Saira Banu: ನಟ ದಿಲೀಪ್ ಕುಮಾರ್ ಪತ್ನಿ ಸೈರಾ ಬಾನು ಆರೋಗ್ಯದಲ್ಲಿ ಚೇತರಿಕೆ; ಐಸಿಯುನಿಂದ ಡಿಸ್ಚಾರ್ಜ್

ಬಾಲಿವುಡ್​ನ ಖ್ಯಾತ ನಟ ದಿಲೀಪ್ ಕುಮಾರ್ ಅವರ ಪತ್ನಿ ಸೈರಾ ಬಾನು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿ ಐಸಿಯುವಿನಲ್ಲಿದ್ದರು. ಇದೀಗ ಅವರು ಚೇತರಿಕೆ ಕಂಡಿದ್ದಾರೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದು, ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

Saira Banu: ನಟ ದಿಲೀಪ್ ಕುಮಾರ್ ಪತ್ನಿ ಸೈರಾ ಬಾನು ಆರೋಗ್ಯದಲ್ಲಿ ಚೇತರಿಕೆ; ಐಸಿಯುನಿಂದ ಡಿಸ್ಚಾರ್ಜ್
ನಟ ದಿಲೀಪ್​ ಕುಮಾರ್​ ಹಾಗೂ ಪತ್ನಿ ಸೈರಾ ಬಾನು

ಬಾಲಿವುಡ್ ನ ಖ್ಯಾತ ನಟ ದಿಲೀಪ್ ಕುನಾರ್ ಪತ್ನಿ ಸೈರಾ ಬಾನು ಚೇತರಿಸಿಕೊಂಡಿದ್ದಾರೆ. ಅವರು ಐಸಿಯು ಇಂದ ಹೊರಗೆ ಬಂದಿದ್ದು, ಸುಧಾರಿಸಿಕೊಂಡಿದ್ದಾರೆ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರಾದ ಡಾ.ನಿತಿನ್ ಗೋಖಲೆ ತಿಳಿಸಿದ್ದಾರೆ. ಕೆಲ ಮಾಧ್ಯಮಗಳಲ್ಲಿ ವರದಿಯಾದಂತೆ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂಬ ವರದಿ ಸತ್ಯಕ್ಕೆ ದೂರವಾದದ್ದು. ಮತ್ತು ಅವರು ಪತಿಯ ನಿಧನದಿಂದ ಡಿಪ್ರೆಶನ್ ಗೆ ಒಳಗಾಗಿದ್ದಾರೆ ಎಂಬುದು ಕೂಡ ಸುಳ್ಳು ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ.

ಕಳೆದ ವಾರ ಸೈರಾ ಬಾನು ಅವರ ಆರೋಗ್ಯದಲ್ಲಿ ತೀವ್ರ ಏರುಪೇರಾದ ಕಾರಣ, ಮುಂಬೈನ ಹಿಂದೂಜಾ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಅವರ ಆರೋಗ್ಯದ ಕುರಿತು ಮಾಹಿತಿ ನೀಡಿರುವ ಡಾ.ನಿತಿನ್ ಗೋಖಲೆ, “ಸೈರಾ ಅವರು ಡಿಪ್ರೆಶನ್ ನಲ್ಲಿಲ್ಲ. ಹಾಗೆಯೇ ಅವರು ಆಂಜಿಯೋಗ್ರಫಿಯನ್ನು ನಿರಾಕರಿಸುತ್ತಿದ್ದಾರೆ ಎಂದು ಕೆಲವೆಡೆ ವರದಿಯಾಗಿತ್ತು. ಅವರ ಡೈಯಾಬಿಟೀಸ್ ಅನ್ನು ಹಿಡಿತಕ್ಕೆ ತಂದ ನಂತರ ನಾವೇ ಪರೀಕ್ಷೆ ಮಾಡಿದ್ದೇವೆ. ಇನ್ನು ಅವರು ನಿರಾಕರಿಸುವುದು ಎಲ್ಲಿಂದ ಬಂತು?” ಎಂದು ಅವರು ಮರುಪ್ರಶ್ನಿಸಿದ್ದಾರೆ.

ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿರುವ ಪ್ರಕಾರ, ಸೈರಾ ಬಾನು ಈಗಾಗಲೇ ಐಸಿಯು ಇಂದ ಹೊರ ಬಂದಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಇನ್ನು ಒಂದೆರಡು ದಿನಗಳ ಕಾಲ ಅವರನ್ನು ನಿಗಾದಲ್ಲಿಡಲಾಗಿದ್ದು, ಆರೋಗ್ಯವಾಗಿದ್ದರೆ ಡಿಸ್ಚಾರ್ಜ್ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ. ಸೈರಾ ಬಾನು ಹಾಗೂ ನಟ ದಿಲೀಪ್ ಕುಮಾರ್ 54 ವರ್ಷಗಳ ಕಾಲ ಒಟ್ಟಾಗಿ ಸಂಸಾರ ನಡೆಸಿದ್ದರು. ದಶಕಗಳ ಕಾಲ ಬಾಲಿವುಡ್ ನಲ್ಲಿ ಸ್ಟಾರ್ ಆಗಿ ಮಿಂಚಿದ್ದ ನಟ ದಿಲೀಪ್ ಕುಮಾರ್ ಜುಲೈ 7ರಂದು ನಿಧನರಾಗಿದ್ದರು.

ಇದನ್ನೂ ಓದಿ:

ಕಯಾಕಿಂಗ್, ಸೈಕ್ಲಿಂಗ್​ನಲ್ಲಿ ಸಮಂತಾ ಬ್ಯುಸಿ; ಆದರೂ ಅವರ ಪ್ರತೀ ಸ್ಟೇಟಸ್​ಗೆ ಹೊಸ ಅರ್ಥ ಕಲ್ಪಿಸುತ್ತಿದ್ದಾರೆ ಅಭಿಮಾನಿಗಳು

‘ಹಾಗಲ್ಲ ಸರ್​..’ ಎಂದು ಅಮಿತಾಭ್​ಗೆ ನಟನೆ ಹೇಳಿಕೊಟ್ಟ ದೀಪಿಕಾ, ಫರ್ಹಾ ಖಾನ್​; ವಿಡಿಯೋ ವೈರಲ್​

(Saira baanu getting better and out of the ICU says reports)

Published On - 5:39 pm, Sun, 5 September 21

Click on your DTH Provider to Add TV9 Kannada