ಹೃತಿಕ್ ರೋಶನ್, ಕತ್ರಿನಾ ಕೈಫ್ ಇದ್ದ ಜೊಮೆಟೊ ಜಾಹೀರಾತಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ಷೇಪ: ಸಮರ್ಥಿಸಿಕೊಂಡ ಕಂಪನಿ

ಒಂದು ಆರ್ಡರ್​ನಿಂದ ಮತ್ತೊಂದು ಆರ್ಡರ್ ನಡುವೆ ವಿಶ್ರಾಂತಿಗೆ ಅವಕಾಶವೇ ಇಲ್ಲದಂತೆ ಜೊಮೆಟೊ ಡೆಲಿವರಿ ಪ್ರತಿನಿಧಿಗಳು ಹೈರಾಣಾಗುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ಷೇಪಿಸಿದ್ದಾರೆ.

ಹೃತಿಕ್ ರೋಶನ್, ಕತ್ರಿನಾ ಕೈಫ್ ಇದ್ದ ಜೊಮೆಟೊ ಜಾಹೀರಾತಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ಷೇಪ: ಸಮರ್ಥಿಸಿಕೊಂಡ ಕಂಪನಿ
ಜೊಮೆಟೊ ಜಾಹಿರಾತಿನಲ್ಲಿ ಹೃತಿಕ್ ರೋಶನ್ ಹಾಗೂ ಕತ್ರಿನಾ ಕೈಫ್
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Aug 31, 2021 | 4:15 PM

ಬೆಂಗಳೂರು: ಖ್ಯಾತ ಬಾಲಿವುಡ್ ತಾರೆಯರಾದ ಹೃತಿಕ್ ರೋಶನ್ ಹಾಗೂ ಕತ್ರಿನಾ ಕೈಫ್ ಅವರಿದ್ದ ಜೊಮೆಟೊ ಜಾಹಿರಾತಿನ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜೊಮೆಟೊ ಸಹ ಇದೀಗ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ ಜಾಹಿರಾತುಗಳನ್ನು ಸಮರ್ಥಿಸಿಕೊಂಡಿದೆ.

ಜೊಮೆಟೊ ಬಿಡುಗಡೆ ಮಾಡಿದ್ದ ಎರಡೂ ಜಾಹಿರಾತುಗಳ ಆಶಯ ಹೆಚ್ಚೂಕಡಿಮೆ ಒಂದೇ ರೀತಿಯಿದೆ. ಜೊಮೆಟೊ ವಿತರಕರೊಬ್ಬರು ಕಾಲಿಂಗ್ ಬೆಲ್ ಮಾಡಿದಾಗ ಹೃತಿಕ್ ರೋಶನ್ ಬಾಗಿಲು ತೆಗೆಯುತ್ತಾರೆ. ತನ್ನನ್ನು ನೋಡಿ ಖುಷಿಪಡುವ ಜೊಮೆಟೊ ಪ್ರತಿನಿಧಿಯೊಂದಿಗೆ ಸೆಲ್ಫಿ ತೆಗೆಸಿಕೊಳ್ಳಲು ಹೃತಿಕ್ ಬಯಸುತ್ತಾರೆ. ಆದರೆ ಅವರು ಮೊಬೈಲ್ ತೆಗೆದುಕೊಂಡು ಬರುವಷ್ಟರಲ್ಲಿ ಜೊಮೆಟೊ ಪ್ರತಿನಿಧಿಗೆ ಮತ್ತೊಂದು ಆರ್ಡರ್ ಬಂದಿರುತ್ತೆ. ಸೆಲ್ಫಿ ಆಸೆಯನ್ನು ಹತ್ತಿಕ್ಕಿ ಅವರು ಅಲ್ಲಿಂದ ಹೊರಡುತ್ತಾರೆ.

ಹೀಗೆ ಹೊರಡುವಾಗ ‘ಹೃತಿಕ್ ರೋಶನ್ ಹೊ ಯಾ ಆಪ್, ಅಪ್ನೆ ಲಿಯೆ ಹರ್ ಕಸ್ಟಮರ್ ಹೈ ಸ್ಟಾರ್’ (ಹೃತಿಕ ರೋಶನ್ ಅಥವಾ ನೀವು. ನಮಗಂತೂ ಪ್ರತಿ ಗ್ರಾಹಕರೂ ಸ್ಟಾರ್) ಎಂಬ ಮಾತು ಹಿನ್ನೆಲೆಯಲ್ಲಿ ಕೇಳಿ ಬರುತ್ತದೆ.

ಕತ್ರಿನಾ ಕೈಫ್ ಕಾಣಿಸಿಕೊಂಡಿರುವ ಜಾಹೀರಾತಿನಲ್ಲಿ ಸಣ್ಣ ವ್ಯತ್ಯಾಸವಿದೆ. ಜೊಮೆಟೊ ಪ್ರತಿನಿಧಿಗೆ ಹುಟ್ಟುಹಬ್ಬದ ಕೇಕ್ ತಂದುಕೊಡುವುದಾಗಿ ಕತ್ರಿನಾ ಒಳಗೆ ಹೋಗುತ್ತಾರೆ. ಅವರು ಹೊರಗೆ ಬರುವಷ್ಟರಲ್ಲಿ ಜೊಮೆಟೊ ಪ್ರತಿನಿಧಿ, ಮತ್ತೊಂದು ಆರ್ಡರ್ ಡೆಲಿವರಿ ಮಾಡಲೆಂದು ಅಲ್ಲಿಂದ ಹೊರಟುಹೋಗಿರುತ್ತಾರೆ.

ಕಾರ್ಮಿಕರ ಮೇಲೆ ಶೋಷಣೆಯ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿರುವ ಸಂದರ್ಭದಲ್ಲಿ ಬಿಡುಗಡೆಯಾಗಿರುವ ಈ ಜಾಹೀರಾತುಗಳು ಹಲವರ ಕೆಂಗಣ್ಣಿಗೆ ಗುರಿಯಾಗಿದೆ. ಒಂದು ಆರ್ಡರ್​ನಿಂದ ಮತ್ತೊಂದು ಆರ್ಡರ್ ನಡುವೆ ವಿಶ್ರಾಂತಿಗೆ ಅವಕಾಶವೇ ಇಲ್ಲದಂತೆ ಜೊಮೆಟೊ ಡೆಲಿವರಿ ಪ್ರತಿನಿಧಿಗಳು ಹೈರಾಣಾಗುತ್ತಿದ್ದಾರೆ. ಈ ಜಾಹೀರಾತುಗಳು ಇದೇ ಧಾಟಿಯಲ್ಲಿವೆ ಎಂದು ಹಲವರು ಆಕ್ಷೇಪಿಸಿದ್ದಾರೆ.

ಸೆಲಬ್ರಿಟಿಗಳ ಜಾಹೀರಾತಿಗೆ ಹಣ ಖರ್ಚು ಮಾಡುವ ಕಂಪನಿಯು, ತನ್ನ ಪ್ರತಿನಿಧಿಗಳ ಯೋಗಕ್ಷೇಮಕ್ಕೆ ತಕ್ಕಷ್ಟು ಹಣ ವಿನಿಯೋಗ ಮಾಡುತ್ತಿಲ್ಲ ಎಂದು ಕೆಲವರು ಹೇಳಿದ್ದಾರೆ.

ಈ ಆಕ್ಷೇಪಗಳಿಗೆ ಪ್ರತಿಕ್ರಿಯಿಸಿರುವ ಜೊಮೆಟೊ ಕಂಪನಿಯು, ಈ ಜಾಹೀರಾತುಗಳ ಪರಿಕಲ್ಪನೆಗಳು 6 ತಿಂಗಳ ಹಿಂದೆಯೇ ಅಂತಿಮಗೊಂಡಿತ್ತು. ಡೆಲಿವರಿ ಪ್ರತಿನಿಧಿಗಳನ್ನು ನಾಯಕರಾಗಿ ಬಿಂಬಿಸುವುದು ನಮ್ಮ ಉದ್ದೇಶವಾಗಿತ್ತು. ಅವರ ಕೆಲಸಕ್ಕೆ ಘನತೆ ತಂದುಕೊಡುವುದು ಮತ್ತು ಗ್ರಾಹಕರೇ ನಮ್ಮ ಹಿರೊಗಳು ಎಂದು ಬಿಂಬಿಸುವ ಉದ್ದೇಶದಿಂದ ಈ ಜಾಹಿರಾತುಗಳನ್ನು ರೂಪಿಸಲಾಗಿತ್ತು. ಆದರೆ ಕೆಲವರು ನಮ್ಮ ಜಾಹಿರಾತುಗಳನ್ನು ತಪ್ಪಾಗಿ ವ್ಯಾಖ್ಯಾನಿಸಿದ್ದಾರೆ ಎಂದು ವಿಷಾದಿಸಿದೆ.

(Zomato Ad controversy Company Responds To Backlash Against Ads Featuring Hrithik Roshan Katrina Kaif)

ಇದನ್ನೂ ಓದಿ: ಜೊಮ್ಯಾಟೊದ 1.5 ಲಕ್ಷಕ್ಕೂ ಅಧಿಕ ಉದ್ಯೋಗಿಗಳಿಗೆ ಕೊವಿಡ್​ ಲಸಿಕೆ ಉಚಿತ; ಸಿಇಒ ದೀಪಿಂದರ್​ ಗೋಯಲ್ ಘೋಷಣೆ

ಇದನ್ನೂ ಓದಿ: ‘ಅಫ್ಘಾನ್​ ಹಿಂದು-ಸಿಖ್ಖ​​ರು ಭಾರತಕ್ಕೆ ಹೋಗಿ-ಬರಲು ನಾವು ಅಡಚಣೆ ಮಾಡೋದಿಲ್ಲ’ -ತಾಲಿಬಾನ್​ ವಕ್ತಾರ

Published On - 4:06 pm, Tue, 31 August 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ