AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾತಾಡುತ್ತಿದೆಯಾ ಸಿದ್ದಾರ್ಥ್​ ಶುಕ್ಲಾ ಆತ್ಮ? ವೈರಲ್​ ಆಗುತ್ತಿದೆ ವಿಚಿತ್ರ ಧ್ವನಿ ಇರುವ ವಿಡಿಯೋ

ಸೆ.2ರಂದು ಸಿದ್ದಾರ್ಥ್​ ಶುಕ್ಲಾ ನಿಧನರಾದರು. ಆ ದುರ್ಘಟನೆಯ ಬೆನ್ನಲ್ಲೇ ಸ್ಟೀವ್​ ಹಫ್​ ಅವರು ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ವಿಡಿಯೋ ಹಂಚಿಕೊಂಡಿದ್ದು, ಅದರಲ್ಲಿರುವ ಧ್ವನಿ ಸಿದ್ದಾರ್ಥ್​ ಶುಕ್ಲಾರ ಆತ್ಮದ್ದು ಎಂದು ಹೇಳುತ್ತಿದ್ದಾರೆ.

ಮಾತಾಡುತ್ತಿದೆಯಾ ಸಿದ್ದಾರ್ಥ್​ ಶುಕ್ಲಾ ಆತ್ಮ? ವೈರಲ್​ ಆಗುತ್ತಿದೆ ವಿಚಿತ್ರ ಧ್ವನಿ ಇರುವ ವಿಡಿಯೋ
ಸ್ಟೀವ್​ ಹಫ್​, ಸಿದ್ದಾರ್ಥ್​ ಶುಕ್ಲಾ
TV9 Web
| Edited By: |

Updated on:Sep 13, 2021 | 12:08 PM

Share

ನಟ ಸಿದ್ದಾರ್ಥ್​ ಶುಕ್ಲಾ ಅವರು ಹೃದಯಾಘಾತದಿಂದ ನಿಧನರಾದ ಬಳಿಕ ಅವರ ಅಭಿಮಾನಿಗಳ ವಲಯದಲ್ಲಿ ಶೋಕ ಆವರಿಸಿದೆ. ಫಿಟ್ನೆಸ್​ಗೆ ಹೆಚ್ಚು ಮಹತ್ವ ನೀಡುತ್ತಿದ್ದ ಅವರು ಹೃದಯಾಘಾತದಲ್ಲಿ ಮೃತರಾದರು ಎಂಬ ಸುದ್ದಿಯನ್ನು ಬಹುತೇಕರಿಗೆ ನಂಬಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಅವರ ಸಾವಿನ ಬಗ್ಗೆ ಹಲವು ಅನುಮಾನಗಳು ಕೂಡ ಮೂಡಿವೆ. ಈ ನಡುವೆ ಸಿದ್ದಾರ್ಥ್​ ಶುಕ್ಲಾ ಅವರ ಆತ್ಮ ಮಾತನಾಡುತ್ತಿದೆ ಎಂಬ ಕಥೆಗಳೆಲ್ಲ ಹುಟ್ಟಿಕೊಂಡಿವೆ. ಅದಕ್ಕೆ ಕಾರಣ ಆಗಿರುವುದು ಪ್ಯಾರಾ ನಾರ್ಮಲ್​ ತಜ್ಞ ಸ್ಟೀವ್​ ಹಫ್​ ಹಂಚಿಕೊಂಡಿರುವ ಒಂದು ವಿಡಿಯೋ.

ಸ್ಟೀವ್​ ಹಫ್​ ಹೆಸರು ಕೇಳಿಬರುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಸುಶಾಂತ್​ ಸಿಂಗ್​ ರಜಪೂತ್​ ನಿಧನರಾದಾಗ ಕೂಡ ಸ್ಟೀವ್​ ಹಫ್​ ಹೀಗೆಯೇ ಹೇಳಿದ್ದರು. ತಾವು ಸುಶಾಂತ್​ ಆತ್ಮದ ಜೊತೆ ಮಾತನಾಡಿರುವುದಾಗಿ ಹೇಳಿಕೊಂಡಿದ್ದ ಅವರು, ಅದಕ್ಕೆ ಸಂಬಂಧಿಸಿದ ಒಂದು ವಿಡಿಯೋವನ್ನು ರಿಲೀಸ್​ ಮಾಡಿದ್ದರು. ಅದನ್ನೇ ಈ ಬಾರಿಯೂ ಅವರು ಮುಂದುವರಿಸಿದ್ದಾರೆ. ಸೆ.2ರಂದು ಸಿದ್ದಾರ್ಥ್​ ಶುಕ್ಲಾ ನಿಧನರಾದರು. ಸೆ.4ರಂದು ಸ್ಟೀವ್​ ಹಫ್​ ಅವರು ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ವಿಡಿಯೋ ಹಂಚಿಕೊಂಡಿದ್ದು, ಅದರಲ್ಲಿರುವ ಧ್ವನಿ ಸಿದ್ದಾರ್ಥ್​ ಶುಕ್ಲಾರ ಆತ್ಮದ್ದು ಎಂದು ಹೇಳುತ್ತಿದ್ದಾರೆ.

‘ದೇಹ ಬಿಡುವಾಗ ನೀವು ಏನನ್ನು ನೋಡಿದ್ರಿ’ ಎಂದು ಕೇಳಿದ್ದಕ್ಕೆ ‘ಒಬ್ಬ ಗಂಧರ್ವನನ್ನು ನೋಡಿದೆ’ ಎಂದು ಆ ಧ್ವನಿ ಉತ್ತರಿಸಿದೆ. ‘ಸಾಯುವಾಗ ನನಗೆ ತುಂಬ ನೋವಾಯಿತು. ನಾನು ನಗ್ನವಾಗಿದ್ದೆ. ನಾನೀಗ ಸ್ವರ್ಗದಲ್ಲಿ ಇದ್ದೇನೆ. ನಾನು ದೇವರ ಜೊತೆ ಇದ್ದೇನೆ. ನನ್ನ ಬಗ್ಗೆ ಯೋಚನೆ ಮಾಡಿ’ ಎಂಬಿತ್ಯಾದಿ ಮಾತುಗಳನ್ನು ಆ ಧ್ವನಿ ಹೇಳಿದೆ. ಈ ವಿಡಿಯೋ ಲಕ್ಷಾಂತರ ಬಾರಿ ವೀಕ್ಷಣೆ ಕಂಡಿದೆ. ಇದನ್ನು ಕೆಲವರು ನಂಬಿದ್ದಾರೆ. ಮತ್ತೆ ಕೆಲವರು ಇದೆಲ್ಲ ಸುಳ್ಳು ಎಂದು ಸ್ಟೀವ್​ ಹಫ್​ಗೆ ನೆಗೆಟಿವ್​ ಕಮೆಂಟ್​ ಮಾಡಿದ್ದಾರೆ.

ಫೋಟೋಗ್ರಾಫರ್​ ಕೂಡ ಆಗಿರುವ ಸ್ಟೀವ್​ ಹಫ್​ ಅವರು ಪ್ಯಾರಾ ನಾರ್ಮಲ್​ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ತುಂಬ ಫೇಮಸ್​ ಆಗಿದ್ದಾರೆ. ಅವರ ಯೂಟ್ಯೂಬ್​ ಚಾನೆಲ್​ಗೆ 19 ಲಕ್ಷ ಚಂದದಾರರು ಇದ್ದಾರೆ. ಸತ್ತವರ ಆತ್ಮಗಳ ಜೊತೆ ಮಾತನಾಡಲು ತಾವು ಕೆಲವೊಂದು ಉಪಕರಣಗಳನ್ನು ಕಂಡು ಹಿಡಿದಿರುವುದಾಗಿ ಅವರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:

‘ನೀನೂ ಸತ್ತು ಹೋಗು’: ಸಿದ್ದಾರ್ಥ್​ ಶುಕ್ಲಾ ನಿಧನದ ಬಳಿಕ ಕಿಡಿಗೇಡಿಗಳಿಂದ ನಟಿಗೆ ಮೆಸೇಜ್​; ಆಸ್ಪತ್ರೆಗೆ ದಾಖಲು

Sidharth Shukla: ಸಿದ್ದಾರ್ಥ್​ ಶುಕ್ಲಾ ಸಾವಿನ ಸಮಯದ ಬಗ್ಗೆ ಮೂಡಿದೆ ಶಂಕೆ; ಹಿಂದೂಸ್ತಾನಿ ಭಾವು ಹೇಳಿದ ಇನ್ನೊಂದು ಕಥೆ

Published On - 12:07 pm, Mon, 13 September 21

Follow Us
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಗದಗ: ಬಸ್ ನಿಲ್ಲಿಸದಿರುವುದನ್ನ ಪ್ರಶ್ನಿಸಿದ ವಿದ್ಯಾರ್ಥಿ ಮೇಲೆ ದರ್ಪ
ಗದಗ: ಬಸ್ ನಿಲ್ಲಿಸದಿರುವುದನ್ನ ಪ್ರಶ್ನಿಸಿದ ವಿದ್ಯಾರ್ಥಿ ಮೇಲೆ ದರ್ಪ