ಸಮಚಿತ್ತ, ಏಕಾಗ್ರತೆ ಹೊಂದೋದು ಹೇಗೆ? ಅಭಿಮಾನಿಗಳಿಗೆ ಟಿಪ್ಸ್ ನೀಡಿದ ಶಿಲ್ಪಾ ಶೆಟ್ಟಿ
ರಾಜ್ ಕುಂದ್ರಾ ಬಂಧನದ ನಂತರದಲ್ಲಿ ಶಿಲ್ಪಾ ಒಂದು ತಿಂಗಳು ಸಂಪೂರ್ಣ ಸೈಲೆಂಟ್ ಆಗಿದ್ದರು. ನಂತರ ಮತ್ತೆ ತಮ್ಮ ಕೆಲಸಕ್ಕೆ ಮರಳಿದ್ದಾರೆ ಅವರು.
ಅಶ್ಲೀಲ ಸಿನಿಮಾ ನಿರ್ಮಾಣ ಪ್ರಕರಣದಲ್ಲಿ ರಾಜ್ ಕುಂದ್ರಾ ಜೈಲು ಸೇರಿ ಹಲವು ದಿನಗಳಾಗಿವೆ. ಅವರಿಗೆ ಜಾಮೀನು ಸಿಗುವ ಯಾವ ಲಕ್ಷಣವೂ ಕಾಣುತ್ತಿಲ್ಲ. ಜಾಮೀನು ಪಡೆಯೋಕೆ ರಾಜ್ ಕುಂದ್ರಾ ಎಲ್ಲಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಅವರ ಪರ ವಕೀಲರು ನಾನಾ ಕೋರ್ಟ್ ಅಲೆಯುತ್ತಿದ್ದಾರೆ. ಆದರೆ, ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಇತ್ತ ಪತಿಯಿಂದ ಶಿಲ್ಪಾ ಶೆಟ್ಟಿ ತೀವ್ರ ಮುಜುಗರಕ್ಕೆ ಒಳಗಾಗಿದ್ದಾರೆ. ಇದನ್ನು ಅವರು ಚಾಲೆಂಜ್ ಆಗಿ ಸ್ವೀಕರಿಸಿದ್ದಾರೆ. ಪತಿ ಬಂಧನದ ನಂತರ ಸ್ವಲ್ಪ ದಿನ ಮನೆಯಲ್ಲೇ ಇದ್ದ ಅವರು ಈಗ ಮತ್ತೆ ಕಾಣಿಸಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ, ಅಭಿಮಾನಿಗಳಿಗೆ ಕೆಲ ಟಿಪ್ಸ್ ಕೂಡ ನೀಡಿದ್ದಾರೆ.
ರಾಜ್ ಕುಂದ್ರಾ ಬಂಧನದ ನಂತರದಲ್ಲಿ ಶಿಲ್ಪಾ ಒಂದು ತಿಂಗಳು ಸಂಪೂರ್ಣ ಸೈಲೆಂಟ್ ಆಗಿದ್ದರು. ನಂತರ ಮತ್ತೆ ತಮ್ಮ ಕೆಲಸಕ್ಕೆ ಮರಳಿದ್ದಾರೆ ಅವರು. ‘ಸೂಪರ್ ಡಾನ್ಸರ್’ ರಿಯಾಲಿಟಿ ಶೋ ಜಡ್ಜ್ ಆಗಿರುವ ಶಿಲ್ಪಾ ಮತ್ತೆ ಕೆಲಸಕ್ಕೆ ಮರಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿಯೂ ಕೂಡ ಅವರು ಆ್ಯಕ್ಟೀವ್ ಆಗಿದ್ದಾರೆ. ಈಗ ಅವರು ಸಮಚಿತ್ತ ಹೊಂದೋದು ಹೇಗೆ ಎನ್ನುವ ಬಗ್ಗೆ ಪಾಠ ಮಾಡಿದ್ದಾರೆ.
ಶಿಲ್ಪಾ ಶೆಟ್ಟಿ ವಯಸ್ಸು 46. ಆದಾಗ್ಯೂ ಅವರು ಫಿಟ್ ಆಗಿದ್ದಾರೆ. ಅವರಿಗೆ ವಯಸ್ಸಾದಂತೆ ಕಾಣುವುದೇ ಇಲ್ಲ. ಇದಕ್ಕೆ ಕಾರಣವಾಗಿದ್ದು ಯೋಗ. ಶಿಲ್ಪಾ ಯೋಗದಲ್ಲಿ ಪಳಗಿದ್ದಾರೆ. ನಿತ್ಯ ಅವರು ಯೋಗ ಮಾಡುವುದನ್ನು ತಪ್ಪಿಸುವುದಿಲ್ಲ. ಈಗ ಕೆಲ ಆಸನಗಳನ್ನು ಅವರು ಅಭಿಮಾನಿಗಳಿಗೂ ಹೇಳಿಕೊಟ್ಟಿದ್ದಾರೆ. ಈ ಆಸನಗಳಿಂದ ಏಕಾಗ್ರತೆ ಹಾಗೂ ಸಮಚಿತ್ತ ಹೊಂದಲು ಸಾಧ್ಯ ಎಂದು ಅವರು ಬರೆದುಕೊಂಡಿದ್ದಾರೆ.
View this post on Instagram
ಶಿಲ್ಪಾ ಶೆಟ್ಟಿ ಅವರು ನಟನೆಯಿಂದ ದೂರವೇ ಉಳಿದಿದ್ದರು. ಇತ್ತೀಚೆಗೆ ಅವರ ನಟನೆಯ ‘ಹಂಗಾಮಾ 2’ ಒಟಿಟಿಯಲ್ಲಿ ರಿಲೀಸ್ ಆಗಿತ್ತು. ಇದೇ ಸಂದರ್ಭದಲ್ಲಿ ರಾಜ್ ಕುಂದ್ರಾ ವಿವಾದ ಭುಗಿಲೆದ್ದಿತ್ತು. ಇದು ಸಿನಿಮಾಗೆ ಕೊಂಚ ಹಿನ್ನಡೆ ಆಗಿತ್ತು. ಇನ್ನು, ಸಿನಿಮಾಗೆ ಎಲ್ಲ ಕಡೆಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹೀಗಾಗಿ, ಈ ಸಿನಿಮಾ ಸೋತಿತ್ತು. ಇನ್ನು ಶಿಲ್ಪಾ ಸಹೋದರಿ ಶಮಿತಾ ಶೆಟ್ಟಿ ಬಿಗ್ ಬಾಸ್ ಮನೆಗೆ ಕಾಲಿಟ್ಟು ಮಿಂಚುತ್ತಿದ್ದಾರೆ.
ಶಿಲ್ಪಾ ಶೆಟ್ಟಿ- ರಾಜ್ ಕುಂದ್ರಾಗೆ ಹೊಸ ಸಂಕಷ್ಟ; 41 ಲಕ್ಷ ರೂ ವಂಚಿಸಿದ್ದಾರೆಂದು ದೂರು ನೀಡಿದ ದೆಹಲಿ ಮೂಲದ ಉದ್ಯಮಿ