ಬಾಹುಬಲಿ ಬಜೆಟ್​ ಮೀರಿಸಲಿದೆ ಪ್ರಭಾಸ್​, ಅಮಿತಾಭ್​, ದೀಪಿಕಾ ಪಡುಕೋಣೆ ಕಾಂಬಿನೇಷನ್​ ಸಿನಿಮಾ   

ಬಾಹುಬಲಿ ಬಜೆಟ್​ ಮೀರಿಸಲಿದೆ ಪ್ರಭಾಸ್​, ಅಮಿತಾಭ್​, ದೀಪಿಕಾ ಪಡುಕೋಣೆ ಕಾಂಬಿನೇಷನ್​ ಸಿನಿಮಾ   
ಪ್ರಭಾಸ್​

ಪ್ರಭಾಸ್ ನಟನೆಯ ಬಾಹುಬಲಿ ಮೊದಲ ಭಾಗಕ್ಕೆ ಬರೋಬ್ಬರಿ 180 ಕೋಟಿ ರೂಪಾಯಿ ವೆಚ್ಛ ಮಾಡಲಾಗಿತ್ತು. ಬಾಹುಬಲಿ ಎರಡನೇ ಭಾಗಕ್ಕೆ ಎರಡನೇ ಭಾಗಕ್ಕೆ 250 ಕೋಟಿ ರೂಪಾಯಿ ವೆಚ್ಛವಾಗಿತ್ತು.

TV9kannada Web Team

| Edited By: Rajesh Duggumane

Jul 30, 2021 | 9:49 PM

ಎಸ್​.ಎಸ್​. ರಾಜಮೌಳಿ ನಿರ್ದೇಶನದ ಬಾಹುಬಲಿ ಸಿನಿಮಾ ಬಜೆಟ್​ ವಿಚಾರಕ್ಕೆ ದೊಡ್ಡಮಟ್ಟದಲ್ಲಿ ಸದ್ದು ಮಾಡಿತ್ತು. ಈಗ ಪ್ರಭಾಸ್​ ಹೊಸ ಸಿನಿಮಾ ಮತ್ತೆ ಬಜೆಟ್​ ವಿಚಾರಕ್ಕೆ ಸದ್ದು ಮಾಡುತ್ತಿದೆ. ನಾಗ್​ ಅಶ್ವಿನ್​ ಜತೆಯಾಗಿ ಸೇರಿ ಮಾಡುತ್ತಿರುವ ಹೊಸ ಚಿತ್ರದ ಬಜೆಟ್​ ಕೇಳಿ ಅಭಿಮಾನಿಗಳು ಅಚ್ಚರಿ ಹೊರ ಹಾಕಿದ್ದಾರೆ.

ಪ್ರಭಾಸ್ ನಟನೆಯ ‘ಬಾಹುಬಲಿ’ ಮೊದಲ ಭಾಗಕ್ಕೆ ಬರೋಬ್ಬರಿ 180 ಕೋಟಿ ರೂಪಾಯಿ ವೆಚ್ಛ ಮಾಡಲಾಗಿತ್ತು. ಬಾಹುಬಲಿ ಎರಡನೇ ಭಾಗಕ್ಕೆ 250 ಕೋಟಿ ರೂಪಾಯಿ ವೆಚ್ಛವಾಗಿತ್ತು. ಈಗ ಪ್ರಭಾಸ್​ ಮುಂದಿನ ಚಿತ್ರ ಬರೋಬ್ಬರಿ 400 ಕೋಟಿ ಬಜೆಟ್​ನಲ್ಲಿ ಸಿದ್ಧಗೊಳ್ಳುತ್ತಿದೆ. ಈ ಮೂಲಕ ‘ಬಾಹುಬಲಿ-1’ ಬಜೆಟ್​ಅನ್ನು ಈ ಸಿನಿಮಾ ಮೀರಿಸಲಿದೆ.

ಬಾಹುಬಲಿ ಸಿನಿಮಾಗಾಗಿ ಪ್ರಭಾಸ್ ಬರೋಬ್ಬರಿ 4-5 ವರ್ಷ ಮುಡಿಪಿಟ್ಟಿದ್ದರು. ಈ ಅವಧಿಯಲ್ಲಿ ಅವರು ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿರಲಿಲ್ಲ. ಈಗ ಪ್ರಭಾಸ್​ ಮುಂದಿನ ಚಿತ್ರಕ್ಕೆ ಬರೋಬ್ಬರಿ 200 ದಿನಗಳ ಕಾಲ್​ಶೀಟ್​ ನೀಡುತ್ತಿದ್ದಾರೆ. ಈ ಮೂಲಕ ಸಿನಿಮಾ ಶೂಟಿಂಗ್​ಗೆ ಸಾಕಷ್ಟು ದಿನಗಳು ಹಿಡಿಯಲಿವೆ ಎಂಬುದು ಸ್ಪಷ್ಟವಾಗಿದೆ.

ಅಂದಹಾಗೆ, ಈ ಚಿತ್ರದಲ್ಲಿ ಬಾಲಿವುಡ್​ ನಟ ಅಮಿತಾಭ್​ ಬಚ್ಚನ್​ ಕೂಡ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ನಾಯಕಿಯಾಗಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಆಲಿಯಾ ಭಟ್​, ಶ್ರದ್ಧಾ ಕಪೂರ್​ ಸೇರಿ ಸಾಕಷ್ಟು ಬಾಲಿವುಡ್​ ನಟಿಯರು ದಕ್ಷಿಣಕ್ಕೆ ಬಂದಿದ್ದಾರೆ. ದೀಪಿಕಾ ತಮ್ಮ ಸಿನಿ ಕೆರಿಯರ್​ ಆರಂಭಿಸಿದ್ದು ಕನ್ನಡದಿಂದಾದರೂ ನಂತರ ಅವರು ಹಿಂದಿ ಚಿತ್ರರಂಗದಲ್ಲಿ ಮಿಂಚಿದರು. ಈಗ ಅವರು ಮತ್ತೆ ದಕ್ಷಿಣದತ್ತ ಮುಖ ಮಾಡುತ್ತಿದ್ದಾರೆ..

ಪ್ರಭಾಸ್ ಅವರನ್ನು ಬಹು ದಿನಗಳ ಬಳಿಕ ದೊಡ್ಡ ಪರದೆ ಮೇಲೆ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ‘ಸಾಹೋ’ ಬಳಿಕ ಅವರ ಯಾವ ಚಿತ್ರವೂ ತೆರೆಕಂಡಿಲ್ಲ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಇಂದು (ಜು.30) ಅದ್ದೂರಿಯಾಗಿ ವಿಶ್ವಾದ್ಯಂತ ‘ರಾಧೆ ಶ್ಯಾಮ್​’ ರಿಲೀಸ್​ ಆಗಬೇಕಿತ್ತು. ಆದರೆ ಕೊರೊನಾ ವೈರಸ್​ ಎರಡನೇ ಅಲೆ ಕಾರಣದಿಂದ ಅದರ ಬಿಡುಗಡೆ ದಿನಾಂಕ ಮುಂದೂಡಲ್ಪಟ್ಟಿತು. ಈಗ ಹೊಸ ರಿಲೀಸ್​ ಡೇಟ್​ ಘೋಷಣೆ ಆಗಿದೆ. 2022ರ ಜ.14ರಂದು ‘ರಾಧೆ ಶ್ಯಾಮ್​’ ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

ಇದನ್ನೂ ಓದಿ: ಪ್ರಭಾಸ್​ ಅಭಿಮಾನಿಗಳಿಗೆ ಸಂಕ್ರಾಂತಿ ಸುಗ್ಗಿ; ಜ.14ಕ್ಕೆ ‘ರಾಧೆ ಶ್ಯಾಮ್​’ ರಿಲೀಸ್​

Follow us on

Related Stories

Most Read Stories

Click on your DTH Provider to Add TV9 Kannada