ಹಿರಿದಾಯಿತು ‘ಹೆಡ್​ ಬುಷ್​’ ತಂಡ; ಪ್ರಮುಖ ಪಾತ್ರದಲ್ಲಿ ವಸಿಷ್ಠ ಸಿಂಹ, ಶ್ರುತಿ ಹರಿಹರನ್​

ಶ್ರುತಿ ಹರಿಹರನ್​ ಹಾಗೂ ವಸಿಷ್ಠ ಸಿಂಹ ಇಬ್ಬರೂ ತಮ್ಮ ನಟನೆ ಮೂಲಕ ದೊಡ್ಡ ಪ್ರೇಕ್ಷಕರ ವರ್ಗ ಸೃಷ್ಟಿಸಿಕೊಂಡಿದ್ದಾರೆ. ಇಬ್ಬರೂ ಈಗ ಚಿತ್ರತಂಡ ಸೇರಿಕೊಂಡಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ.

ಹಿರಿದಾಯಿತು ‘ಹೆಡ್​ ಬುಷ್​’ ತಂಡ; ಪ್ರಮುಖ ಪಾತ್ರದಲ್ಲಿ ವಸಿಷ್ಠ ಸಿಂಹ, ಶ್ರುತಿ ಹರಿಹರನ್​

ಅಂಡರ್​ವರ್ಲ್ಡ್​ ಡಾನ್​ ಆಗಿದ್ದ ಜಯರಾಜ್​ ಜೀವನ ಕಥೆ ಆಧರಿಸಿ ಸ್ಯಾಂಡಲ್​ವುಡ್​ನಲ್ಲಿ ಸಿನಿಮಾ ಸಿದ್ಧಗೊಳ್ಳುತ್ತಿದೆ. ‘ಹೆಡ್​ ಬುಷ್​’ ಎಂದು ನಾಮಕರಣ ಮಾಡಿರುವ ಈ ಚಿತ್ರದಲ್ಲಿ ಜಯರಾಜ್​ ಪಾತ್ರದಲ್ಲಿ ಧನಂಜಯ​ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಮೇಲೆ ಪ್ರೇಕ್ಷಕರಿಗೆ ಸಾಕಷ್ಟು ನಿರೀಕ್ಷೆ ಇದೆ. ಹೀಗಿರುವಾಗಲೇ ಚಿತ್ರದ ಪಾತ್ರವರ್ಗ ಹಿರಿದಾಗಿದೆ. ನಟಿ ಶ್ರುತಿ ಹರಿಹರನ್​ ಹಾಗೂ ವಸಿಷ್ಠ ಸಿಂಹ ಚಿತ್ರತಂಡ ಸೇರಿಕೊಂಡಿದ್ದಾರೆ.

ಶ್ರುತಿ ಹರಿಹರನ್​ ಹಾಗೂ ವಸಿಷ್ಠ ಸಿಂಹ ಇಬ್ಬರೂ ತಮ್ಮ ನಟನೆ ಮೂಲಕ ದೊಡ್ಡ ಪ್ರೇಕ್ಷಕರ ವರ್ಗ ಸೃಷ್ಟಿಸಿಕೊಂಡಿದ್ದಾರೆ. ಇಬ್ಬರೂ ಈಗ ಚಿತ್ರತಂಡ ಸೇರಿಕೊಂಡಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ. ಅಲ್ಲದೆ, ಇವರ ಪಾತ್ರ ಹೇಗಿರಲಿದೆ ಎಂಬ ಬಗ್ಗೆಯೂ ಸಾಕಷ್ಟು ಕುತೂಹಲ ಮೂಡಿದೆ. ಧನಂಜಯ್ ಹಾಗೂ ವಸಿಷ್ಠ ಸಿಂಹ ‘ಟಗರು’ ಸಿನಿಮಾದಲ್ಲಿ ಒಟ್ಟಾಗಿ ತೆರೆ ಹಂಚಿಕೊಂಡಿದ್ದರು. ಈ ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್​ ಆಗಿತ್ತು. ಈ ಸಿನಿಮಾದಲ್ಲಿ ಇವರ ಕಾಂಬಿನೇಷನ್​ ವೀಕ್ಷಕರಿಗೆ ಇಷ್ಟವಾಗಿತ್ತು.

‘ಹೆಡ್​ ಬುಷ್​’ ತಂಡ ಹಿರಿದಾಗುತ್ತಲೇ ಇದೆ. ಇತ್ತೀಚೆಗೆ ಸಿನಿಮಾಗೆ ಪಂಜಾಬಿ ಬ್ಯೂಟಿ ಪಾಯಲ್​ ರಜ್​ಪೂತ್​  ಸೇರಿಕೊಂಡಿದ್ದರು. ಈ ಸಿನಿಮಾದಲ್ಲಿ ಜಯರಾಜ್​ ಗರ್ಲ್​​ಫ್ರೆಂಡ್​ ಆಗಿ ಪಾಯಲ್​ ಕಾಣಿಸಿಕೊಳ್ಳುತ್ತಿದ್ದಾರೆ. ಜಯರಾಜ್​ ಗರ್ಲ್​ಫ್ರೆಂಡ್​ ಈಗಲೂ ಪಂಜಾಬ್​ನಲ್ಲಿ ಇಬ್ಬರು ಮಕ್ಕಳೊಂದಿಗೆ ಬದುಕಿದ್ದಾರೆ. ವಿಶೇಷ ಎಂದರೆ  ಅವರನ್ನು ಭೇಟಿ ಮಾಡೋಕೆ ಪಾಯಲ್​  ಉತ್ಸುಕರಾಗಿದ್ದಾರೆ. 70-80ರ  ಅವಧಿಯಲ್ಲಿ ಈ ಕಥೆ ಸಾಗಲಿದೆ. ಶೂನ್ಯ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ.

ಇತ್ತೀಚೆಗೆ ಮಲಯಾಳಂ ನಟ ದುಲ್ಖರ್​ ಸಲ್ಮಾನ್​ ಸಿನಿಮಾದ ಫಸ್ಟ್​ ಲುಕ್​ ಟೀಸರ್​ ಹಂಚಿಕೊಂಡಿದ್ದರು. ‘ಹುಟ್ಟುಹಬ್ಬದ ಶುಭಾಶಯಗಳು ಧನಂಜಯ. ಅಂಡರ್ ವರ್ಲ್ಡ್ ಡಾನ್ ಎಂ.ಪಿ. ಜಯರಾಜ್ ಜೀವನಚರಿತ್ರೆಯಾದ ‘ಹೆಡ್ ಬುಷ್’ ಚಿತ್ರದ ಫಸ್ಟ್ ಲುಕ್ ಟೀಸರ್ ಇಲ್ಲಿದೆ’ ಎಂದು ಬರೆದುಕೊಂಡಿದ್ದರು ದುಲ್ಖರ್​.

ಧನಂಜಯ್​ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಸಲಗ, ಡಾಲಿ, ಹೆಡ್​ ಬುಷ್​, ರತ್ನನ್​ ಪ್ರಪಂಚ, ತೋತಾಪುರಿ, ಬಡವ ರಾಸ್ಕಲ್​, ಮಾನ್ಸೂನ್​ ರಾಗ, ಬೈರಾಗಿ, ಪುಷ್ಪ ಸಿನಿಮಾಗಳಲ್ಲಿ ಧನಂಜಯ್​ ನಟಿಸುತ್ತಿದ್ದಾರೆ.

ಇದನ್ನೂ ಓದಿ: Dhananjay: ಧನಂಜಯ್ ಬತ್ತಳಿಕೆ ಸೇರಿತು ಹೊಸ ಸಿನಿಮಾ; ಕುತೂಹಲ ಮೂಡಿಸುವ ಪೋಸ್ಟರ್ ಇಲ್ಲಿದೆ

​ಕನ್ನಡದ ಡಾಲಿ, ತೆಲುಗಿನಲ್ಲಿ ಜಾಲಿ; ಧನಂಜಯ ಹುಟ್ಟುಹಬ್ಬಕ್ಕೆ ‘ಪುಷ್ಪ’ ಚಿತ್ರತಂಡದಿಂದ ಫಸ್ಟ್​ಲುಕ್​ ರಿಲೀಸ್​

Click on your DTH Provider to Add TV9 Kannada