AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉದ್ಯೋಗ ಸಂಬಂಧ ವಿವಾದಿತ ಜಾಹೀರಾತು: ಕನ್ನಡಿಗರ ಕ್ಷಮೆ ಕೇಳಿದ ಬೆಂಗಳೂರಿನ ಖಾಸಗಿ ಕಂಪನಿ

ಜೆ.ಪಿ. ನಗರದ 'ಸ್ಕಿಲ್ಸ್ ಸೋನಿಕ್ಸ್' ಕಂಪನಿ ಉದ್ಯೋಗ ಪ್ರಕಟಣೆಯಲ್ಲಿ ಕನ್ನಡ ಗೊತ್ತಿಲ್ಲದವರಿಗೆ ಆದ್ಯತೆ ಎಂದು ನಮೂದಿಸಿರೋದು ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಕನ್ನಡಿಗರ ಭಾರಿ ವಿರೋಧದ ಬಳಿಕ ಕಂಪನಿಯೀಗ ಕ್ಷಮೆಯಾಚಿಸಿದೆ. ಈ ಘಟನೆಯು ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕುರಿತ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ. ಆದರೆ, ಉದ್ಯಮಿ ಕಿರಣ್ ಮಜುಂದಾರ್ ಶಾ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಉದ್ಯೋಗ ಸಂಬಂಧ ವಿವಾದಿತ ಜಾಹೀರಾತು: ಕನ್ನಡಿಗರ ಕ್ಷಮೆ ಕೇಳಿದ ಬೆಂಗಳೂರಿನ ಖಾಸಗಿ ಕಂಪನಿ
ಸಾಂದರ್ಭಿಕ ಚಿತ್ರ
ಪ್ರಸನ್ನ ಹೆಗಡೆ
|

Updated on:Jan 12, 2026 | 1:57 PM

Share

ಬೆಂಗಳೂರು, ಜನವರಿ 12: ಜೆ.ಪಿ. ನಗರದಲ್ಲಿರುವ ‘ಸ್ಕಿಲ್ಸ್ ಸೋನಿಕ್ಸ್’ ಎನ್ನುವ ಖಾಸಗಿ ಕಂಪನಿ ಹೊರಡಿಸಿದ್ದ ಉದ್ಯೋಗಾವಕಾಶ ಪ್ರಕಟಣೆಯಲ್ಲಿ ಕನ್ನಡ ಗೊತ್ತಿಲ್ಲದ ಅಭ್ಯರ್ಥಿಗಳಿಗೆ ಆದ್ಯತೆ ಎಂಬ ಸಾಲು ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಕಂಪನಿಯವರ ಮನಸ್ಥಿತಿಗೆ ಎಕ್ಸ್​​ನಲ್ಲಿ ಭಾರಿ ವಿರೋಧಗಳು ವ್ಯಕ್ತವಾಗಿದ್ದವು. ಖಾಸಗಿ ಕಂಪನಿಗಳಿಗೆ ಬದುಕೋಕೆ ಕನ್ನಡ ನೆಲ ಬೇಕು, ಆದ್ರೆ ಉದ್ಯೋಗ ಮಾಡಲು ಕನ್ನಡಿಗರು ಬೇಡವಾ? ಎಂಬ ಪ್ರಶ್ನೆಗಳು ಉದ್ಭವಿಸಿದ್ದವು. ಈ ಬೆನ್ನಲ್ಲೇ ಖಾಸಗಿ ಕಂಪನಿ ಕನ್ನಡಿಗರ ಕ್ಷಮೆ ಕೇಳಿದೆ.

ಖಾಸಗಿ ಕಂಪನಿಯಿಂದ ಸ್ಪಷ್ಟನೆ

ಕನ್ನಡ ಬರದವರು ಕೆಲಸಕ್ಕೆ ಬೇಕು ಎಂಬ ಪೋಸ್ಟ್​​ ಬಗ್ಗೆ ‘ಸ್ಕಿಲ್ಸ್ ಸೋನಿಕ್ಸ್’ ಕಂಪನಿ ಇದೀಗ ಸ್ಪಷ್ಟನೆ ನೀಡಿದೆ. ಕೊಲ್ಕತ್ತಾ ಬ್ರಾಂಚ್ ಕಡೆಯಿಂದ ಈ ಪೋಸ್ಟ್ ಹಾಕಲಾಗಿದೆ. ಅದರಿಂದ​​ ಕನ್ನಡಿಗರಿಗೆ ನೋವಾಗಿರುವುದಕ್ಕೆ ಕ್ಷಮೆಯಾಚಿಸುತ್ತೇವೆ ಎಂದು ತಿಳಿಸಿದೆ. ಜೊತೆಗೆ ಮುಂದಿನ ದಿನಗಳಲ್ಲಿ ಈ ರೀತಿ ಪ್ರಮಾದಗಳು ನಡೆಯದಂತೆ ನೋಡಿಕೊಳ್ತೇವೆ ಎಂಬ ಭರವಸೆಯನ್ನೂ ಕನ್ನಡಿಗರಿಗೆ ಕೊಟ್ಟಿದೆ.

ಇದನ್ನೂ ಓದಿ: ಕೆಲಸಕ್ಕೆ ಬೇಕು, ಆದ್ರೆ ಕನ್ನಡಿಗರು ಬೇಡ್ವಂತೆ; ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ

ಕನ್ನಡಿಗರಿಗೆ ಉದ್ಯೋಗ ಮೀಸಲಾತಿಗೆ ವಿರೋಧ

ಈ ನಡುವೆ ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ವಿಚಾರ ರಾಜ್ಯದಲ್ಲಿ ಮತ್ತೆ ಮುನ್ನೆಲೆಗೆ ಬಂದಿದ್ದು, ಆಂಧ್ರದ ಮಾದರಿ ಕನ್ನಡಿಗರಿಗೆ ಮೀಸಲಾತಿ ಜಾರಿ ಮಾಡಲು ಆಗ್ರಹ ಕೇಳಿಬಂದಿದೆ. ಆದ್ರೆ ಇದಕ್ಕೆ ಖ್ಯಾತ ಉದ್ಯಮಿ‌ ಕಿರಣ್ ಮಜುಂದಾರ್ ಶಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ.  ಈ ರೀತಿ ನಿಯಮಕ್ಕೆ ನಾನು ಒಪ್ಪುವುದಿಲ್ಲ. ಯಾರಿಗೆ ಪ್ರತಿಭೆ ಇದೆಯೋ ಅಂಥವರಿಗೆ ಅವಕಾಶ ಸಿಗುತ್ತದೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.  ಈ ಹಿಂದೆಯೂ ಇದೇ ಅಭಿಪ್ರಾಯವನ್ನು ಉದ್ಯಮಿ‌ ಕಿರಣ್ ಮಜುಂದಾರ್ ಶಾ ವ್ಯಕ್ತಪಡಿಸಿದ್ದರು ಅನ್ನೋದಿಲ್ಲಿ ಗಮನಾರ್ಹ. ಕಂಪನಿಗಳಲ್ಲಿ ಕನ್ನಡಿಗರಿಗೆ ಮೀಸಲಾತಿಗೆ ದೊಡ್ಡ ಮಟ್ಟದ ಆಗ್ರಹ ವ್ಯಕ್ತವಾಗ್ತಿರೋ ಈ ಹೊತ್ತಲ್ಲಿ ಕಿರಣ್ ಮಜುಂದಾರ್ ಶಾ ಅವರ ಅಭಿಪ್ರಾಯದ ಬಗ್ಗೆಯೂ ಪರ-ವಿರೋಧ ಚರ್ಚೆಗಳು ಶುರುವಾಗಿವೆ.

ವರದಿ: ನಟರಾಜ್​​, ಟಿವಿ9 ಬೆಂಗಳೂರು

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 1:56 pm, Mon, 12 January 26