ಸಾಫ್ಟ್ಕೋರ್ ನೀಲಿ ಸಿನಿಮಾಗಳ ಮೂಲಕ ಹೆಸರು ಮಾಡಿದವರು ಶಕೀಲಾ. ಈಗ ಅವರು ಮೃತಪಟ್ಟಿದ್ದಾರೆ ಎನ್ನುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವದಂತಿ ಒಂದು ಹಬ್ಬಿತ್ತು. ಸೋಶಿಯಲ್ ಮೀಡಿಯಾದಲ್ಲಿ ಅನೇಕರು ಶಕೀಲಾಗೆ ಸಂತಾಪ ಸೂಚಿಸಿದ್ದರು. ಇದು ಸುಳ್ಳು ಎಂದು ಶಕೀಲಾ ಸ್ಪಷ್ಟನೆ ನೀಡಿದ್ದಾರೆ.
‘ ಶಕೀಲಾ ಮೃತಪಟ್ಟಿದ್ದಾರೆ ಎಂದು ಕೆಲವು ಮಾಧ್ಯಮಗಳು ಹಾಗೂ ಸೋಶಿಯಲ್ ಮೀಡಿಯಾಗಳು ವರದಿ ಬಿತ್ತರ ಮಾಡಿದ್ದವು. ಆದರೆ, ಆ ರೀತಿ ಏನೂ ಇಲ್ಲ. ನಾನು ಆರೋಗ್ಯವಾಗಿದ್ದೇನೆ. ಕೇರಳದ ಸಾಕಷ್ಟು ಜನರು ನನ್ನ ಆರೋಗ್ಯದ ಬಗ್ಗೆ ಆತಂಕ ಹೊರ ಹಾಕಿದ್ದಾರೆ. ಸಾಕಷ್ಟು ಜನರು ಈ ಬಗ್ಗೆ ಕಾಳಜಿ ತೋರಿದ್ದಾರೆ. ನನಗೆ ಈ ಬಗ್ಗೆ ಸಾಕಷ್ಟು ಕರೆಗಳು ಹಾಗೂ ಮೆಸೇಜ್ಗಳು ಬಂದಿವೆ. ನಿಮ್ಮ ಪ್ರೀತಿಗೆ ನಾನು ಆಭಾರಿ’ ಎಂದು ಶಕೀಲಾ ಹೇಳಿದ್ದಾರೆ.
ಹಲವು ವರ್ಷಗಳ ಹಿಂದೆ ಶಕೀಲಾ ಮಗುವನ್ನು ದತ್ತು ಪಡೆದಿದ್ದರು. ಇದಕ್ಕೆ ಮಿಲಾ ಎಂದು ಶಕೀಲಾ ಹೆಸರಿಟ್ಟಿದ್ದಾರೆ. ಮಾರ್ಚ್ ತಿಂಗಳಲ್ಲಿ ಮಿಲಾರನ್ನು ಅಭಿಮಾನಿಗಳಿಗೆ ಪರಿಚಯ ಮಾಡಿದ್ದರು ಶಕೀಲಾ. ಶಕೀಲಾ ಮದುವೆ ಆಗದೆ ಮಗುವನ್ನು ಹೊಂದಿದ್ದು ಹೇಗೆ ಎನ್ನುವ ಪ್ರಶ್ನೆ ಅನೇಕರದ್ದಾಗಿತ್ತು. ಇದಕ್ಕೆ ಅವರು ಉತ್ತರ ನೀಡಿದ್ದರು.
ಇತ್ತೀಚೆಗೆ ಶಕೀಲಾ ಅವರು ‘ಅಟ್ಟರ್ ಫ್ಲಾಪ್’ ಮತ್ತು ‘ರೊಮ್ಯಾಂಟಿಕ್’ ಸಿನಿಮಾಗಳ ಪೋಸ್ಟರ್ಗಳನ್ನು ಬಿಡುಗಡೆ ಮಾಡಿದ್ದರು. ಈ ಎರಡೂ ಸಿನಿಮಾಗಳಲ್ಲಿ ಅವರ ಸಾಕು ಮಗಳು ಮಿಲಾ ಮುಖ್ಯಭೂಮಿಕೆ ನಿಭಾಯಿಸುತ್ತಿದ್ದಾರೆ. ಈ ವೇಳೆ ತಮ್ಮ ಓಟಿಟಿ ಪ್ಲ್ಯಾನ್ ಬಗ್ಗೆ ಶಕೀಲಾ ಬಾಯಿ ಬಿಟ್ಟಿದ್ದರು. ‘ಈ ಸಿನಿಮಾಗಳಲ್ಲಿ ನಾವು ಹೊಸ ಕಲಾವಿದರಿಗೆ ಅವಕಾಶ ನೀಡಬೇಕು ಎಂದುಕೊಂಡಿದ್ದೇವೆ. ನಾವು ಈ ಹಿಂದೆ ಮಾಡಿದ ‘ಲೇಡೀಸ್ ನಾಟ್ ಅಲೌಡ್’ ಚಿತ್ರದ ರಿಲೀಸ್ ವೇಳೆ ಸೆನ್ಸಾರ್ ಮಂಡಳಿಯಿಂದ ಸಾಕಷ್ಟು ತೊಂದರೆ ಅನುಭವಿಸಿದ್ದೆವು. ಅಂಥ ತೊಂದರೆಗಳನ್ನು ತಪ್ಪಿಸಲು ಈಗ ತಾವೇ ಸ್ವಂತ ಓಟಿಟಿ ಆರಂಭಿಸಲು ಆಲೋಚಿಸಿದ್ದೇವೆ. ಹೊಸಬರಿಗೆ ಅದರಲ್ಲಿ ಅವಕಾಶ ನೀಡಲಿದ್ದೇವೆ’ ಎಂದು ಶಕೀಲಾ ಹೇಳಿದ್ದರು.
ಇದನ್ನೂ ಓದಿ: ಶೀಘ್ರವೇ ಬರಲಿದೆ ಶಕೀಲಾ ಓಟಿಟಿ; ಇಲ್ಲಿರುವ ಸಿನಿಮಾ ಎಂಥವು? ಯಾರಿಗೆಲ್ಲ ಸಿಗಲಿದೆ ಚಾನ್ಸ್?