AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಶಾಂತ್​ ನೀಲ್​ ಕಣ್ಣು ತಪ್ಪಿಸಿ ಪ್ರಭಾಸ್​ ವಿಡಿಯೋ ಲೀಕ್​? ಸಲಾರ್​ ಸೆಟ್​​ನಲ್ಲಿ ಕಿತಾಪತಿ

Salaar: ಪ್ರಭಾಸ್​ ಅವರ ಒಂದು ವಿಡಿಯೋ ವೈರಲ್​ ಆಗುತ್ತಿದೆ. ಇದು ಸಲಾರ್​ ಸಿನಿಮಾ ಸೆಟ್​ನಲ್ಲಿಯೇ ರೆಕಾರ್ಡ್​ ಮಾಡಲಾಗಿರುವ ವಿಡಿಯೋ ಎಂದು ಹೇಳಲಾಗುತ್ತಿದೆ. ಆದರೆ, ಚಿತ್ರತಂಡದ ಯಾರೊಬ್ಬರೂ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ.

ಪ್ರಶಾಂತ್​ ನೀಲ್​ ಕಣ್ಣು ತಪ್ಪಿಸಿ ಪ್ರಭಾಸ್​ ವಿಡಿಯೋ ಲೀಕ್​? ಸಲಾರ್​ ಸೆಟ್​​ನಲ್ಲಿ ಕಿತಾಪತಿ
ಪ್ರಶಾಂತ್​ ನೀಲ್​ ಕಣ್ಣು ತಪ್ಪಿಸಿ ಪ್ರಭಾಸ್​ ವಿಡಿಯೋ ಲೀಕ್​? ಸಲಾರ್​ ಸೆಟ್​​ನಲ್ಲಿ ಕಿತಾಪತಿ
TV9 Web
| Updated By: ಮದನ್​ ಕುಮಾರ್​|

Updated on: Aug 11, 2021 | 4:14 PM

Share

ನಿರ್ದೇಶಕ ಪ್ರಶಾಂತ್​ ನೀಲ್ (Prashanth Neel)​ ಅವರ ಮೇಲೆ ಬೆಟ್ಟದಷ್ಟು ಒತ್ತಡ ಇದೆ. ‘ಕೆಜಿಎಫ್​: ಚಾಪ್ಟರ್​ 1’ ಸಿನಿಮಾ ಮೂಲಕ ಇಡೀ ಭಾರತೀಯ ಚಿತ್ರರಂಗವೇ ಸ್ಯಾಂಡಲ್​ವುಡ್​ ಕಡೆಗೆ ತಿರುಗಿ ನೋಡುವಂತೆ ಮಾಡಿದ್ದು ಅವರ ಹೆಚ್ಚುಗಾರಿಕೆ. ಈಗ ಅವರು ‘ಕೆಜಿಎಫ್​: ಚಾಪ್ಟರ್​ 2’ ಮತ್ತು ‘ಸಲಾರ್​’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ‘ಕೆಜಿಎಫ್ 2​’ ಚಿತ್ರಕ್ಕೆ ಕೊನೇ ಹಂತದ ಕೆಲಸಗಳು ನಡೆಯುತ್ತಿದ್ದರೆ, ‘ಸಲಾರ್​’ (Salaar) ಸಿನಿಮಾದ ಶೂಟಿಂಗ್​ ಮಾಡಲಾಗುತ್ತಿದೆ. ಈ ವೇಳೆ ಪ್ರಶಾಂತ್​ ನೀಲ್​ ಅವರ ಕಣ್ಣು ತಪ್ಪಿಸಿ ಒಂದು ವಿಡಿಯೋವನ್ನು ಲೀಕ್​ ಮಾಡಲಾಗಿದೆ. ಶೂಟಿಂಗ್​ ಸೆಟ್​ನಲ್ಲಿ ಪ್ರಭಾಸ್ (Prabhas)​ ನಡೆದುಬರುತ್ತಿರುವ ಈ ವಿಡಿಯೋವನ್ನು ಕದ್ದು ಮುಚ್ಚಿ ಶೂಟ್​ ಮಾಡಲಾಗಿದೆ.

ಅದ್ದೂರಿಯಾಗಿ ಸೆಟ್​ಗಳನ್ನು ನಿರ್ಮಿಸಿ, ಅದರಲ್ಲಿ ಸಲಾರ್​ ಸಿನಿಮಾದ ಶೂಟಿಂಗ್​ ಮಾಡಲಾಗುತ್ತಿದೆ. ಕಥೆ ಮತ್ತು ಪಾತ್ರದ ಬಗ್ಗೆ ಸುಳಿವು ಬಿಟ್ಟುಕೊಡಲು ಪ್ರಶಾಂತ್​ ನೀಲ್​ ಇಷ್ಟಪಡುವುದಿಲ್ಲ. ಹಾಗಾಗಿ ಚಿತ್ರೀಕರಣದ ಸೆಟ್​ನಿಂದ ಯಾವುದೇ ಫೋಟೋ ಅಥವಾ ವಿಡಿಯೋ ಲೀಕ್​ ಆಗದಂತೆ ಅವರು ಮುನ್ನೆಚ್ಚರಿಕೆ ವಹಿಸುತ್ತಾರೆ. ಆದರೂ ಅವರ ಕಣ್ಣು ತಪ್ಪಿಸಿ, ಚಿತ್ರೀಕರಿಸಿರುವ ಒಂದು ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದು ಸಹಜವಾಗಿಯೇ ಪ್ರಶಾಂತ್​ ನೀಲ್ ಕೋಪಕ್ಕೆ ಕಾರಣವಾದರೂ ಅಚ್ಚರಿ ಇಲ್ಲ.ಇದು ಸಲಾರ್​ ಸಿನಿಮಾ ಸೆಟ್​ನಲ್ಲಿಯೇ ರೆಕಾರ್ಡ್​ ಮಾಡಲಾಗಿರುವುದು ಎಂದು ಹೇಳಲಾಗುತ್ತಿದೆಯಾದರೂ ಅದಕ್ಕೆ ಯಾವುದೇ ಸಾಕ್ಷಿ ಇಲ್ಲ. ಅಲ್ಲದೆ, ಚಿತ್ರತಂಡದ ಯಾರೊಬ್ಬರೂ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ.

ಸಲಾರ್​ನಲ್ಲಿ ಪ್ರಭಾಸ್​ಗೆ ಜೋಡಿಯಾಗಿ ನಟಿ ಶ್ರುತಿ ಹಾಸನ್​ ಅಭಿನಯಿಸುತ್ತಿದ್ದಾರೆ. ಪ್ರಶಾಂತ್​ ನೀಲ್​ ಮತ್ತು ಪ್ರಭಾಸ್​ ಜೊತೆ ಕೆಲಸ ಮಾಡುತ್ತಿರುವುದು ಅವರಿಗೆ ಹೆಚ್ಚು ಖುಷಿಕೊಟ್ಟಿದೆ. ಇತ್ತೀಚೆಗೆ ಪ್ರಶಾಂತ್ ನೀಲ್​ ಜೊತೆ ಇರುವ ಒಂದು ಫೋಟೋವನ್ನು ಶೇರ್​ ಮಾಡಿದ್ದ ಅವರು, ‘ನಾನು ಲೆಜೆಂಡ್​ ಅನಿಸುತ್ತೆ. ಯಾಕೆಂದರೆ ನಾನು ಅವರನ್ನು ನಗಿಸಿದ್ದೇನೆ. ಸಲಾರ್​ ಸಿನಿಮಾದಲ್ಲಿ ಕೆಲಸ ಮಾಡುತ್ತಿರುವುದು ಖುಷಿ ಆಗುತ್ತಿದೆ’ ಎಂದು  ಬರೆದುಕೊಂಡಿದ್ದರು.

ಪ್ರಭಾಸ್​ ಅವರು ‘ಆದಿಪುರುಷ್​’ ಚಿತ್ರದ ಶೂಟಿಂಗ್​ನಲ್ಲಿಯೂ ತೊಡಗಿಕೊಂಡಿದ್ದಾರೆ. ಪೂಜಾ ಹೆಗ್ಡೆ ಜೊತೆ ಅವರು ನಟಿಸಿರುವ ‘ರಾಧೆ ಶ್ಯಾಮ್’​ ಚಿತ್ರ ಬಿಡುಗಡೆಗೆ ಸಜ್ಜಾಗಿದ್ದು, 2022ರ ಜ.14ರಂದು ವಿಶ್ವಾದ್ಯಂತ ರಿಲೀಸ್​ ಆಗಲಿದೆ.

ಇದನ್ನೂ ಓದಿ:

Prabhas: ಫೇಸ್​​ಬುಕ್​ನಲ್ಲಿ ಪ್ರಭಾಸ್​ಗೆ ಎಷ್ಟನೇ ಸ್ಥಾನ? ಬಾಲಿವುಡ್​ ಮಂದಿ ಜೊತೆ ಪೈಪೋಟಿಗೆ ಇಳಿದ ಸೌತ್​ ಸ್ಟಾರ್​

ಸಲಾರ್​ ಚಿತ್ರದಲ್ಲಿ 2 ಪ್ರಮುಖ ಬದಲಾವಣೆ; ಪ್ರಭಾಸ್​, ಪ್ರಶಾಂತ್​ ನೀಲ್​ ಬಳಗದಲ್ಲಿ ಏನು ನಡೀತಿದೆ?

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ