ನಿನ್ನ ಬಳಿ ನನ್ನ ಹೃದಯವಿದೆ ಎಂದ ಕತ್ರಿನಾ ಕೈಫ್; ಫ್ಯಾನ್ಸ್ ಪ್ರತಿಕ್ರಿಯೆ ಹೇಗಿತ್ತು?

ನಿನ್ನ ಬಳಿ ನನ್ನ ಹೃದಯವಿದೆ ಎಂದ ಕತ್ರಿನಾ ಕೈಫ್; ಫ್ಯಾನ್ಸ್ ಪ್ರತಿಕ್ರಿಯೆ ಹೇಗಿತ್ತು?
ನಿನ್ನ ಬಳಿ ನನ್ನ ಹೃದಯವಿದೆ ಎಂದ ಕತ್ರಿನಾ ಕೈಫ್; ಅವರು ಯಾರು?

‘ಟೈಗರ್​’ ಸರಣಿಯ ಎರಡು ಚಿತ್ರಗಳ ಕಥೆ ನಡೆದಿದ್ದು ವಿದೇಶದಲ್ಲೇ. ಈಗ ‘ಟೈಗರ್​ 3’ ಸಿನಿಮಾ ಕಥೆ ಕೂಡ ವಿದೇಶದಲ್ಲೇ ನಡೆಯುತ್ತಿದೆ. ಹೀಗಾಗಿ, ಕೆಲ ರಾಷ್ಟ್ರಗಳನ್ನು ಆಯ್ಕೆ ಮಾಡಿಕೊಂಡು ಶೂಟಿಂಗ್​ ಮಾಡಲಾಗುತ್ತಿದೆ.

TV9kannada Web Team

| Edited By: Rajesh Duggumane

Sep 05, 2021 | 5:40 PM

ನಟಿ ಕತ್ರಿನಾ ಕೈಫ್​ ರಿಲೇಶನ್​ಶಿಪ್​ ವಿಚಾರದಲ್ಲಿ ಸಾಕಷ್ಟು ಸುದ್ದಿಯಾಗುತ್ತಾರೆ. ರಣಬೀರ್​ ಕಪೂರ್​, ಸಲ್ಮಾನ್​ ಖಾನ್ ನಂತರ ನಟ ವಿಕ್ಕಿ ಕೌಶಲ್​ ಜತೆ ಕತ್ರಿನಾ ರಿಲೇಶನ್​ಶಿಪ್​ನಲ್ಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಲೇ ಇದೆ. ಹೀಗಿರುವಾಗಲೇ ಕತ್ರಿನಾ ನಿನ್ನ ಬಳಿ ನನ್ನ ಹೃದಯವಿದೆ ಎಂದಿರುವ ಪೋಸ್ಟ್​ ಸಾಕಷ್ಟು ವೈರಲ್​ ಆಗುತ್ತಿದೆ.

ಕೊವಿಡ್ ಎರಡನೇ ಅಲೆ​ ಕಾರಣದಿಂದ ಸಿನಿಮಾ ಶೂಟಿಂಗ್​ ನಿಂತಿತ್ತು. ಭಾರತದಲ್ಲಿ ಕೊರೊನಾ ವೈರಸ್​ ಹೆಚ್ಚಾದ ಕಾರಣಕ್ಕೆ ಅನೇಕ ರಾಷ್ಟ್ರಗಳು ಭಾರತದಿಂದ ಬರುವ ಪ್ರಯಾಣಿಕರಿಗೆ ನಿರ್ಬಂಧ ಹೇರಿದ್ದವು. ಆದರೆ, ಈಗ ಕೊವಿಡ್​ ಕಡಿಮೆ ಆಗಿದೆ. ಹೀಗಾಗಿ, ಬೇರೆ ದೇಶಗಳಿಗೆ ಭಾರತದ ವಿಮಾನಗಳು ತೆರಳುತ್ತಿವೆ. ಈ ಕಾರಣಕ್ಕೆ ಸಲ್ಮಾನ್​ ಖಾನ್​ ಹಾಗೂ ಕತ್ರಿನಾ ಕೈಫ್​ ನಟನೆಯ ‘ಟೈಗರ್​ 3’ ತಂಡ ವಿದೇಶದಲ್ಲಿ ಶೂಟಿಂಗ್​​ ಆರಂಭಿಸಿದೆ. ರಷ್ಯಾದಲ್ಲಿ ಶೂಟಿಂಗ್ ಪೂರ್ಣಗೊಳಿಸಿರುವ ಕತ್ರಿನಾ-ಸಲ್ಲು ಈಗ, ಟರ್ಕಿಗೆ ಪ್ರಯಾಣ ಬೆಳೆಸಿದ್ದಾರೆ.

‘ಟೈಗರ್​’ ಸರಣಿಯ ಎರಡು ಚಿತ್ರಗಳ ಕಥೆ ನಡೆದಿದ್ದು ವಿದೇಶದಲ್ಲೇ. ಈಗ ‘ಟೈಗರ್​ 3’ ಸಿನಿಮಾ ಕಥೆ ಕೂಡ ವಿದೇಶದಲ್ಲೇ ನಡೆಯುತ್ತಿದೆ. ಹೀಗಾಗಿ, ಕೆಲ ರಾಷ್ಟ್ರಗಳನ್ನು ಆಯ್ಕೆ ಮಾಡಿಕೊಂಡು ಶೂಟಿಂಗ್​ ಮಾಡಲಾಗುತ್ತಿದೆ. ಈಗ ‘ಟೈಗರ್​ 3’ ತಂಡ ಟರ್ಕಿಯಲ್ಲಿದೆ. ಅಲ್ಲಿರುವ ಫೋಟೋಗಳನ್ನು ಹಂಚಿಕೊಂಡಿರುವ ಕತ್ರಿನಾ, ‘ಟರ್ಕಿ ನಿನ್ನ ಜತೆ ನನ್ನ ಹೃದಯವಿದೆ’ ಎಂದಿದ್ದಾರೆ. ಈ ಫೋಟೋ ನೋಡಿ ಅಭಿಮಾನಿಗಳು ಸಖತ್​ ಖುಷಿಪಟ್ಟಿದ್ದಾರೆ.

View this post on Instagram

A post shared by Katrina Kaif (@katrinakaif)

‘ಟೈಗರ್​ 3’ ಮೇಲೆ ಅಭಿಮಾನಿಗಳು ಇಟ್ಟುಕೊಂಡಿರುವ ನಿರೀಕ್ಷೆಯ ಮಟ್ಟವನ್ನು ತಲುಪಲು ನಿರ್ಮಾಪಕರು ಕೋಟಿ ಕೋಟಿ ರೂ. ಹಣ ಖರ್ಚು ಮಾಡುತ್ತಿದ್ದಾರೆ. ‘ಟೈಗರ್​ 3’ ಚಿತ್ರದಲ್ಲಿ ವಿಲನ್​ ಇಂಟ್ರಡಕ್ಷನ್​ ಸೀನ್​ಗಾಗಿ ನಿರ್ಮಾಪಕರು ಬರೋಬ್ಬರಿ 10 ಕೋಟಿ ರೂ. ಖರ್ಚು ಮಾಡುತ್ತಿದ್ದಾರೆ ಎನ್ನುವ ಸುದ್ದಿ ಇತ್ತೀಚೆಗೆ ಹರಿದಾಡಿತ್ತು.

‘ಏಕ್​ ಥಾ ಟೈಗರ್​’, ‘ಟೈಗರ್​ ಜಿಂದಾ ಹೈ’ ಬಳಿಕ ಟೈಗರ್​ ಸರಣಿಯಲ್ಲಿ ಮೂಡಿಬರುತ್ತಿರುವ ಮೂರನೇ ಸಿನಿಮಾ ಇದಾಗಿದ್ದು, ಈ ಬಾರಿಯೂ ಸಲ್ಮಾನ್​ ಖಾನ್​ಗೆ ಜೋಡಿಯಾಗಿ ಕತ್ರಿನಾ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಶಾರುಖ್​ ಖಾನ್​ ಕೂಡ ಒಂದು ಅತಿಥಿ ಪಾತ್ರ ಮಾಡಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಈ ಬಗ್ಗೆ ಚಿತ್ರತಂಡದ ಕಡೆಯಿಂದ ಇನ್ನಷ್ಟೇ ಅಧಿಕೃತ ಮಾಹಿತಿ ಸಿಗಬೇಕಿದೆ.

ಇದನ್ನೂ ಓದಿ: ಸುದೀಪ್ ‘ವಿಕ್ರಾಂತ್ ರೋಣ’ಗೆ ಸಿಕ್ತು ಸಲ್ಮಾನ್ ಖಾನ್ ಹೊಗಳಿಕೆ; ಇದು ಕಿಚ್ಚನ ಫ್ಯಾನ್ಸ್ ಖುಷಿಪಡುವ ವಿಚಾರ

ಹೃತಿಕ್ ರೋಶನ್, ಕತ್ರಿನಾ ಕೈಫ್ ಇದ್ದ ಜೊಮೆಟೊ ಜಾಹೀರಾತಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ಷೇಪ: ಸಮರ್ಥಿಸಿಕೊಂಡ ಕಂಪನಿ

Follow us on

Related Stories

Most Read Stories

Click on your DTH Provider to Add TV9 Kannada