ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ (Prabhas) ಅವರನ್ನು ಬಹು ದಿನಗಳ ಬಳಿಕ ದೊಡ್ಡ ಪರದೆ ಮೇಲೆ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ‘ಸಾಹೋ’ ಬಳಿಕ ಅವರ ಯಾವ ಚಿತ್ರವೂ ತೆರೆಕಂಡಿಲ್ಲ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಇಂದು (ಜು.30) ಅದ್ದೂರಿಯಾಗಿ ವಿಶ್ವಾದ್ಯಂತ ‘ರಾಧೆ ಶ್ಯಾಮ್’ (Radhe Shyam) ರಿಲೀಸ್ ಆಗಬೇಕಿತ್ತು. ಆದರೆ ಕೊರೊನಾ ವೈರಸ್ ಎರಡನೇ ಅಲೆ ಕಾರಣದಿಂದ ಅದರ ಬಿಡುಗಡೆ ದಿನಾಂಕ (Radhe Shyam release Date) ಮುಂದೂಡಲ್ಪಟ್ಟಿತು. ಈಗ ಹೊಸ ರಿಲೀಸ್ ಡೇಟ್ ಘೋಷಣೆ ಆಗಿದೆ. 2022ರ ಜ.14ರಂದು ‘ರಾಧೆ ಶ್ಯಾಮ್’ ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.
‘ರಾಧೆ ಶ್ಯಾಮ್’ ಸಿನಿಮಾದಲ್ಲಿ ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಜೋಡಿಯಾಗಿ ನಟಿಸಿದ್ದಾರೆ. ರೊಮ್ಯಾಂಟಿಕ್ ಲವ್ ಸ್ಟೋರಿ ಹೊಂದಿರುವ ಈ ಸಿನಿಮಾ ಪ್ರಭಾಸ್ ವೃತ್ತಿಜೀವನದ ಡಿಫರೆಂಟ್ ಚಿತ್ರ ಎನ್ನಲಾಗುತ್ತಿದೆ. ರಾಧಕೃಷ್ಣ ಕುಮಾರ್ ಅವರು ‘ರಾಧೆ ಶ್ಯಾಮ್’ಗೆ ನಿರ್ದೇಶನ ಮಾಡಿದ್ದಾರೆ. ತೆಲುಗು ಮಾತ್ರವಲ್ಲದೆ ಹಲವು ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. ಹಾಗಾಗಿ ಎಲ್ಲರಿಗೂ ಇದರ ರಿಲೀಸ್ ದಿನಾಂಕ ತಿಳಿದುಕೊಳ್ಳುವ ಕೌತುಕ ಇತ್ತು. ಅದಕ್ಕೀಗ ತೆರೆಬಿದ್ದಿದೆ.
2022 ಜ.14ರ ವೇಳೆಗೆ ದೇಶದಲ್ಲಿ ಕೊರೊನಾ ವೈರಸ್ ಹಾವಳಿ ತಗ್ಗಿರುತ್ತದೆ ಎಂಬುದು ‘ರಾಧೆ ಶ್ಯಾಮ್’ ತಂಡದ ಲೆಕ್ಕಾಚಾರ. ಆ ವೇಳೆಗೆ ಚಿತ್ರಮಂದಿರದಲ್ಲಿ ಶೇ.100 ಆಸನ ಭರ್ತಿಗೆ ಅವಕಾಶ ಸಿಕ್ಕರೆ ಉತ್ತಮ ಕಲೆಕ್ಷನ್ ಆಗುತ್ತದೆ. ಅಲ್ಲದೆ, ಸಂಕ್ರಾಂತಿ ಹಬ್ಬದ ಸಮಯವಾದ್ದರಿಂದ ಜನರು ಥಿಯೇಟರ್ ಕಡೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ ಎಂಬ ಆಲೋಚನೆಯೊಂದಿಗೆ ಈ ದಿನಾಂಕವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಇನ್ನೂ ಹಲವು ಬಿಗ್ ಸ್ಟಾರ್ ಸಿನಿಮಾಗಳು ರಿಲೀಸ್ಗೆ ರೆಡಿಯಾಗಿದ್ದು, ರಾಧೆ ಶ್ಯಾಮ್ ಜೊತೆಗೆ ಯಾವುದಾದರೂ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಪೈಪೋಟಿಗೆ ಇಳಿಯುವ ಸಾಧ್ಯತೆ ಕೂಡ ದಟ್ಟವಾಗಿದೆ.
New Year. New Beginnings. And a New Release Date! 🌟💕#RadheShyam all set to release in a theatres near you on Makar Sankranti, 14th January 2022
Starring #Prabhas & @hegdepooja pic.twitter.com/FyhaF5kD8W
— UV Creations (@UV_Creations) July 30, 2021
ರಾಧೆ ಶ್ಯಾಮ್ ಜೊತೆಗೆ ‘ಸಲಾರ್’, ‘ಆದಿಪುರುಷ್’ ಮುಂತಾದ ಸಿನಿಮಾಗಳಲ್ಲಿ ಪ್ರಭಾಸ್ ನಟಿಸುತ್ತಿದ್ದಾರೆ. ಆ ಸಿನಿಮಾಗಳ ಮೇಲೆ ಕೂಡ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ‘ಸಲಾರ್’ ಚಿತ್ರಕ್ಕೆ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿದ್ದಾರೆ. ‘ಆದಿಪುರುಷ್’ ಚಿತ್ರಕ್ಕೆ ‘ತಾನಾಜಿ: ದಿ ಅನ್ಸಂಗ್ ವಾರಿಯರ್’ ಸಿನಿಮಾ ಖ್ಯಾತಿಯ ಯಶಸ್ವಿ ನಿರ್ದೇಶಕ ಓಂ ರಾವುತ್ ಅವರು ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ಪ್ರಭಾಸ್ ಅವರ ಮುಂಬರುವ ಸಿನಿಮಾಗಳ ಬಗ್ಗೆ ಭಾರೀ ಹೈಪ್ ಸೃಷ್ಟಿ ಆಗಿದೆ.
ಇದನ್ನೂ ಓದಿ:
ಸಲಾರ್ ಬಳಿಕ ಕಾದಿದೆ ಸರ್ಪ್ರೈಸ್; ಪ್ರಭಾಸ್ ಜೊತೆ ಇಂಥ ಸಿನಿಮಾನೂ ಮಾಡ್ತಾರಾ ಪ್ರಶಾಂತ್ ನೀಲ್?
ಪ್ರಭಾಸ್ ಚಿತ್ರದಲ್ಲಿ 10 ಬಾಲಿವುಡ್ ಸೆಲೆಬ್ರಿಟಿಗಳು; ಸಂಭಾವನೆ ಮೊತ್ತವೇ 200 ಕೋಟಿ! ಯಾವುದು ಈ ಸಿನಿಮಾ?