ಸಹಕಲಾವಿದರಿಗೆ ಡಾ.ರಾಜ್ ಹೇಗೆ ಬೆಂಬಲಿಸುತ್ತಿದ್ದರು?; ಅಣ್ಣಾವ್ರ ವ್ಯಕ್ತಿತ್ವ ತಿಳಿಸುವ ವಿಡಿಯೋ ಇಲ್ಲಿದೆ

TV9 Web
| Updated By: shivaprasad.hs

Updated on: Sep 05, 2021 | 6:56 PM

ಡಾಕ್ಟರ್ ರಾಜ್​ಕುಮಾರ್ ಕಲಾವಿದರಿಗೆ ಪಾಠಶಾಲೆಯಿದ್ದಂತೆ. ಅವರೊಂದಿಗೆ ಒಡನಾಡಿದ, ಕೆಲಸ ಮಾಡಿದ ವ್ಯಕ್ತಿಗಳು ರಾಜ್ ಅವರ ಸರಳ ವ್ಯಕ್ತಿತ್ವದ ಕುರಿತು, ಸಿನಿಮಾದ ಕುರಿತ ಶ್ರದ್ಧೆಯ ಕುರಿತು ಬಹಳಷ್ಟು ವಿವರಿಸಿದ್ದಾರೆ. ಈಗ ಕನ್ನಡದ ಹಿರಿಯ ನಟ, ಡಾ.ರಾಜ್ ಅವರೊಂದಿಗೆ ತೆರೆ ಹಂಚಿಕೊಂಡಿದ್ದ ಶಂಕರ್ ಭಟ್ ಟಿವಿ9ನೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ವಿಡಿಯೊ ನೋಡಿ.

ರಂಗಭೂಮಿಯಲ್ಲಿ ಸುಮಾರು 170ಕ್ಕೂ ಹೆಚ್ಚು ನಾಟಕಗಳು, ಕಿರುತೆರೆಯಲ್ಲಿ 3400ಕ್ಕೂ ಹೆಚ್ಚು ಧಾರವಾಹಿಗಳು, 350ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ತಮ್ಮದೇ ಆದ ಖ್ಯಾತಿಯನ್ನು ಗಳಿಸಿರುವ ಹಿರಿಯ ನಟ ಶಂಕರ್ ಭಟ್ ಟಿವಿ9ನೊಂದಿಗೆ ತಮ್ಮ ಸಿನಿಯಾತ್ರೆಯ ಬಗ್ಗೆ ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಡಾಕ್ಟರ್ ರಾಜ್​ಕುಮಾರ್ ಅವರಿಗೆ ಬೆಂಬಲ ನೀಡಿ, ಸ್ಫೂರ್ತಿ ನೀಡಿದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಹಾಗೆಯೇ ರಾಜ್ ಅವರು ಸೆಟ್​ನಲ್ಲಿ ಎಲ್ಲರೊಂದಿಗೆ ಬೆರೆತು ಹೇಗೆ ಸರಳವಾಗಿ ಇರುತ್ತಿದ್ದರು ಎಂಬುದನ್ನೂ ಅವರು ತಿಳಿಸಿದ್ದಾರೆ. ವಿಡಿಯೊ ನೋಡಿ.

ಇದನ್ನೂ ಓದಿ:

Puneeth Rajkumar: ಕೊಪ್ಪಳದ ಸ್ಥಳೀಯ ಕಲಾವಿದರ ಪ್ರದರ್ಶನಕ್ಕೆ ಮನಸೋತ ​ಅಪ್ಪು; ವಿಡಿಯೊ ನೋಡಿ

ಕಯಾಕಿಂಗ್, ಸೈಕ್ಲಿಂಗ್​ನಲ್ಲಿ ಸಮಂತಾ ಬ್ಯುಸಿ; ಆದರೂ ಅವರ ಪ್ರತೀ ಸ್ಟೇಟಸ್​ಗೆ ಹೊಸ ಅರ್ಥ ಕಲ್ಪಿಸುತ್ತಿದ್ದಾರೆ ಅಭಿಮಾನಿಗಳು

(Kannada’s senior actor Shankar Bhat shares his experience with Dr RajKumar)