AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕೆಜಿಎಫ್’ ಚಿತ್ರವನ್ನೇ​ ಮೀರಿಸಲಿದೆ ಪ್ರಭಾಸ್​ ‘ಸಲಾರ್’​? ಟಾಲಿವುಡ್​ ಅಂಗಳದಿಂದ ಬಿಗ್​ ಅಪ್​ಡೇಟ್​

ಪ್ರಶಾಂತ್​ ನೀಲ್​ ನಿರ್ದೇಶನದ ‘ಉಗ್ರಂ’ ಸಿನಿಮಾ ಸಣ್ಣ ಬಜೆಟ್​ನಲ್ಲಿ ಸಿದ್ಧಗೊಂಡ ಚಿತ್ರ. ‘ಕೆಜಿಎಫ್’​ ಬಜೆಟ್​ ಸಾಕಷ್ಟು ಹೆಚ್ಚಿತ್ತು. ‘ಕೆಜಿಎಫ್​ 2’ ನಿರ್ಮಾಣದ ಮೊತ್ತ ‘ಕೆಜಿಎಫ್’​ ಅನ್ನೂ ಮೀರಿಸಿದೆ.

‘ಕೆಜಿಎಫ್’ ಚಿತ್ರವನ್ನೇ​ ಮೀರಿಸಲಿದೆ ಪ್ರಭಾಸ್​ ‘ಸಲಾರ್’​? ಟಾಲಿವುಡ್​ ಅಂಗಳದಿಂದ ಬಿಗ್​ ಅಪ್​ಡೇಟ್​
ಯಶ್​-ಪ್ರಶಾಂತ್​ ನೀಲ್
TV9 Web
| Edited By: |

Updated on: Aug 20, 2021 | 7:35 AM

Share

‘ಕೆಜಿಎಫ್’ ಸಿನಿಮಾ ದೊಡ್ಡ ಬಜೆಟ್​ನಲ್ಲಿ ಸಿದ್ಧಗೊಂಡ ಚಿತ್ರ. ‘ಕೆಜಿಎಫ್​ 2’ ಅದಕ್ಕೂ ಹೆಚ್ಚಿನ ಬಜೆಟ್​ನಲ್ಲಿ ಸಿದ್ಧಗೊಳ್ಳುತ್ತಿದೆ. ‘ಕೆಜಿಎಫ್’​ ಸಿನಿಮಾದಲ್ಲಿ ಗ್ರಾಫಿಕ್ಸ್​ ಹಾಗೂ ಮೇಕಿಂಗ್​ಗೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು. ಇನ್ನು, ಭಾವನಾತ್ಮಕ ವಿಚಾರವನ್ನೂ ಒಂದು ಟ್ರ್ಯಾಕ್​ನಲ್ಲಿ ತೆಗೆದುಕೊಂಡು ಹೋಗಲಾಗಿತ್ತು. ಆದರೆ, ಈಗ ಪ್ರಶಾಂತ್​ ನೀಲ್​ ನಿರ್ದೇಶನದ ‘ಸಲಾರ್​’ ಸಿನಿಮಾ  ಈ ಎಲ್ಲಾ ವಿಚಾರಗಳಲ್ಲಿ ‘ಕೆಜಿಎಫ್’​ ಸಿನಿಮಾವನ್ನೂ ಮೀರಿಸಲಿದೆ ಎನ್ನುವ ಮಾತು ಕೇಳಿ ಬಂದಿದೆ. 

ಪ್ರಶಾಂತ್​ ನೀಲ್​ ನಿರ್ದೇಶನದ ‘ಉಗ್ರಂ’ ಸಿನಿಮಾ ಸಣ್ಣ ಬಜೆಟ್​ನಲ್ಲಿ ಸಿದ್ಧಗೊಂಡ ಚಿತ್ರ. ‘ಕೆಜಿಎಫ್’​ ಬಜೆಟ್​ ಸಾಕಷ್ಟು ಹೆಚ್ಚಿತ್ತು. ‘ಕೆಜಿಎಫ್​ 2’ ನಿರ್ಮಾಣದ ಮೊತ್ತ ‘ಕೆಜಿಎಫ್’​ ಅನ್ನೂ ಮೀರಿಸಿದೆ. ಈಗ ‘ಸಲಾರ್’​ ಸಿನಿಮಾ ಬಜೆಟ್​ ಪ್ರಶಾಂತ್​ ನೀಲ್​ ಅವರ ಈ ಮೊದಲ ಸಿನಿಮಾವನ್ನೂ ಮೀರಿಸಲಿದೆ  ಎಂಬುದು ಸ್ಪಷ್ಟವಾಗಿದೆ. ಅಷ್ಟೇ ಅಲ್ಲ, ಮೇಕಿಂಗ್ ಹಾಗೂ ಗ್ರಾಫಿಕ್ಸ್​ನಲ್ಲೂ ಅದ್ದೂರಿತನ ಇರಲಿದೆ.

ಮೂಲಗಳ ಪ್ರಕಾರ ಕೆಜಿಎಫ್​ಗಿಂತ ಎರಡು ಪಟ್ಟು ದೊಡ್ಡದಾಗಿ ‘ಸಲಾರ್’​ ಮೂಡಿಬರಲಿದೆ ಎನ್ನಲಾಗಿದೆ. ಸಲಾರ್​ನಲ್ಲಿ ಆ್ಯಕ್ಷನ್​ಗೆ ಪ್ರಶಾಂತ್​ ನೀಲ್​ ಹೆಚ್ಚು ಪ್ರಾಮುಖ್ಯತೆ ನೀಡಿದ್ದಾರೆ. ಈ ಕಾರಣಕ್ಕೆ ಹೆಚ್ಚು ಅಚ್ಚುಕಟ್ಟಾಗಿ ಸಿನಿಮಾ ತೆರೆಗೆ ತರಲು ಪ್ರಯತ್ನಿಸುತ್ತಿದ್ದಾರೆ. ಇನ್ನು, ಸಿನಿಮಾದಲ್ಲಿ ಎಮೋಷನಲ್​​ ದೃಶ್ಯಗಳಿಗೂ ಹೆಚ್ಚಿನ ಆದ್ಯತೆ ನೀಡಲಾಗಿದೆ. ಹೀಗಾಗಿ, ಆ್ಯಕ್ಷನ್​ ಮತ್ತು ಭಾವನಾತ್ಮಕ ವಿಚಾರವನ್ನು ಸರಿದೂಗಿಸಿಕೊಂಡು ಹೋಗುವ ಲೆಕ್ಕಾಚಾರ ನಿರ್ದೇಶಕರದ್ದು.

​‘ಬಾಹುಬಲಿ’ಯಂಥ ಹಿಟ್​ ಚಿತ್ರಗಳಲ್ಲಿ ನಟಿಸಿದ ಅನುಭವ ಪ್ರಭಾಸ್​ಗೆ ಇದೆ. ಇನ್ನು, ‘ಕೆಜಿಎಫ್’​ ನಿರ್ದೇಶನ ಮಾಡಿ ಪ್ರಶಾಂತ್ ಭೇಷ್​ ಎನಿಸಿಕೊಂಡಿದ್ದಾರೆ. ಈ ಎಲ್ಲಾ ಕಾರಣಕ್ಕೆ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿದೆ. ‘ಸಲಾರ್’​ ಸಿನಿಮಾ ಮುಂದಿನ ಏಪ್ರಿಲ್​ 14ರಂದು ತೆರೆಗೆ ಬರುತ್ತಿದೆ ಎಂದು ಚಿತ್ರತಂಡ ಘೋಷಣೆ ಮಾಡಿದೆ. ಕೊವಿಡ್​ ಮೂರನೇ ಅಲೆ ಕಾಣಿಸಿಕೊಂಡರೆ ಮತ್ತೆ ಸಿನಿಮಾ ಕೆಲಸಗಳು ವಿಳಂಬವಾಗಲಿದೆ.

ಇನ್ನು ‘ಕೆಜಿಎಫ್​ 2’ ಸಿನಿಮಾ ರಿಲೀಸ್​ ದಿನಾಂಕ ಘೋಷಣೆಗೆ ಅಭಿಮಾನಿಗಳು ಕಾದು ಕೂತಿದ್ದಾರೆ. ಕೊವಿಡ್​ ಎರಡನೇ ಅಲೆ ಕಾರಣದಿಂದ ಸಿನಿಮಾ ರಿಲೀಸ್​ ದಿನಾಂಕ ಮುಂದೂಡಲ್ಪಟ್ಟಿದೆ.

ಇದನ್ನೂ ಓದಿ:

 KGF Chapter 2: ಯಶ್​ ನಟನೆಯ ‘ಕೆಜಿಎಫ್ 2’ ರಿಲೀಸ್​ ಡೇಟ್​ ಘೋಷಣೆ​ಗೂ ಮುನ್ನವೇ ಆರ್​ಆರ್​ಆರ್​ ತಂಡದಿಂದ ಬಿಗ್​ ನ್ಯೂಸ್​?

ಸಲಾರ್​ ಚಿತ್ರದ ಎರಡನೇ ಶೆಡ್ಯೂಲ್ ಮುಗಿಸಿ ಬರೋಬ್ಬರಿ 400 ಕೋಟಿ ಬಜೆಟ್​ನ ಆದಿಪುರುಷ್ ಚಿತ್ರದಲ್ಲಿ ತೊಡಗಿಸಿಕೊಂಡ ಪ್ರಭಾಸ್

Follow Us
ಬಿರುಗಾಳಿ ಮಳೆಗೆ ಧರೆಗುರುಳಿದ ಬೃಹತ್​​ ಮರ: 15ಕ್ಕೂ ಹೆಚ್ಚು ಬೈಕ್​ಗಳು ಜಖಂ
ಬಿರುಗಾಳಿ ಮಳೆಗೆ ಧರೆಗುರುಳಿದ ಬೃಹತ್​​ ಮರ: 15ಕ್ಕೂ ಹೆಚ್ಚು ಬೈಕ್​ಗಳು ಜಖಂ
ಗೂಳಿ ಮತ್ತು ನಾಯಿ ನಡುವೆ ಕಾದಾಟ, ಇಬ್ಬರು ಮಹಿಳೆಯರಿಗೆ ಗಾಯ
ಗೂಳಿ ಮತ್ತು ನಾಯಿ ನಡುವೆ ಕಾದಾಟ, ಇಬ್ಬರು ಮಹಿಳೆಯರಿಗೆ ಗಾಯ
ಹುಬ್ಬಳ್ಳಿಯಲ್ಲಿ ಮತ್ತೊಮ್ಮೆ ಪ್ರಯಾಣಿಕರ ಎದೆ ನಡುಗಿಸಿದ 'ಫ್ಲೈ 91' ವಿಮಾನ
ಹುಬ್ಬಳ್ಳಿಯಲ್ಲಿ ಮತ್ತೊಮ್ಮೆ ಪ್ರಯಾಣಿಕರ ಎದೆ ನಡುಗಿಸಿದ 'ಫ್ಲೈ 91' ವಿಮಾನ
ಬೆಳಗಾವಿ, ಬೀದರ್​​ನಲ್ಲಿ ಬಿಸಿಲಿಗೆ ಸಾವಾಗಿಲ್ಲ: ಅಸಲಿ ಸತ್ಯ ರಿವೀಲ್​
ಬೆಳಗಾವಿ, ಬೀದರ್​​ನಲ್ಲಿ ಬಿಸಿಲಿಗೆ ಸಾವಾಗಿಲ್ಲ: ಅಸಲಿ ಸತ್ಯ ರಿವೀಲ್​
ಅತ್ತಿಕೋಣೆಯಲ್ಲಿಕುಡಿಯುವ ನೀರಿಗಾಗಿ ಅಪಾಯಕಾರಿ ದೋಣಿ ಯಾನದ ಸಾಹಸ!
ಅತ್ತಿಕೋಣೆಯಲ್ಲಿಕುಡಿಯುವ ನೀರಿಗಾಗಿ ಅಪಾಯಕಾರಿ ದೋಣಿ ಯಾನದ ಸಾಹಸ!
ಸ್ನೇಹಿತನ ಹೊಸ ಕಾರು ಓಡಿಸಿದ ಸಚಿವ ಪರಮೇಶ್ವರ್!
ಸ್ನೇಹಿತನ ಹೊಸ ಕಾರು ಓಡಿಸಿದ ಸಚಿವ ಪರಮೇಶ್ವರ್!
ಪತಿಗೆ ನಿದ್ದೆ ಮಾತ್ರೆ ನೀಡಿ ಪ್ರಿಯಕರನೊಂದಿಗೆ ವಿವಾಹಿತೆ ಎಸ್ಕೇಪ್​?
ಪತಿಗೆ ನಿದ್ದೆ ಮಾತ್ರೆ ನೀಡಿ ಪ್ರಿಯಕರನೊಂದಿಗೆ ವಿವಾಹಿತೆ ಎಸ್ಕೇಪ್​?
ಮಂಗಳೂರು: ಕಾಂಪೌಂಡ್ ಗೋಡೆ ಕುಸಿದು ಕಾರುಗಳು ನಜ್ಜುಗುಜ್ಜು!
ಮಂಗಳೂರು: ಕಾಂಪೌಂಡ್ ಗೋಡೆ ಕುಸಿದು ಕಾರುಗಳು ನಜ್ಜುಗುಜ್ಜು!
'ನನ್ನ ಹೆಂಡತಿ 1 ಲಕ್ಷ ರೂ., ಚಿನ್ನ ವಾಪಸ್ ಕೊಡಲಿ!' ಪತಿ ಆಕ್ರೋಶ
'ನನ್ನ ಹೆಂಡತಿ 1 ಲಕ್ಷ ರೂ., ಚಿನ್ನ ವಾಪಸ್ ಕೊಡಲಿ!' ಪತಿ ಆಕ್ರೋಶ
ಬುರ್ಖಾ ಹಾಕಿದ್ದ ಮಹಿಳೆಯನ್ನು ಎಳೆದೊಯ್ದು ಕೈ ಟ್ವಿಸ್ಟ್ ಮಾಡಿದ ವ್ಯಕ್ತಿ
ಬುರ್ಖಾ ಹಾಕಿದ್ದ ಮಹಿಳೆಯನ್ನು ಎಳೆದೊಯ್ದು ಕೈ ಟ್ವಿಸ್ಟ್ ಮಾಡಿದ ವ್ಯಕ್ತಿ