ಸಂಚಾರಿ ವಿಜಯ್​ ನಟನೆಯ ‘ಮೇಲೊಬ್ಬ ಮಾಯಾವಿ’ ಚಿತ್ರದಲ್ಲಿ ಚಂದ್ರಚೂಡ್​ ಹಾಡು-ಕುಣಿತ

TV9 Digital Desk

| Edited By: ಮದನ್​ ಕುಮಾರ್​

Updated on: Jul 29, 2021 | 5:24 PM

ಕರಾವಳಿಯಲ್ಲಿ ನಡೆದ ಸತ್ಯ ಕಥೆ ಆಧರಿಸಿ ‘ಮೇಲೊಬ್ಬ ಮಾಯಾವಿ’ ಸಿನಿಮಾ ತಯಾರಾಗಿದೆ. ಆಗಸ್ಟ್ ಕೊನೆಯ ವಾರದಲ್ಲಿ ಈ ಚಿತ್ರ ತೆರೆಗೆ ಬರಲಿದೆ.

ಸಂಚಾರಿ ವಿಜಯ್​ ನಟನೆಯ ‘ಮೇಲೊಬ್ಬ ಮಾಯಾವಿ’ ಚಿತ್ರದಲ್ಲಿ ಚಂದ್ರಚೂಡ್​ ಹಾಡು-ಕುಣಿತ
ಸಂಚಾರಿ ವಿಜಯ್​ ನಟನೆಯ ‘ಮೇಲೊಬ್ಬ ಮಾಯಾವಿ’ ಚಿತ್ರದಲ್ಲಿ ಚಂದ್ರಚೂಡ್​ ಹಾಡು-ಕುಣಿತ

Follow us on


ಪತ್ರಕರ್ತ, ಲೇಖಕನಾಗಿ ಮಾತ್ರವಲ್ಲದೆ ನಟ-ನಿರ್ದೇಶಕನಾಗಿಯೂ ಚಕ್ರವರ್ತಿ ಚಂದ್ರಚೂಡ್​ (Chakravarthy Chandrachud) ಗುರುತಿಸಿಕೊಂಡಿದ್ದಾರೆ. ಈಗ ಬಿಗ್​ ಬಾಸ್​ (Bigg Boss Kannada) ಮೂಲಕ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ಸಿಕ್ಕಿದೆ. ಮಿಡ್​ ವೀಕ್​ ಎಲಿಮಿನೇಷನ್​ನಲ್ಲಿ ಅವರು ಬಿಗ್​ ಬಾಸ್​ನಿಂದ ಹೊರಬಿದ್ದಿದ್ದಾರೆ. ಅದರ ಬೆನ್ನಲ್ಲೇ ಅವರು ಬರೆದ ಹೊಸ ಸಾಂಗ್​ ರಿಲೀಸ್​ ಆಗಿದೆ. ಸಂಚಾರಿ ವಿಜಯ್​ (Sanchari Vijay) ನಟನೆಯ ‘ಮೇಲೊಬ್ಬ ಮಾಯಾವಿ’ (Melobba Maayavi) ಸಿನಿಮಾದಲ್ಲಿ ಚಕ್ರವರ್ತಿ ಚಂದ್ರಚೂಡ್​ ಅವರು ಅಭಿನಯಿಸಿದ್ದಾರೆ. ಚಿತ್ರದ ಎಲ್ಲ ಹಾಡುಗಳಿಗೆ ಅವರು ಸಾಹಿತ್ಯ ಕೂಡ ಬರೆದಿದ್ದು, ಸಿನಿಮಾದ ಶೀರ್ಷಿಕೆ ಗೀತೆ ಈಗ ಬಿಡುಗಡೆ ಆಗಿದೆ.

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ್ ಅವರ ಹುಟ್ಟುಹಬ್ಬದ ಪ್ರಯುಕ್ತ ‘ಮೇಲೊಬ್ಬ ಮಾಯಾವಿ’ ಚಿತ್ರದ ಕಂಟೆಂಟ್ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಾಗಿತ್ತು. ಹರಳು ಮಾಫಿಯಾದ (gem mafia) ಕಥೆಯನ್ನು ಒಳಗೊಂಡಿರುವ ಮೋಷನ್ ಪೋಸ್ಟರ್ ಸಾಕಷ್ಟು ಕುತೂಹಲ ಕೆರಳಿಸಿತ್ತು. ಈಗ ಚಿತ್ರತಂಡ ಸಿನಿಮಾದ ಟೈಟಲ್ ವಿಡಿಯೋ ಸಾಂಗ್ ಅನ್ನು ಬಿಡುಗಡೆ ಮಾಡಿದೆ. ಬಿಗ್ ಬಾಸ್ ಖ್ಯಾತಿಯ ಚಕ್ರವರ್ತಿ ಚಂದ್ರಚೂಡ್ ಸಾಹಿತ್ಯ ಬರೆದಿರುವ ಈ ಹಾಡನ್ನು ಖ್ಯಾತ ಸಂಗೀತ ನಿರ್ದೇಶಕ ಎಲ್.ಎನ್. ಶಾಸ್ತ್ರೀ, ಹೇಮಂತ್ ಮತ್ತು ಶಮಿತಾ ಮಲ್ನಾಡ್ ಹಾಡಿದ್ದಾರೆ. ಎಲ್.ಎನ್. ಶಾಸ್ತ್ರೀಯವರು ತಮ್ಮ ಕೊನೆಯ ದಿನಗಳಲ್ಲಿ ಹಾಡಿದ ಈ ಹಾಡು ಅವರ ಅಭಿಮಾನಿಗಳಿಗೆ ಇಷ್ಟವಾಗುತ್ತಿದೆ.

ಕೆ. ಗಿರೀಶ್‌ ಕುಮಾರ್‌ ಸಂಕಲನ, ದೀಪಿತ್‌ ಬಿಜೈ ರತ್ನಾಕರ್‌ ಛಾಯಾಗ್ರಹಣ ಮಾಡಿರುವ ‘ಮೇಲೊಬ್ಬ ಮಾಯಾವಿ’ ಚಿತ್ರದ ಈ ಹಾಡಿಗೆ ರಾಮು ಅವರು ನೃತ್ಯ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಮಣಿಕಾಂತ್‌ ಕದ್ರಿ ಹಿನ್ನಲೆ ಸಂಗೀತ ನೀಡಿದ್ದಾರೆ. ಕರಾವಳಿಯಲ್ಲಿ ನಡೆದ ಸತ್ಯ ಕಥೆ ಆಧರಿಸಿ ಮೇಲೊಬ್ಬ ಮಾಯಾವಿ ಸಿನಿಮಾ ತಯಾರಾಗಿದೆ.  ಈ ಚಿತ್ರಕ್ಕೆ ಬಿ. ನವೀನ್ ಕೃಷ್ಣ ನಿರ್ದೇಶನ ಮಾಡಿದ್ದಾರೆ. ಶ್ರೀ ಕಟೀಲ್ ಸಿನಿಮಾಸ್ ಲಾಂಛನದಲ್ಲಿ ಭರತ್ ಹಾಗೂ ತನ್ವಿ ಅಮಿನ್ ಕೊಲ್ಯ ನಿರ್ಮಾಣ ಮಾಡಿದ್ದಾರೆ. ಆಗಸ್ಟ್ ತಿಂಗಳ ಕೊನೆಯ ವಾರದಲ್ಲಿ ಈ ಸಿನಿಮಾ ತೆರೆಗೆ ಬರಲಿದೆ.

ಸಂಚಾರಿ ವಿಜಯ್‌ ಜೊತೆಗೆ ಅನನ್ಯಾ ಶೆಟ್ಟಿ, ಚಕ್ರವರ್ತಿ ಚಂದ್ರಚೂಡ್‌, ಕೃಷ್ಣಮೂರ್ತಿ ಕವತ್ತಾರ್‌, ಎಮ್‌.ಕೆ. ಮಠ, ಬೆನಕ ನಂಜಪ್ಪ, ಮಾಸ್ಟರ್‌ ಲಕ್ಷ್ಮೀ ಅರ್ಪಣ್‌, ನವೀನ್‌ ಕುಮಾರ್‌, ಪವಿತ್ರಾ ಜಯರಾಮ್‌, ಮುಖೇಶ್‌, ಡಾ. ಮನೋನ್ಮಣಿ ಸೇರಿದಂತೆ ಸಾಕಷ್ಟು ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

ಇದನ್ನೂ ಓದಿ:

ಸಂಚಾರಿ ವಿಜಯ್​ ದಾನ ಮಾಡಿದ ಅಂಗಗಳು ಯಾವುವು? ಉಳಿದ ಜೀವಗಳೆಷ್ಟು? ಇಲ್ಲಿದೆ ಪ್ರಮಾಣ ಪತ್ರ

‘ಆ ಕೈಸನ್ನೆ ತೋರಿಸಿದ್ದಕ್ಕೆ ಕ್ಷಮೆ ಕೇಳುತ್ತೇನೆ’; ಪ್ರಿಯಾಂಕಾ ತಿಮ್ಮೇಶ್​ ಬಳಿ ಶಿರಬಾಗಿ ಕ್ಷಮೆ ಕೇಳಿದ ಚಕ್ರವರ್ತಿ ಚಂದ್ರಚೂಡ್​

ತಾಜಾ ಸುದ್ದಿ

Related Stories

Most Read Stories

Click on your DTH Provider to Add TV9 Kannada