ಶೀಘ್ರವೇ ಬರಲಿದೆ ಶಕೀಲಾ ಓಟಿಟಿ; ಇಲ್ಲಿರುವ ಸಿನಿಮಾ ಎಂಥವು? ಯಾರಿಗೆಲ್ಲ ಸಿಗಲಿದೆ ಚಾನ್ಸ್​?

ಇತ್ತೀಚೆಗೆ ಶಕೀಲಾ ಅವರು ‘ಅಟ್ಟರ್​ ಫ್ಲಾಪ್’​ ಮತ್ತು ‘ರೊಮ್ಯಾಂಟಿಕ್​’ ಸಿನಿಮಾಗಳ ಪೋಸ್ಟರ್​ಗಳನ್ನು ಬಿಡುಗಡೆ ಮಾಡಿದರು. ಈ ಎರಡೂ ಸಿನಿಮಾಗಳಲ್ಲಿ ಅವರ ಸಾಕು ಮಗಳು ಮಿಲಾ ಮುಖ್ಯಭೂಮಿಕೆ ನಿಭಾಯಿಸುತ್ತಿದ್ದಾರೆ.

ಶೀಘ್ರವೇ ಬರಲಿದೆ ಶಕೀಲಾ ಓಟಿಟಿ; ಇಲ್ಲಿರುವ ಸಿನಿಮಾ ಎಂಥವು? ಯಾರಿಗೆಲ್ಲ ಸಿಗಲಿದೆ ಚಾನ್ಸ್​?
ಶಕೀಲಾ
TV9kannada Web Team

| Edited By: Madan Kumar

Jul 17, 2021 | 4:31 PM

ಕಳೆದ ವರ್ಷ ಮೊದಲ ಬಾರಿ ಲಾಕ್​ಡೌನ್​ ಆರಂಭ ಆದ ಬಳಿಕ ಓಟಿಟಿ ಪ್ಲಾಟ್​ಫಾರ್ಮ್​ (OTT platform) ಮೂಲಕ ಮನರಂಜನೆ ಪಡೆಯುವವರ ಸಂಖ್ಯೆ ಹೆಚ್ಚಾಗಿದೆ. ಚಿತ್ರಮಂದಿರಗಳು ತಾತ್ಕಾಲಿಕವಾಗಿ ಬಾಗಿಲು ಮುಚ್ಚಿದ ಪರಿಣಾಮ, ಅನೇಕ ಸಿನಿಮಾಗಳು ನೇರವಾಗಿ ಓಟಿಟಿಯಲ್ಲಿ ತೆರೆಕಂಡವು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೇವೆ ಒದಗಿಸುತ್ತಿರುವ ಆಮೇಜಾನ್​ ಪ್ರೈಂ ವಿಡಿಯೋ, ನೆಟ್​ಫ್ಲಿಕ್ಸ್​, ಹಾಟ್​ಸ್ಟಾರ್​ ಜೊತೆಗೆ ಸ್ಥಳೀಯವಾಗಿಯೂ ಕೆಲವು ಓಟಿಟಿ ಸಂಸ್ಥೆಗಳು ಕೆಲಸ ಮಾಡುತ್ತಿವೆ. ಈಗ ನಟಿ ಶಕೀಲಾ (Shakeela) ಅವರು ತಮ್ಮದೇ ಆದಂತಹ ಒಂದು ಓಟಿಟಿ ಆರಂಭಿಸಲು ಸಜ್ಜಾಗಿದ್ದಾರೆ. ಈ ಬಗ್ಗೆ ಅವರು ಸ್ವತಃ ಮಾಹಿತಿ ಹಂಚಿಕೊಂಡಿದ್ದಾರೆ.

ಒಂದು ಕಾಲದಲ್ಲಿ ಸಾಫ್ಟ್​ಕೋರ್​ ನೀಲಿ ಸಿನಿಮಾಗಳ ಮೂಲಕ ಹೆಸರು ಮಾಡಿದವರು ಶಕೀಲಾ. ಅಂಥ ಚಿತ್ರಗಳಿಂದಲೇ ಅವರು ಮಲಯಾಳಂ ಚಿತ್ರರಂಗದ ಸ್ಟಾರ್​ ನಟರಿಗೆ ಪೈಪೋಟಿ ನೀಡಿದ್ದರು. 2012ರಿಂದ ಈಚೆಗೆ ಅವರು ಅಂಥ ಸಿನಿಮಾಗಳಲ್ಲಿ ನಟಿಸಿಲ್ಲ. ಮುಖ್ಯವಾಹಿನಿಯ ಸಿನಿಮಾಗಳಲ್ಲಿ ಕೆಲವು ಪಾತ್ರಗಳನ್ನು ಮಾಡುತ್ತಿದ್ದಾರೆ. ಈಗ ಅವರು ಏಕಾಏಕಿ ತಮ್ಮದೇ ಸ್ವಂತ ಓಟಿಟಿ ಸಂಸ್ಥೆ ಆರಂಭಿಸುವ ಬಗ್ಗೆ ಮಾತನಾಡಿದ್ದಾರೆ.

ಇತ್ತೀಚೆಗೆ ಶಕೀಲಾ ಅವರು ‘ಅಟ್ಟರ್​ ಫ್ಲಾಪ್’​ ಮತ್ತು ‘ರೊಮ್ಯಾಂಟಿಕ್​’ ಸಿನಿಮಾಗಳ ಪೋಸ್ಟರ್​ಗಳನ್ನು ಬಿಡುಗಡೆ ಮಾಡಿದರು. ಈ ಎರಡೂ ಸಿನಿಮಾಗಳಲ್ಲಿ ಅವರ ಸಾಕು ಮಗಳು ಮಿಲಾ ಮುಖ್ಯಭೂಮಿಕೆ ನಿಭಾಯಿಸುತ್ತಿದ್ದಾರೆ. ಈ ವೇಳೆ ತಮ್ಮ ಓಟಿಟಿ ಪ್ಲ್ಯಾನ್​ ಬಗ್ಗೆ ಶಕೀಲಾ ಬಾಯಿ ಬಿಟ್ಟರು. ‘ಈ ಸಿನಿಮಾಗಳಲ್ಲಿ ನಾವು ಹೊಸ ಕಲಾವಿದರಿಗೆ ಅವಕಾಶ ನೀಡಬೇಕು ಎಂದುಕೊಂಡಿದ್ದೇವೆ. ನಿರ್ದೇಶಕರು ಹೇಳಿದ ಕಥೆ ನನಗೆ ತುಂಬ ಇಷ್ಟವಾಯಿತು’ ಎಂದು ಶಕೀಲಾ ಮಾತು ಆರಂಭಿಸಿದರು.

‘ನಾವು ಈ ಹಿಂದೆ ಮಾಡಿದ ‘ಲೇಡೀಸ್​ ನಾಟ್​ ಅಲೌಡ್​’ ಚಿತ್ರದ ರಿಲೀಸ್​ ವೇಳೆ ಸೆನ್ಸಾರ್​ ಮಂಡಳಿಯಿಂದ ಸಾಕಷ್ಟು ತೊಂದರೆ ಅನುಭವಿಸಿದ್ದೆವು. ಅಂಥ ತೊಂದರೆಗಳನ್ನು ತಪ್ಪಿಸಲು ಈಗ ತಾವೇ ಸ್ವಂತ ಓಟಿಟಿ ಆರಂಭಿಸಲು ಆಲೋಚಿಸಿದ್ದೇವೆ. ಹೊಸಬರಿಗೆ ಅದರಲ್ಲಿ ಅವಕಾಶ ನೀಡಲಿದ್ದೇವೆ’ ಎಂದು ಶಕೀಲಾ ಹೇಳಿದ್ದಾರೆ.

ಈ ಬಗ್ಗೆ ನಿರ್ದೇಶಕ ರಮೇಶ್​ ಕಾವಾಲಿ ಕೂಡ ಮಾತನಾಡಿದ್ದಾರೆ. ‘ಇದು ಈಗಿನ್ನೂ ಆರಂಭ ಮಾತ್ರ. ಮುಂದಿನ ದಿನಗಳಲ್ಲಿ ನಾವು ಸಾಕಷ್ಟು ಸಿನಿಮಾಗಳೊಂದಿಗೆ ಬರುತ್ತೇವೆ. ಶಕೀಲಾ ಅವರ ಬೆಂಬಲದೊಂದಿಗೆ ನಾವು ಕೆಆರ್​ ಡಿಜಿಟಲ್​ ಪ್ಲೆಕ್ಸ್​ ಎಂಬ ಓಟಿಟಿ ಶುರುಮಾಡುತ್ತೇವೆ. ಹೊಸ ಉತ್ಸಾಹಿ ನಿರ್ದೇಶಕರ, ಕಲಾವಿದರ ಸಿನಿಮಾ ಮತ್ತು ಕಿರುಚಿತ್ರಗಳನ್ನು ಉಚಿತವಾಗಿ ಪ್ರಸಾರ ಮಾಡುವ ಮೂಲಕ ಎಲ್ಲರಿಗೂ ಪ್ರೋತ್ಸಾಹ ನೀಡುತ್ತೇವೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:

ಯೂಟ್ಯೂಬ್​ಗೆ ಬಂತು ‘ಶಕೀಲಾ’ ಬಯೊಪಿಕ್​ನ ಮೊದಲ ಹಾಡು ‘ತೇರಾ ಇಷ್ಕ್ ಸತಾವೆ’

ಡರ್ಟಿ ಪಿಕ್ಚರ್​ ನಟಿ ಸಾವು.. ಬೆಡ್​ ರೂಂನಲ್ಲಿ ಶವ ಪತ್ತೆ.. ನೆಲದ ಮೇಲೆ ರಕ್ತದ ಹನಿಗಳು!

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada