AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಯಾಕಿಂಗ್, ಸೈಕ್ಲಿಂಗ್​ನಲ್ಲಿ ಸಮಂತಾ ಬ್ಯುಸಿ; ಆದರೂ ಅವರ ಪ್ರತೀ ಸ್ಟೇಟಸ್​ಗೆ ಹೊಸ ಅರ್ಥ ಕಲ್ಪಿಸುತ್ತಿದ್ದಾರೆ ಅಭಿಮಾನಿಗಳು

ಟಾಲಿವುಡ್ ನಟಿ ಸಮಂತಾ ಸ್ನೇಹಿತರೊಂದಿಗೆ ಗೋವಾದಲ್ಲಿ ರಜೆಯ ದಿನಗಳನ್ನು ಕಳೆಯುತ್ತಿದ್ದಾರೆ. ಆದರೆ ಅವರು ಹಂಚಿಕೊಳ್ಳುತ್ತಿರುವ ಪ್ರತಿ ಸ್ಟೇಟಸ್​ ಅಭಿಮಾನಿಗಳಲ್ಲಿ ಹೊಸ ಕುತೂಹಲವನ್ನು ಹುಟ್ಟುಹಾಕಿದೆ.

ಕಯಾಕಿಂಗ್, ಸೈಕ್ಲಿಂಗ್​ನಲ್ಲಿ ಸಮಂತಾ ಬ್ಯುಸಿ; ಆದರೂ ಅವರ ಪ್ರತೀ ಸ್ಟೇಟಸ್​ಗೆ ಹೊಸ ಅರ್ಥ ಕಲ್ಪಿಸುತ್ತಿದ್ದಾರೆ ಅಭಿಮಾನಿಗಳು
ಸಮಂತಾ (Credits: Samantha/ Instagram)
TV9 Web
| Updated By: shivaprasad.hs|

Updated on: Sep 05, 2021 | 4:48 PM

Share

ಟಾಲಿವುಡ್ ನಟಿ ಸಮಂತಾ ಅಕ್ಕಿನೇನಿ ಕಳೆದ 11 ವರ್ಷಗಳಿಂದ ಸತತವಾಗಿ ಕೆಲಸ ಮಾಡಿ, ಪ್ರಸ್ತುತ ಬಿಡುವು ತೆಗೆದುಕೊಂಡಿದ್ದಾರೆ. ಸುಮಾರು ಒಂದು ತಿಂಗಳ ರಜೆ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದ್ದ ಅವರು, ತಮ್ಮ ಸ್ನೇಹಿತರೊಂದಿಗೆ ಗೋವಾಕ್ಕೆ ತೆರಳಿದ್ದಾರೆ. ಬಿಡುವಿನ ಸಂದರ್ಭದಲ್ಲಿ ತಮ್ಮ ನೆಚ್ಚಿನ ಹವ್ಯಾಸಗಳಿಗೆ ಸಮಯ ನೀಡಲು ನಿರ್ಧರಿಸಿರುವ ನಟಿ, ಹಲವು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇಂದು (ಸೆಪ್ಟೆಂಬರ್ 5) ಹಂಚಿಕೊಂಡಿರುವ ಚಿತ್ರದಲ್ಲಿ ಅವರು ತಮ್ಮ ಸ್ನೇಹಿತೆ ಶಿಲ್ಪಾ ರೆಡ್ಡಿ ಅವರೊಂದಿಗೆ ಕಯಾಕಿಂಗ್ ಮಾಡುತ್ತಿರುವ ಚಿತ್ರ ಹಾಗೂ ವಿಡಿಯೊವನ್ನು ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ಇಂಡಿಯಾ ಟುಡೆಗೆ ನೀಡಿದ್ದ ಸಂದರ್ಶನದಲ್ಲಿ ಸಮಂತಾ ಬಿಡುವು ತೆಗೆದುಕೊಳ್ಳುತ್ತಿರುವ ಕುರಿತು ತಿಳಿಸಿದ್ದರು. ‘ಸದ್ಯಕ್ಕೆ ಕೈಯಲ್ಲಿ ಯಾವುದೇ ಚಿತ್ರಗಳಿಲ್ಲ. ಸುಮಾರು 11 ವರ್ಷಗಳಿಂದ ಬಿಡುವು ತೆಗೆದುಕೊಳ್ಳದೇ ಕೆಲಸ ಮಾಡಿದ್ದೇನೆ. ಈಗ ಸುಮಾರು ಒಂದು ತಿಂಗಳ ಕಾಲ ರಜಾ ತೆಗೆದುಕೊಂಡಿದ್ದೇನೆ. ಮರಳಿದ ನಂತರ ಹೊಸದಾಗಿ ಸ್ಕ್ರಿಪ್ಟ್​​ಗಳನ್ನು ಕೇಳುತ್ತೇನೆ. ನನ್ನ ಖಾತೆಯಲ್ಲಿ ಪ್ರಸ್ತುತ ಯಾವುದೇ ಚಿತ್ರಗಳಿಲ್ಲ. ಇದ್ದವುಗಳನ್ನು ಮುಗಿಸಿದ್ದೇನೆ’’ ಎಂದಿದ್ದರು ಸಮಂತಾ.

ಸಮಂತಾ ಹಂಚಿಕೊಂಡ ಪೋಸ್ಟ್:

View this post on Instagram

A post shared by S (@samantharuthprabhuoffl)

ಅಭಿಮಾನಿಗಳ ಕುತೂಹಲ ಹೆಚ್ಚಿಸುತ್ತಿರುವ ಸಮಂತಾ ಇನ್ಸ್ಟಾಗ್ರಾಂ ಸ್ಟೋರಿಗಳು:

ಸಮಂತಾ ತೆಲುಗು ನಟ ನಾಗ ಚೈತನ್ಯ ಅವರನ್ನು ವಿವಾಹವಾಗಿದ್ದಾರೆ. ಆದರೆ ಇತ್ತೀಚೆಗೆ ಅವರೀರ್ವರ ನಡುವೆ ಎಲ್ಲವೂ ಸರಿ ಇಲ್ಲ ಎಂಬ ಮಾತು ಹರಿದಾಡುತ್ತಿದೆ. ಈ ಕುರಿತು ಇದುವರೆಗೆ ಈರ್ವರೂ ಮೌನ ಮುರಿದಿಲ್ಲ. ಆದರೆ ಸಮಂತಾ ಈಗ ಹಂಚಿಕೊಂಡಿರುವ ಇನ್ಸ್ಟಾಗ್ರಾಂ ಸ್ಟೋರಿ ಒಂದನ್ನು ಅಭಿಮಾನಿಗಳು ಬೇರೆ ರೀತಿಯೇ ಅರ್ಥೈಸಿಕೊಳ್ಳುತ್ತಿದ್ದಾರೆ. ‘ಪರಿಸ್ಥಿತಿಯನ್ನು ನಿಮಗೆ ಸಂಭಾಳಿಸಲು ಸಾಧ್ಯವಾಗದಿದ್ದಾಗ, ಅದಕ್ಕೆ ನೀವು ಪ್ರತಿಕ್ರಿಯಿಸುವುದನ್ನು ನಿಯಂತ್ರಿಸಿ. ಅಲ್ಲೇ ನಿಜವಾದ ಶಕ್ತಿ ಅಡಗಿದೆ’ ಎಂಬ ಅರ್ಥವಿರುವ  ಸ್ಟೇಟಸ್ ಹಾಕಿಕೊಂಡಿದ್ದಾರೆ. ಇದು ಅಭಿಮಾನಿಗಳ ಕುತೂಹಲವನ್ನು ಹೆಚ್ಚು ಮಾಡಿದ್ದು, ಸಮಂತಾ ವೈಯಕ್ತಿಕ ಜೀವನದಲ್ಲಿ ಏನೋ ಸಮಸ್ಯೆಯಾಗಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

ಇತ್ತೀಚೆಗೆ ಮಾಧ್ಯಮವೊಂದಕ್ಕೆ ಸಂದರ್ಶನ ನೀಡುತ್ತಾ, ನಾಗ ಚೈತನ್ಯ ಮತ್ತು ಅವರ ಕುರಿತು ಹರಿದಾಡುತ್ತಿರುವ ಸುದ್ದಿಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದರು. ‘ಗಾಳಿ ಸುದ್ದಿಗಳಿಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನನಗೆ ಮಾತನಾಡಲೇ ಬೇಕು ಎನ್ನಿಸಿದಾಗಷ್ಟೇ ನಾನು ಮಾತನಾಡುತ್ತೇನೆ’ ಎಂದು ಅವರು ಹೇಳಿದ್ದರು. ಇನ್ಸ್ಟಾಗ್ರಾಂನಲ್ಲಿ ಸಮಂತಾ ಹೆಸರನ್ನು ಸಮಂತಾ ಅಕ್ಕಿನೇನಿ ಇಂದ ಕೇವಲ ‘ಎಸ್​’ ಎಂದು ಬದಲಾಯಿಸಿಕೊಂಡಿದ್ದರು. ಅಲ್ಲಿಂದ ಸಮಂತಾ ವೈಯಕ್ತಿಕ ಜೀವನದ ಕುರಿತು ಚರ್ಚೆ ಆರಂಭವಾಗಿತ್ತು. ಕೆಲವರು ಇದಕ್ಕೆ ಮತ್ತೊಂದು ಅರ್ಥ ಕಲ್ಪಿಸಿದ್ದು, ಸಮಂತಾ ಅವರ ನೂತನ ಚಿತ್ರವಾದ ‘ಶಾಕುಂತಲಮ್’ನ ಪ್ರಚಾರದ ಅಂಗವಾಗಿ ಅವರು ಹಾಗೆ ಹೆಸರು ಬದಲಾಯಿಸಿಕೊಂಡಿದ್ದಾರೆ ಎಂದಿದ್ದರು.

Samantha status

ಸಮಂತಾ ಹಂಚಿಕೊಂಡಿರುವ ಸ್ಟೇಟಸ್

ಸಮಂತಾ ಅವರು ಗುಣಶೇಖರ್​ ನಿರ್ದೇಶನದ ‘ಶಾಕುಂತಲಮ್’ ಚಿತ್ರದಲ್ಲಿ ನಟಿಸಿದ್ದಾರೆ. ಇದರೊಂದಿಗೆ ತಮಿಳಿನಲ್ಲಿ ವಿಜಯ್ ಸೇತುಪತಿ ಹಾಗೂ ನಯನತಾರಾ ಅವರೊಂದಿಗೆ ‘ಕಾಥುವಾಕುಲ ರೆಂಡು ಕಾದಲ್’ ಚಿತ್ರದಲ್ಲೂ ಬಣ್ಣ ಹಚ್ಚಿದ್ದು, ಈ ಚಿತ್ರವನ್ನು ನಯನತಾರಾ ಸ್ನೇಹಿತ ವಿಘ್ನೇಶ್ ಶಿವನ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರಗಳು ಇನ್ನಷ್ಟೇ ಬಿಡುಗಡೆಯಾಗಬೇಕಿದೆ.

ಇದನ್ನೂ ಓದಿ:

Sidharth Shukla: ಸಿದ್ದಾರ್ಥ್​ ಶುಕ್ಲಾ ಸಾವಿನ ಸಮಯದ ಬಗ್ಗೆ ಮೂಡಿದೆ ಶಂಕೆ; ಹಿಂದೂಸ್ತಾನಿ ಭಾವು ಹೇಳಿದ ಇನ್ನೊಂದು ಕಥೆ

ಚಂದನ್​ ಶೆಟ್ಟಿಯಿಂದ ಮರೆಯಲಾರದ ಗಿಫ್ಟ್​; ಮೊದಲ ಬಾರಿಗೆ ಖುಷಿಯಿಂದ ಅತ್ತ ನಿವೇದಿತಾ ಗೌಡ

ಮತ್ತೂ ಬಲವಾಯ್ತು ಸಮಂತಾ-ನಾಗ ಚೈತನ್ಯ ವಿಚ್ಛೇದನ ವಿಚಾರ; ದೊಡ್ಡ ಸಾಕ್ಷಿ ತಂದ ಫ್ಯಾನ್ಸ್​

(Samantha is busy in Kayaking and cycling in Goa and enjoying holidays)

ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ
ರಷ್ಯಾ ಅಧ್ಯಕ್ಷ ಪುಟಿನ್​​ ಸ್ವಾಗತಕ್ಕೆ ವಿಮಾನ ನಿಲ್ದಾಣಕ್ಕೆ ತೆರಳಿದ ಮೋದಿ
ರಷ್ಯಾ ಅಧ್ಯಕ್ಷ ಪುಟಿನ್​​ ಸ್ವಾಗತಕ್ಕೆ ವಿಮಾನ ನಿಲ್ದಾಣಕ್ಕೆ ತೆರಳಿದ ಮೋದಿ