‘ಮಗಳೆಂದು ಕಲ್ಪಿಸಿಕೊಂಡವಳ ಜೊತೆ ಅಂಥ ಕೆಲಸ ಮಾಡಲ್ಲ’; ಕೃತಿ ಶೆಟ್ಟಿ ಬಗ್ಗೆ ವಿಜಯ್​ ಸೇತುಪತಿ ಖಡಕ್​ ನಿರ್ಧಾರ

TV9 Digital Desk

| Edited By: ಮದನ್​ ಕುಮಾರ್​

Updated on:Sep 06, 2021 | 8:21 AM

ಕೃತಿ ಶೆಟ್ಟಿ ಜೊತೆ ಹೀರೋ​ ಆಗಿ ನಟಿಸುವಂತೆ ಹೊಸ ಚಿತ್ರತಂಡದವರು ವಿಜಯ್​ ಸೇತುಪತಿಗೆ ಆಫರ್​ ನೀಡಿದ್ದರು. ಅದನ್ನು ಮುಲಾಜಿಲ್ಲದೇ ಅವರು ತಿರಸ್ಕರಿಸಿದ್ದಾರೆ.

‘ಮಗಳೆಂದು ಕಲ್ಪಿಸಿಕೊಂಡವಳ ಜೊತೆ ಅಂಥ ಕೆಲಸ ಮಾಡಲ್ಲ’; ಕೃತಿ ಶೆಟ್ಟಿ ಬಗ್ಗೆ ವಿಜಯ್​ ಸೇತುಪತಿ ಖಡಕ್​ ನಿರ್ಧಾರ
ವಿಜಯ್​ ಸೇತುಪತಿ, ಕೃತಿ ಶೆಟ್ಟಿ

ದಕ್ಷಿಣ ಭಾರತದ ಸ್ಟಾರ್​ ನಟ ವಿಜಯ್​ ಸೇತುಪತಿ ಅವರಿಗೆ ದೊಡ್ಡಮಟ್ಟದ ಬೇಡಿಕೆ ಇದೆ. ಅವರ ಕಾಲ್​ಶೀಟ್​ಗಾಗಿ ನಿರ್ಮಾಪಕರು ಸಾಲುಗಟ್ಟಿ ನಿಲ್ಲುತ್ತಾರೆ. ಹೀರೋ, ವಿಲನ್​, ಪೋಷಕ ಪಾತ್ರ ಹೀಗೆ ಯಾವುದಾದರೂ ಸರಿ ಅದಕ್ಕೆ ನ್ಯಾಯ ಒದಗಿಸುವ ಕಲಾವಿದ ವಿಜಯ್​ ಸೇತುಪತಿ. ಒಟ್ಟಿನಲ್ಲಿ ಅವರ ಪಾತ್ರಕ್ಕೆ ಮಹತ್ವ ಇದ್ದರೆ ಅವರು ಖಂಡಿತಾ ಒಪ್ಪಿಕೊಳ್ಳುತ್ತಾರೆ. ಹಾಗಿದ್ದರೂ ಕೂಡ ಅವರು ಇತ್ತೀಚೆಗೆ ಒಂದು ಸಿನಿಮಾವನ್ನು ರಿಜೆಕ್ಟ್​ ಮಾಡಿದ್ದಾರೆ. ಆ ಚಿತ್ರಕ್ಕೆ ಕೃತಿ ಶೆಟ್ಟಿ ಹೀರೋಯಿನ್​. ತಾವು ಆ ಸಿನಿಮಾವನ್ನು ಒಪ್ಪಿಕೊಳ್ಳದೇ ಇರಲು ಕಾರಣ ಏನು ಎಂಬುದನ್ನು ವಿಜಯ್​ ಸೇತುಪತಿ ವಿವರಿಸಿದ್ದಾರೆ.

ವಿಜಯ್​ ಸೇತುಪತಿ ನಟನೆಯ ‘ಲಾಭಂ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಆ ಚಿತ್ರದ ಪ್ರಚಾರ ಕಾರ್ಯದ ವೇಳೆ ನೀಡಿದ ಸಂದರ್ಶನದಲ್ಲಿ ಅವರು ಕೃತಿ ಶೆಟ್ಟಿ ವಿಚಾರ ಬಾಯಿ ಬಿಟ್ಟಿದ್ದಾರೆ. ‘ಉಪ್ಪೆನಾ’ ಸಿನಿಮಾದಲ್ಲಿ ಕೃತಿ ಶೆಟ್ಟಿ ಮತ್ತು ವಿಜಯ್​ ಸೇತುಪತಿ ನಟಿಸಿದ್ದರು. ತಂದೆ-ಮಗಳ ಪಾತ್ರದಲ್ಲಿ ಅವರಿಬ್ಬರ ಕಾಂಬಿನೇಷನ್​ ಎಲ್ಲರಿಗೂ ಇಷ್ಟ ಆಗಿತ್ತು. ಅದೇ ಕೃತಿ ಜೊತೆ ಹೀರೋ​ ಆಗಿ ನಟಿಸುವಂತೆ ಹೊಸ ಚಿತ್ರತಂಡದವರು ವಿಜಯ್​ ಸೇತುಪತಿಗೆ ಆಫರ್​ ನೀಡಿದ್ದರಂತೆ. ಅದನ್ನು ಮುಲಾಜಿಲ್ಲದೇ ಅವರು ತಿರಸ್ಕರಿಸಿದ್ದಾರೆ.

‘ಕೃತಿಯನ್ನು ನಾನು ಮಗಳೆಂದು ಕಲ್ಪಿಸಿಕೊಂಡಿದ್ದೇನೆ. ಒಮ್ಮೆ ಮಗಳು ಎಂದುಕೊಂಡವಳ ಜೊತೆ ರೊಮ್ಯಾನ್ಸ್​ ಮಾಡಲು ಹೇಗೆ ಸಾಧ್ಯ? ಹೊಸ ಸಿನಿಮಾದವರು ನಮ್ಮ ಉಪ್ಪೆನಾ ಚಿತ್ರವನ್ನು ನೋಡಿರಲಿಲ್ಲ. ಹಾಗಾಗಿ ಅವರು ಈ ಆಫರ್​ ನೀಡಿದರು. ಆದರೆ ನಾನು ಆ ಪಾತ್ರ ಮಾಡುವುದಿಲ್ಲ ಅಂತ ಹೇಳಿದೆ. ಈಗ ಮಾತ್ರವಲ್ಲ, ಇಡೀ ಜೀವನದಲ್ಲೇ ಅದು ಸಾಧ್ಯವಿಲ್ಲ. ಉಪ್ಪೆನಾ ಸಿನಿಮಾದ ಕ್ಲೈಮ್ಯಾಕ್ಸ್​ ಶೂಟಿಂಗ್​ ವೇಳೆ ಕೃತಿಗೆ ನಾನು ಸ್ಪಷ್ಟವಾಗಿ ಹೇಳಿದ್ದೆ. ನಾನು ನಿನ್ನ ತಂದೆ ಅಂತ ತಿಳಿದುಕೋ. ಆಗ ನನ್ನ ಮಗನಿಗೆ 15 ವರ್ಷ ವಯಸ್ಸು. ಕೃತಿ ಕೂಡ 16 ಅಥವಾ 17ರ ಪ್ರಾಯದವಳು. ಆಕೆ ನನ್ನ ಮಗಳಿದ್ದಂತೆ’ ಎಂದು ವಿಜಯ್​ ಸೇತುಪತಿ ಹೇಳಿದ್ದಾರೆ.

ಸದ್ಯ ವಿಜಯ್​ ಸೇತುಪತಿ ಕೈಯಲ್ಲಿ ಹಲವಾರು ಸಿನಿಮಾಗಳಿವೆ. 12ಕ್ಕೂ ಅಧಿಕ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಳ್ಳುವ ಮೂಲಕ ಅತಿ ಹೆಚ್ಚು ಬ್ಯುಸಿಯಾಗಿರುವ ನಟರ ಸಾಲಿನಲ್ಲಿ ಅವರು ಮುಂಚೂಣಿಯಲ್ಲಿದ್ದಾರೆ. ತಾಪ್ಸಿ ಪನ್ನು ಜೊತೆ ಅವರು ನಟಿಸಿರುವ ‘ಅನಬೆಲ್​ ಸೇತುಪತಿ’ ಚಿತ್ರ ಸೆ.17ರಂದು ಡಿಸ್ನಿ ಪ್ಲಸ್​ ಹಾಟ್​ ಸ್ಟಾರ್​ನಲ್ಲಿ ಬಿಡುಗಡೆ ಆಗುತ್ತಿದೆ.

ಇದನ್ನೂ ಓದಿ:

ಬೆಂಗಳೂರಲ್ಲಿ ಜೊತೆಯಾಗಿ ಏನು ಮಾಡ್ತಿದ್ದಾರೆ ತಮನ್ನಾ-ವಿಜಯ್​ ಸೇತುಪತಿ? ಇದು ಸಿನಿಮಾ ಸಮಾಚಾರ ಅಲ್ಲವೇ ಅಲ್ಲ

ಕನ್ನಡದಲ್ಲಿ ಬರ್ತಿದೆ ವಿಜಯ್​ ಸೇತುಪತಿ-ತಾಪ್ಸಿ ಪನ್ನು ಸಿನಿಮಾ; ಸೆ.17ರಂದು ‘ಅನಬೆಲ್​ ಸೇತುಪತಿ’ ರಿಲೀಸ್​

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada