Sign In

By signing in or creating an account, you agree with Associated Broadcasting Company's Terms & Conditions and Privacy Policy.

How to: ವಿರೂಪಗೊಂಡ, ಹರಿದ ನೋಟು ಎಟಿಎಂನಲ್ಲಿ ಸಿಕ್ಕರೆ ಬದಲಿಸಿಕೊಳ್ಳೋದು ಹೇಗೆ? ಇಲ್ಲಿದೆ ಮಾಹಿತಿ

ಎಟಿಎಂಗಳಲ್ಲಿ ವಿಥ್​ಡ್ರಾ ಮಾಡುವಾಗ ವಿರೂಪಗೊಂಡ, ಹರಿದ ನೋಟುಗಳು ಬಂದಲ್ಲಿ ಅದನ್ನು ವಿನಿಮಯ ಮಾಡಿಕೊಳ್ಳುವುದು ಹೇಗೆ, ಎಲ್ಲಿ ಎಂಬ ವಿವರ ಇಲ್ಲಿದೆ.

How to: ವಿರೂಪಗೊಂಡ, ಹರಿದ ನೋಟು ಎಟಿಎಂನಲ್ಲಿ ಸಿಕ್ಕರೆ ಬದಲಿಸಿಕೊಳ್ಳೋದು ಹೇಗೆ? ಇಲ್ಲಿದೆ ಮಾಹಿತಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Srinivas Mata

Updated on: Aug 31, 2021 | 11:57 AM

ಕಳೆದ ಕೆಲವು ವರ್ಷಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಡಿಜಿಟಲೈಸೇಷನ್ ಭಾರೀ ದೊಡ್ಡ ಮಟ್ಟದಲ್ಲಿ ಆಗಿದೆ. ಆದರೂ ನಮಗೆ ಈಗಲೂ ಕೆಲವೊಮ್ಮೆ ಕೈಯಲ್ಲಿ ನಗದು ಇರಲೇಬೇಕು. ಈಗ, ಬಳಕೆದಾರ ಸ್ನೇಹಿಯಾಗಿ ನಗದು ಪಡೆಯಲು ಒಂದೇ ಒಂದು ಮಾರ್ಗ ಅಂದರೆ ಅದು ಎಟಿಎಂನಿಂದ ಹಣ ಹಿಂತೆಗೆದುಕೊಳ್ಳುವುದು. ಆದರೆ ನೋಟುಗಳನ್ನು ಹಿಂಪಡೆದದ್ದು ಬದಿಗಳಿಂದ ಅಥವಾ ಮೂಲೆಗಳಿಂದ ಹರಿದು ಬಂದರೆ ಏನು ಮಾಡೋದು? ಈ ಬಗ್ಗೆ ಮಾರುಕಟ್ಟೆಯಲ್ಲಿ ಯಾರೂ ಒಪ್ಪಿಕೊಳ್ಳದ ಒಂದು ವಿಷಯ ಈ ಲೇಖನದ ಮೂಲಕ ಖಚಿತವಾಗಿ ತಿಳಿಸಲಾಗುವುದು. ಆದ್ದರಿಂದ ನೀವು ಚಿಂತಿಸಬೇಕಾಗಿಲ್ಲ, ವಿರೂಪಗೊಂಡ ಅಥವಾ ಹರಿದ ನೋಟು ಎಟಿಎಂನಲ್ಲಿ ಸಿಕ್ಕರೆ ಈಗ ಅವುಗಳನ್ನು ವಿನಿಮಯ ಮಾಡಿಕೊಳ್ಳಬಹುದು.

ಯಾವ ಎಟಿಎಂನಿಂದ ಹಣವನ್ನು ಹಿಂಪಡೆಯಲಾಗಿತ್ತೋ ಆ ವಿರೂಪಗೊಂಡ ನೋಟುಗಳನ್ನು ವಿನಿಮಯ ಮಾಡಲು ನೀವು ಬ್ಯಾಂಕಿಗೆ ಅರ್ಜಿ ಸಲ್ಲಿಸಬೇಕು. ನೀವು ಹಣವನ್ನು ಹಿಂಪಡೆದ ಎಟಿಎಂನ ದಿನಾಂಕ, ಸಮಯ ಮತ್ತು ಸ್ಥಳವನ್ನು ನಮೂದಿಸಬೇಕು ಮತ್ತು ವಿತ್‌ಡ್ರಾಲ್ ಸ್ಲಿಪ್ ಅನ್ನು ಲಗತ್ತಿಸಬೇಕು. ಸ್ಲಿಪ್ ಇಲ್ಲದಿದ್ದರೆ, ಮೊಬೈಲ್‌ನಲ್ಲಿ ಸ್ವೀಕರಿಸಿದ ಸಂದೇಶದ ವಿವರಗಳನ್ನು ನೀವು ನೀಡಬೇಕಾಗುತ್ತದೆ.

ಆರ್‌ಬಿಐ ನಿಯಮಗಳ ಪ್ರಕಾರ, ವಿರೂಪಗೊಂಡ ನೋಟುಗಳನ್ನು ವಿನಿಮಯ ಮಾಡಲಾಗುವುದಿಲ್ಲ. ಆದರೆ ಬಳಕೆದಾರರ ದೂರೊಂದಕ್ಕೆ ಟ್ವಿಟ್ಟರ್‌ನಲ್ಲಿ ಉತ್ತರವನ್ನು ತಿಳಿಸಿದ್ದು, ಇಂಥ ಪರಿಸ್ಥಿತಿಯಲ್ಲಿ ಗ್ರಾಹಕರು ಯಾವ ಕ್ರಮಗಳನ್ನು ಅನುಸರಿಸಬೇಕು ಎಂದು ಬ್ಯಾಂಕ್ ತಿಳಿಸಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ಬಗ್ಗೆ ಹೇಳಿದ್ದು, “ನೋಟುಗಳನ್ನು ಅತ್ಯಾಧುನಿಕ ನೋಟು ವಿಂಗಡಿಸುವ ಯಂತ್ರಗಳ ಮೂಲಕ ನಮ್ಮ ಎಟಿಎಂಗಳಿಗೆ ಲೋಡ್ ಮಾಡುವ ಮೊದಲು ಚೆಕ್ ಮಾಡಲಾಗುತ್ತದೆ. ಆದ್ದರಿಂದ ಮಣ್ಣಾದ/ಹಾಳಾದ ನೋಟುಗಳ ವಿತರಣೆ ಅಸಾಧ್ಯ. ಆದರೂ ನಮ್ಮ ಯಾವುದೇ ಶಾಖೆಯಿಂದ ನೋಟು ವಿನಿಮಯ ಮಾಡಿಕೊಳ್ಳಬಹುದು,” ಎಂದು ತಿಳಿಸಿದೆ.

SBI ಪ್ರಕಾರ, ವಯಕ್ತಿಕವಾಗಿ ಆ ಬಗ್ಗೆ https://crcf.sbi.co.in/ccf/ ಈ ಲಿಂಕ್​ನಲ್ಲಿ General Banking // Cash ಸಂಬಂಧಿತ ವರ್ಗದ ಅಡಿಯಲ್ಲಿ ದೂರು ಸಲ್ಲಿಸಬಹುದು. ಈ ಲಿಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ATMಗಾಗಿ. ಇಲ್ಲಿ ಉಲ್ಲೇಖಿಸಬೇಕಾದ ಅಂಶ ಏನೆಂದರೆ, ಯಾವುದೇ ಬ್ಯಾಂಕ್ ಎಟಿಎಂಗಳಿಂದ ವಿರೂಪವಾದ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ನಿರಾಕರಿಸುವಂತಿಲ್ಲ. ಇದರ ಹೊರತಾಗಿಯೂ ಬ್ಯಾಂಕ್​ಗಳು ನಿಯಮಗಳನ್ನು ಉಲ್ಲಂಘಿಸಿದರೆ ಉದ್ಯೋಗಿಗಳ ವಿರುದ್ಧ ಕ್ರಮ ಕೈಗೊಳ್ಳಬಹುದು. ಗ್ರಾಹಕರ ದೂರಿನ ಆಧಾರದ ಮೇಲೆ ಬ್ಯಾಂಕ್ 10,000 ರೂಪಾಯಿಗಳವರೆಗೆ ಹಾನಿಯನ್ನು ಕಟ್ಟಿಕೊಡಬೇಕಾಗಬಹುದು.

ಇದನ್ನೂ ಓದಿ: ATM cash: ಸಮಯಕ್ಕೆ ಸರಿಯಾಗಿ ಹಣ ತುಂಬದೆ ಎಟಿಎಂ ಖಾಲಿಯಿದ್ದಲ್ಲಿ ಬ್ಯಾಂಕ್​ಗಳಿಗೆ 10 ಸಾವಿರ ರೂ. ದಂಡ

(How To Exchange Damaged Notes Withdraw From ATM Here Is The Step By Step Details)

ಸಕಾಲದಲ್ಲಿ 13 ನೇ ಕ್ರಾಸ್​ನಿಂದ 18ನೇ ಕ್ರಾಸ್ ತಲುಪಿದ ವಿದ್ಯಾರ್ಥಿನಿ
ಸಕಾಲದಲ್ಲಿ 13 ನೇ ಕ್ರಾಸ್​ನಿಂದ 18ನೇ ಕ್ರಾಸ್ ತಲುಪಿದ ವಿದ್ಯಾರ್ಥಿನಿ
VIDEO: ರಾಕೆಟ್ ರಾಕೆಟ್ ರಾಕೆಟ್: ಒಂದೇ ಕೈಯಲ್ಲಿ ಧೋನಿಯ ರಾಕೆಟ್ ಸಿಕ್ಸ್
VIDEO: ರಾಕೆಟ್ ರಾಕೆಟ್ ರಾಕೆಟ್: ಒಂದೇ ಕೈಯಲ್ಲಿ ಧೋನಿಯ ರಾಕೆಟ್ ಸಿಕ್ಸ್
ವೇದಿಕೆಯಲ್ಲೇ ಸಚಿವ ಖಂಡ್ರೆ, ಶಾಸಕ ಶೈಲೇಂದ್ರ ಬೆಲ್ದಾಳೆ ಮಾತಿನ ಚಕಮಕಿ
ವೇದಿಕೆಯಲ್ಲೇ ಸಚಿವ ಖಂಡ್ರೆ, ಶಾಸಕ ಶೈಲೇಂದ್ರ ಬೆಲ್ದಾಳೆ ಮಾತಿನ ಚಕಮಕಿ
ಭಾವಿ ಪತ್ನಿ ವೈಷ್ಣವಿಗಾಗಿ ಕನ್ನಡ ಕಲಿತು ಮಾತನಾಡಿದ ಅನುಕೂಲ್
ಭಾವಿ ಪತ್ನಿ ವೈಷ್ಣವಿಗಾಗಿ ಕನ್ನಡ ಕಲಿತು ಮಾತನಾಡಿದ ಅನುಕೂಲ್
ಬುರ್ಖಾ ತೆಗೆ, ಹೆಸರೇನು ಹೇಳು: ಬೆಂಗಳೂರಲ್ಲಿ ಮತ್ತೊಂದು ನೈತಿಕ ಪೊಲೀಸ್​ಗಿರಿ
ಬುರ್ಖಾ ತೆಗೆ, ಹೆಸರೇನು ಹೇಳು: ಬೆಂಗಳೂರಲ್ಲಿ ಮತ್ತೊಂದು ನೈತಿಕ ಪೊಲೀಸ್​ಗಿರಿ
ರಾಯಚೂರಿನ ಆರ್​ಟಿಪಿಎಸ್ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಅಗ್ನಿ ಅವಘಡ
ರಾಯಚೂರಿನ ಆರ್​ಟಿಪಿಎಸ್ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಅಗ್ನಿ ಅವಘಡ
VIDEO: ಧೋನಿ ಚಮತ್ಕಾರ... ಹೀಗೂ ರನೌಟ್ ಮಾಡಬಹುದು!
VIDEO: ಧೋನಿ ಚಮತ್ಕಾರ... ಹೀಗೂ ರನೌಟ್ ಮಾಡಬಹುದು!
ಆಸ್ಪತ್ರೆಯಲ್ಲಿ ಅಗ್ನಿ ಅವಘಡ, ಓರ್ವ ರೋಗಿ ಸಾವು, ಹಲವರಿಗೆ ಗಾಯ
ಆಸ್ಪತ್ರೆಯಲ್ಲಿ ಅಗ್ನಿ ಅವಘಡ, ಓರ್ವ ರೋಗಿ ಸಾವು, ಹಲವರಿಗೆ ಗಾಯ
ಹೊಸ ದಾಖಲೆ... ಕೇವಲ 26 ರನ್ ಬಾರಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಧೋನಿ
ಹೊಸ ದಾಖಲೆ... ಕೇವಲ 26 ರನ್ ಬಾರಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಧೋನಿ
ಉತ್ಸವಗಳ ಸಂದರ್ಭ ಪಾನಕ ಹಾಗೂ ಮಜ್ಜಿಗೆ ನೀಡುವುದರ ಹಿಂದಿನ ಅಧ್ಯಾತ್ಮಿಕ ರಹಸ್ಯ
ಉತ್ಸವಗಳ ಸಂದರ್ಭ ಪಾನಕ ಹಾಗೂ ಮಜ್ಜಿಗೆ ನೀಡುವುದರ ಹಿಂದಿನ ಅಧ್ಯಾತ್ಮಿಕ ರಹಸ್ಯ