ಚಂದನ್​ ಶೆಟ್ಟಿಯಿಂದ ಮರೆಯಲಾರದ ಗಿಫ್ಟ್​; ಮೊದಲ ಬಾರಿಗೆ ಖುಷಿಯಿಂದ ಅತ್ತ ನಿವೇದಿತಾ ಗೌಡ

ಅನೇಕ ಭಾವುಕ ಸನ್ನಿವೇಶಗಳಿಗೂ ಈ ವೇದಿಕೆ ಸಾಕ್ಷಿಯಾಗುತ್ತಿದೆ. ಈಗ ಚಂದನ್​ ಶೆಟ್ಟಿ ಅವರು ಪತ್ನಿ ನಿವೇದಿತಾಗೆ ವಿಶೇಷ ಗಿಫ್ಟ್​ ಒಂದನ್ನು ನೀಡಿದ್ದಾರೆ.

ಚಂದನ್​ ಶೆಟ್ಟಿಯಿಂದ ಮರೆಯಲಾರದ ಗಿಫ್ಟ್​; ಮೊದಲ ಬಾರಿಗೆ ಖುಷಿಯಿಂದ ಅತ್ತ ನಿವೇದಿತಾ ಗೌಡ
ಚಂದನ್​ ಶೆಟ್ಟಿಯಿಂದ ಮರೆಯಲಾರದ ಗಿಫ್ಟ್​; ಮೊದಲ ಬಾರಿಗೆ ಖುಷಿಯಿಂದ ಅತ್ತ ನಿವೇದಿತಾ ಗೌಡ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Sep 05, 2021 | 3:36 PM

ಗಾಯಕ ಚಂದನ್​ ಶೆಟ್ಟಿ ಹಾಗೂ ಬಿಗ್​ ಬಾಸ್​ ಸ್ಪರ್ಧಿ ನಿವೇದಿತಾ ಗೌಡ ಅವರು ಮದುವೆ ಆಗಿ ಸುಖ ಸಂಸಾರ ನಡೆಸುತ್ತಿದ್ದಾರೆ. ಬಿಗ್​ ಬಾಸ್​ ಮನೆಯಲ್ಲಿ ಪರಿಚಯಗೊಂಡು, ನಂತರ ಆ ಪರಿಚಯ ಪ್ರೀತಿಗೆ ತಿರುಗಿ, ಕೊನೆಗೆ ಇಬ್ಬರೂ ಮದುವೆ ಆದರು. ನಿವೇದಿತಾ ಅವರಿಗೆ ದಸರಾ ವೇದಿಕೆ ಮೇಲೆ ಚಂದನ್​ ಪ್ರಪೋಸ್​ ಮಾಡಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಇದೊಂದು ಅದ್ಭುತ ಕ್ಷಣವಾಗಬೇಕಿತ್ತಾದರೂ, ಕಾಂಟ್ರವರ್ಸಿಯಿಂದಾಗಿ ನಿವೇದಿತಾ ನೊಂದುಕೊಂಡರು. ಈಗ ನಿವೇದಿತಾಗೋಸ್ಕರ ಚಂದನ್​ ಗಿಫ್ಟ್​ ಒಂದನ್ನು ನೀಡಿದ್ದಾರೆ. ಇದನ್ನು ನೋಡಿದ ಅವರು ಖುಷಿಯಿಂದ ಕಣ್ಣೀರು ಹಾಕಿದ್ದಾರೆ.

‘ರಾಜಾ-ರಾಣಿ’ ಶೋ ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಸೆಲೆಬ್ರಿಟಿ ಜೋಡಿಗಳನ್ನು ವೇದಿಕೆ ಮೇಲೆ ಕರೆಸಿ ಅವರಿಗೆ ನಾನಾ ಟಾಸ್ಕ್​ ನೀಡೋದು, ಅವರ ಜೀವನದಲ್ಲಿ ಮರೆಯಲಾರದ ಘಟನೆ ಮೆಲುಕು ಹಾಕುವುದು ಮತ್ತಿತ್ಯಾದಿ ವಿಚಾರಗಳನ್ನು ‘ರಾಜಾ-ರಾಣಿ’ ವೇದಿಕೆ ಮೇಲೆ ಮಾಡಿಸಲಾಗುತ್ತಿದೆ. ಅನೇಕ ಭಾವುಕ ಸನ್ನಿವೇಶಗಳಿಗೂ ಈ ವೇದಿಕೆ ಸಾಕ್ಷಿಯಾಗುತ್ತಿದೆ. ಈಗ ಚಂದನ್​ ಶೆಟ್ಟಿ ಅವರು ಪತ್ನಿ ನಿವೇದಿತಾಗೆ ವಿಶೇಷ ಗಿಫ್ಟ್​ ಒಂದನ್ನು ನೀಡಿದ್ದಾರೆ.

ಚಂದನ್​ ಶೆಟ್ಟಿ ಗಾಯಕ. ಜತೆಗೆ ಅನೇಕ ಹಾಡುಗಳನ್ನು ಅವರು ಬರೆದಿದ್ದಾರೆ. ಈಗ ನಿವೇದಿತಾಗೋಸ್ಕರ ಚಂದನ್ ವಿಶೇಷ ಹಾಡೊಂದನ್ನು ಬರೆದಿದ್ದಾರೆ. ಅಷ್ಟೇ ಅಲ್ಲ ಅದನ್ನು ‘ರಾಜಾ-ರಾಣಿ’ ವೇದಿಕೆ ಮೇಲೆ ಹಾಡಿದ್ದಾರೆ. ‘ಮದುವೆ ಆದ ಮೇಲೆ ನೀನು ನನ್ನ ಪ್ರಪಂಚ ಆಗಿದ್ದೀಯಾ. ಪ್ರತಿ ಸಾಲುಗಳೂ ನಿನಗೋಸ್ಕರ ಬರೆದಿದ್ದು’ ಎಂದರು ಚಂದನ್​ ಶೆಟ್ಟಿ. ಅವರು ಹಾಡು ಹೇಳುತ್ತಿದ್ದಂತೆಯೇ ಅತ್ತರು ನಿವೇದಿತಾ. ‘ಇಷ್ಟು ವರ್ಷ ಒಟ್ಟಿಗೆ ಇದ್ರೂ ಖುಷಿಯ ಕಣ್ಣೀರು ಬಂದಿರಲಿಲ್ಲ. ಇದೇ ಮೊದಲ ಬಾರಿಗೆ ನಾನು ಖುಷಿಯಿಂದ ಅಳುತ್ತಿದ್ದೇನೆ’ ಎಂದರು ನಿವೇದಿತಾ.

‘ಬಾಳ ಸಂಗಾತಿಯ ನಗುವಿಗಾಗಿ ಚಂದನ್ ಶೆಟ್ರ ಮ್ಯಾಜಿಕಲ್ ಹಾಡು’ ಎಂದು ಕಲರ್ಸ್​ ಕನ್ನಡ ವಾಹಿನಿ ಪ್ರೋಮೋ ಹಂಚಿಕೊಂಡಿದೆ. ಪ್ರತಿ ಶನಿವಾರ ಮತ್ತು ಭಾನುವಾರ ಈ ಶೋ ಪ್ರಸಾರವಾಗಲಿದೆ. ಚಂದನ್​ ಶೆಟ್ಟಿ ಬರೆದ ಹಾಡು ಹೇಗಿದೆ ಎಂಬುದನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರರಾಗಿದ್ದಾರೆ.

ಇದನ್ನೂ ಓದಿ: ಪತ್ನಿ ನಿವೇದಿತಾ ಗೌಡ ಮಿಮಿಕ್ರಿ ಮಾಡಿದ ಚಂದನ್​ ಶೆಟ್ಟಿ; ಹೊಟ್ಟೆ ಹುಣ್ಣಾಗುವಂತೆ ನಕ್ಕ ಫ್ಯಾನ್ಸ್​

ನಟ ಚಂದನ್​ ಕುಮಾರ್​ ಬಾಡಿ ಟ್ರಾನ್ಸ್​ಫಾರ್ಮೇಷನ್​ ನೋಡಿ ಅಚ್ಚರಿಗೊಂಡ ಫ್ಯಾನ್ಸ್​; 2 ತಿಂಗಳಲ್ಲಿ ಇಷ್ಟೊಂದು ಬದಲಾವಣೆ

ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು