ಯೂಟ್ಯೂಬ್​ಗೆ ಬಂತು ‘ಶಕೀಲಾ’ ಬಯೊಪಿಕ್​ನ ಮೊದಲ ಹಾಡು ‘ತೇರಾ ಇಷ್ಕ್ ಸತಾವೆ’

ಶಕೀರಾ ಸಿನೆಮಾದ ಮೊದಲ ಹಾಡು ‘ತೇರಾ ಇಷ್ಕ್ ಸತಾವೆ’ ಬಿಡುಗಡೆಯಾಗಿದ್ದು, ರಿಚಾ ಛಡ್ಡಾಳ ಗ್ಲಾಮರ್ ನೋಟಕ್ಕಾಗಿ ಸಿನಿಪ್ರಿಯರು ಫುಲ್ ಫಿದಾ.

ಯೂಟ್ಯೂಬ್​ಗೆ ಬಂತು ‘ಶಕೀಲಾ’ ಬಯೊಪಿಕ್​ನ ಮೊದಲ ಹಾಡು ‘ತೇರಾ ಇಷ್ಕ್ ಸತಾವೆ’
ಶಕೀಲಾ ಪಾತ್ರದಲ್ಲಿ ರಿಚಾ ಛಡ್ಡಾ.
guruganesh bhat

| Edited By: Ghanashyam D M | ಡಿ.ಎಂ.ಘನಶ್ಯಾಮ

Dec 18, 2020 | 4:27 PM

ನಟಿ ಶಕೀಲಾ ಜೀವನ ಆಧರಿತ ‘ಶಕೀಲಾ’ ಚಿತ್ರದ ಮೊದಲ ಹಾಡು ‘ತೇರಾ ಇಷ್ಕ್ ಸತಾವೆ’ ಯೂಟ್ಯೂಬ್​ನಲ್ಲಿ ಬಿಡುಗಡೆಯಾಗಿದೆ. ರಿಚಾ ಛಡ್ಡಾ-ಪಂಕಜ್ ತ್ರಿಪಾಠಿ ಈ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿದ್ದಾರೆ. ಈ ಹಿಂದೆ ಬಿಡುಗಡೆಯಾಗಿದ್ದ ‘ಶಕೀಲಾ’ ಚಿತ್ರದ ಟ್ರೇಲರ್ ಸಹ ಅಪಾರ ಮೆಚ್ಚುಗೆ ಗಳಿಸಿತ್ತು. ಇದೀಗ ಬಿಡುಗಡೆಯಾಗಿರುವ ‘ತೇರಾ ಇಷ್ಕ್ ಸತಾವೆ’ ಕೂಡ ಸಿನಿಪ್ರಿಯರಲ್ಲಿ ಮತ್ತಷ್ಟು ಉತ್ಸಾಹ ಮೂಡಿಸುವಲ್ಲಿ ಯಶಸ್ವಿಯಾಗಿದೆ.

ರಿಚಾಳ ಆಕರ್ಷಕ ಸೌಂದರ್ಯ ನೋಡುಗರನ್ನು ಸಮ್ಮೋಹನಗೊಳಿಸದೆ ಇರಲಾರದು! ಕುಮಾರ್ ಬರೆದ ಈ ಹಾಡಿಗೆ ಮೀಟ್ ಬ್ರದರ್ಸ್, ಖುಷ್ಬೂ ಗ್ರೇವಲ್ ಸ್ವರ ಸಂಯೋಜಿಸಿದ್ದಾರೆ. ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂನಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ.

ತೊಂಬತ್ತರ ದಶಕದ ಜನಪ್ರಿಯ ನಟಿ ಶಕೀಲಾಳ ಸಿನಿಪಯಣವನ್ನು ಈ ಚಿತ್ರ ಕಟ್ಟಿಕೊಡುತ್ತದೆ. ಆಕೆ ದಕ್ಷಿಣ ಭಾರತದಲ್ಲಿ ಜನಪ್ರಿಯ ನಟಿಯಾಗಿ ಹೇಗೆ ಕಂಗೊಳಿಸಿದಳು, ಇಲ್ಲಿಯ ನಿರ್ಮಾಪಕರಿಗೆ ಈಕೆಯ ವೃತ್ತಿಜೀವನ ಹೇಗೆ ಪುನರುಜ್ಜೀವನ ದೊರೆಕಿಸಿಕೊಟ್ಟಿತು ಎಂಬುದರ ಜೊತೆಜೊತೆಗೆ ಆಕೆ ನಿಜಜೀವನದಲ್ಲಿ ಅನುಭವಿಸಿದ ಆಘಾತಕಾರಿ ವಿಷಯಗಳನ್ನೂ ಪದರಪದರವಾಗಿ ತೆರೆಯ ಮೇಲೆ ನೋಡಬಹುದಾಗಿದೆ.

ಇಂದ್ರಜಿತ್ ಲಂಕೇಶ್ ನಿರ್ದೇಶನದ ಈ ಚಿತ್ರ ಇದೇ 25ರಂದು ಐದು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ.

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada