ಅಂಬರೀಷ್​-ಸುಮಲತಾ ಹಾದಿಯಲ್ಲೇ ನಡೆಯಲಿದ್ದಾರಾ ಅಭಿಷೇಕ್​? ಚುನಾವಣೆಗೆ ಸ್ಪರ್ಧೆ ಮಾಡುವ ಸೂಚನೆ ನೀಡಿದ ಅಂಬಿ ಕುಡಿ

ಅಂಬರೀಷ್​-ಸುಮಲತಾ ಹಾದಿಯಲ್ಲೇ ನಡೆಯಲಿದ್ದಾರಾ ಅಭಿಷೇಕ್​? ಚುನಾವಣೆಗೆ ಸ್ಪರ್ಧೆ ಮಾಡುವ ಸೂಚನೆ ನೀಡಿದ ಅಂಬಿ ಕುಡಿ
ಅಪ್ಪ-ಅಮ್ಮನ ಹಾದಿಯಲ್ಲೇ ನಡೆಯಲಿದ್ದಾರೆ ಅಭಿಷೇಕ್​? ಚುನಾವಣೆಗೆ ಸ್ಪರ್ಧೆ ಮಾಡುವ ಸೂಚನೆ ನೀಡಿದ ಅಂಬಿ ಕುಡಿ

ಹುಳುಗನ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಹುಳುಗನ ಹಳ್ಳಿಗೆ ಅಭಿಷೇಕ್​ ತೆರಳಿದ್ದರು. ಈ ವೇಳೆ ಅವರು ಪರೋಕ್ಷವಾಗಿ ಚುನಾವಣೆಗೆ ಸ್ಪರ್ಧೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ.

TV9kannada Web Team

| Edited By: Apurva Kumar Balegere

Jul 30, 2021 | 10:36 AM


ಅಂಬರೀಷ್​ ಮೃತಪಟ್ಟ ನಂತರದಲ್ಲಿ ಸುಮಲತಾ ಅಂಬರೀಷ್​ ಅವರು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು. ಚುನಾವಣೆ ಪ್ರಚಾರದಲ್ಲಿ ಅಭಿಷೇಕ್​​ ಮುಂದೆ ನಿಂತಿದ್ದರು. ಈಗ ತಂದೆ-ತಾಯಿ ಹಾದಿಯನ್ನು ತಾವೂ ತುಳಿಯುವ ಸೂಚನೆಯನ್ನು ಅಭಿಷೇಕ್​ ನೀಡಿದ್ದಾರೆ. ‘ಜನ ಬಯಸಿದ್ರೆ ನಾನು ಚುನಾವಣೆಗೆ ಸ್ಪರ್ಧೆ ಮಾಡ್ತಿನಿ’ ಎಂದು ಹೇಳುವ ರಾಜಕೀಯಕ್ಕೆ ಬರುವ ಸೂಚನೆ ನೀಡಿದ್ದಾರೆ.

ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಹುಳುಗನ ಹಳ್ಳಿಗೆ ಅಭಿಷೇಕ್​ ತೆರಳಿದ್ದರು. ಈ ವೇಳೆ ಅವರು ಪರೋಕ್ಷವಾಗಿ ಚುನಾವಣೆಗೆ ಸ್ಪರ್ಧೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ‘ಭವಿಷ್ಯದಲ್ಲಿ ಏನೇನು ಬದಲಾವಣೆಯಾಗುತ್ತೋ ಯಾರಿಗೆ ಗೊತ್ತು. ಜನ ಬಯಸಿದ್ದೇ ಆದರೆ ನಾನು ಬರ್ತೀನಿ. ಮದ್ದೂರಿಗಾಗಲಿ, ಮಂಡ್ಯಗಾಗಲಿ ಜಿಲ್ಲೆಯಲ್ಲರೋ ಏಳೂ‌ ಕ್ಷೇತ್ರಗಳಿಗೂ ಒಳ್ಳೆಯ ಶಾಸಕರು ಸಿಗಬೇಕು. ಯಾರ ಮನೆಯವರು, ನನಗೆ ಬೇಕಾದವರು ಅಂತಲ್ಲ, ಒಟ್ಟಿನಲ್ಲಿ ಒಳ್ಳೆಯ ಜನಪ್ರತಿನಿಧಿಗಳು ಸಿಗಬೇಕು’ ಎಂದಿದ್ದಾರೆ ಅಭಿಷೇಕ್​.

ಭವಿಷ್ಯದಲ್ಲಿ ಏನಾಗುತ್ತದೆ ಎಂದು ಹೇಳೋಕೆ ಆಗಲ್ಲ ಎಂಬುದನ್ನು ಅಭಿಷೇಕ್​ ತಾಜಾ ಉದಾಹರಣೆ ಮೂಲಕ ವಿವರಿಸಿದ್ದಾರೆ. ‘ಕಳೆದ ವಾರ ಸಿಎಂ ಬದಲಾಗ್ತಾರೆ ಅಂತ ಯಾರಿಗಾದ್ರೂ ಗೊತ್ತಿತ್ತಾ? ಹೀಗಿರುವಾಗ ಭವಿಷ್ಯದ್ದು ಈಗಲೇ ಹೇಳೋಕೆ ಸಾಧ್ಯವೇ?’ ಎಂದು ಅಭಿಷೇಕ್​ ಪ್ರಶ್ನಿಸಿದ್ದಾರೆ. ‘ಈ ವೇಳೆ ಹೌದಣ್ಣ ಗೊತ್ತಿರಲಿಲ್ಲ. ಮುಖ್ಯಮಂತ್ರಿ ಬದಲಾಗ್ತಾರೆ ಅಂತ ಗೊತ್ತಿದ್ರೂನು ಬೊಮ್ಮಾಯಿ ಆಗ್ತಾರೆ ಅಂತ ಗೊತ್ತಿರಲಿಲ್ಲ ಅಣ್ಣ’ ಎಂದು ಅಭಿಮಾನಿಗಳು ನಕ್ಕಿದ್ದಾರೆ.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಪದೇಪದೇ ಸುಮಲತಾ ಹಾಗೂ ಅಂಬರೀಷ್​ ಕುಟುಂಬದ ವಿರುದ್ಧ ಹೇಳಿಕೆ ನೀಡಿದ್ದರು. ಈ ವಿಚಾರವಾಗಿ ತಾವು ಮಾತನಾಡುವುದಿಲ್ಲ ಎಂದಿದ್ದಾರೆ ಅಭಿಷೇಕ್​. ‘ಅವರು ಹೇಳಿಕೆ ನೀಡಿದರು ಎಂದ ಮಾತ್ರಕ್ಕೆ ನಾವು ಉತ್ತರಿಸಬೇಕೆಂದೇನು ಇಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ.

ಅಭಿಷೇಕ್​ ನಟನೆಯ ‘ಅಮರ್​’ ಸಿನಿಮಾ ತೆರೆಗೆ ಬಂದು ಎರಡು ವರ್ಷ ಕಳೆದಿದೆ. ಈಗ ‘ಬ್ಯಾಡ್​ ಮ್ಯಾನರ್ಸ್​’ ಸಿನಿಮಾದಲ್ಲಿ ಅಭಿಷೇಕ್​ ನಟಿಸುತ್ತಿದ್ದಾರೆ. ರಚಿತಾ ರಾಮ್​ ಕೂಡ ಸಿನಿಮಾದಲ್ಲಿ ನಟಿಸುತ್ತಿದ್ದು, ದುನಿಯಾ ಸೂರಿ ನಿರ್ದೇಶನ ಸಿನಿಮಾಗಿದೆ. ಸುಧೀರ್​ ಕೆ.ಎಂ. ನಿರ್ಮಾಣ,        ಚರಣ್​ ರಾಜ್​ ಸಂಗೀತ ಸಂಯೋಜನೆ ಸಿನಿಮಾಗಿದೆ.

ಇದನನ್ನೂ ಓದಿ:ಪದೇ ಪದೇ ನನ್ನ ತಂದೆಯ ಸಾವಿನ ವಿಚಾರ ತರಬೇಡಿ: ಅಭಿಷೇಕ್ ಅಂಬರೀಶ್ ಎಚ್.ಡಿ.ಕುಮಾರಸ್ವಾಮಿಗೆ ಮನವಿ

Follow us on

Related Stories

Most Read Stories

Click on your DTH Provider to Add TV9 Kannada