‘ಅಫ್ಘಾನ್​ ಹಿಂದು-ಸಿಖ್ಖ​​ರು ಭಾರತಕ್ಕೆ ಹೋಗಿ-ಬರಲು ನಾವು ಅಡಚಣೆ ಮಾಡೋದಿಲ್ಲ’ -ತಾಲಿಬಾನ್​ ವಕ್ತಾರ

ಅಫ್ಘಾನ್​ನಲ್ಲಿರುವ ಹಿಂದು, ಸಿಖ್​​ರಿಗೂ ನಮ್ಮಿಂದ ಯಾವುದೇ ತೊಂದರೆ ಆಗುವುದಿಲ್ಲ ಎಂದು ತಾಲಿಬಾನ್ ಸಂಘಟನೆ ವಕ್ತಾರ ಜಬೀಹುಲ್ಲಾ ಮುಜಾಹಿದ್ದೀನ್​ ಹೇಳಿದ್ದಾನೆ.

‘ಅಫ್ಘಾನ್​ ಹಿಂದು-ಸಿಖ್ಖ​​ರು ಭಾರತಕ್ಕೆ ಹೋಗಿ-ಬರಲು ನಾವು ಅಡಚಣೆ ಮಾಡೋದಿಲ್ಲ’ -ತಾಲಿಬಾನ್​ ವಕ್ತಾರ
ಸಾಂಕೇತಿಕ ಚಿತ್ರ
Follow us
TV9 Web
| Updated By: Lakshmi Hegde

Updated on:Aug 31, 2021 | 3:09 PM

ಮಾನ್ಯ ಪ್ರಯಾಣ ದಾಖಲೆಗಳನ್ನು ಹೊಂದಿರುವ ಅಫ್ಘಾನ್​ ಸಿಖ್​ ಮತ್ತು ಹಿಂದುಗಳಿಗೆ ಭಾರತಕ್ಕೆ ತೆರಳಲು ಅನುಮತಿ ನೀಡಲಾಗುತ್ತದೆ ಎಂದು ತಾಲಿಬಾನಿಗಳು (Taliban Terrorists) ಹೇಳಿದ್ದಾಗಿ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಅಫ್ಘಾನ್​ನ ಹಿಂದು ಮತ್ತು ಸಿಖ್ ನಾಗರಿಕರು ಕಾಬೂಲ್​ ಏರ್​ಪೋರ್ಟ್ (Kabul Airport)​​ಗೆ ಬರಲು, ಅಲ್ಲಿಂದ ಭಾರತಕ್ಕೆ ಪ್ರಯಾಣ ಮಾಡಲು ಏನೋ ತೊಡಕು ಇಲ್ಲ. ಆದರೆ ಅವರು ಮಾನ್ಯವಾದ ಪ್ರಯಾಣ ದಾಖಲೆಗಳನ್ನು ಹೊಂದಿರಬೇಕು. ಹಿಂದು ಮತ್ತು ಸಿಖ್​ರು ಯಾವುದೇ ಧಾರ್ಮಿಕ ಕಾರ್ಯಕ್ರಮಗಳಿಗಾಗಿಯೂ ಭಾರತಕ್ಕೆ ಹೋಗಿ-ಬರಬಹುದು ಎಂದು ತಾಲಿಬಾನ್​ ವಕ್ತಾರ ಜಬೀಹುಲ್ಲಾಹ್​ ಮುಜಾಹಿದ್​ ಹೇಳಿದ್ದಾರೆ ಅಫ್ಘಾನ್​ ಮಾಧ್ಯಮಗಳು ವರದಿ ಮಾಡಿವೆ.

ಅಫ್ಘಾನಿಸ್ತಾನದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದು, ಸಿಖ್​ ಸೇರಿ ಬೇರೆ ಕೆಲವು ಸಮುದಾಯಗಳ ಭದ್ರತೆ ಬಗ್ಗೆ ಮಾತನಾಡಿದ ಜಬೀಹುಲ್ಲಾ ಮುಜಾಹಿದ್​, ಇತರ ಅಲ್ಪಸಂಖ್ಯಾತರಂತೆ ಅಫ್ಘಾನ್​ನಲ್ಲಿರುವ ಹಿಂದು, ಸಿಖ್​​ರಿಗೂ ನಮ್ಮಿಂದ ಯಾವುದೇ ತೊಂದರೆ ಆಗುವುದಿಲ್ಲ ಎಂದು ಹೇಳಿದ್ದಾರೆ.

ಈ ಹಿಂದೆ, ಅಫ್ಘಾನಿಸ್ತಾನದ ಹಿಂದು ಮತ್ತು ಸಿಖ್​ ಸಮುದಾಯದವರು ಕಾಬೂಲ್​ ಏರ್​ಪೋರ್ಟ್​ಗೆ ಬಂದು ಭಾರತದ ವಿಮಾನಗಳನ್ನು ಹತ್ತಲು ಮುಂದಾದರೆ ತಾಲಿಬಾನಿಗಳು ಅವರನ್ನು ತಡೆಯುತ್ತಿದ್ದಾರೆ ಎಂದು ವರದಿಯಾಗಿತ್ತು. ಸುಮಾರು 150 ಸಿಖ್​ ಮತ್ತು ಹಿಂದೂಗಳು ಭಾರತಕ್ಕೆ ಹೋಗಲು ಮುಂದಾಗಿದ್ದರು. ಆದರೆ ಅವರಿಗೆ ತಾಲಿಬಾನಿಗಳು ಅವಕಾಶ ನೀಡಲಿಲ್ಲ ಎಂದು ಕಾಬೂಲ್​ ಮೂಲಕ ಪರ್ವಾನ್​ ಸಮಿತಿ ಅಧ್ಯಕ್ಷೆ ಗುರ್ನಮ್​ ಸಿಂಗ್ ಸ್ಥಳೀಯ ಮಾಧ್ಯಮಗಳಿಗೆ ಹೇಳಿದ್ದರು. ಇದೀಗ ಗುರು ತೇಗ್​ ಬಹದ್ದೂರ್​ ಅವರ 400ನೇ ಜನ್ಮಜಯಂತಿ ನಿಮಿತ್ತ ಸಿಖ್​ ಸಮುದಾಯದವರು ಭಾರತಕ್ಕೆ ಪ್ರಯಾಣ ಬೆಳೆಸುವ ಅನಿವಾರ್ಯತೆ ಇದೆ. ಈ ಪ್ರಯಾಣಕ್ಕೆ ನಾವು ತೊಡಕು ಮಾಡುವುದಿಲ್ಲವೆಂದು ತಾಲಿಬಾನ್​ ಭರವಸೆ ನೀಡಿದೆ.

ಇದನ್ನೂ ಓದಿ: Pradeep Narwal: ಪ್ರೊ ಕಬಡ್ಡಿ ಲೀಗ್​ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಪ್ರದೀಪ್ ನರ್ವಾಲ್

ತಾಲಿಬಾನ್ ಬಗ್ಗೆ ಭಯವಿಲ್ಲ, ಯಾಕೆ ಹೆದರಬೇಕು? ಎಂದ ಕಾಬೂಲ್ ಶಾಲಾ ವಿದ್ಯಾರ್ಥಿನಿ

Published On - 2:51 pm, Tue, 31 August 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ