- Kannada News Entertainment Sandalwood ಕುಟುಂಬದವರ ಜತೆ ಸಿಂಪಲ್ ಆಗಿ ಜನ್ಮದಿನ ಆಚರಿಸಿಕೊಂಡ ರವಿಚಂದ್ರನ್; ಇಲ್ಲಿವೆ ಚಿತ್ರಗಳು
ಕುಟುಂಬದವರ ಜತೆ ಸಿಂಪಲ್ ಆಗಿ ಜನ್ಮದಿನ ಆಚರಿಸಿಕೊಂಡ ರವಿಚಂದ್ರನ್; ಇಲ್ಲಿವೆ ಚಿತ್ರಗಳು
ಕೊರೊನಾ ವೈರಸ್ ಹಾವಳಿ ಹೆಚ್ಚಾಗಿರುವುದರಿಂದ ಸಾರ್ವಜನಿಕವಾಗಿ ‘ಕ್ರೇಜಿ ಸ್ಟಾರ್’ ಹುಟ್ಟುಹಬ್ಬವನ್ನು ಆಚರಿಸಲು ಅಭಿಮಾನಿಗಳಿಗೆ ಸಾಧ್ಯವಾಗುತ್ತಿಲ್ಲ. ಸೋಶಿಯಲ್ ಮೀಡಿಯಾ ಮೂಲಕವೇ ಅವರಿಗೆ ಜನ್ಮದಿನದ ಶುಭ ಹಾರೈಸಲಾಗುತ್ತಿದೆ.
Updated on: May 30, 2021 | 7:42 PM

ಕನ್ನಡ ಚಿತ್ರರಂಗದ ಕನಸುಗಾರ ರವಿಚಂದ್ರನ್ ಅವರಿಗೆ ಇಂದು (ಮೇ 30) ಜನ್ಮದಿನ. ಇಂದು ಅವರು 60ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಸ್ಯಾಂಡಲ್ವುಡ್ನಲ್ಲಿ ಹಲವು ಹೊಸಹೊಸ ಕನಸುಗಳನ್ನು ಕಂಡು ಅವುಗಳನ್ನು ನನಸು ಮಾಡಿದ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ.

ಕೊರೊನಾ ವೈರಸ್ ಹಾವಳಿ ಹೆಚ್ಚಾಗಿರುವುದರಿಂದ ಸಾರ್ವಜನಿಕವಾಗಿ ‘ಕ್ರೇಜಿ ಸ್ಟಾರ್’ ಹುಟ್ಟುಹಬ್ಬವನ್ನು ಆಚರಿಸಲು ಅಭಿಮಾನಿಗಳಿಗೆ ಸಾಧ್ಯವಾಗುತ್ತಿಲ್ಲ. ಸೋಶಿಯಲ್ ಮೀಡಿಯಾ ಮೂಲಕವೇ ಅವರಿಗೆ ಜನ್ಮದಿನದ ಶುಭ ಹಾರೈಸಲಾಗುತ್ತಿದೆ.

ಇನ್ನು, ಮನೆಯಲ್ಲೇ ಇರುವ ರವಿಚಂದ್ರನ್ ಫ್ಯಾಮಿಲಿ ಜತೆ ಬರ್ತ್ಡೇ ಆಚರಿಸಿದ್ದಾರೆ. ಕುಟುಂಬ ಸದಸ್ಯರ ಜತೆ ಕೇಕ್ ಕತ್ತರಿಸಿ ಖುಷಿಪಟ್ಟಿದ್ದಾರೆ.

ನಟನೆ ಜೊತೆಗೆ ನಿರ್ದೇಶನದಲ್ಲೂ ರವಿಚಂದ್ರನ್ ಯಶಸ್ಸು ಕಂಡವರು. ಹಾಗಾಗಿ ಅವರ ನಿರ್ದೇಶನದ ಸಿನಿಮಾಗಳ ಬಗ್ಗೆ ಅಭಿಮಾನಿಗಳಿಗೆ ವಿಶೇಷವಾದ ನಿರೀಕ್ಷೆ ಇದ್ದೇ ಇರುತ್ತದೆ. ಸದ್ಯ ಅವರು ‘ರವಿ ಬೋಪಣ್ಣ’ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಆ ಬಳಿಕ ‘ಗಾಡ್’, ‘60’ ಮತ್ತು ‘ಬ್ಯಾಡ್ ಬಾಯ್ಸ್’ ಎಂಬ ಸಿನಿಮಾಗಳನ್ನು ನಿರ್ದೇಶಿಸಲಿದ್ದಾರೆ. ಈ ಬಗ್ಗೆ ಅವರು ಟೀಸರ್ ಮೂಲಕ ಸುಳಿವು ನೀಡಿದ್ದಾರೆ.

ಬಿಎಂ ಗಿರಿರಾಜ್ ನಿರ್ದೇಶನದ ‘ಕನ್ನಡಿಗ’ ಸಿನಿಮಾದಲ್ಲಿ ರವಿಚಂದ್ರನ್ ನಟಿಸುತ್ತಿದ್ದಾರೆ. ಕಳೆದ ವರ್ಷ ಲಾಕ್ಡೌನ್ ಸಡಿಲಿಕೆ ಆದಾಗ ಶೂಟಿಂಗ್ ಆರಂಭಿಸಿದ ಈ ಸಿನಿಮಾ ಸೆನ್ಸಾರ್ ಪ್ರಮಾಣಪತ್ರವನ್ನೂ ಪಡೆದುಕೊಂಡಿತ್ತು.
























