ಅಮೆರಿಕ ಪಡೆಯ ನಿರ್ಗಮನದ ನಂತರ ವ್ಯಕ್ತಿಯೊಬ್ಬನನ್ನು ಹೆಲಿಕಾಪ್ಟರ್ಗೆ ನೇತು ಹಾಕಿ ಹಾರಾಟ ನಡೆಸಿದ ತಾಲಿಬಾನ್
ಕಂದಹಾರ್ ಪ್ರಾಂತ್ಯದ ಮೇಲೆ ತಾಲಿಬಾನ್ ವಶದಲ್ಲಿರುವ ಅಮೆರಿಕದ ಮಿಲಿಟರಿ ಹೆಲಿಕಾಪ್ಟರ್ ಗೆ ಹಗ್ಗ ಕಟ್ಟಿ ಅದರಲ್ಲಿ ಓರ್ವ ವ್ಯಕ್ತಿ ತೂಗಾಡುತ್ತಿರುವುದನ್ನು ಈ ದೃಶ್ಯಗಳು ವಿಡಿಯೊದಲ್ಲಿವೆ. ನೆಲದಿಂದ ಚಿತ್ರೀಕರಿಸಿದ ವಿಡಿಯೊದಲ್ಲಿ ಹೆಲಿಕಾಪ್ಟರ್ ಗೆ ಕಟ್ಟಿದ ವ್ಯಕ್ತಿ ಬದುಕಿದ್ದಾನೆಯೇ ಇಲ್ಲವೇ ಎಂಬುದನ್ನು ಸ್ಪಷ್ಟವಾಗಿ ತೋರಿಸುವುದಿಲ್ಲ
ಕಾಬೂಲ್: ಅಮೆರಿಕದ ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್ ಗೆ ವ್ಯಕ್ತಿಯೊಬ್ಬನನ್ನು ನೇತು ಹಾಕಿ ಕಂದಹಾರ್ ಮೇಲೆ ಹಾರಾಡುತ್ತಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದೆ. ಕಂದಹಾರ್ ಪ್ರಾಂತ್ಯದಲ್ಲಿ ಗಸ್ತು ತಿರುಗಲು ವಶಪಡಿಸಿಕೊಂಡಿರುವ ಅಮೆರಿಕದ ಮಿಲಿಟರಿ ಹೆಲಿಕಾಪ್ಟರ್‌ನಲ್ಲಿ ಕ್ರೂರ ತಾಲಿಬಾನ್‌ಗಳು ಒಬ್ಬ ವ್ಯಕ್ತಿಯನ್ನು ಕೊಂದು ನೇತು ಹಾಕಿದ್ದಾರೆ ಎಂದು ಹಲವಾರು ಪತ್ರಕರ್ತರು ಈ ವಿಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಕಂದಹಾರ್ ಪ್ರಾಂತ್ಯದ ಮೇಲೆ ತಾಲಿಬಾನ್ ವಶದಲ್ಲಿರುವ ಅಮೆರಿಕದ ಮಿಲಿಟರಿ ಹೆಲಿಕಾಪ್ಟರ್ಗೆ ಹಗ್ಗ ಕಟ್ಟಿ ಅದರಲ್ಲಿ ಓರ್ವ ವ್ಯಕ್ತಿ ತೂಗಾಡುತ್ತಿರುವುದನ್ನು ಈ ದೃಶ್ಯಗಳು ವಿಡಿಯೊದಲ್ಲಿವೆ. ನೆಲದಿಂದ ಚಿತ್ರೀಕರಿಸಿದ ವಿಡಿಯೊದಲ್ಲಿ ಹೆಲಿಕಾಪ್ಟರ್ಗೆ ಕಟ್ಟಿದ ವ್ಯಕ್ತಿ ಬದುಕಿದ್ದಾನೆಯೇ ಇಲ್ಲವೇ ಎಂಬುದನ್ನು ಸ್ಪಷ್ಟವಾಗಿ ತೋರಿಸುವುದಿಲ್ಲ, ಆದರೆ ತಾಲಿಬಾನಿಗಳು ಅವರು ಕೊಂದ ವ್ಯಕ್ತಿಯ ದೇಹವನ್ನು ಕಟ್ಟಿರುವುದಾಗಿ ವರದಿಗಳು ಹೇಳಿವೆ.
ಆದಾಗ್ಯೂ ತಾಲಿಬಾನ್ನೊಂದಿಗೆ ಸಂಬಂಧ ಹೊಂದಿದೆಯೆಂದು ಹೇಳಿಕೊಳ್ಳುವ ಟ್ವಿಟರ್ ಖಾತೆಯಾದ ತಾಲಿಬ್ ಟೈಮ್ಸ್ ಈ ವಿಡಿಯೊ ಟ್ವೀಟ್ ಮಾಡಿ “ನಮ್ಮ ವಾಯುಪಡೆ! ಈ ಸಮಯದಲ್ಲಿ, ಇಸ್ಲಾಮಿಕ್ ಎಮಿರೇಟ್‌ನ ವಾಯುಪಡೆಯ ಹೆಲಿಕಾಪ್ಟರ್‌ಗಳು ಕಂದಹಾರ್ ನಗರದ ಮೇಲೆ ಹಾರುತ್ತಿವೆ ಮತ್ತು ನಗರದಲ್ಲಿ ಗಸ್ತು ತಿರುಗುತ್ತಿವೆ ಎಂದು ಬರೆದಿದೆ.
ಕಳೆದ ತಿಂಗಳು ಅಮೆರಿಕ ಅಫ್ಘಾನಿಸ್ತಾನಕ್ಕೆ ಕನಿಷ್ಠ 7 ಬ್ಲ್ಯಾಕ್ ಹಾಕ್ ಚಾಪರ್‌ಗಳನ್ನು ಪೂರೈಸಿದೆ ಎಂದು ಡೈಲಿ ಮೇಲ್ ಹೇಳಿದ.ಜೊತೆಗೆ 20 ವರ್ಷಗಳಲ್ಲಿ ನಿರ್ಮಿಸಿದ ದಾಸ್ತಾನು ಬೇರೆ ಇದೆ. ಅಫ್ಘಾನಿಸ್ತಾನದಲ್ಲಿ ಈಗ ಎಲ್ಲಾ ರಕ್ಷಣಾ ಸಾಧನಗಳನ್ನು ಕೈಬಿಡಲಾಗಿದೆ.
ಕಳೆದ ತಿಂಗಳು ಯುಎಸ್ ಅಫ್ಘಾನಿಸ್ತಾನಕ್ಕೆ ಕನಿಷ್ಠ 7 ಬ್ಲ್ಯಾಕ್ ಹಾಕ್ ಚಾಪರ್‌ಗಳನ್ನು ಪೂರೈಸಿದೆ ಎಂದು ಡೈಲಿ ಮೇಲ್ ಹೇಳಿದೆ, ಜೊತೆಗೆ 20 ವರ್ಷಗಳಲ್ಲಿ ನಿರ್ಮಿಸಿದ ದಾಸ್ತಾನು ಇದೆ. ಅಫ್ಘಾನಿಸ್ತಾನದಲ್ಲಿ ಈಗ ಎಲ್ಲಾ ರಕ್ಷಣಾ ಸಾಧನಗಳನ್ನು ಕೈಬಿಡಲಾಗಿದೆ.
ಮಂಗಳವಾರ ಆತುರದ ನಿರ್ಗಮನದ ನಂತರ ಅಮೆರಿಕ ಮಿಲಿಟರಿ ಅಂತಿಮ ವಿಮಾನವನ್ನು ಏರುವ ಮೊದಲು 73 ವಿಮಾನಗಳು, 27 ಹಮ್ವೀಗಳು, ಶಸ್ತ್ರಾಸ್ತ್ರ ವ್ಯವಸ್ಥೆಗಳು ಮತ್ತು ಇತರ ಹೈಟೆಕ್ ರಕ್ಷಣಾ ಸಾಧನಗಳನ್ನು ನಿಷ್ಕ್ರಿಯಗೊಳಿಸಿದೆ ಎಂದು ಹೇಳಿದೆ.
If this is what it looks like… the Taliban hanging somebody from an American Blackhawk… I could vomit. Joe Biden is responsible.
— Liz Wheeler (@Liz_Wheeler) August 30, 2021
ಕಾಬೂಲ್ ವಿಮಾನ ನಿಲ್ದಾಣದಿಂದ ಅಮೆರಿಕ ಸೈನ್ಯವನ್ನು ಹಿಂತೆಗೆದುಕೊಂಡ ಕೆಲವೇ ಗಂಟೆಗಳಲ್ಲಿ, ತಾಲಿಬಾನ್ ಆವರಣವನ್ನು ಪ್ರವೇಶಿಸಿ ಚಿನೂಕ್ ಚಾಪರ್‌ಗಳು ಮತ್ತು ಅಮೆರಿಕ ಸೈನ್ಯವು ಬಿಟ್ಟುಹೋದ ಇತರ ರಕ್ಷಣಾ ಸಾಧನಗಳನ್ನು ಪರೀಕ್ಷಿಸಿತು. ಬದರಿ 313 ಬೆಟಾಲಿಯನ್ ಹೋರಾಟಗಾರರು ಹೆಲಿಕಾಪ್ಟರ್‌ಗಳನ್ನು ಪರೀಕ್ಷಿಸುತ್ತಿರುವುದು ವಿಡಿಯೊದಲ್ಲಿದೆ.
VIDEO: US completes withdrawal from Afghanistan.
The United States’ 20-year war in Afghanistan comes to an end, with celebratory gunfire ringing out in Kabul as the final US troops depart pic.twitter.com/ywjJYqZNpL
— AFP News Agency (@AFP) August 31, 2021
ನಂತರ ತಾಲಿಬಾನ್ ಹೋರಾಟಗಾರರು ಕಾಬೂಲ್ ವಿಮಾನ ನಿಲ್ದಾಣದ ಮೇಲೆ ಹಿಡಿತ ಸಾಧಿಸಿದ ನಂತರ, ಕಾಬೂಲ್ ವಿಮಾನ ನಿಲ್ದಾಣದ ರನ್ ವೇಯಲ್ಲಿ ತಾಲಿಬರು ಕಾರುಗಳು ಮತ್ತು ಇತರ ವಾಹನಗಳನ್ನು ರೇಸ್ ಮಾಡುವ ವಿಡಿಯೊಗಳು ಹೊರಹೊಮ್ಮಿದವು. ಅಫ್ಘಾನಿಸ್ತಾನದಲ್ಲಿ 20 ವರ್ಷಗಳ ಯುದ್ಧದ ನಂತರ ವಿಜಯವನ್ನು ಘೋಷಿಸಲು ತಾಲಿಬಾನ್ ನಾಯಕರು ಸಾಂಕೇತಿಕವಾಗಿ ರನ್ ವೇ ಮೇಲೆ ನಡೆದರು.
ಇದನ್ನೂ ಓದಿ: ‘ಅಫ್ಘಾನ್ ಹಿಂದು-ಸಿಖ್ಖರು ಭಾರತಕ್ಕೆ ಹೋಗಿ-ಬರಲು ನಾವು ಅಡಚಣೆ ಮಾಡೋದಿಲ್ಲ’ -ತಾಲಿಬಾನ್ ವಕ್ತಾರ
ಇದನ್ನೂ ಓದಿ: ತಾಲಿಬಾನ್ ಬಗ್ಗೆ ಭಯವಿಲ್ಲ, ಯಾಕೆ ಹೆದರಬೇಕು? ಎಂದ ಕಾಬೂಲ್ ಶಾಲಾ ವಿದ್ಯಾರ್ಥಿನಿ
(Taliban fly US Black Hawk helicopter with body hanging from rope Kandahar in Afghanistan)
Published On - 4:30 pm, Tue, 31 August 21