೇಳಿದ್ದಾರೆ.

ಸಿಎಂ ಬೊಮ್ಮಾಯಿಯವರೇ ಈ ವಿಚಾರಕ್ಕೆ ಸ್ಪಂದಿಸಿದ್ದಾರೆ. ನನಗೆ ಉಳಿದವರ ಸಹಕಾರ ಬೇಡ. ನಮ್ಮ ಭಾವನೆಗಳಿಗೆ ಸ್ಪಂದಿಸುವಂತ ಮುಖ್ಯಮಂತ್ರಿ ಇದ್ದಾರೆ. ನಾನು ರಾಜಕಾರಣ ಮಾಡಲು ಬಿಜೆಪಿಗೆ ಬಂದಿಲ್ಲ. ನಾನು ಆರ್.ಎಸ್.ಎಸ್ ಹಿನ್ನೆಲೆಯಿಂದ ಬಂದವನು. ಎಂಪಿ ಯಾದವನಿಗೆ ಇಡೀ ದೇಶವೆ ಕಾರ್ಯಕ್ಷೇತ್ರ. ಒಂದು ಕ್ಷೇತ್ರಕ್ಕೆ ಸೀಮಿತ ಎಂಬುದು ಬೇಡ ಎಂದು ಶಾಸಕ ಹರ್ಷವರ್ಧನ್​ಗೆ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.

ಪ್ರತ್ಯೇಕ ಬೋರ್ಡ್ ಬೇಕೆಂದು ಒತ್ತಾಯ
ವಕ್ಫ್ ಬೋರ್ಡ್ ರೀತಿ ನಮಗೂ ಪ್ರತ್ಯೇಕ ಬೋರ್ಡ್ ಬೇಕು ಎಂದು ಒತ್ತಾಯಿಸಿದ ಪ್ರತಾಪ್ ಸಿಂಹ, ಪ್ರತ್ಯೇಕ ಬೋರ್ಡ್ ಸ್ಥಾಪಿಸಿದರೆ ಈ ರೀತಿ ಸಮಸ್ಯೆ ಇರಲ್ಲ. ಸುಪ್ರಿಂಕೋರ್ಟ್ ಆದೇಶ ಎಂದು ದಾರಿ ತಪ್ಪಿಸುತ್ತಿದ್ದಾರೆ. ಅಧಿಕಾರಿಗಳು ಎಲ್ಲರ ದಾರಿ ತಪ್ಪಿಸುತ್ತಿದ್ದಾರೆ. ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಕೆಲಸ ಮಾಡ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ

ಮಾತಾಡುತ್ತಿದೆಯಾ ಸಿದ್ದಾರ್ಥ್​ ಶುಕ್ಲಾ ಆತ್ಮ? ವೈರಲ್​ ಆಗುತ್ತಿದೆ ವಿಚಿತ್ರ ಧ್ವನಿ ಇರುವ ವಿಡಿಯೋ

ಗೌರಿಬಿದನೂರು: ಕೃಷಿ ಹೊಂಡದಲ್ಲಿ ಗಣೇಶ ವಿಸರ್ಜನೆಗೆ ನೀರು ನೋಡಲು ಹೋಗಿ ವಿದ್ಯಾರ್ಥಿಗಳಿಬ್ಬರು ಜಲ ಸಮಾಧಿ

(Prathap Simha discussed with CM Bommayi on clearance of temples at mysuru)

ತಾಜಾ ಸುದ್ದಿ

Related Stories

Click on your DTH Provider to Add TV9 Kannada