Puneeth Rajkumar: ಕೊಪ್ಪಳದ ಸ್ಥಳೀಯ ಕಲಾವಿದರ ಪ್ರದರ್ಶನಕ್ಕೆ ಮನಸೋತ ​ಅಪ್ಪು; ವಿಡಿಯೊ ನೋಡಿ

ಸ್ಯಾಂಡಲ್​ವುಡ್​ನ ಪವರ್​ಸ್ಟಾರ್ ಪುನೀತ್ ರಾಜ್​ಕುಮಾರ್ ಸದ್ಯ ಜಾಲಿ ಮೂಡ್​ನಲ್ಲಿದ್ದಾರೆ. ಕೊಪ್ಪಳದ ರೆಸಾರ್ಟ್ ಒಂದರಲ್ಲಿ ತಂಗಿರುವ ಅವರು, ಅಲ್ಲಿನ ಸ್ಥಳೀಯ ಪ್ರತಿಭೆಗಳೊಂದಿಗೆ ಸಮಯ ಕಳೆದಿದ್ದಾರೆ. ಈ ವಿಡಿಯೊ ಈಗ ಅಭಿಮಾನಿಗಳ ಮನಗೆದ್ದಿದ್ದು, ಅಪ್ಪು ಸರಳ ವ್ಯಕ್ತಿತ್ವಕ್ಕೆ ಮನಸೋತಿದ್ದಾರೆ.

Puneeth Rajkumar: ಕೊಪ್ಪಳದ ಸ್ಥಳೀಯ ಕಲಾವಿದರ ಪ್ರದರ್ಶನಕ್ಕೆ ಮನಸೋತ ​ಅಪ್ಪು; ವಿಡಿಯೊ ನೋಡಿ
ಕಲಾವಿದರೊಂದಿಗೆ ಪುನೀತ್ ರಾಜ್​ಕುಮಾರ್
Follow us
TV9 Web
| Updated By: shivaprasad.hs

Updated on:Sep 05, 2021 | 6:24 PM

ಸ್ಯಾಂಡಲ್​ವುಡ್ ನಟ ಪುನೀತ್ ರಾಜ್​ಕುಮಾರ್ ಪ್ರಸ್ತುತ ಕೊಪ್ಪಳ ತಾಲೂಕಿನ ನಾರಾಯಣ ಪೇಟೆ ಬಳಿಯ ಲೀ ವುಡನ್​ ರೆಸಾರ್ಟ್​ನಲ್ಲಿ ತಂಗಿದ್ದಾರೆ. ಈ ವೇಳೆ ಅವರು ಸ್ಥಳೀಯ ಕಲಾವಿದರಿಂದ ತಮಟೆ, ಡೋಲು ಪ್ರದರ್ಶನvನ್ನು ವೀಕ್ಷಿಸಿದ್ದು, ಅವರ ಪ್ರತಿಭೆಗೆ ಬೆನ್ನು ತಟ್ಟಿ ಪ್ರೋತ್ಸಾಹ ನೀಡಿದ್ದಾರೆ. ಕಲಾವಿದರು ಪ್ರದರ್ಶನ ಮಾಡುತ್ತಿರುವ ವೇಳೆ, ತಮ್ಮ ಕ್ಯಾಮೆರಾದಿಂದ ದೃಶ್ಯಗಳನ್ನು ಸೆರೆಹಿಡಿದು ಅಪ್ಪು ಸಂಭ್ರಮಿಸಿದ್ದಾರೆ. ತುಂಗಭದ್ರಾ ನದಿ ದಡದಲ್ಲಿರುವ ಲೀ ವುಡನ್​ ರೆಸಾರ್ಟ್​ನಲ್ಲಿ ಅಪ್ಪು ಅವರನ್ನು ಕಂಡು ಅಭಿಮಾನಿಗಳು ಪುಳಕಿತಗೊಂಡಿದ್ದು, ಚಿತ್ರ ತೆಗೆದುಕೊಂಡು ಸಂಭ್ರಮಿಸಿದ್ದಾರೆ.

ಕಲಾವಿದರ ನುಡಿಸುವಿಕೆಗೆ ಫಿದಾ ಆದ ಪುನೀತ್; ವಿಡಿಯೊ ವರದಿ ಇಲ್ಲಿದೆ:

ಇತ್ತೀಚೆಗಷ್ಟೇ ಸಕ್ರೆಬೈಲಿನಲ್ಲಿ ಡಾಕ್ಯುಮೆಂಟರಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಪುನೀತ್:

ಪುನೀತ್ ರಾಜ್​ಕುಮಾರ್​ ಸರ್ಕಾರದ ಅನೇಕ ಡಾಕ್ಯುಮೆಂಟರಿ ಕಾರ್ಯಗಳಲ್ಲಿ ಸಕ್ರಿಯರಾಗಿ ಕೈಜೋಡಿಸಿದ್ದಾರೆ. ಇತ್ತೀಚೆಗೆ ಅವರು ಆನೆಗೆ ಸಂಬಂಧಿಸಿದ ಸರ್ಕಾರಿ ಡಾಕ್ಯುಮೆಂಟರಿ ಶೂಟಿಂಗ್ ಹಿನ್ನೆಲೆಯಲ್ಲಿ ಸಕ್ರೆಬೈಲ್​ಗೆ ಭೇಟಿ ನೀಡಿದ್ದರು. ಪುನೀತ್​ ರಾಜ್​ಕುಮಾರ್​ ಆಗಮಿಸುತ್ತಿರುವ ವಿಚಾರವನ್ನು ತಿಳಿದಿದ್ದ ಅಭಿಮಾನಿಗಳು ನೂರಾರು ಸಂಖ್ಯೆಯಲ್ಲಿ ನೆರೆದು, ನಟನನ್ನು ನೋಡಿ ಸಂತಸಪಟ್ಟಿದ್ದರು.

ಪುನೀತ್ ಆನೆಗಳನ್ನು ಮುದ್ದಾಡುವ ದೃಶ್ಯ, ಕುಂತಿ ಹಾಗೂ ಧನುಷ್ ಹೆಸರಿನ ಆನೆಗೆ ಆಹಾರ ನೀಡುವ ದೃಶ್ಯಗಳನ್ನು ಸೆರೆಹಿಡಿಯಲಾಗಿತ್ತು. ಪುನೀತ್​ ಅವರನ್ನು ನೋಡಲು ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರು. ಈ ವೇಳೆ ಅಭಿಮಾನಗಳ ಕೋರಿಕೆಗೆ ಅಪ್ಪು ಮಣಿದು, ಶೂಟಿಂಗ್​​ಗೆ ಬ್ರೇಕ್ ಕೊಟ್ಟು ಫ್ಯಾನ್ಸ್​ಗೆ ದರ್ಶನ ನೀಡಿದ್ದರು. ಆ ಸಮಯದಲ್ಲಿ ಅಭಿಮಾನಿಗಳಿಗೆ ಕೈಮುಗಿದು ಕೃತಜ್ಞತೆ ತೋರಿಸಿದ್ದರು ಅಪ್ಪು.

ಚಿತ್ರಗಳ ವಿಷಯಕ್ಕೆ ಬಂದರೆ ಪುನೀತ್ ಬತ್ತಳಿಕೆಯಲ್ಲಿ ಜೇಮ್ಸ್ ಹಾಗೂ ದ್ವಿತ್ವ ಚಿತ್ರಗಳಿವೆ. ಜೇಮ್ಸ್ ಚಿತ್ರದಲ್ಲಿ ಪ್ರಿಯಾ ಆನಂದ್ ಪುನೀತ್​ಗೆ ನಾಯಕಿಯಾಗಿ ನಟಿಸುತ್ತಿದ್ದು, ಚೇತನ್ ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ‘ದ್ವಿತ್ವ’ ಚಿತ್ರಕ್ಕೆ ಲೂಸಿಯಾ ಪವನ್ ಆಕ್ಷನ್ ಕಟ್ ಹೇಳುತ್ತಿದ್ದು, ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಲಿದೆ. ದಕ್ಷಿಣ ಭಾರತದ ಖ್ಯಾತ ನಟಿ ತ್ರಿಷಾ ಪುನೀತ್ ಜೊತೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಈ ಎರಡೂ ಚಿತ್ರಗಳ ಮೇಲೆ ಬಹಳಷ್ಟು ನಿರೀಕ್ಷೆಗಳಿವೆ.

ಇದನ್ನೂ ಓದಿ:

ಸೈಲೆಂಟ್​ ಆಗಿ ಎಂಗೇಜ್​ಮೆಂಟ್​ ಮುಗಿಸಿಕೊಂಡ ಬಾಲಿವುಡ್ ಖ್ಯಾತ​ ನಟ; ಸಾಕ್ಷ್ಯ ನೀಡಿದ ಫ್ಯಾನ್ಸ್​

ನಿನ್ನ ಬಳಿ ನನ್ನ ಹೃದಯವಿದೆ ಎಂದ ಕತ್ರಿನಾ ಕೈಫ್; ಫ್ಯಾನ್ಸ್ ಪ್ರತಿಕ್ರಿಯೆ ಹೇಗಿತ್ತು?

(Puneeth Rajkumar in Koppal and enjoyed folk music)

Published On - 6:22 pm, Sun, 5 September 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ