ಪತ್ನಿ ನಿವೇದಿತಾ ಗೌಡ ಮಿಮಿಕ್ರಿ ಮಾಡಿದ ಚಂದನ್​ ಶೆಟ್ಟಿ; ಹೊಟ್ಟೆ ಹುಣ್ಣಾಗುವಂತೆ ನಕ್ಕ ಫ್ಯಾನ್ಸ್​

ಕನ್ನಡ ಬಿಗ್​ ಬಾಸ್​ ಸೀಸನ್​ 6ರ ಸ್ಪರ್ಧಿಗಳ ಪಟ್ಟಿಯಲ್ಲಿ ಚಂದನ್​ ಶೆಟ್ಟಿ-ನಿವೇದಿತಾ ಗೌಡ ಹೆಸರು ಕೂಡ ಇತ್ತು. ಇಬ್ಬರೂ ಬಿಗ್​ ಬಾಸ್​ ಮನೆಯಲ್ಲಿ ಒಬ್ಬರಿಗೊಬ್ಬರು ಪರಿಚಯಗೊಂಡರು.

ಪತ್ನಿ ನಿವೇದಿತಾ ಗೌಡ ಮಿಮಿಕ್ರಿ ಮಾಡಿದ ಚಂದನ್​ ಶೆಟ್ಟಿ; ಹೊಟ್ಟೆ ಹುಣ್ಣಾಗುವಂತೆ ನಕ್ಕ ಫ್ಯಾನ್ಸ್​
ಪತ್ನಿ ನಿವೇದಿತಾ ಗೌಡ ಮಿಮಿಕ್ರಿ ಮಾಡಿದ ಚಂದನ್​ ಶೆಟ್ಟಿ; ಹೊಟ್ಟೆ ಹುಣ್ಣಾಗುವಂತೆ ನಕ್ಕ ಫ್ಯಾನ್ಸ್​
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Aug 12, 2021 | 9:00 PM

ನಿವೇದಿತಾ ಗೌಡ ಹಾಗೂ ಚಂದನ್​ ಶೆಟ್ಟಿ ಇಬ್ಬರೂ ಬಿಗ್​ ಬಾಸ್ ಮನೆಯಲ್ಲಿ ಒಬ್ಬರನ್ನೊಬ್ಬರು ಭೇಟಿ ಆದರು. ಇಬ್ಬರ ನಡುವೆ ಒಳ್ಳೆಯ ಗೆಳೆತನ ಬೆಳೆದಿತ್ತು. ನಂತರ ಇದು ಪ್ರೀತಿಗೆ ತಿರುಗಿ, ಮದುವೆ ಆದರು. ಈಗ ಈ ಜೋಡಿ ಕಲರ್ಸ್​ ಕನ್ನಡ ವಾಹಿನಿಯ ‘ರಾಜಾ-ರಾಣಿ’ ಶೋಗೆ ಬಂದಿದೆ. ಈ ವೇಳೆ ಚಂದನ್​ ಶೆಟ್ಟಿ ಅವರು ನಿವೇದಿತಾ ಹೇಗೆ ಮಾತನಾಡುತ್ತಾರೆ ಎಂಬುದನ್ನು ಅನುಕರಿಸಿ ತೋರಿಸಿದ್ದಾರೆ.

ಕನ್ನಡ ಬಿಗ್​ ಬಾಸ್​ ಸೀಸನ್​ 6ರ ಸ್ಪರ್ಧಿಗಳ ಪಟ್ಟಿಯಲ್ಲಿ ಚಂದನ್​ ಶೆಟ್ಟಿ-ನಿವೇದಿತಾ ಗೌಡ ಹೆಸರು ಕೂಡ ಇತ್ತು. ಇಬ್ಬರೂ ಬಿಗ್​ ಬಾಸ್​ ಮನೆಯಲ್ಲಿ ಒಬ್ಬರಿಗೊಬ್ಬರು ಪರಿಚಯಗೊಂಡರು. ನಿವೇದಿತಾ ಅವರ ಧ್ವನಿ ಹಾಗೂ ಅವರ ನಡವಳಿಕೆ ಇನ್ನೂ ಚಿಕ್ಕ ಮಕ್ಕಳಂತೇ ಇದೆ. ಇದನ್ನು ಚಂದನ್​ ಅವರೇ ಅನೇಕ ಬಾರಿ ಒಪ್ಪಿಕೊಂಡಿದ್ದಾರೆ. ಈಗ ರಾಜಾ-ರಾಣಿ ವೇದಿಕೆ ಮೇಲೆ ಚಂದನ್​ ನಿವೇದಿತಾ ಅವರನ್ನು ಅನುಕರಣೆ ಮಾಡಿದ್ದಾರೆ.

‘ಹೆಂಡತಿಯಂದಿರು ರಾತ್ರಿ ಮಲಗಿ ಬೆಳಗ್ಗೆ ಎದ್ದಾಗ ಗಂಡಂದಿರಂತಾಗಿ ಬಿಟ್ಟಿದ್ದರೆ ಹೇಗಿರುತ್ತದೆ’ ಎನ್ನುವ ಕಾನ್ಸೆಪ್ಟ್​ ನೀಡಲಾಯಿತು. ಆಗ ಚಂದನ್​ ಶೆಟ್ಟಿ ಅವರು ನಿವೇದಿತಾ ರೀತಿಯಲ್ಲಿ ವರ್ತಿಸಿದರೆ, ನಿವೇದಿತಾ ಅವರು ಚಂದನ್​ ರೀತಿಯಲ್ಲಿ ವರ್ತಿಸಿದ್ದರು. ಚಂದನ್​ ಆಡುತ್ತಿದ್ದ ಮಾತು, ಅವರ ಹಾವ-ಭಾವ ಎಲ್ಲವೂ ನಿವೇದಿತಾ ರೀತಿಯಲ್ಲೇ ಇತ್ತು.

ಕಲರ್ಸ್​ ಕನ್ನಡ ವಾಹಿನಿ, ಈ ಬಗ್ಗೆ ಪ್ರೋಮೋ ಒಂದನ್ನು ಹಂಚಿಕೊಂಡಿದೆ. ಈ ವಿಡಿಯೋ ನೋಡಿದ ಅನೇಕರು ಸಾಕಷ್ಟು ನಕ್ಕಿದ್ದಾರೆ. ಕಾಮೆಂಟ್​ ಬಾಕ್ಸ್​ನಲ್ಲಿ ನಗುವ ಎಮೋಜಿಯನ್ನು ಪೋಸ್ಟ್​ ಮಾಡಿದ್ದಾರೆ. ರಾಜಾ ರಾಣಿ ಶೋ ಶನಿವಾರ ಮತ್ತು ಭಾನುವಾರ ರಾತ್ರಿ 7:30ಕ್ಕೆ ಪ್ರಸಾರವಾಗುತ್ತದೆ. ಸ್ಟಾರ್​ ಜೋಡಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ.

ಇದನ್ನೂ ಓದಿ: ಕನ್ನಡ ಮಿನಿ ಬಿಗ್​ ಬಾಸ್​ ಬಗ್ಗೆ ಹೊಸ ಅಪ್​ಡೇಟ್​; ನೀವಂದುಕೊಂಡಂತಿರಲ್ಲ ಸ್ಪರ್ಧಿಗಳು

ಅರವಿಂದ್​​-ದಿವ್ಯಾ ಉರುಡುಗ ಮದುವೆ ಆಗ್ತಾರಾ? ಚಂದನ್​-ನಿವೇದಿತಾ ಥರ ಇನ್ನೊಂದು ಜೋಡಿ!

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ