ಕೆಜಿಎಫ್​ 2ಗೆ ಬಂತು 255 ಕೋಟಿ ಆಫರ್​?  ದಯವಿಟ್ಟು ಒಪ್ಪಬೇಡಿ ಎಂದ ಫ್ಯಾನ್ಸ್​

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ‘ಕೆಜಿಎಫ್​ 2’ ರಿಲೀಸ್​ ಆಗಿ ವರ್ಷವೇ ಕಳೆದಿರುತ್ತಿತ್ತು. ಆದರೆ, ಕೊವಿಡ್ ಮೊದಲ ಅಲೆ ಕಾಣಿಸಿಕೊಂಡ ಕಾರಣ ಹಲವು ತಿಂಗಳ ಕಾಲ ಚಿತ್ರದ ಕೆಲಸಗಳು ನಿಂತವು.

ಕೆಜಿಎಫ್​ 2ಗೆ ಬಂತು 255 ಕೋಟಿ ಆಫರ್​?  ದಯವಿಟ್ಟು ಒಪ್ಪಬೇಡಿ ಎಂದ ಫ್ಯಾನ್ಸ್​
ನಟ ಯಶ್
Follow us
| Updated By: ರಾಜೇಶ್ ದುಗ್ಗುಮನೆ

Updated on: Aug 12, 2021 | 7:46 PM

ಕೊರೊನಾ ವೈರಸ್​ ಕಾಣಿಸಿಕೊಂಡ ನಂತರದಲ್ಲಿ ಒಟಿಟಿ ವ್ಯಾಪ್ತಿ ವಿಸ್ತರಣೆ ಆಗಿದೆ. ಅನೇಕ ಸಿನಿಮಾಗಳು ಒಟಿಟಿಯಲ್ಲಿ ರಿಲೀಸ್​ ಆಗುತ್ತಿವೆ. ಚಿತ್ರಮಂದಿರಗಳಿಗೆ ಅನಿಶ್ಚಿತತೆ ಕಾಡುತ್ತಿರುವುದರಿಂದ ಸ್ಟಾರ್​ ನಟರ ಚಿತ್ರಗಳೂ ಒಟಿಟಿಯತ್ತ ಮುಖ ಮಾಡುತ್ತಿವೆ. ಯಶ್​ ನಟನೆಯ ಕೆಜಿಎಫ್​ 2 ಚಿತ್ರಕ್ಕೂ ಕೊರೊನಾ ವೈರಸ್​ ಎರಡನೇ ಅಲೆಯ ಕಾಟ ತಟ್ಟಿದ್ದು, ಸಿನಿಮಾ ರಿಲೀಸ್​ ದಿನಾಂಕ ಮುಂದೂಡಲ್ಪಟ್ಟಿದೆ. ಇದರ ಲಾಭ ಪಡೆಯೋಕೆ ಒಟಿಟಿಯವರು ಪ್ರಯತ್ನಿಸಿದ್ದಾರೆ. ಅಲ್ಲದೆ, ಕೆಜಿಎಫ್​ ನಿರ್ಮಾಪಕರಿಗೆ ದೊಡ್ಡ ಮೊತ್ತದ ಆಫರ್​ ಕೂಡ ನೀಡಿದ್ದಾರೆ.

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ‘ಕೆಜಿಎಫ್​ 2’ ರಿಲೀಸ್​ ಆಗಿ ವರ್ಷವೇ ಕಳೆದಿರುತ್ತಿತ್ತು. ಆದರೆ, ಕೊವಿಡ್ ಮೊದಲ ಅಲೆ ಕಾಣಿಸಿಕೊಂಡ ಕಾರಣ ಹಲವು ತಿಂಗಳ ಕಾಲ ಚಿತ್ರದ ಕೆಲಸಗಳು ನಿಂತವು. ಎಲ್ಲವೂ ಸರಿ ಆಯಿತು ಎನ್ನುವಾಗಲೇ ಕೊವಿಡ್​ ಎರಡನೇ ಅಲೆ ಕಾಣಿಸಿಕೊಂಡಿತ್ತು. ಈ ಎಲ್ಲಾ ಕಾರಣದಿಂದ ‘ಕೆಜಿಎಫ್​ 2’ ಕೆಲಸಗಳು ನಿಧಾನವಾದವು. ಜುಲೈ ತಿಂಗಳಲ್ಲಿ ಸಿನಿಮಾ ರಿಲೀಸ್​ ಮಾಡಲು ಚಿತ್ರತಂಡ ನಿರ್ಧರಿಸಿತ್ತಾದರೂ ಅದು ಸಾಧ್ಯವಾಗಿಲ್ಲ. ಹೊಸ ರಿಲೀಸ್​ ದಿನಾಂಕ ಇನ್ನಷ್ಟೇ ಗೊತ್ತಾಗಬೇಕಿದೆ.

ಈಗ ‘ಕೆಜಿಎಫ್​ 2’ಗೆ ಒಟಿಟಿ ಅವರು ನೀಡಿದ ಆಫರ್​ ಬಗ್ಗೆ ಹೊಸ ವಿಚಾರವೊಂದು ಕೇಳಿ ಬಂದಿದೆ. ಚಿತ್ರಮಂದಿರಗಳಲ್ಲಿ ‘ಕೆಜಿಎಫ್​ 2’ ರಿಲೀಸ್​ ಮಾಡದೇ ನೇರವಾಗಿ ಒಟಿಟಿಯಲ್ಲಿ ರಿಲೀಸ್​ ಮಾಡಿದರೆ 255 ಕೋಟಿ ಕೊಡುವುದಾಗಿ ಒಟಿಟಿ ಪ್ಲಾಟ್​ಫಾರ್ಮ್​ ಒಂದು ಬೇಡಿಕೆ ಇಟ್ಟಿದೆ ಎನ್ನಲಾಗಿದೆ.

ಆದರೆ, ಇದನ್ನು ಚಿತ್ರತಂಡ ಒಪ್ಪಿಕೊಳ್ಳೋ ಸಾಧ್ಯತೆ ತುಂಬಾನೆ ಕಡಿಮೆ. ಇದಕ್ಕೆ ಹಲವು ಕಾರಣಗಳಿವೆ. ಕೆಜಿಎಫ್​ 2 ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಒಂದೊಮ್ಮೆ ಈ ಚಿತ್ರ ಚಿತ್ರಮಂದಿರಗಳಲ್ಲಿ ರಿಲೀಸ್​ ಆದರೆ ಐದು ಭಾಷೆಗಳಿಂದ ಆಗುವ ಗಳಿಕೆ 255 ಕೋಟಿ ರೂಪಾಯಿಯನ್ನು ಸುಲಭವಾಗಿ ದಾಟುತ್ತದೆ. ಇನ್ನು, ಥಿಯೇಟರ್​ನಲ್ಲಿ ಸಿನಿಮಾ ರಿಲೀಸ್​ ಆದರೆ, ಅಭಿಮಾನಿಗಳ ಪಾಲಿಗೆ ಅದು ಹಬ್ಬವೇ ಸರಿ. ಈ ಎಲ್ಲಾ ಕಾರಣಕ್ಕೆ ಸಿನಿಮಾ ತಂಡದವರು ಚಿತ್ರವನ್ನು ಒಟಿಟಿಯಲ್ಲಿ ರಿಲೀಸ್ ಮಾಡೋ ಸಾಧ್ಯತೆ ಕಡಿಮೆ ಎನ್ನಬಹುದು.  ಅಭಿಮಾನಿಗಳು ಕೂಡ ಈ ಆಫರ್​ ಒಪ್ಪಬೇಡಿ ಎಂದಿದ್ದಾರೆ.

ಇದನ್ನೂ ಓದಿ: ರಾಧಿಕಾ ಪಂಡಿತ್​-ಯಶ್​ ನಿಶ್ಚಿತಾರ್ಥಕ್ಕೆ ಐದು ವರ್ಷ; ವಿಶೇಷ ವಿಡಿಯೋ ಹಂಚಿಕೊಂಡ ನಟಿ