ರಶ್ಮಿಕಾ ಮಂದಣ್ಣಗೆ ಪೈಪೋಟಿ ನೀಡಲು ಬಂದಿರುವ ಕನ್ನಡತಿ ಕೃತಿ ಶೆಟ್ಟಿಗೆ ಪರಭಾಷೆಯಲ್ಲಿ ಫುಲ್​ ಡಿಮ್ಯಾಂಡ್​​

ಹಲವು ಸಿನಿಮಾ ತಂಡಗಳು ಕೃತಿ ಶೆಟ್ಟಿ ಅವರ ಜೊತೆ ಮಾತುಕತೆ ನಡೆಸುತ್ತಿವೆ. ಈಗಿನ್ನೂ 18ರ ಪ್ರಾಯದಲ್ಲಿರುವ ಈ ಬೆಡಗಿಗೆ ಉಜ್ವಲ ಭವಿಷ್ಯ ಇದೆ ಎಂದು ಪರಭಾಷಾ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ.

ಕನ್ನಡದ ಅನೇಕ ನಟಿಯರು ಪರಭಾಷೆಯಲ್ಲಿ ಮಿಂಚುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಅವರಂತೂ ಬಾಲಿವುಡ್​ವರೆಗೆ ಹೋಗಿ ಸೌಂಡು ಮಾಡುತ್ತಿದ್ದಾರೆ. ದಕ್ಷಿಣ ಭಾರತದ ಟಾಪ್​ ಹೀರೋಗಳ ಸಿನಿಮಾಗಳಿಗೆ ಅವರೇ ನಾಯಕಿ ಆಗುತ್ತಿದ್ದಾರೆ. ಹೀಗೆ ಬಹುಬೇಡಿಕೆಯ ನಟಿಯಾಗಿ ಮಿಂಚುತ್ತಿರುವ ಅವರಿಗೆ ಪೈಪೋಟಿ ನೀಡಲು ಮತ್ತೋರ್ವ ಕನ್ನಡತಿ ಸಜ್ಜಾಗಿದ್ದಾರೆ. ತೆಲುಗಿನ ‘ಉಪ್ಪೆನಾ’ ಸಿನಿಮಾ ಮೂಲಕ ಭರ್ಜರಿ ಯಶಸ್ಸು ಕಂಡಿರುವ ಕೃತಿ ಶೆಟ್ಟಿಗೆ ಈಗ ಭರಪೂರ ಆಫರ್​ಗಳು ಬರುತ್ತಿವೆ. ಅನೇಕ ಸ್ಟಾರ್​ ಹೀರೋಗಳಿಗೆ ಜೋಡಿಯಾಗಲು ಅವರೇ ಸೂಕ್ತ ಎಂಬ ಅಭಿಪ್ರಾಯ ಟಾಲಿವುಡ್​ ಅಂಗಳದಿಂದ ಕೇಳಿಬರುತ್ತಿದೆ.

‘ಉಪ್ಪೆನಾ’ ಸಿನಿಮಾದಲ್ಲಿ ಪ್ರತಿಭಾವಂತ ನಟ ವಿಜಯ್​ ಸೇತುಪತಿ ಜೊತೆ ಅಭಿನಯಿಸುವ ಅವಕಾಶ ಕೃತಿಗೆ ಸಿಕ್ಕಿತ್ತು. ಕೃತಿ ತಾಯಿ ಫ್ಯಾಷನ್​ ಡಿಸೈನರ್​ ಆಗಿದ್ದಾರೆ. ಅಮ್ಮ ವಿನ್ಯಾಸಗೊಳಿಸಿದ ಬಟ್ಟೆಗಳನ್ನು ಧರಿಸಿ ಕೃತಿ ಕಂಗೊಳಿಸುತ್ತಾರೆ. ಸದ್ಯ ಹಲವು ಸಿನಿಮಾ ತಂಡಗಳು ಅವರ ಜೊತೆ ಮಾತುಕತೆ ನಡೆಸುತ್ತಿವೆ. ಈಗಿನ್ನೂ 18ರ ಪ್ರಾಯದಲ್ಲಿರುವ ಈ ಬೆಡಗಿಗೆ ಉಜ್ವಲ ಭವಿಷ್ಯ ಇದೆ ಎಂದು ಪರಭಾಷಾ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:

‘ನನ್ನ ಜೊತೆ ಮನೆಯಲ್ಲೇ ಇರು’ ಎಂದು ರಶ್ಮಿಕಾಗೆ ಒತ್ತಾಯ; ಹೀಗಾದರೆ ಕೆಲಸ ಮಾಡೋದು ಹೇಗೆ?

ತೆಲುಗಿನಲ್ಲಿ ಮೊದಲ ಚಿತ್ರದ ರಿಲೀಸ್​ಗೂ ಮುನ್ನವೇ ಹೆಚ್ಚಿದೆ ಕನ್ನಡತಿ ಶ್ರೀಲೀಲಾ ಹವಾ; ರಶ್ಮಿಕಾ, ಪೂಜಾ, ಕೃತಿ ಕಥೆಯೇನು?

Click on your DTH Provider to Add TV9 Kannada