ನಟಿ ರಶ್ಮಿಕಾ ಮಂದಣ್ಣ ಎಷ್ಟು ಬ್ಯುಸಿ ಆಗಿದ್ದಾರೆ ಎಂಬುದನ್ನು ಹೊಸದಾಗಿ ಹೇಳಬೇಕಾಗಿಲ್ಲ. ದಕ್ಷಿಣ ಭಾರತದ ಚಿತ್ರರಂಗ ಮಾತ್ರವಲ್ಲದೇ ಬಾಲಿವುಡ್ನಲ್ಲೂ ಅವರು ಈಗ ಬಹುಬೇಡಿಕೆಯ ನಟಿಯಾಗಿ ಬೆಳೆದು ನಿಂತಿದ್ದಾರೆ. ಅಲ್ಲದೇ, ಹಲವು ಕಂಪನಿಗಳಿಗೆ ರಾಯಭಾರಿ ಆಗಿರುವ ಅವರು ಅನೇಕ ಜಾಹೀರಾತುಗಳಲ್ಲೂ ನಟಿಸುತ್ತಾರೆ. ಹೀಗಿರುವಾಗ ಅವರನ್ನು ಮನೆಯಿಂದ ಹೊರಗೆ ಹೋಗಲು ಅವರ ಮುದ್ದಿನ ನಾಯಿ ಬಿಡುತ್ತಿಲ್ಲ. ಬ್ಯಾಗ್ ಪ್ಯಾಕ್ ಮಾಡಿಕೊಂಡು ಕೆಲಸಕ್ಕೆ ಹೊರಡಬೇಕು ಎಂದು ರಶ್ಮಿಕಾ ಸಜ್ಜಾಗುತ್ತಿದ್ದಂತೆಯೇ ಅವರ ಸಾಕು ನಾಯಿ ಔರಾ ತಕರಾರು ತೆಗೆಯುತ್ತದೆ. ಆ ಬಗ್ಗೆ ಸ್ವತಃ ರಶ್ಮಿಕಾ ಅವರು ತಮ್ಮ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ.
ತಮ್ಮ ಮುದ್ದಿನ ನಾಯಿ ಔರಾ ಜೊತೆ ರಶ್ಮಿಕಾಗೆ ಸಿಕ್ಕಾಪಟ್ಟೆ ಆತ್ಮೀಯತೆ ಬೆಳೆದಿದೆ. ಒಮ್ಮೆ ಅವರ ಇನ್ಸ್ಟಾಗ್ರಾಮ್ ಖಾತೆಯತ್ತ ಕಣ್ಣು ಹಾಯಿಸಿದರೆ ಆ ಬಗ್ಗೆ ತಿಳಿಯುತ್ತದೆ. ಈಗ ಅವರ ವಾಲ್ನಲ್ಲಿ ಔರಾ ಫೋಟೋಗಳೇ ರಾರಾಜಿಸುತ್ತಿವೆ. ರಶ್ಮಿಕಾರನ್ನು ಈ ನಾಯಿ ತುಂಬಾ ಹಚ್ಚಿಕೊಂಡಿದೆ. ಎಷ್ಟರಮಟ್ಟಿಗೆಂದರೆ, ಅವರು ಶೂಟಿಂಗ್ ಸಲುವಾಗಿ ಮನೆಯಿಂದ ಹೊರಗೆ ಹೊರಟರೆ ಔರಾ ಸಹಿಸುತ್ತಿಲ್ಲ!
ಈ ಬಗ್ಗೆ ರಶ್ಮಿಕಾ ಮಂದಣ್ಣ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದರು. ‘ಪುಷ್ಪ ಶೂಟಿಂಗ್ಗೆ ತೆರಳಬೇಕು. ಆದರೆ ಔರಾ ಹೋಗಲು ಬಿಡುತ್ತಿಲ್ಲ’ ಎಂದು ಅವರು ಈ ವಿಡಿಯೋಗೆ ಕ್ಯಾಪ್ಷನ್ ನೀಡಿದ್ದರು. ರಶ್ಮಿಕಾ ಜೊತೆಗೆ ಸದ್ಯ ಈ ನಾಯಿ ಕೂಡ ಸಿಕ್ಕಾಪಟ್ಟೆ ಫೇಮಸ್ ಆಗಿದೆ. ರಶ್ಮಿಕಾ ಹಂಚಿಕೊಳ್ಳುವ ಈ ನಾಯಿಯ ಫೋಟೋ ಮತ್ತು ವಿಡಿಯೋಗಳನ್ನು ಕಂಡು ಅಭಿಮಾನಿಗಳು ಮಾತ್ರವಲ್ಲದೇ ಸೆಲೆಬ್ರಿಟಿಗಳು ಕೂಡ ಫಿದಾ ಆಗಿದ್ದಾರೆ.
View this post on Instagram
ಸಿನಿಮಾ ವಿಚಾರಕ್ಕೆ ಬರುವುದಾದರೆ ರಶ್ಮಿಕಾ ಮಂದಣ್ಣ ಈಗ ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ಅಲ್ಲು ಅರ್ಜುನ್ ಜೊತೆ ಅವರು ನಟಿಸಿರುವ ‘ಪುಷ್ಪ’ ಸಿನಿಮಾ ಎರಡು ಪಾರ್ಟ್ಗಳಲ್ಲಿ ಬರಲಿದೆ. ಮೊದಲ ಪಾರ್ಟ್ ಈ ವರ್ಷ ಕ್ರಿಸ್ಮಸ್ಗೆ ಬಿಡುಗಡೆ ಆಗಲಿದೆ. ಅತ್ತ, ಬಾಲಿವುಡ್ನಲ್ಲಿ ಸಿದ್ದಾರ್ಥ್ ಮಲ್ಹೋತ್ರಾ ಜೊತೆ ಅವರು ನಟಿಸಿರುವ ‘ಮಿಷನ್ ಮಜ್ನು’ ಚಿತ್ರಕ್ಕೆ ಶೂಟಿಂಗ್ ಮುಕ್ತಾಯ ಆಗಿದೆ. ಅಮಿತಾಭ್ ಬಚ್ಚನ್ ಜೊತೆ ‘ಗುಡ್ಬೈ’ ಚಿತ್ರದಲ್ಲೂ ರಶ್ಮಿಕಾ ಅಭಿನಯಿಸುತ್ತಿದ್ದಾರೆ. ‘ಪೊಗರು’ ಬಳಿಕ ಅವರು ಕನ್ನಡದ ಯಾವುದೇ ಸಿನಿಮಾವನ್ನೂ ಒಪ್ಪಿಕೊಂಡಿಲ್ಲ.
ಇದನ್ನೂ ಓದಿ:
ಅಲ್ಲು ಅರ್ಜುನ್ಗೆ ಸರಿಸಾಟಿಯಾಗಿ ನಿಲ್ಲೋಕೆ ಹೊರಟ ರಶ್ಮಿಕಾ ಮಂದಣ್ಣ; ಇದಕ್ಕೆ ಅವರು ಮಾಡ್ತಿರೋದೇನು?
ಜಿಮ್ನಲ್ಲಿ ಒಟ್ಟಾಗಿ ವರ್ಕೌಟ್ ಮಾಡಿದ ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ; ಫೋಟೋ ವೈರಲ್