AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೆಲುಗಿನಲ್ಲಿ ಮೊದಲ ಚಿತ್ರದ ರಿಲೀಸ್​ಗೂ ಮುನ್ನವೇ ಹೆಚ್ಚಿದೆ ಕನ್ನಡತಿ ಶ್ರೀಲೀಲಾ ಹವಾ; ರಶ್ಮಿಕಾ, ಪೂಜಾ, ಕೃತಿ ಕಥೆಯೇನು?

ಅಪ್ಪಟ ಕನ್ನಡದ ನಟಿ ಶ್ರೀಲೀಲಾ ಅವರು ‘ಪೆಳ್ಳಿ ಸಂದಡಿ’ ಸಿನಿಮಾ ಮೂಲಕ ಟಾಲಿವುಡ್​ಗೆ ಕಾಲಿಡುತ್ತಿದ್ದಾರೆ. ಆ ಚಿತ್ರ ರಿಲೀಸ್​ ಆಗುವುದಕ್ಕೂ ಮುನ್ನವೇ ಸಖತ್​ ಜನಪ್ರಿಯತೆ ಪಡೆದುಕೊಳ್ಳುತ್ತಿದ್ದಾರೆ. ಅವರಿಗೆ ಟಾಲಿವುಡ್​ನಲ್ಲಿ ಒಳ್ಳೆಯ ಭವಿಷ್ಯ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.

ತೆಲುಗಿನಲ್ಲಿ ಮೊದಲ ಚಿತ್ರದ ರಿಲೀಸ್​ಗೂ ಮುನ್ನವೇ ಹೆಚ್ಚಿದೆ ಕನ್ನಡತಿ ಶ್ರೀಲೀಲಾ ಹವಾ; ರಶ್ಮಿಕಾ, ಪೂಜಾ, ಕೃತಿ ಕಥೆಯೇನು?
ಶ್ರೀಲೀಲಾ
TV9 Web
| Updated By: ಮದನ್​ ಕುಮಾರ್​|

Updated on: Aug 22, 2021 | 6:40 PM

Share

ಕರ್ನಾಟಕ ಮೂಲದ ಹಲವು ನಟಿಯರು ಟಾಲಿವುಡ್​ನಲ್ಲಿ ಮಿಂಚುತ್ತಿದ್ದಾರೆ. ಅಲ್ಲಿನ ಸ್ಟಾರ್​ ನಟರಿಗೆ ಹೀರೋಯಿನ್​ ಆಗುವ ಅವಕಾಶ ಅವರಿಗೆ ಸಿಗುತ್ತಿದೆ. ರಶ್ಮಿಕಾ ಮಂದಣ್ಣ (Rashmika Mandanna) ಸೃಷ್ಟಿ ಮಾಡಿಕೊಂಡಿರುವ ಬೇಡಿಕೆ ನೋಡಿದರೆ ಎಂಥವರಿಗೂ ಅಚ್ಚರಿ ಆಗುತ್ತದೆ. ‘ಗೀತಾ ಗೋವಿಂದಂ’ ಚಿತ್ರದ ಯಶಸ್ಸಿನ ಬಳಿಕ ಅವರು ಕನ್ನಡಕ್ಕಿಂತ ಹೆಚ್ಚಾಗಿ ಟಾಲಿವುಡ್​ನಲ್ಲೇ ಭದ್ರವಾಗಿ ನೆಲೆ ಕಂಡುಕೊಂಡಿದ್ದಾರೆ. ಅದೇ ರೀತಿ ಪೂಜಾ ಹೆಗ್ಡೆ (Pooja Hegde) ಮತ್ತು ಕೃತಿ ಶೆಟ್ಟಿ (Krithi Shetty) ಕೂಡ ತೆಲುಗು ಚಿತ್ರದಲ್ಲಿ ಮಿಂಚುತ್ತಿದ್ದಾರೆ. ಈಗ ಅವರಿಗೆ ಪೈಪೋಟಿ ನೀಡಲು ಕನ್ನಡತಿ ಶ್ರೀಲೀಲಾ (Sreeleela) ಸಜ್ಜಾಗಿದ್ದಾರೆ. ಅವರಿಗೂ ಟಾಲಿವುಡ್​ನಲ್ಲಿ ಭರ್ಜರಿ ಆಫರ್​ ಬರುತ್ತಿದೆ ಎಂಬ ಸುದ್ದಿ ಕೇಳಿಬಂದಿದೆ.

ಕನ್ನಡದಲ್ಲಿ ‘ಕಿಸ್​’ ಮತ್ತು ‘ಭರಾಟೆ’ ಸಿನಿಮಾಗಳಲ್ಲಿ ನಟಿಸಿರುವ ಶ್ರೀಲೀಲಾ ಅವರು ಅಪ್ಪಟ ಕನ್ನಡತಿ. ಸ್ಯಾಂಡಲ್​ವುಡ್​ನ ಹಲವು ಪ್ರಾಜೆಕ್ಟ್​ಗಳನ್ನು ಕೈಯಲ್ಲಿ ಇಟ್ಟುಕೊಂಡಿರುವ ಅವರು ಈಗ ಟಾಲಿವುಡ್​ಗೆ ಎಂಟ್ರಿ ನೀಡುತ್ತಿದ್ದಾರೆ. ‘ಪೆಳ್ಳಿ ಸಂದಡಿ’ ಸಿನಿಮಾ ಮೂಲಕ ಅವರು ತೆಲುಗು ಪ್ರೇಕ್ಷಕರನ್ನು ರಂಜಿಸಲಿದ್ದಾರೆ. 25 ವರ್ಷಗಳ ಹಿಂದೆ ‘ಪೆಳ್ಳಿ ಸಂದಡಿ’ ಚಿತ್ರ ಮೂಡಿಬಂದಿತ್ತು. ಅದೇ ಕಥೆಯನ್ನು ಪ್ರಸ್ತುತ ತಲೆಮಾರಿಗೆ ಅನ್ವಯ ಆಗುವಂತೆ ಹೊಸ ಸಿನಿಮಾ ಕಟ್ಟಿಕೊಡಲಾಗುತ್ತಿದೆ. ಆ ಚಿತ್ರಕ್ಕೆ ನಾಯಕಿಯಾಗುವ ಚಾನ್ಸ್​ ಶ್ರೀಲೀಲಾಗೆ ಸಿಕ್ಕಿದೆ. ಆ ಚಿತ್ರ ತೆರೆಕಾಣುವುದಕ್ಕೂ ಮುನ್ನವೇ ಅವರಿಗೆ ಹೊಸ ಹೊಸ ಆಫರ್​ಗಳು ಬರುತ್ತಿವೆ.

ಟಾಲಿವುಡ್​ನ ಯುವ ನಟರಿಗೆ ಶ್ರೀಲೀಲಾ ಸೂಕ್ತವಾಗುತ್ತಾರೆ ಎಂಬ ಅಭಿಪ್ರಾಯ ಈಗಾಗಲೇ ಅಲ್ಲಿನ ಕೆಲವು ನಿರ್ದೇಶಕರಿಂದ ವ್ಯಕ್ತವಾಗುತ್ತಿದೆಯಂತೆ. ಹಾಗಾಗಿ ಮುಂಬರುವ ಕೆಲವು ಸಿನಿಮಾಗಳಿಗೆ ಶ್ರೀಲೀಲಾ ಅವರೇ ನಾಯಕಿಯಾಗಬೇಕು ಎಂದು ಅವರ ಕಾಲ್​ಶೀಟ್​ ಪಡೆಯಲು ಅನೇಕ ನಿರ್ಮಾಪಕರು ಪ್ರಯತ್ನಿಸುತ್ತಿದ್ದಾರೆ ಎಂಬ ಗುಸುಗುಸು ಕೇಳಿಬಂದಿದೆ. ಆದರೆ ಈ ಬಗ್ಗೆ ಸದ್ಯಕ್ಕೆ ಯಾವುದೇ ಅಧಿಕೃತ ಘೋಷಣೆ ಆಗಿಲ್ಲ. ಒಂದು ವೇಳೆ ಶ್ರೀಲೀಲಾ ಮಿಂಚಲು ಆರಂಭಿಸಿದರೆ ರಶ್ಮಿಕಾ ಮಂದಣ್ಣ, ಪೂಜಾ ಹೆಗ್ಡೆ, ಕೃತಿ ಶೆಟ್ಟಿಗೆ ಕೊಂಚ ಹಿನ್ನಡೆ ಆಗಬಹುದು ಎಂಬ ಮಾತನ್ನೂ ತೆಗೆದುಹಾಕುವಂತಿಲ್ಲ.

ಈಗಾಗಲೇ ‘ಪೆಳ್ಳಿ ಸಂದಡಿ’ ಸಿನಿಮಾದ ‘ಪ್ರೇಮಂಟೆ ಏಂಟಿ..’ ಹಾಡಿನ ಮೂಲಕ ಪಡ್ಡೆ ಹುಡುಗರ ಹೃದಯಕ್ಕೆ ಶ್ರೀಲೀಲಾ ಕಿಚ್ಚು ಹಚ್ಚಿದ್ದಾರೆ. ‘ಬುಜ್ಜುಲು ಬುಜ್ಜುಲು..’ ಗೀತೆಯಲ್ಲಿ ಅವರು ಗ್ಲಾಮರಸ್​ ಆಗಿ ಕಾಣಿಸಿಕೊಂಡಿದ್ದಾರೆ. ಮೊದಲ ಸಿನಿಮಾ ರಿಲೀಸ್​ಗೂ ಮುನ್ನವೇ ಇಷ್ಟೆಲ್ಲ ಸದ್ದು ಮಾಡುತ್ತಿರುವ ಅವರಿಗೆ ಟಾಲಿವುಡ್​ನಲ್ಲಿ ಒಳ್ಳೆಯ ಭವಿಷ್ಯ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಇದನ್ನೂ ಓದಿ:

ಜಿಮ್​ನಲ್ಲಿ ಒಟ್ಟಾಗಿ ವರ್ಕೌಟ್​ ಮಾಡಿದ ರಶ್ಮಿಕಾ ಮಂದಣ್ಣ-ವಿಜಯ್​ ದೇವರಕೊಂಡ; ಫೋಟೋ ವೈರಲ್

ಮಾಡೋಕೆ ಏನೂ ಕೆಲಸ ಇಲ್ಲದಿದ್ದರೆ ರಶ್ಮಿಕಾ ಮಂದಣ್ಣ ಏನು ಮಾಡ್ತಾರೆ? ಫೋಟೋ ಸಹಿತ ಸಿಕ್ತು ಉತ್ತರ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ