AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೈಲೆಂಟ್​ ಆಗಿ ಎಂಗೇಜ್​ಮೆಂಟ್​ ಮುಗಿಸಿಕೊಂಡ ಬಾಲಿವುಡ್ ಖ್ಯಾತ​ ನಟ; ಸಾಕ್ಷ್ಯ ನೀಡಿದ ಫ್ಯಾನ್ಸ್​

ವಿದ್ಯುತ್​ ‘ಕಮಾಂಡೋ’ ಸಿನಿಮಾದಲ್ಲಿ ಭರ್ಜರಿ ಆ್ಯಕ್ಷನ್​ ಮೆರೆದು ಅಭಿಮಾನಿಗಳಿಂದ ಮೆಚ್ಚುಗೆ ಪಡೆದರು. ‘ಫೋರ್ಸ್’, ‘ಜಂಗ್ಲಿ’ ಮೊದಲಾದ ಸಿನಿಮಾಗಳಲ್ಲೂ ವಿದ್ಯುತ್​ ಅಭಿನಯಿಸಿದ್ದಾರೆ.

ಸೈಲೆಂಟ್​ ಆಗಿ ಎಂಗೇಜ್​ಮೆಂಟ್​ ಮುಗಿಸಿಕೊಂಡ ಬಾಲಿವುಡ್ ಖ್ಯಾತ​ ನಟ; ಸಾಕ್ಷ್ಯ ನೀಡಿದ ಫ್ಯಾನ್ಸ್​
ಸೈಲೆಂಟ್​ ಆಗಿ ಎಂಗೇಜ್​ಮೆಂಟ್​ ಮುಗಿಸಿಕೊಂಡ ಬಾಲಿವುಡ್ ಖ್ಯಾತ​ ನಟ; ಸಾಕ್ಷ್ಯ ನೀಡಿದ ಫ್ಯಾನ್ಸ್​
TV9 Web
| Edited By: |

Updated on: Sep 05, 2021 | 5:59 PM

Share

ಬಾಲಿವುಡ್​ ನಟ ವಿದ್ಯುತ್​ ಜಮ್ವಾಲ್​ಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರ ಸಿನಿಮಾಗಳಲ್ಲಿ ಆ್ಯಕ್ಷನ್​ ದೃಶ್ಯಗಳಿಗೆ ಕೊರತೆ ಇರುವುದಿಲ್ಲ. ಇನ್ನು, ವಿದ್ಯುತ್​ ಫಿಟ್​ನೆಸ್​ ಬಗ್ಗೆಯಂತೂ ವಿವರಣೆಯೇ ಬೇಡ. ಈಗ ವಿದ್ಯುತ್​ ಸುದ್ದಿಯಲ್ಲಿದ್ದಾರೆ. ಹಾಗಂತ ಅದು ಸಿನಿಮಾ ವಿಚಾರಕ್ಕಲ್ಲ. ಬದಲಿಗೆ ಖಾಸಗಿ ಜೀವನದ ವಿಷಯದಲ್ಲಿ. ವಿದ್ಯುತ್​ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸದ್ಯ, ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋಗಳು ವೈರಲ್​ ಆಗಿವೆ.

ವಿದ್ಯುತ್​ ‘ಕಮಾಂಡೋ’ ಸಿನಿಮಾದಲ್ಲಿ ಭರ್ಜರಿ ಆ್ಯಕ್ಷನ್​ ಮೆರೆದು ಅಭಿಮಾನಿಗಳಿಂದ ಮೆಚ್ಚುಗೆ ಪಡೆದರು. ‘ಫೋರ್ಸ್’, ‘ಜಂಗ್ಲಿ’ ಮೊದಲಾದ ಸಿನಿಮಾಗಳಲ್ಲೂ ವಿದ್ಯುತ್​ ಅಭಿನಯಿಸಿದ್ದಾರೆ. ಈಗ ಗರ್ಲ್​​ಫ್ರೆಂಡ್​, ಫ್ಯಾಷನ್​ ಡಿಸೈನರ್​ ನಂದಿತಾ ಜತೆ ವಿದ್ಯುತ್​ ಗುಟ್ಟಾಗಿ ಎಂಗೇಜ್​ಮೆಂಟ್​ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಅಭಿಮಾನಿಗಳು ಸಾಕ್ಷ್ಯ ಕೂಡ ನೀಡಿದ್ದಾರೆ.

ವಿದ್ಯುತ್​ ಹಾಗೂ ನಂದಿತಾ ಇತ್ತೀಚೆಗೆ ಆಗ್ರಾದ ತಾಜ್ ​ಮಹಲ್​ಗೆ ಭೇಟಿ ನೀಡಿದ್ದರು. ಅಷ್ಟೇ ಅಲ್ಲ, ಅಲ್ಲಿ ಫೋಟೋಗೆ ಅವರು ಪೋಸ್​​ ಕೊಟ್ಟಿದ್ದಾರೆ. ಮೂರು ದಿನಗಳ ಹಿಂದೆ ನಿಶ್ಚಿತಾರ್ಥ ನಡೆದಿದ್ದು, ಈಗ ಅವರು ತಾಜ್​ ಮಹಲ್​ಗೆ ಭೇಟಿ ನೀಡಿದ್ದಾರೆ ಎನ್ನಲಾಗುತ್ತಿದೆ. ತಾಜ್​ ಮಹಲ್​ ಪ್ರೀತಿಯ ಸಂಕೇತ. ಇದೇ ಕಾರಣಕ್ಕೆ ವಿದ್ಯುತ್​ ಹಾಗೂ ನಂದಿತಾ ಇಲ್ಲಿಗೆ ತೆರಳಿದ್ದರು ಎಂಬ ಸುದ್ದಿ ಹರಿದಾಡಿದೆ. ತಾಜ್​ ಮಹಲ್​ ಎದುರು ನಿಂತಿರುವ ಫೋಟೋದಲ್ಲಿ ನಂದಿತಾ ಕೈನ ಉಂಗುರ ಹೈಲೈಟ್​ ಆಗಿದೆ. ಈ ಉಂಗುರವನ್ನು ಹೈಲೈಟ್​ ಮಾಡಿ ಫೋಟೋಗಳನ್ನು ವೈರಲ್​​ ಮಾಡಲಾಗುತ್ತಿದೆ.

ಸಿನಿಮಾ ವಿಚಾರಕ್ಕೆ ಬರೋದಾದರೆ, ವಿದ್ಯುತ್​ ಸಿನಿಮಾ ಥಿಯೇಟರ್​​ನಲ್ಲಿ ಕೊನೆಯದಾಗಿ ತೆರೆಗೆ ಬಂದಿದ್ದು 2019ರಲ್ಲಿ. ‘ಕಮಾಂಡೋ 3’ನಲ್ಲಿ ಅವರು ನಟಿಸಿದ್ದರು. 2020ರಲ್ಲಿ ತೆರೆಗೆ ಬಂದ ‘ಯಾರಾ’ ಜೀ5ನಲ್ಲಿ ರಿಲೀಸ್​ ಆಗಿತ್ತು. ಅದೇ ವರ್ಷ ‘ಖುದಾ ಹಾಫಿಜ್​: ಚಾಪ್ಟರ್​ 1’ರಲ್ಲಿ ಕಾಣಿಸಿಕೊಂಡರು. ಇದು ಡಿಸ್ನಿ ಪ್ಲಸ್​ ಹಾಟ್​ ಸ್ಟಾರ್​ನಲ್ಲಿ ರಿಲೀಸ್​ ಆಯಿತು. ಈ ವರ್ಷ ರಿಲೀಸ್​ ಆದ ‘ದಿ ಪವರ್’ಗೆ ಜೀ ಪ್ಲೆಕ್ಸ್​ ವೇದಿಕೆ ಕಲ್ಪಿಸಿಕೊಟ್ಟಿದೆ. ಸದ್ಯ, ಅವರು ‘ಖುದಾ ಹಾಫಿಜ್​: ಚಾಪ್ಟರ್​ 2’ ಸೇರಿ ಕೆಲ ಪ್ರಾಜೆಕ್ಟ್​ಗಳಲ್ಲಿ ಬ್ಯುಸಿ ಇದ್ದಾರೆ.

ಇದನ್ನೂ ಓದಿ: ಯಾವ ಬ್ರಾ ತೊಡುತ್ತೀರಿ ಎಂದು ಹೀರೋಯಿನ್ಅನ್ನು​ ಪ್ರಶ್ನಿಸಿದ ಅಭಿಮಾನಿ; ಮುಜುಗರ ಇಲ್ಲದೆ ಉತ್ತರಿಸಿದ 19 ವರ್ಷದ ನಟಿ

ನಿನ್ನ ಬಳಿ ನನ್ನ ಹೃದಯವಿದೆ ಎಂದ ಕತ್ರಿನಾ ಕೈಫ್; ಫ್ಯಾನ್ಸ್ ಪ್ರತಿಕ್ರಿಯೆ ಹೇಗಿತ್ತು?

Follow Us
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ