AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಭಾಸ್​ ಚಿತ್ರದಲ್ಲಿ 10 ಬಾಲಿವುಡ್​ ಸೆಲೆಬ್ರಿಟಿಗಳು; ಸಂಭಾವನೆ ಮೊತ್ತವೇ 200 ಕೋಟಿ! ಯಾವುದು ಈ ಸಿನಿಮಾ?​

Prabhas: ಪ್ರಭಾಸ್​ ನಟನೆಯ ಈ ಚಿತ್ರದಲ್ಲಿ ವಿಲನ್​ ಪಾತ್ರಕ್ಕೆ ಬಾಲಿವುಡ್​ನ ಘಟಾನುಘಟಿ ನಟರನ್ನೇ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ದೀಪಿಕಾ ಪಡುಕೋಣೆ ಮತ್ತು ಅಮಿತಾಭ್​ ಬಚ್ಚನ್​ ಸೇರಿದಂತೆ 10 ಮಂದಿ ಬಾಲಿವುಡ್​ ಕಲಾವಿದರು ಇರಲಿದ್ದಾರೆ.

ಪ್ರಭಾಸ್​ ಚಿತ್ರದಲ್ಲಿ 10 ಬಾಲಿವುಡ್​ ಸೆಲೆಬ್ರಿಟಿಗಳು; ಸಂಭಾವನೆ ಮೊತ್ತವೇ 200 ಕೋಟಿ! ಯಾವುದು ಈ ಸಿನಿಮಾ?​
ಪ್ರಭಾಸ್​
ಮದನ್​ ಕುಮಾರ್​
|

Updated on: May 30, 2021 | 1:18 PM

Share

ಬಾಹುಬಲಿ ಸಿನಿಮಾ ಹಿಟ್​ ಆದ ಬಳಿಕ ನಟ ಪ್ರಭಾಸ್​ ಅವರ ಖ್ಯಾತಿ ವಿಶ್ಯಾದ್ಯಂತ ಹಬ್ಬಿದೆ. ಈಗ ಅವರು ಯಾವುದೇ ಸಿನಿಮಾ ಕೈಗೆತ್ತಿಕೊಂಡರೂ ಅದು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುವುದು ಗ್ಯಾರಂಟಿ. ಅಷ್ಟರಮಟ್ಟಿಗೆ ಅವರ ಹವಾ ಸೃಷ್ಟಿ ಆಗಿದೆ. ಬಾಲಿವುಡ್​ ಮಂದಿ ಕೂಡ ಪ್ರಭಾಸ್​ಗಾಗಿ ಓಡೋಡಿ ಬರುತ್ತಿದ್ದಾರೆ. ಪ್ರಭಾಸ್​ ನಟಿಸಲಿರುವ ಹೊಸ ಸಿನಿಮಾದಲ್ಲಿ ಹಿಂದಿ ಚಿತ್ರರಂಗದ ದೊಡ್ಡ ದೊಡ್ಡ ಕಲಾವಿದರೆಲ್ಲ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಈಗ ಕೇಳಿಬರುತ್ತಿದೆ.

‘ಮಹಾನಟಿ’ ಸಿನಿಮಾ ನಿರ್ದೇಶಿಸುವ ಮೂಲಕ ನಾಗ್​ ಅಶ್ವಿನ್​ ಅವರು ಭಾರಿ ಜನಪ್ರಿಯತೆ ಪಡೆದುಕೊಂಡರು. ಅವರೀಗ ಪ್ರಭಾಸ್​ ಜೊತೆ ಕೈ ಜೋಡಿಸಿದ್ದು ಹೊಸ ಸಿನಿಮಾ ಮಾಡುತ್ತಿದ್ದಾರೆ. ಆ ಚಿತ್ರಕ್ಕೆ ಬಾಲಿವುಡ್​ ಬೆಡಗಿ, ಕನ್ನಡತಿ ದೀಪಿಕಾ ಪಡುಕೋಣೆ ನಾಯಕಿ. ಇನ್ನೊಂದು ಮುಖ್ಯಭೂಮಿಕೆಯಲ್ಲಿ ಭಾರತೀಯ ಚಿತ್ರರಂಗದ ದಿಗ್ಗಜ ನಟ ಅಮಿತಾಭ್​ ಬಚ್ಚನ್​ ಅವರು ಅಭಿನಯಿಸುತ್ತಿದ್ದಾರೆ. ಪಾತ್ರವರ್ಗದ ತಾರಾ ಮೆರುಗು ಇಷ್ಟಕ್ಕೇ ನಿಂತಿಲ್ಲ. ಇನ್ನೂ ಹಲವು ಮಂದಿ ಸ್ಟಾರ್​ ಕಲಾವಿದರು ಈ ಚಿತ್ರಕ್ಕಾಗಿ ಬಿ-ಟೌನ್​ನಿಂದ ದಕ್ಷಿಣದತ್ತ ಆಗಮಿಸುತ್ತಿದ್ದಾರೆ.

ಈ ಚಿತ್ರಕ್ಕೆ ಇನ್ನೂ ಶೀರ್ಷಿಕೆ ಅಂತಿಮವಾಗಿಲ್ಲ. ಇದು ಪ್ರಭಾಸ್​ಗೆ 21ನೇ ಸಿನಿಮಾ ಆಗಲಿದೆ. ಈ ಚಿತ್ರದಲ್ಲಿ ವಿಲನ್​ ಪಾತ್ರಕ್ಕೆ ಬಾಲಿವುಡ್​ನ ಘಟಾನುಘಟಿ ಕಲಾವಿದರನ್ನೇ ಆಯ್ಕೆ ಮಾಡಿಕೊಳ್ಳಬೇಕು ಎಂದು ನಿರ್ದೇಶಕ ನಾಗ್​ ಅಶ್ವಿನ್​ ಪ್ಲ್ಯಾನ್​ ಮಾಡಿದ್ದಾರೆ ಎನ್ನಲಾಗಿದೆ. ಈಗಾಗಲೇ ಅವರು ಮಾತುಕತೆ ಕೂಡ ನಡೆಸಿದ್ದಾರೆ ಎಂಬ ಬಗ್ಗೆ ಮಾಹಿತಿ ಹರಿದಾಡುತ್ತಿದೆ. ಇನ್ನುಳಿದ 5-6 ಪಾತ್ರಗಳಲ್ಲಿ ಕೂಡ ಹಿಂದಿ ಚಿತ್ರರಂಗದ ಪ್ರಮುಖ ಕಲಾವಿದರು ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.

ಈ ಎಲ್ಲ ಕಲಾವಿದರನ್ನು ಕರೆಸುತ್ತಿರುವ ಕಾರಣ ಅವರ ಸಂಭಾವನೆಯೇ ಚಿತ್ರದ ಬಜೆಟ್​ನಲ್ಲಿ ಬಹುಭಾಗ ಆಕ್ರಮಿಸಿಕೊಳ್ಳಲಿದೆ. ಎಲ್ಲರ ಸಂಭಾವನೆ ಸೇರಿದರೆ ಬರೋಬ್ಬರಿ 200 ಕೋಟಿ ರೂ. ಆಗಲಿದೆ ಎನ್ನುತ್ತಿವೆ ಮೂಲಗಳು! ಇನ್ನು, ಸಿನಿಮಾ ನಿರ್ಮಾಣಕ್ಕೆ ತಗುಲುವ ಖರ್ಚು ಬೇರೆ. ಕಾಲ್ಪನಿಕ ಮೂರನೇ ಮಹಾಯುದ್ಧದ ಹಿನ್ನೆಲೆಯಲ್ಲಿ ಈ ಸಿನಿಮಾದ ಕಥೆ ಸಾಗಲಿದೆ. ಭರ್ಜರಿ ಆ್ಯಕ್ಷನ್​ ಸನ್ನಿವೇಶಗಳ ಇರಲಿವೆ. ಹಾಗಾಗಿ ಇದು ಪ್ರಭಾಸ್​ ವೃತ್ತಿ ಜೀವನಕ್ಕೆ ಅತೀ ದುಬಾರಿ ಸಿನಿಮಾ ಆಗಲಿದೆ. ಈ ಎಲ್ಲ ಕಾರಣಗಳಿಗಾಗಿ ಈ ಚಿತ್ರದ ಮೇಲೆ ಅಭಿಮಾನಿಗಳ ಬಳಗದಲ್ಲಿ ಹೆಚ್ಚು ನಿರೀಕ್ಷೆ ಸೃಷ್ಟಿ ಆಗಿದೆ.

ಇದನ್ನೂ ಓದಿ:

ಪ್ರಭಾಸ್​ ಸಿನಿಮಾದಲ್ಲಿ ಬಿಗ್​ ಬಾಸ್​ ಸ್ಪರ್ಧಿಗೆ ಅವಕಾಶ? ಜೋರಾಗಿ ಹಬ್ಬಿದ್ದ ಗಾಸಿಪ್​ನ ಅಸಲಿಯತ್ತು ಇಲ್ಲಿದೆ

ಪ್ರಭಾಸ್​ ಹಾಲಿವುಡ್​ಗೆ ಹೋದ್ರು ಅಂತ ಖುಷಿಪಟ್ಟ ಫ್ಯಾನ್ಸ್​; ಅದೆಲ್ಲ ಸಾಧ್ಯವಿಲ್ಲ ಎಂದ ಮಿಷನ್​ ಇಂಪಾಸಿಬಲ್ ​ ನಿರ್ದೇಶಕ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್