ರಶ್ಮಿಕಾ ಮಂದಣ್ಣ ಮಡಿಲಿಗೆ ಮತ್ತೊಂದು ಬಿಗ್ ಆಫರ್; ಸ್ಟಾರ್ ನಟನ ಚಿತ್ರಕ್ಕೆ ಇವರೇ ಹೀರೋಯಿನ್?
ಈ ಚಿತ್ರ ತೆಲುಗು ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ನಿರ್ಮಾಣ ಆಗಲಿದೆ. ಅದಕ್ಕೆ ರಶ್ಮಿಕಾ ನಾಯಕಿಯಾದರೆ ಎರಡೂ ಭಾಷೆಯ ಪ್ರೇಕ್ಷಕರನ್ನು ಸೆಳೆಯಬಹುದು ಎಂಬ ಲೆಕ್ಕಾಚಾರದಲ್ಲಿ ನಿರ್ಮಾಪಕರು ಇದ್ದಂತಿದೆ.

ಚಿತ್ರರಂಗದಲ್ಲಿ ನಟಿ ರಶ್ಮಿಕಾ ಮಂದಣ್ಣ (Rashmika Mandanna) ನಾಗಾಲೋಟ ಮುಂದುವರಿಸಿದ್ದಾರೆ. ಪ್ರತಿ ಸಿನಿಮಾದಲ್ಲೂ ಅವರ ಚಾರ್ಮ್ ಹೆಚ್ಚುತ್ತಿದೆ. ದಕ್ಷಿಣ ಭಾರತದಲ್ಲಿ ಈಗ ಎಲ್ಲ ಸ್ಟಾರ್ ನಟರ ಸಿನಿಮಾಗಳಿಗೂ ರಶ್ಮಿಕಾ ಅವರೇ ನಾಯಕಿ ಆಗಬೇಕು ಎಂಬಷ್ಟು ಬೇಡಿಕೆ ಸೃಷ್ಟಿ ಆಗಿದೆ. ಈ ನಡುವೆ ಅವರು ಹೊಸ ಪ್ರಾಜೆಕ್ಟ್ಗಳನ್ನು ಅಳೆದು-ತೂಗಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಬಾಲಿವುಡ್ನಲ್ಲೂ ಅವರಿಗೆ ಸಖತ್ ಬೇಡಿಕೆ ಇರುವ ಕಾರಣ ದಕ್ಷಿಣದಲ್ಲಿ ತುಂಬ ಚ್ಯೂಸಿ ಆಗಿದ್ದಾರೆ. ಅವರ ಮುಂದಿನ ಸಿನಿಮಾ ಬಗ್ಗೆ ಹೊಸ ಗುಸುಗುಸು ಕೇಳಿಬಂದಿದೆ.
ಕನ್ನಡದಲ್ಲಿ ಮಿಂಚಿದ ಬಳಿಕ ರಶ್ಮಿಕಾಗೆ ತೆಲುಗು ಚಿತ್ರರಂಗದಲ್ಲಿ ಭರ್ಜರಿ ಸ್ವಾಗತ ಸಿಕ್ಕಿತು. ಅಲ್ಲಿ ಸೂಪರ್ ಹಿಟ್ ಸಿನಿಮಾ ನೀಡಿದ ನಂತರ ತಮಿಳಿನಿಂದಲೂ ಆಹ್ವಾನ ಬಂತು. ಕಾಲಿವುಡ್ನಲ್ಲಿ ಕಾರ್ತಿ ಜೊತೆ ಸುಲ್ತಾನ್ ಸಿನಿಮಾ ಮಾಡಿದ ಬಳಿಕ ತಮಿಳುನಾಡಿನಲ್ಲಿ ರಶ್ಮಿಕಾ ಹವಾ ಹೆಚ್ಚಾಗಿದೆ. ಹಾಗಾಗಿ ಮತ್ತೊಂದು ಬಹುನಿರೀಕ್ಷಿತ ಕಾಲಿವುಡ್ ಚಿತ್ರಕ್ಕೆ ರಶ್ಮಿಕಾ ಅವರನ್ನೇ ನಾಯಕಿಯನ್ನಾಗಿ ಆಯ್ಕೆ ಮಾಡಿಕೊಳ್ಳಲು ಮಾತುಕತೆ ನಡೆಯುತ್ತಿದೆ ಎನ್ನಲಾಗಿದೆ.
ತಮಿಳು ನಟ ಶಿವಕಾರ್ತಿಕೇಯನ್ ಅವರು ಈಗ ತೆಲುಗಿನಲ್ಲೂ ಒಂದು ಸಿನಿಮಾ ಮಾಡಲಿದ್ದಾರೆ. ಆ ಚಿತ್ರ ತೆಲುಗು ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ನಿರ್ಮಾಣ ಆಗಲಿದೆ. ಅದಕ್ಕೆ ರಶ್ಮಿಕಾ ನಾಯಕಿಯಾದರೆ ಎರಡೂ ಭಾಷೆಯ ಪ್ರೇಕ್ಷಕರನ್ನು ಸೆಳೆಯಬಹುದು ಎಂಬ ಲೆಕ್ಕಾಚಾರದಲ್ಲಿ ನಿರ್ಮಾಪಕರು ಇದ್ದಂತಿದೆ. ಈ ಚಿತ್ರಕ್ಕೆ ‘ಜಾತಿ ರತ್ನಾಲು’ ಖ್ಯಾತಿಯ ಕೆ.ವಿ. ಅನುದೀಪ್ ನಿರ್ದೇಶನ ಮಾಡಲಿದ್ದಾರೆ. ರಶ್ಮಿಕಾ ಹೆಸರು ಕೇಳಿಬಂದಿರುವ ಬಗ್ಗೆ ಚಿತ್ರತಂಡದ ಕಡೆಯಿಂದಲೇ ಈಗ ಸ್ಪಷ್ಟನೆ ಸಿಗಬೇಕಿದೆ.
ಬಾಲಿವುಡ್ನಲ್ಲಿ ರಶ್ಮಿಕಾ ಬ್ಯುಸಿ ಆಗಿದ್ದಾರೆ. ಸಿದ್ಧಾರ್ಥ್ ಮಲ್ಹೋತ್ರಾ ಜೊತೆಗೆ ಅವರು ‘ಮಿಷನ್ ಮಜ್ನು’ ಸಿನಿಮಾ ಮಾಡುತ್ತಿದ್ದಾರೆ. ಅದು ಅವರು ಮೊದಲ ಹಿಂದಿ ಪ್ರಾಜೆಕ್ಟ್. ಅದರ ಜೊತೆಗೆ ‘ಗುಡ್ ಬೈ’ ಚಿತ್ರದಲ್ಲಿ ನಟಿಸುತ್ತಿದ್ದು, ಅದರಲ್ಲಿ ಅಮಿತಾಭ್ ಬಚ್ಚನ್ ಕೂಡ ಅಭಿನಯಿಸುತ್ತಿರುವುದು ವಿಶೇಷ. ಈ ಎಲ್ಲ ಪ್ರಾಜೆಕ್ಟ್ಗಳ ಸಲುವಾಗಿ ಪದೇಪದೇ ಮುಂಬೈಗೆ ತೆರಳುವ ರಶ್ಮಿಕಾ ಅವರು ಅಲ್ಲಿಯೇ ಒಂದು ಹೊಸ ಅಪಾರ್ಟ್ಮೆಂಟ್ ಖರೀದಿಸಿದ್ದಾರೆ.
ಇದನ್ನೂ ಓದಿ:
‘ಆತ ಯಾರು ದಯವಿಟ್ಟು ಹೇಳಿ’; ಹುಡುಗನ ವಿಚಾರದಲ್ಲಿ ರಶ್ಮಿಕಾ ಮಂದಣ್ಣ ದುಂಬಾಲು ಬಿದ್ದ ಅಭಿಮಾನಿಗಳು
ರಶ್ಮಿಕಾ ಮಂದಣ್ಣ-ಅಮಿತಾಭ್ ಬಚ್ಚನ್ ಫೋಟೋ ಲೀಕ್; ‘ಗುಡ್ಬೈ’ ತಂಡದಲ್ಲಿ ಏನಾಗ್ತಿದೆ?




