ಮ್ಯಾಗಜೀನ್ ಒಂದರ ಮುಖಪುಟದಲ್ಲಿ ಕಾಕತಾಳೀಯವಾಗಿ ಒಟ್ಟಿಗೆ ಕಾಣಿಸಿಕೊಂಡಿದ್ದ ಸೈಫ್- ಕರೀನಾ ಪೋಷಕರು; ಚಿತ್ರ ನೋಡಿ
Saif Ali Khan and Kareena Kapoor: ಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್ ಪೋಷಕರು 1970ರ ಕಾಲಘಟ್ಟದಲ್ಲಿ ಮುಂಚೂಣಿಯಲ್ಲಿದ್ದವರು. ಮ್ಯಾಗಜೀನ್ ಒಂದರ ಮುಖಪುಟದಲ್ಲಿ ನಾಲ್ವರೂ ಕಾಕತಾಳೀಯವಾಗಿ ಒಟ್ಟಿಗೆ ಕಾಣಿಸಿಕೊಂಡಿರುವ ಚಿತ್ರ ಈಗ ವೈರಲ್ ಆಗಿದೆ.
ಪ್ರಸ್ತುತ ಬಾಲಿವುಡ್ನಲ್ಲಿ ತಾರಾ ಜೋಡಿಯೆಂದು ಪ್ರಸಿದ್ಧರಾದವರಲ್ಲಿ ಕರೀನಾ ಕಪೂರ್(Kareena Kapoor) ಹಾಗೂ ಸೈಫ್ ಅಲಿ ಖಾನ್(Saif Ali Khan) ಜೋಡಿಯೂ ಒಂದು. ಅವರ ಪೋಷಕರು ಕೂಡ 1970ರ ಕಾಲಘಟ್ಟದಲ್ಲಿ ಬಾಲಿವುಡ್ನಲ್ಲಿ ಮಿಂಚಿದವರು. ಕರೀನಾ ಪೋಷಕರಾದ ರಣಧೀರ್ ಕಪೂರ್ ಹಾಗೂ ಬಬಿತಾ ಕಪೂರ್, ಸೈಫ್ ಪೋಷಕರಾದ ಮನ್ಸೂರ್ ಅಲಿ ಖಾನ್ ಪಟೌಡಿ ಮತ್ತು ಶರ್ಮಿಳಾ ಟಾಗೋರ್ ಒಂದೇ ಮ್ಯಾಗಜೀನ್ ಕವರ್ನಲ್ಲಿ ಕಾಕತಾಳೀಯವಾಗಿ ಒಟ್ಟಿಗೆ ಕಾಣಿಸಿಕೊಂಡಿದ್ದ ಅಚ್ಚರಿಯ ಸಂಗತಿ ಈಗ ಎಲ್ಲರ ಗಮನ ಸೆಳೆದಿದೆ. ಪ್ರಸ್ತುತ ಸಂಬಂಧಿಕರಾಗಿರುವ ಪಟೌಡಿ ಹಾಗೂ ಕಪೂರ್ ಕುಟುಂಬ, ಆಗ ಅಚ್ಚರಿಯ ರೀತಿಯಲ್ಲಿ ಮ್ಯಾಗಜೀನ್ ಒಂದರ ಮುಖಪುಟದಲ್ಲಿ ಕಾಣಿಸಿಕೊಂಡಿದ್ದರು.
ಕರೀನಾ ಪೋಷಕರಾದ ರಣಧೀರ್ ಹಾಗೂ ಬಬಿತಾ 1970ರ ಕಾಲಘಟ್ಟದಲ್ಲಿ ಚಿತ್ರರಂಗದಲ್ಲಿ ಸಕ್ರಿಯರಾಗಿ ಗುರುತಿಸಿಕೊಂಡಿದ್ದರು. ಅದೇ ಸಂದರ್ಭದಲ್ಲಿ ಮನ್ಸೂರ್ ಅಲಿ ಖಾನ್ ಪಟೌಡಿ ಖ್ಯಾತ ಕ್ರಿಕೆಟ್ ತಾರೆಯಾಗಿ ಚಿರಪರಿಚಿತರಾಗಿದ್ದರು. ಅವರ ಪತ್ನಿ ಶರ್ಮಿಳಾ ಟಾಗೋರ್ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು. ಆ ಸಂದರ್ಭದಲ್ಲಿ ಕ್ಲಿಕ್ಕಿಸಿದ ಚಿತ್ರಗಳನ್ನು ಮ್ಯಾಗಜೀನ್ ಒಂದು ಮುಖಪುಟದಲ್ಲಿ ಪ್ರಕಟಿಸಿತ್ತು. ಇದೀಗ ಆ ಫೊಟೊವನ್ನು ನೋಡಿ ಅಭಿಮಾನಿಗಳು ಹಳೆಯ ನೆನಪುಗಳಿಗೆ ಜಾರಿದ್ದಾರೆ.
ಮ್ಯಾಗಜೀನ್ನ ಮುಖಪುಟ ಇಲ್ಲಿದೆ:
ಮನ್ಸೂರ್ ಅಲಿ ಖಾನ್ ಪಟೌಡಿ ಹಾಗೂ ಶರ್ಮಿಲಾ 1969ರಲ್ಲಿ ವಿವಾಹವಾಗಿದ್ದರು. ಮನ್ಸೂರ್ 2011ರಲ್ಲಿ ನಿಧನರಾಗಿದ್ದಾರೆ. ರಣಧೀರ್ ಕಪೂರ್ ಹಾಗೂ ಬಬಿತಾ 1971ರಲ್ಲಿ ವಿವಾಹವಾಗಿದ್ದರು. ಪಟೌಡಿ ಕುಟುಂಬ ಹಾಗೂ ಕಪೂರ್ ಕುಟುಂಬದ ಕುಡಿಗಳಾದ ಸೈಫ್- ಕರೀನಾ, 2012ರಲ್ಲಿ ವಿವಾಹವಾಗಿದ್ದರು. ದಂಪತಿಗೆ ತೈಮೂರ್ ಹಾಗೂ ಜೇಹ್ ಎಂಬ ಇಬ್ಬರು ಮಕ್ಕಳಿದ್ದಾರೆ. ಈ ಮೊದಲು ಸೈಫ್ಗೆ ಅಮೃತಾ ಸಿಂಗ್ರೊಂದಿಗೆ ವಿವಾಹವಾಗಿತ್ತು.
ಇದನ್ನೂ ಓದಿ:
ಮಾರ್ವೆಲ್ ಸರಣಿಯ ಹೊಸ ಚಿತ್ರಕ್ಕೂ, ಅಜಯ್ ದೇವಗನ್ರ ‘ಜಿಗರ್’ ಚಿತ್ರಕ್ಕೂ ಸಾಮ್ಯತೆ ಕಂಡುಹಿಡಿದ ಅಭಿಮಾನಿಗಳು
ರಶ್ಮಿಕಾ ಮಂದಣ್ಣಗೆ ಪೈಪೋಟಿ ನೀಡಲು ಬಂದಿರುವ ಕನ್ನಡತಿ ಕೃತಿ ಶೆಟ್ಟಿಗೆ ಪರಭಾಷೆಯಲ್ಲಿ ಫುಲ್ ಡಿಮ್ಯಾಂಡ್
(Picture of Saif Ali Khan and Kareena Kapoor parents covered in a magazine cover in that time goes viral)