KGF Chapter 2: ಯಶ್​ ನಟನೆಯ ‘ಕೆಜಿಎಫ್ 2’ ರಿಲೀಸ್​ ಡೇಟ್​ ಘೋಷಣೆ​ಗೂ ಮುನ್ನವೇ ಆರ್​ಆರ್​ಆರ್​ ತಂಡದಿಂದ ಬಿಗ್​ ನ್ಯೂಸ್​?

KGF Chapter 2 Release Date: ‘ಕೆಜಿಎಫ್​ 2’ ಪ್ಯಾನ್​ ಇಂಡಿಯಾ ಸಿನಿಮಾ. ಕೆಜಿಎಫ್​ ಸಿನಿಮಾ ಬಾಲಿವುಡ್​ ಹಾಗೂ ಟಾಲಿವುಡ್​ನಲ್ಲೂ ದೊಡ್ಡ ಮಟ್ಟದ ಹವಾ ಮಾಡಿತ್ತು. ಈ ಕಾರಣಕ್ಕೆ ‘ಕೆಜಿಎಫ್​ 2’ ಸಿನಿಮಾ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಇದೆ.

KGF Chapter 2: ಯಶ್​ ನಟನೆಯ ‘ಕೆಜಿಎಫ್ 2’ ರಿಲೀಸ್​ ಡೇಟ್​ ಘೋಷಣೆ​ಗೂ ಮುನ್ನವೇ ಆರ್​ಆರ್​ಆರ್​ ತಂಡದಿಂದ ಬಿಗ್​ ನ್ಯೂಸ್​?
ಯಶ್​ ನಟನೆಯ ‘ಕೆಜಿಎಫ್ 2’ ರಿಲೀಸ್​ ಡೇಟ್​ ಘೋಷಣೆ​ಗೂ ಮುನ್ನವೇ ಆರ್​ಆರ್​ಆರ್​ ತಂಡದಿಂದ ಬಿಗ್​ ನ್ಯೂಸ್​?
Follow us
TV9 Web
| Updated By: Digi Tech Desk

Updated on:Aug 19, 2021 | 2:35 PM

ನಟ ಯಶ್ (Yash)​ ಹಾಗೂ ನಿರ್ದೇಶಕ ಪ್ರಶಾಂತ್​ ನೀಲ್ (Prashanth Neel)​ ಅವರ ಕಾಂಬಿನೇಷನ್​ನಲ್ಲಿ ಮೂಡಿಬರುತ್ತಿರುವ ‘ಕೆಜಿಎಫ್​ 2’ (KGF Chapter 2) ಸಿನಿಮಾಗಾಗಿ ದೊಡ್ಡ ಪ್ರೇಕ್ಷಕ ವರ್ಗ ಕಾದು ಕೂತಿದೆ.  ಸಿನಿಮಾ ರಿಲೀಸ್​ ವಿಚಾರದಲ್ಲಿ ಅಭಿಮಾನಿಗಳಿಗೆ ಪದೇಪದೇ ನಿರಾಸೆ ಆಗುತ್ತಲೇ ಇದೆ. ಇದಕ್ಕೆ ನೇರ ಕಾರಣ ಕೊರೊನಾ ವೈರಸ್​. ಈಗ ಕೊವಿಡ್ ಎರಡನೇ ಅಲೆ ನಿಧಾನವಾಗಿ ಕಡಿಮೆ ಆಗುತ್ತಿದೆ. ಹೀಗಾಗಿ ಶೀಘ್ರವೇ ಸಿನಿಮಾ ರಿಲೀಸ್​ ಡೇಟ್​ ಅನೌನ್ಸ್​ ಆಗಬಹುದು ಎನ್ನುವ ಆಲೋಚನೆಯಲ್ಲಿ ಅಭಿಮಾನಿಗಳಿದ್ದಾರೆ. ಇದಕ್ಕೂ ಮೊದಲೇ ಆರ್​ಆರ್​ಆರ್​​ ತಂಡದಿಂದ ದೊಡ್ಡ ನ್ಯೂಸ್​ ಸಿಗೋ ಸಾಧ್ಯತೆ ಗೋಚರವಾಗಿದೆ.

‘ಕೆಜಿಎಫ್​ 2’ ಪ್ಯಾನ್​ ಇಂಡಿಯಾ ಸಿನಿಮಾ. ಕೆಜಿಎಫ್​ ಸಿನಿಮಾ ಬಾಲಿವುಡ್​ ಹಾಗೂ ಟಾಲಿವುಡ್​ನಲ್ಲೂ ದೊಡ್ಡ ಮಟ್ಟದ ಹವಾ ಮಾಡಿತ್ತು. ಈ ಕಾರಣಕ್ಕೆ ‘ಕೆಜಿಎಫ್​ 2’ ಸಿನಿಮಾ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಇನ್ನು, ಪಾತ್ರವರ್ಗದಲ್ಲಿ ಬಾಲಿವುಡ್​ನ ಖ್ಯಾತ ನಟರು ಕೂಡ ಇದ್ದಾರೆ. ಈ ಎಲ್ಲಾ ಕಾರಣಕ್ಕೆ ಸಿನಿಮಾ ತೂಕ ಹೆಚ್ಚಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಜುಲೈ ತಿಂಗಳಲ್ಲೇ ಸಿನಿಮಾ ತೆರೆಗೆ ಬಂದು ಧೂಳೆಬ್ಬಿಸಬೇಕಿತ್ತು. ಆದರೆ, ಕೊವಿಡ್​ ಎರಡನೇ ಅಲೆಯಿಂದ ಸಿನಿಮಾ ರಿಲೀಸ್​ ಆಗಿಲ್ಲ. ಸದ್ಯ, ಹೊಸ ರಿಲೀಸ್ ಡೇಟ್​ ಅನೌನ್ಸ್​ಮೆಂಟ್​ಗೆ ಅಭಿಮಾನಿಗಳು ಕಾದು ಕೂತಿದ್ದಾರೆ.

ಈ ಮಧ್ಯೆ ಆರ್​ಆರ್​ಆರ್​ ತಂಡದಿಂದ ಬಿಗ್​ ಅಪ್​​ಡೇಟ್​ ಕೇಳಿಬರಲಿದೆ ಎನ್ನುವ ಮಾತು ಜೋರಾಗಿದೆ. ರಾಜಮೌಳಿ ನಿರ್ದೇಶನ ಹಾಗೂ ರಾಮ್​ಚರಣ್​-ಜ್ಯೂ.ಎನ್​ಟಿಆರ್​ ಕಾಂಬಿನೇಷನ್​ ಇರುವ ಕಾರಣ ಸಿನಿಮಾ ಬಗ್ಗೆ ನಿರೀಕ್ಷೆ ಅಧಿಕವಾಗಿದೆ. ಸಾಂಗ್​ ಶೂಟಿಂಗ್​ಗಾಗಿ ಈ ಸಿನಿಮಾ  ತಂಡ ವಿದೇಶಕ್ಕೆ ತೆರಳಿತ್ತು. ಈಗ ಅಲ್ಲಿ ಶೂಟಿಂಗ್​ ಪೂರ್ಣಗೊಂಡಿದೆ. ಶೀಘ್ರವೇ ಭಾರತದಲ್ಲಿ ಚಿತ್ರತಂಡ ಪ್ರೆಸ್​ಮೀಟ್​ ನಡೆಸುವ ಸಾಧ್ಯತೆ ಇದೆ. ಈ ವೇಳೆ ರಿಲೀಸ್​ ದಿನಾಂಕ ಘೋಷಣೆ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

‘ಆರ್​ಆರ್​ಆರ್’​ ಹಾಗೂ ‘ಕೆಜಿಎಫ್​ 2’ ಎರಡೂ ದೊಡ್ಡ ಬಜೆಟ್​ ಚಿತ್ರಗಳೇ. ಈ ಕಾರಣಕ್ಕೆ ಒಟ್ಟಿಗೆ ಈ ಸಿನಿಮಾಗಳು ರಿಲೀಸ್​ ಆಗುವ ಸಾಧ್ಯತೆ ಕಡಿಮೆ. ಒಂದೊಮ್ಮೆ ಆರ್​ಆರ್​ಆರ್​ ಚಿತ್ರತಂಡ ಹತ್ತಿರದ ರಿಲೀಸ್​ ಡೇಟ್​ ಘೋಷಿಸಿದರೆ ‘ಕೆಜಿಎಫ್​ 2’ ತಂಡ ಸಿನಿಮಾ ರಿಲೀಸ್​ಗೆ ಮತ್ತೊಂದಷ್ಟು ದಿನ ಕಾಯಬೇಕಾಗುವುದು ಅನಿವಾರ್ಯ ಆಗಲಿದೆ.

ಇದನ್ನೂ ಓದಿ: ಮಹೇಶ್​ ಬಾಬು ಸಿನಿಮಾಗೆ ಕೆಜಿಎಫ್​ ವಿಲನ್​; ಟಾಲಿವುಡ್​ ಅಂಗಳದಿಂದ ಹೊಸ ಅಪ್​ಡೇಟ್​

ಕೆಜಿಎಫ್​ 2ಗೆ ಬಂತು 255 ಕೋಟಿ ಆಫರ್​?  ದಯವಿಟ್ಟು ಒಪ್ಪಬೇಡಿ ಎಂದ ಫ್ಯಾನ್ಸ್​

Published On - 2:18 pm, Thu, 19 August 21

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್