ಕೃಷಿ ಕೆಲಸದಲ್ಲಿ ಬ್ಯುಸಿ ಆದ ಖ್ಯಾತ ಫೈಟ್ ಮಾಸ್ಟರ್ ರವಿವರ್ಮ

ರವಿ ವರ್ಮ ತಮ್ಮ ಊರಿಗೆ ತೆರಳಿ ತೋಟದ ಕೆಲಸ ಮಾಡಿಕೊಂಡು ಹಾಯಾಗಿ ದಿನ ಕಳೆಯುತ್ತಿದ್ದಾರೆ. ಸದ್ಯ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

Rajesh Duggumane

| Edited By: Madan Kumar

May 30, 2021 | 3:46 PM

ಕೊರೊನಾ ವೈರಸ್​ನಿಂದ ಸಿನಿಮಾ ಕೆಲಸಗಳು ಅರ್ಧಕ್ಕೆ ನಿಂತಿವೆ. ಕೆಲ ಸ್ಟಾರ್​ಗಳು ಮನೆಯಲ್ಲಿ ಕುಳಿತರೆ ಇನ್ನೂ, ಕೆಲ ಸ್ಟಾರ್​ಗಳು ಕೊವಿಡ್​ ವಾರಿಯರ್​ ಆಗಿದ್ದಾರೆ. ಕಷ್ಟದಲ್ಲಿರುವವರ ಸಹಾಯಕ್ಕೆ ನಿಂತಿದ್ದಾರೆ. ಈ ಮಧ್ಯೆ ಕೆಲವರು ಕೃಷಿ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಕನ್ನಡದ ಖ್ಯಾತ ಫೈಟ್​ ಮಾಸ್ಟರ್ ರವಿವರ್ಮ ಲಾಕ್​ಡೌನ್​ ಸಂದರ್ಭದಲ್ಲಿ ಕೃಷಿ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ರವಿವರ್ಮ ತಮ್ಮ ಊರಿಗೆ ತೆರಳಿ ತೋಟದ ಕೆಲಸ ಮಾಡಿಕೊಂಡು ಹಾಯಾಗಿ ದಿನ ಕಳೆಯುತ್ತಿದ್ದಾರೆ. ಸದ್ಯ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಅನೇಕರು ರವಿವರ್ಮ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಹುಬೇಡಿಕೆಯ ಸಾಹಸ ನಿರ್ದೇಶಕರ ಪೈಕಿ ರವಿ ವರ್ಮ ಹೆಸರು ಕೂಡ ಮುಂಚೂಣಿಯಲ್ಲಿದೆ. ಇವರು ಕನ್ನಡ, ಹಿಂದಿ, ಮಲಯಾಳಂ, ತೆಲುಗು, ತಮಿಳು ಭಾಷೆಯ ಅನೇಕ ಸಿನಿಮಾಗಳಿಗೆ ಸಾಹಸ ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ:

Ashika Ranganath: ‘ಚುಟುಚುಟು’ ಬೆಡಗಿ ಆಶಿಕಾಗೆ ಈಗ ತೋಟದಲ್ಲಿ ಕೆಲಸ; ಲಾಕ್​ಡೌನ್​ನಲ್ಲಿ ಹೊಸ ಕಸುಬು

ಕಾಯಕವೇ ಕೈಲಾಸ; ವೀಕೆಂಡ್​ನಲ್ಲಿ ರೈತನಾದ ನಟ ಉಪೇಂದ್ರ

Follow us on

Click on your DTH Provider to Add TV9 Kannada