AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sidharth Shukla: ಸಿದ್ದಾರ್ಥ್​ ಶುಕ್ಲಾ ಸಾವಿನ ಸಮಯದ ಬಗ್ಗೆ ಮೂಡಿದೆ ಶಂಕೆ; ಹಿಂದೂಸ್ತಾನಿ ಭಾವು ಹೇಳಿದ ಇನ್ನೊಂದು ಕಥೆ

Hindustani Bhau: ಸಿದ್ದಾರ್ಥ್ ಶುಕ್ಲಾ​ ನಿಧನರಾದರು ಎಂದು ಕುಟುಂಬದವರಿಗೆ ತಿಳಿದು ಬಂದಿದ್ದು ಬೆಳಗ್ಗೆ 7 ಗಂಟೆಗೋ ಅಥವಾ 10 ಗಂಟೆಗೋ ಎಂಬ ಬಗ್ಗೆ ಈಗ ಅನುಮಾನ ಮೂಡುವಂತಾಗಿದೆ. ಅದಕ್ಕೆ ಕಾರಣ ಹಿಂದೂಸ್ತಾನಿ ಭಾವು ನೀಡಿದ ಹೊಸ ಹೇಳಿಕೆ.

Sidharth Shukla: ಸಿದ್ದಾರ್ಥ್​ ಶುಕ್ಲಾ ಸಾವಿನ ಸಮಯದ ಬಗ್ಗೆ ಮೂಡಿದೆ ಶಂಕೆ; ಹಿಂದೂಸ್ತಾನಿ ಭಾವು ಹೇಳಿದ ಇನ್ನೊಂದು ಕಥೆ
ಹಿಂದೂಸ್ತಾನಿ ಭಾವು, ಸಿದ್ದಾರ್ಥ್​ ಶುಕ್ಲಾ
TV9 Web
| Edited By: |

Updated on: Sep 05, 2021 | 3:36 PM

Share

ಹಿಂದಿ ಕಿರುತೆರೆಯಲ್ಲಿ ದೊಡ್ಡ ಹೆಸರು ಮಾಡಿದ್ದ ನಟ ಸಿದ್ದಾರ್ಥ್​ ಶುಕ್ಲಾ ಅವರು ಸೆ.2ರಂದು ಹೃದಯಾಘಾತದಿಂದ ನಿಧನರಾದ ಸುದ್ದಿ ಸಿಡಿಲಿನಂತೆ ಬಡಿಯಿತು. ಮುಂಬೈನ ತಮ್ಮ ಅಪಾರ್ಟ್​ಮೆಂಟ್​ನಲ್ಲೇ ಸಿದ್ದಾರ್ಥ್​ ಕೊನೆಯುಸಿರೆಳೆದರು. ಅವರ ಸಾವಿನ ಕುರಿತು ಕೆಲವು ಅನುಮಾನಗಳು ಕೂಡ ಇವೆ. ಆ ಬಗ್ಗೆ ಇನ್ನಷ್ಟೇ ತನಿಖೆ ಆಗಬೇಕಿದೆ. ಹಿಂದಿನ ರಾತ್ರಿ ಮಲಗುವಾಗ ಸಿದ್ದಾರ್ಥ್​ ಯಾವುದೋ ಔಷಧಿ ಸೇವಿಸಿದ್ದರು ಎಂಬ ಮಾಹಿತಿ ಇದೆ. ಅಲ್ಲದೇ, ಅವರು ನಿಧನರಾದ ನಿರ್ದಿಷ್ಟ ಸಮಯ ಯಾವುದು ಎಂಬ ಬಗ್ಗೆ ಈಗ ಹೊಸ ಪ್ರಶ್ನೆ ಹುಟ್ಟಿಕೊಳ್ಳುವಂತಾಗಿದೆ. ಅದಕ್ಕೆ ಕಾರಣ ಆಗಿರುವುದು ಹಿಂದೂಸ್ತಾವಿ ಭಾವು ಅಲಿಯಾಸ್​ ವಿಕಾಸ್​ ಜಯರಾಮ್​ ಪಾಠಕ್​.

ಸಿದ್ದಾರ್ಥ್​ ನಿಧನರಾದ ಬಳಿಕ ಕುಟುಂಬದವರಿಗೆ ಸಾಂತ್ವನ ಹೇಳಲು ಅವರ ಮನೆಗೆ ಅನೇಕ ಸೆಲೆಬ್ರಿಟಿಗಳು ಭೇಟಿ ನೀಡುತ್ತಿದ್ದಾರೆ. ಆ ಪೈಕಿ ಕೆಲವರು ಹೇಳಿದ ಪ್ರಕಾರ, ಸೆ.1ರ ರಾತ್ರಿ 1 ಗಂಟೆವರೆಗೂ ಪ್ರೇಯಸಿ ಶೆಹನಾಜ್​ ಗಿಲ್​ ಅವರು ಸಿದ್ದಾರ್ಥ್​ ಜೊತೆಯಲ್ಲೇ ಇದ್ದರು. ಸೆ.2ರ ಬೆಳಗ್ಗೆ 7 ಗಂಟೆಗೆ ಅವರು ನಿಧನರಾಗಿರುವುದು ಗೊತ್ತಾಯಿತು ಎಂಬ ಮಾಹಿತಿ ಕೇಳಿಬಂದಿತ್ತು. ಆದರೆ ಈಗ ಹಿಂದೂಸ್ತಾನಿ ಭಾವು ಬೇರೆ ಕಥೆ ಹೇಳುತ್ತಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್​ ವಿಡಿಯೋಗಳ ಮೂಲಕ ಫೇಮಸ್​ ಆದವರು ಹಿಂದೂಸ್ತಾನಿ ಭಾವು. ಬಿಗ್​ ಬಾಸ್​ ಹಿಂದಿ ಸೀಸನ್​ 13ರಲ್ಲಿ ಅವರು ಮತ್ತು ಸಿದ್ದಾರ್ಥ್​ ಜೊತೆಯಾಗಿ ಭಾಗವಹಿಸಿದ್ದರು. ಆ ವೇಳೆ ಇಬ್ಬರ ನಡುವೆ ಸ್ನೇಹ ಬೆಳೆದಿತ್ತು. ಗೆಳೆಯನ ನಿಧನದ ಸುದ್ದಿಯಿಂದ ಹಿಂದೂಸ್ತಾನಿ ಭಾವು ನೋವಿನಲ್ಲಿದ್ದಾರೆ. ಸಿದ್ದಾರ್ಥ್​ರ ಮನೆಗೆ ಭೇಟಿ ನೀಡಿದ ಬಳಿಕ ಅವರು ಮಾಧ್ಯಮಗಳ ಜೊತೆ ಮಾತನಾಡಿದರು.

‘ಮಧ್ಯ ರಾತ್ರಿ 3.30ರ ಸಮಯದಲ್ಲಿ ಸಿದ್ದಾರ್ಥ್​ ಅವರ ಆರೋಗ್ಯದಲ್ಲಿ ಏರುಪೇರಾಗತೊಡಗಿತು. ಆಗ ಅವರ ತಾಯಿ ನೀರು ಕೊಟ್ಟರು. ಬಳಿಕ ಅವರು ಐಸ್​ ಕ್ರೀಮ್​ ತಿಂದು ಮಲಗಿದರು. ಸಿದ್ದಾರ್ಥ್​ ಪ್ರತಿ ದಿನ ಜಿಮ್​ಗೆ ತೆರಳಬೇಕು ಎಂದು ಬೆಳಗ್ಗೆ 10 ಗಂಟೆಗೆ ಅಲಾರ್ಮ್​ ಇಟ್ಟುಕೊಳ್ಳುತ್ತಿದ್ದರು. ಆದರೆ ಸೆ.2ರಂದು ಬೆಳಗ್ಗೆ 10 ಗಂಟೆಗೆ ಅಲಾರ್ಮ್​ ಬಡಿದುಕೊಂಡರೂ ಸಿದ್ದಾರ್ಥ್​ ಎಚ್ಚರಗೊಳ್ಳಲಿಲ್ಲ’ ಎಂದು ಸಿದ್ದಾರ್ಥ್​ ಕುಟುಂಬದವರಿಂದ ಕೇಳಿ ತಿಳಿದ ಮಾಹಿತಿಯನ್ನು ಹಿಂದೂಸ್ತಾನಿ ಭಾವು ಅವರು ಮಾಧ್ಯಮಗಳ ಜೊತೆ ಹಂಚಿಕೊಂಡಿದ್ದಾರೆ.

ಹಾಗಾದರೆ ಸಿದ್ದಾರ್ಥ್​ ನಿಧನರಾದರು ಎಂದು ಕುಟುಂಬದವರಿಗೆ ತಿಳಿದು ಬಂದಿದ್ದು ಬೆಳಗ್ಗೆ 7 ಗಂಟೆಗೋ ಅಥವಾ 10 ಗಂಟೆಗೋ ಎಂಬ ಬಗ್ಗೆ ಈಗ ಅನುಮಾನ ಮೂಡುವಂತಾಗಿದೆ. ಒಟ್ಟಿನಲ್ಲಿ ಅಭಿಮಾನಿಗಳ ಮನದಲ್ಲಿ ಹಲವು ಸಂಶಯಗಳು ಹುಟ್ಟಿಕೊಂಡಿರುವುದಂತೂ ನಿಜ.

ಇದನ್ನೂ ಓದಿ:

ಪ್ರೇಯಸಿ ಮಡಿಲಲ್ಲೇ ಪ್ರಾಣ ಬಿಟ್ರಾ ಸಿದ್ದಾರ್ಥ್​? ಹೃದಯಾಘಾತ ಆಗೋದಕ್ಕೂ ಮುನ್ನ ನಡೆದಿದ್ದೇನು? ಇಲ್ಲಿದೆ ವಿವರ

‘ಆ ಸಿದ್ದಾರ್ಥ್​ ಬದಲು ಈ ಸಿದ್ದಾರ್ಥ್​ ಸಾಯಬೇಕಿತ್ತು’ ಎಂದು ದ್ವೇಷಕಾರಿದ ನೆಟ್ಟಿಗರು; ನಟನ ಪ್ರತಿಕ್ರಿಯೆ ಏನು?

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ