​ಯಶ್​ ಎಂಟ್ರಿಗೆ ಜಾಗ ಬಿಟ್ಟುಕೊಟ್ಟ ಪ್ರಭಾಸ್​; ‘ಕೆಜಿಎಫ್​ 2’ ಚಿತ್ರಕ್ಕಾಗಿ ‘ಸಲಾರ್​’ ರಿಲೀಸ್​ ದಿನಾಂಕ ಬದಲು?

‘ಸಲಾರ್’​ ಚಿತ್ರಕ್ಕಾಗಿ ನಿಗದಿ ಆಗಿದ್ದ ದಿನಾಂಕದಲ್ಲೇ ‘ಕೆಜಿಎಫ್​ 2’ ಸಿನಿಮಾವನ್ನು ರಿಲೀಸ್​ ಮಾಡಲು ನಿರ್ಧರಿಸಿದ್ದು ಯಾಕೆ ಎಂಬ ಪ್ರಶ್ನೆ ಸಿನಿಪ್ರಿಯರಿಗೆ ಕಾಡುತ್ತಿದೆ. ಈ ಬಗ್ಗೆ ಪ್ರಶಾಂತ್​ ನೀಲ್​ ಅಥವಾ ವಿಜಯ್​ ಕಿರಗಂದೂರು ಅವರೇ ಉತ್ತರ ನೀಡಬೇಕಿದೆ.

​ಯಶ್​ ಎಂಟ್ರಿಗೆ ಜಾಗ ಬಿಟ್ಟುಕೊಟ್ಟ ಪ್ರಭಾಸ್​; ‘ಕೆಜಿಎಫ್​ 2’ ಚಿತ್ರಕ್ಕಾಗಿ ‘ಸಲಾರ್​’ ರಿಲೀಸ್​ ದಿನಾಂಕ ಬದಲು?
ಪ್ರಭಾಸ್​, ಯಶ್

ಇಡೀ ಭಾರತೀಯ ಚಿತ್ರರಂಗವೇ ‘ಕೆಜಿಎಫ್​ ಚಾಪ್ಟರ್​ 2’ (KGF 2) ಮತ್ತು ‘ಸಲಾರ್​’ (Salaar) ಸಿನಿಮಾ ಬಿಡುಗಡೆಗಾಗಿ ಕಾಯುತ್ತಿದೆ. ಈ ಎರಡೂ ಸಿನಿಮಾಗಳಿಗೆ ನಿರ್ದೇಶನ ಮಾಡುತ್ತಿರುವುದು ಪ್ರಶಾಂತ್​ ನೀಲ್​ ಹಾಗೂ ನಿರ್ಮಾಣ ಮಾಡುತ್ತಿರುವುದು ಹೊಂಬಾಳೆ ಫಿಲ್ಸ್ಮ್​ (Hombale Films) ಸಂಸ್ಥೆಯ ವಿಜಯ್​ ಕಿರಗಂದೂರು. ಈ ಚಿತ್ರಗಳ ರಿಲೀಸ್​ ದಿನಾಂಕದ ಬಗ್ಗೆ ಈಗ ತಾಜಾ ಮಾಹಿತಿ ಹೊರಬಿದ್ದಿದೆ. 2022ರ ಏಪ್ರಿಲ್​ 14ರಂದು ‘ಕೆಜಿಎಫ್​ 2’ ಬಿಡುಗಡೆ ಆಗಲಿದೆ ಎಂಬುದನ್ನು ಚಿತ್ರತಂಡ ಖಚಿತಪಡಿಸಿದೆ. ಆದರೆ ಇದು ಪ್ರಭಾಸ್​ (Prabhas) ಅಭಿಮಾನಿಗಳಿಗೆ ಬೇಸರ ಉಂಟು ಮಾಡಿದೆ. ಈ ಬಗ್ಗೆ ಸಿನಿಪ್ರಿಯರ ವಲಯದಲ್ಲಿ ಭಾರಿ ಚರ್ಚೆ ಆಗುತ್ತಿದೆ.

ಬಿಗ್​ ಬಜೆಟ್​ನಲ್ಲಿ ನಿರ್ಮಾಣ ಆಗುತ್ತಿರುವ ‘ಸಲಾರ್​’ ಮೇಲೆ ಪ್ರಭಾಸ್​ ಅಭಿಮಾನಿಗಳು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. 2022ರ ಏಪ್ರಿಲ್​ 14ರಂದು ಈ ಸಿನಿಮಾ ಬಿಡುಗಡೆ ಮಾಡಲಾಗುವುದು ಎಂದು ಈ ಮೊದಲು ಅಧಿಕೃತವಾಗಿ ಘೋಷಿಸಲಾಗಿತ್ತು. ಆದರೆ ಅದೇ ದಿನಾಂಕದಲ್ಲೇ ‘ಕೆಜಿಎಫ್​: ಚಾಪ್ಟರ್​ 2’ ಚಿತ್ರ ತೆರೆಕಾಣಲಿದೆ ಎಂದು ನಿರ್ಮಾಪಕರು ಮಾಹಿತಿ ಬಹಿರಂಗ ಮಾಡಿದ್ದಾರೆ. ಹಾಗಾಗಿ ‘ಸಲಾರ್​’ ರಿಲೀಸ್​ ಡೇಟ್​ ಬದಲಾಗುವುದು ಅನಿವಾರ್ಯ ಆಗಿದೆ.

ಹಾಗಾದರೆ ‘ಸಲಾರ್​’ ಯಾವಾಗ ರಿಲೀಸ್​ ಆಗಲಿದೆ? ಈ ಪ್ರಶ್ನೆಗೆ ಉತ್ತರ ಹುಡುಕುವುದು ಅಷ್ಟು ಸುಲಭವಲ್ಲ. ಕೊವಿಡ್​ ಕಾರಣದಿಂದ ಹಲವು ಸ್ಟಾರ್​ ಸಿನಿಮಾಗಳು ಬಿಡುಗಡೆ ದಿನಾಂಕವನ್ನು ಮುಂದೂಡಿಕೊಂಡಿದ್ದವು. ಈಗ ಎರಡನೇ ಅಲೆ ಕಡಿಮೆ ಆಗುತ್ತಿರುವ ಹಿನ್ನೆಲೆಯಲ್ಲಿ ಒಂದೊಂದೇ ಸಿನಿಮಾಗಳು ತಮ್ಮ ಹೊಸ ರಿಲೀಸ್​ ದಿನಾಂಕ​ವನ್ನು ಲಾಕ್​ ಮಾಡಿಕೊಳ್ಳುತ್ತಿವೆ. ಅವುಗಳ ಮಧ್ಯೆ ಒಂದು ಸೂಕ್ತ ದಿನಾಂಕಕ್ಕಾಗಿ ‘ಸಲಾರ್​’ ತಂಡ ಹುಡುಕಾಟ ನಡೆಸಬೇಕಿದೆ.

ಡಿಸೆಂಬರ್​ನಲ್ಲಿ ಅಲ್ಲು ಅರ್ಜುನ್​ ನಟನೆಯ ‘ಪುಷ್ಪ’, ಆಮೀರ್​ ಖಾನ್​ ನಟನೆಯ ‘ಲಾಲ್​ ಸಿಂಗ್​ ಚಡ್ಡಾ’ ಮುಂತಾದ ಬಿಗ್​ ಸಿನಿಮಾಗಳು ರಿಲೀಸ್​ ಆಗುತ್ತಿವೆ. 2022ರ ಜನವರಿ 14ರಂದು ಪ್ರಭಾಸ್​ ನಟನೆಯ ‘ರಾಧೆ ಶ್ಯಾಮ್​’ ಬಿಡುಗಡೆ ಆಗಲಿದೆ. ಇದಾದಮೇಲೆ 2022ರ ಏಪ್ರಿಲ್​ನಲ್ಲಿ ‘ಕೆಜಿಎಫ್​ 2’ ಧೂಳೆಬ್ಬಿಸಲಿದೆ. ಅಂದರೆ, ಈ ಎಲ್ಲ ಪ್ರಮುಖ ಸಿನಿಮಾಗಳು ಬಿಡುಗಡೆ ಆಗುವವರೆಗೂ ‘ಸಲಾರ್​’ ತಂಡ ಕಾಯಬೇಕಾಗಿರುವುದು ಅನಿವಾರ್ಯ ಆಗಿದೆ. ಇದು ಸಹಜವಾಗಿಯೇ ಪ್ರಭಾಸ್​ ಅಭಿಮಾನಿಗಳಿಗೆ ಬೇಸರ ತರಿಸಿದೆ.

ಈ ವಿಚಾರದ ಬಗ್ಗೆ ಪ್ರಭಾಸ್​, ಯಶ್​, ಪ್ರಶಾಂತ್​ ನೀಲ್ ಮತ್ತು ವಿಜಯ್​ ಕಿರಗಂದೂರು ಸದ್ಯಕ್ಕೆ ಏನನ್ನೂ ಮಾತನಾಡಿಲ್ಲ. ‘ಸಲಾರ್’​ ಚಿತ್ರಕ್ಕಾಗಿ ನಿಗದಿ ಆಗಿದ್ದ ದಿನಾಂಕದಲ್ಲೇ ‘ಕೆಜಿಎಫ್​ 2’ ಸಿನಿಮಾವನ್ನು ರಿಲೀಸ್​ ಮಾಡಲು ನಿರ್ಧರಿಸಿದ್ದು ಯಾಕೆ ಎಂದು ಅವರೇ ಉತ್ತರ ನೀಡಬೇಕಿದೆ. ಅವರಿಂದ ಬರುವ ಪ್ರತಿಕ್ರಿಯೆಗಾಗಿ ಸಿನಿಪ್ರಿಯರು ಕಾಯುತ್ತಿದ್ದಾರೆ.

ಇದನ್ನೂ ಓದಿ:

ಪ್ರಶಾಂತ್​ ನೀಲ್​ ಕಣ್ಣು ತಪ್ಪಿಸಿ ಪ್ರಭಾಸ್​ ವಿಡಿಯೋ ಲೀಕ್​? ಸಲಾರ್​ ಸೆಟ್​​ನಲ್ಲಿ ಕಿತಾಪತಿ

KGF 2 Release Date: 2022 ಏಪ್ರಿಲ್​ 14ಕ್ಕೆ ‘ಕೆಜಿಎಫ್: ಚಾಪ್ಟರ್​ 2’ ರಿಲೀಸ್​; ಬ್ರೇಕಿಂಗ್​ ನ್ಯೂಸ್​ ನೀಡಿದ ಯಶ್​-ಪ್ರಶಾಂತ್​ ನೀಲ್​​

Read Full Article

Click on your DTH Provider to Add TV9 Kannada