AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸದ್ದಿಲ್ಲದೆ ಆರಂಭವಾಯ್ತು ಅಟ್ಲೀ-ಶಾರುಖ್​ ಸಿನಿಮಾ ಶೂಟಿಂಗ್; ಲೀಕ್​ ಆಯ್ತು ಸೆಟ್​ ಫೋಟೋ

ವಿಜಯ್​ ನಟನೆಯ ‘ಬಿಗಿಲ್’​, ‘ಮೆರ್ಸಲ್’​ ಹಾಗೂ ‘ತೇರಿ’ ಸಿನಿಮಾಗಳನ್ನು ನಿರ್ದೇಶನ ಮಾಡಿದ ಖ್ಯಾತಿ ಅಟ್ಲೀ ಅವರಿಗಿದೆ. ಈ ಮೂರು ಚಿತ್ರಗಳು ಹಿಟ್​ ಚಿತ್ರಗಳು. ಈಗ ಶಾರುಖ್​ ಮುಂದಿನ ಸಿನಿಮಾಗೆ ಅಟ್ಲೀ ನಿರ್ದೇಶನ ಮಾಡೋದು ಖಚಿತವಾಗಿದೆ.

ಸದ್ದಿಲ್ಲದೆ ಆರಂಭವಾಯ್ತು ಅಟ್ಲೀ-ಶಾರುಖ್​ ಸಿನಿಮಾ ಶೂಟಿಂಗ್; ಲೀಕ್​ ಆಯ್ತು ಸೆಟ್​ ಫೋಟೋ
ಸದ್ದಿಲ್ಲದೆ ಆರಂಭವಾಯ್ತು ಅಟ್ಲೀ-ಶಾರುಖ್​ ಸಿನಿಮಾ ಶೂಟಿಂಗ್; ಲೀಕ್​ ಆಯ್ತು ಸೆಟ್​ ಫೋಟೋ
TV9 Web
| Edited By: |

Updated on:Sep 05, 2021 | 7:58 PM

Share

ಕಾಲಿವುಡ್​ ಖ್ಯಾತ ನಿರ್ದೇಶಕ ಅಟ್ಲೀ ಹಾಗೂ ಬಾಲಿವುಡ್​ನ ಜನಪ್ರಿಯ ನಟ ಶಾರುಖ್​ ಖಾನ್​ ಒಟ್ಟಾಗಿ ಸಿನಿಮಾ ಮಾಡುತ್ತಾರೆ, ಆ ಬಗ್ಗೆ ಘೋಷಣೆ ಆಗಲಿದೆ ಎನ್ನುವ ಸುದ್ದಿ ಈ ಮೊದಲಿನಿಂದಲೂ ಹರಿದಾಡುತ್ತಲೇ ಇದೆ. ಆದರೆ, ಈವರೆಗೆ ಸಿನಿಮಾ ಬಗ್ಗೆ ಯಾವುದೇ ಅಪ್​ಡೇಟ್​ ಸಿಕ್ಕಿಲ್ಲ. ಈ ಸಿನಿಮಾ ಕುರಿತು ಆಗಸ್ಟ್ 15ರಂದು ಪೋಸ್ಟರ್​​ ರಿಲೀಸ್​ ಆಗಲಿದೆ ಎನ್ನಲಾಗಿತ್ತಾದರೂ, ಆ ರೀತಿಯ ಅಪ್​ಡೇಟ್​ ಏನೂ ಬಂದಿಲ್ಲ. ಇದು ಅಭಿಮಾನಿಗಳಿಗೆ ಬೇಸರ ತರಿಸಿತ್ತು. ಈಗ ಫ್ಯಾನ್ಸ್​ಗೆ ಈ ಸಿನಿಮಾ ವಿಚಾರದಲ್ಲಿ ಖುಷಿ ಸುದ್ದಿ ಸಿಕ್ಕಿದೆ. ಸದ್ದಿಲ್ಲದೆ ಶಾರುಖ್ ಈ ಚಿತ್ರದ ಶೂಟಿಂಗ್​ ಆರಂಭಿಸಿದ್ದಾರೆ.

ವಿಜಯ್​ ನಟನೆಯ ‘ಬಿಗಿಲ್’​, ‘ಮೆರ್ಸಲ್’​ ಹಾಗೂ ‘ತೇರಿ’ ಸಿನಿಮಾಗಳನ್ನು ನಿರ್ದೇಶನ ಮಾಡಿದ ಖ್ಯಾತಿ ಅಟ್ಲೀ ಅವರಿಗಿದೆ. ಈ ಮೂರು ಚಿತ್ರಗಳು ಹಿಟ್​ ಚಿತ್ರಗಳು. ಈಗ ಶಾರುಖ್​ ಮುಂದಿನ ಸಿನಿಮಾಗೆ ಅಟ್ಲೀ ನಿರ್ದೇಶನ ಮಾಡೋದು ಖಚಿತವಾಗಿದೆ. ಈ ಸಿನಿಮಾದ ಸೆಟ್​ ಫೋಟೋ ಲೀಕ್​ ಆಗಿದೆ. ಇದು ಅಭಿಮಾನಿಗಳ ಖುಷಿಯನ್ನು ದುಪ್ಪಟ್ಟು ಮಾಡಿದೆ.

ಶಾರುಖ್​ ಖಾನ್​ ‘ಪಠಾಣ್​’ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಇದಕ್ಕಿಂತ ಮೊದಲೇ ಅಟ್ಲೀ-ಶಾರುಖ್​ ಸಿನಿಮಾ ಸೆಟ್ಟೇರಬೇಕಿತ್ತು. ಆದರೆ, ಕಾರಣಾಂತರಗಳಿಂದ ಚಿತ್ರದ ಕೆಲಸಗಳು ಆರಂಭವಾಗೋದು ತಡವಾಗಿತ್ತು. ಸೈಲೆಂಟ್​ ಆಗಿ ಈ ಸಿನಿಮಾ ಶೂಟಿಂಗ್​ ಆರಂಭಗೊಂಡಿರುವುದು ಸಾಕಷ್ಟು ಖುಷಿ ಮೂಡಿಸಿದೆ.

ನಯನತಾರಾ ಈ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗಿತ್ತು. ಅದಕ್ಕೆ ಈಗ ಸಾಕ್ಷ್ಯ ಸಿಕ್ಕಿದೆ. ನಯನತಾರಾ ಕೂಡ ಸೆಟ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಅವರು ಕೂಡ ಈ ಸಿನಿಮಾದಲ್ಲಿ ನಟಿಸೋದು ಖಚಿತವಾಗಿದೆ. ಈ ಮಧ್ಯೆ, ಪ್ರಿಯಾಮಣಿ, ರಾನಾ ದಗ್ಗುಬಾಟಿ ಕೂಡ ಈ ಸಿನಿಮಾದ ಸೆಟ್​ ಸೇರಲಿದ್ದಾರೆ ಎನ್ನುವ ವದಂತಿ ಇದೆ. ಚಿತ್ರತಂಡದಿಂದ ಅಧಿಕೃತ ಮಾಹಿತಿ ಹೊರಬರಬೇಕಿದೆ.

ಸದ್ಯ, ಹೈಜಾಕ್​ ದೃಶ್ಯಗಳನ್ನು ಶೂಟ್​ ಮಾಡಲಾಗುತ್ತಿದೆ. ಈ ಸಿನಿಮಾದಲ್ಲಿ ಸಾಕಷ್ಟು ಆ್ಯಕ್ಷನ್​ ದೃಶ್ಯಗಳಿರಲಿವೆ. ಹಿಂದಿ ಮತ್ತು ತಮಿಳು ಭಾಷೆಯಲ್ಲಿ ಈ ಸಿನಿಮಾ ಸಿದ್ಧಗೊಳ್ಳಲಿದೆ. ಉಳಿದ ಭಾಷೆಗಳಿಗೆ ಡಬ್​ ಆಗಿ ತೆರೆ ಕಾಣಲಿದೆ. ಅಕ್ಟೋಬರ್​ನಿಂದ ಪೂರ್ಣ ಪ್ರಮಾಣದ ಶೂಟ್​ ಆರಂಭಗೊಳ್ಳಲಿದೆ. ರಾಮೋಜಿ ಫಿಲ್ಮ್​​ ಸಿಟಿಯಲ್ಲಿ ಈಗಾಗಲೇ ದೊಡ್ಡ ಸೆಟ್​ ಈ ಸಿನಿಮಾಗಾಗಿ ರೆಡಿ ಆಗುತ್ತಿದೆ.

ಇದನ್ನೂ ಓದಿ: ಸೆಟ್ಟೇರಿತು ಶಾರುಖ್- ನಯನತಾರಾ ನಟನೆಯ ನೂತನ ಚಿತ್ರ; ಬಣ್ಣಹಚ್ಚಲಿದ್ದಾರಾ ಪ್ರಿಯಾಮಣಿ, ರಾಣಾ ದಗ್ಗುಬಾಟಿ?

ಅಟ್ಲೀ-ಶಾರುಖ್​ ಖಾನ್​ ಸಿನಿಮಾದ ಬಗ್ಗೆ ಹೊಸ​ ಅಪ್​ಡೇಟ್ 

Published On - 7:21 pm, Sun, 5 September 21

Follow Us
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಕರ್ನಾಟಕ ಬಂದ್​ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್
ಕರ್ನಾಟಕ ಬಂದ್​ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್
ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ
ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ
ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು
ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು
ಕಾವೇರಿ ವಿವಾದ: ಊರ್ವಶಿ ಚಿತ್ರಮಂದಿರದಲ್ಲಿ ‘ಜನ ನಾಯಗನ್’ ಬದಲಿಗೆ ‘ಕರಾವಳಿ’
ಕಾವೇರಿ ವಿವಾದ: ಊರ್ವಶಿ ಚಿತ್ರಮಂದಿರದಲ್ಲಿ ‘ಜನ ನಾಯಗನ್’ ಬದಲಿಗೆ ‘ಕರಾವಳಿ’
ನಶಾ ಮುಕ್ತ ಭಾರತ ಅಭಿಯಾನ, ಪ್ರಧಾನಿ ಮೋದಿ ಏನಂದ್ರು ನೋಡಿ
ನಶಾ ಮುಕ್ತ ಭಾರತ ಅಭಿಯಾನ, ಪ್ರಧಾನಿ ಮೋದಿ ಏನಂದ್ರು ನೋಡಿ
ಕಬಿನಿ ಜಲಾಶಯ ಸಂಪೂರ್ಣ ಭರ್ತಿ
ಕಬಿನಿ ಜಲಾಶಯ ಸಂಪೂರ್ಣ ಭರ್ತಿ
ನಶಾಮುಕ್ತ ಭಾರತ ಕಾರ್ಯಕ್ರಮ: ವಿದ್ಯಾರ್ಥಿಗಳಿಗೆ ಮೋದಿ ಕಿವಿಮಾತು
ನಶಾಮುಕ್ತ ಭಾರತ ಕಾರ್ಯಕ್ರಮ: ವಿದ್ಯಾರ್ಥಿಗಳಿಗೆ ಮೋದಿ ಕಿವಿಮಾತು
ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ; ಬೆಂಗಳೂರಿನಲ್ಲಿ ಹೈ ಅಲರ್ಟ್
ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ; ಬೆಂಗಳೂರಿನಲ್ಲಿ ಹೈ ಅಲರ್ಟ್