Prabhas: ಫೇಸ್ಬುಕ್ನಲ್ಲಿ ಪ್ರಭಾಸ್ಗೆ ಎಷ್ಟನೇ ಸ್ಥಾನ? ಬಾಲಿವುಡ್ ಮಂದಿ ಜೊತೆ ಪೈಪೋಟಿಗೆ ಇಳಿದ ಸೌತ್ ಸ್ಟಾರ್
Prabhas: ಫೇಸ್ಬುಕ್ನಲ್ಲಿ 50.7 ಮಿಲಿಯನ್ ಫಾಲೋವರ್ಸ್ ಹೊಂದಿರುವ ಸಲ್ಮಾನ್ ಖಾನ್ ಅವರು ನಂಬರ್ ಒನ್ ಸ್ಥಾನದಲ್ಲಿದ್ದಾರೆ. 2ನೇ ಸ್ಥಾನದಲ್ಲಿ ಅಕ್ಷಯ್ ಕುಮಾರ್ ಇದ್ದಾರೆ. ಹಾಗಾದರೆ ಪ್ರಭಾಸ್ಗೆ ಎಷ್ಟನೇ ಸ್ಥಾನವಿದೆ?

Prabhas: ಬಾಹುಬಲಿ ಸರಣಿ ಸಿನಿಮಾಗಳು ಬಿಡುಗಡೆಯಾಗಿ ಯಶಸ್ಸು ಕಂಡ ಬಳಿಕ ನಟ ಪ್ರಭಾಸ್ (Prabhas) ಅವರು ಕೇವಲ ದಕ್ಷಿಣ ಭಾರತಕ್ಕೆ ಸೀಮಿತವಾಗಿ ಉಳಿದಿಲ್ಲ. ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಅವರು ಮಿಂಚುತ್ತಿದ್ದಾರೆ. ದೇಶಾದ್ಯಂತ ಅವರಿಗೆ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಹಿಂದಿ ಭಾಷಿಕರು ಹೆಚ್ಚಿರುವ ಉತ್ತರ ಭಾರತದಲ್ಲೂ ಪ್ರಭಾಸ್ ಹವಾ ಹೆಚ್ಚಿದೆ. ಹಾಗಾಗಿ ಫೇಸ್ಬುಕ್ನಲ್ಲಿ (Facebook) ಅವರಿಗೆ ಫಾಲೋವರ್ಸ್ ಸಂಖ್ಯೆ ಏರಿಕೆ ಆಗುತ್ತಿದೆ. ಎಷ್ಟರಮಟ್ಟಿಗೆಂದರೆ, ಬಾಲಿವುಡ್ನ ಅನೇಕ ಸ್ಟಾರ್ ನಟರಿಗೆ ಪ್ರಭಾಸ್ ಪೈಪೋಟಿ ನೀಡುತ್ತಿದ್ದಾರೆ. ಫೇಸ್ಬುಕ್ನಲ್ಲಿ ಅತಿಹೆಚ್ಚು ಫಾಲೋವರ್ಸ್ ಹೊಂದಿರುವ ಟಾಪ್ 10 ನಟರಲ್ಲಿ ಪ್ರಭಾಸ್ ಕೂಡ ಸ್ಥಾನ ಪಡೆದುಕೊಂಡಿದ್ದಾರೆ.
ಫೇಸ್ಬುಕ್ನಲ್ಲಿ 50.7 ಮಿಲಿಯನ್ ಫಾಲೋವರ್ಸ್ ಹೊಂದಿರುವ ಸಲ್ಮಾನ್ ಖಾನ್ ಅವರು ನಂಬರ್ ಒನ್ ಸ್ಥಾನದಲ್ಲಿದ್ದಾರೆ. 2ನೇ ಸ್ಥಾನದಲ್ಲಿರುವ ಅಕ್ಷಯ್ ಕುಮಾರ್ ಅವರನ್ನು 48 ಮಿಲಿಯನ್ ಮಂದಿ ಫಾಲೋ ಮಾಡುತ್ತಿದ್ದಾರೆ. 42.6 ಮಿಲಿಯನ್ ಫಾಲೋವರ್ಸ್ ಸಂಪಾದಿಸಿಕೊಂಡಿರುವ ಶಾರುಖ್ ಖಾನ್ಗೆ ಮೂರನೇ ಸ್ಥಾನ. ನಾಲ್ಕರಿಂದ 8ನೇ ಸ್ಥಾನಗಳನ್ನು ಅನುಕ್ರಮವಾಗಿ ಅಮಿತಾಭ್ ಬಚ್ಚನ್, ಕಪಿಲ್ ಶರ್ಮಾ, ಹೃತಿಕ್ ರೋಷನ್ ಟೈಗರ್ ಶ್ರಾಫ್, ಅಜಯ್ ದೇವಗನ್ ಹೊಂದಿದ್ದಾರೆ.
ಟಾಪ್ 10ರ ಪಟ್ಟಿಯಲ್ಲಿ ಪ್ರಭಾಸ್ಗೆ 9ನೇ ಸ್ಥಾನ. ಫೇಸ್ಬುಕ್ನಲ್ಲಿ ಅವರನ್ನು 24 ಮಿಲಿಯನ್ ಜನರು ಫಾಲೋ ಮಾಡುತ್ತಿದ್ದಾರೆ. 10ನೇ ಸ್ಥಾನದಲ್ಲಿರುವ ನಟ ಶಾಹಿದ್ ಕಪೂರ್ಗೆ 23 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಆ ಮೂಲಕ ಟಾಪ್ 10ರಲ್ಲಿ ಸ್ಥಾನ ಪಡೆದ ದಕ್ಷಿಣ ಭಾರತದ ಏಕೈಕ ನಟ ಎಂಬ ಖ್ಯಾತಿಗೆ ಪ್ರಭಾಸ್ ಪಾತ್ರರಾಗಿದ್ದಾರೆ.
ಸದ್ಯ ಪ್ರಭಾಸ್ ಕೈಯಲ್ಲಿ ಹಲವು ಸಿನಿಮಾಗಳಿವೆ. ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’ ಸಿನಿಮಾದಲ್ಲಿ ಅವರು ನಟಿಸುತ್ತಿದ್ದಾರೆ. ಈ ಪ್ರಾಜೆಕ್ಟ್ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಬಾಲಿವುಡ್ ನಿರ್ದೇಶಕ ಓಂ ರಾವುತ್ ಆ್ಯಕ್ಷನ್-ಕಟ್ ಹೇಳುತ್ತಿರುವ ‘ಆದಿಪುರುಷ್’ ಚಿತ್ರದಲ್ಲಿ ಪ್ರಭಾಸ್ ರಾಮನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಪೂಜಾ ಹೆಗ್ಡೆ ಜೊತೆ ಅಭಿನಯಿಸಿರುವ ‘ರಾಧೆ ಶ್ಯಾಮ್’ ಚಿತ್ರ ಬಿಡುಗಡೆಗೆ ಸಜ್ಜಾಗುತ್ತಿದೆ. ಹಲವು ಭಾಷೆಗಳಲ್ಲಿ ತಯಾರಾಗುತ್ತಿರುವ ಈ ಸಿನಿಮಾ 2022ರ ಜ.14ರಂದು ರಿಲೀಸ್ ಆಗಲಿದೆ.
ಇದನ್ನೂ ಓದಿ:
ಸಲಾರ್ ಚಿತ್ರದಲ್ಲಿ 2 ಪ್ರಮುಖ ಬದಲಾವಣೆ; ಪ್ರಭಾಸ್, ಪ್ರಶಾಂತ್ ನೀಲ್ ಬಳಗದಲ್ಲಿ ಏನು ನಡೀತಿದೆ?
ಬಾಹುಬಲಿ ಬಜೆಟ್ ಮೀರಿಸಲಿದೆ ಪ್ರಭಾಸ್, ಅಮಿತಾಭ್, ದೀಪಿಕಾ ಪಡುಕೋಣೆ ಕಾಂಬಿನೇಷನ್ ಸಿನಿಮಾ
Published On - 8:19 am, Mon, 2 August 21