ಸುದೀಪ್ ‘ವಿಕ್ರಾಂತ್ ರೋಣ’ಗೆ ಸಿಕ್ತು ಸಲ್ಮಾನ್ ಖಾನ್ ಹೊಗಳಿಕೆ; ಇದು ಕಿಚ್ಚನ ಫ್ಯಾನ್ಸ್ ಖುಷಿಪಡುವ ವಿಚಾರ

ಸೆಪ್ಟೆಂಬರ್​ 2 ಕಿಚ್ಚ ಸುದೀಪ್​ ಬರ್ತ್​ಡೇ. ಈ ವಿಶೇಷ ದಿನದಂದು ‘ವಿಕ್ರಾಂತ್​ ರೋಣ’ ಸಿನಿಮಾದ ಫಸ್ಟ್​ ಗ್ಲಿಂಪಸ್​ ರಿಲೀಸ್​ ಆಗಿತ್ತು. ಇದಕ್ಕೆ ‘ಡೆಡ್​ ಮ್ಯಾನ್ಸ್​ ಆ್ಯಂಥಮ್​’ ಎಂದು ಹೆಸರಿಡಲಾಗಿದೆ. ಇದನ್ನು ಸಲ್ಮಾನ್ ಖಾನ್​ ವೀಕ್ಷಣೆ ಮಾಡಿದ್ದಾರೆ.

ಸುದೀಪ್ ‘ವಿಕ್ರಾಂತ್ ರೋಣ’ಗೆ ಸಿಕ್ತು ಸಲ್ಮಾನ್ ಖಾನ್ ಹೊಗಳಿಕೆ; ಇದು ಕಿಚ್ಚನ ಫ್ಯಾನ್ಸ್ ಖುಷಿಪಡುವ ವಿಚಾರ
Follow us
| Updated By: ರಾಜೇಶ್ ದುಗ್ಗುಮನೆ

Updated on:Sep 04, 2021 | 10:39 PM

ಕಿಚ್ಚ ಸುದೀಪ್​ ಹಾಗೂ ಸಲ್ಮಾನ್​ ಖಾನ್​ ಗೆಳೆತನದ ಬಗ್ಗೆ ಮತ್ತೆ ಹೊಸದಾಗಿ ಹೇಳಬೇಕಿಲ್ಲ. ‘ದಬಾಂಗ್​ 3’ ಸಿನಿಮಾದಲ್ಲಿ ಇಬ್ಬರೂ ಒಟ್ಟಾಗಿ ಕೆಲಸ ಮಾಡಿದ್ದರು. ಈ ವೇಳೆ ಇಬ್ಬರ ನಡುವೆ ಒಳ್ಳೆಯ ಗೆಳೆತನ ಬೆಳೆದಿದೆ. ಅದು ಈಗಲೂ ಮುಂದುವರಿದುಕೊಂಡು ಬಂದಿದೆ. ಈಗ ಸುದೀಪ್​ ನಟನೆಯ ಬಹುನಿರೀಕ್ಷಿತ ‘ವಿಕ್ರಾಂತ್​ ರೋಣ’ ಸಿನಿಮಾ ಬಗ್ಗೆ ಸಲ್ಮಾನ್​ ಖಾನ್​ ಮೆಚ್ಚುಗೆಯ ಮಾತನಾಡಿದ್ದಾರೆ.

ಸೆಪ್ಟೆಂಬರ್​ 2 ಕಿಚ್ಚ ಸುದೀಪ್​ ಬರ್ತ್​ಡೇ. ಈ ವಿಶೇಷ ದಿನದಂದು ‘ವಿಕ್ರಾಂತ್​ ರೋಣ’ ಸಿನಿಮಾದ ಫಸ್ಟ್​ ಗ್ಲಿಂಪಸ್​ ರಿಲೀಸ್​ ಆಗಿತ್ತು. ಇದಕ್ಕೆ ‘ಡೆಡ್​ ಮ್ಯಾನ್ಸ್​ ಆ್ಯಂಥಮ್​’ ಎಂದು ಹೆಸರಿಡಲಾಗಿದೆ. ಇದನ್ನು ಸಲ್ಮಾನ್ ಖಾನ್​ ವೀಕ್ಷಣೆ ಮಾಡಿದ್ದಾರೆ. ಇದನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿರುವ ಅವರು​ ‘ಸುದೀಪ್​ ಬೆಸ್ಟ್​ ವಿಶಸ್​’ ಎಂದು ಬರೆದುಕೊಂಡಿದ್ದಾರೆ. ಜತೆಗೆ ಫಸ್ಟ್​ ಗ್ಲಿಂಪಸ್​ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಈ ಟ್ವೀಟ್​ ಅನ್ನು ಸುದೀಪ್​ ರೀಟ್ವೀಟ್​ ಮಾಡಿಕೊಂಡು ಧನ್ಯವಾದ ಹೇಳಿದ್ದಾರೆ.

‘ವಿಕ್ರಾಂತ್​ ರೋಣ’ ಹಿಂದಿಯಲ್ಲೂ ತೆರೆಗೆ ಬರುತ್ತಿದೆ. ಈಗ ಸಲ್ಮಾನ್​ ಖಾನ್​ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವುದು ಚಿತ್ರಕ್ಕೆ ಪ್ಲಸ್​ ಪಾಯಿಂಟ್​ ಆಗಲಿದೆ. ಸಲ್ಮಾನ್​ ಖಾನ್ ನೀಡುತ್ತಿರುವ ಬೆಂಬಲದಿಂದ ಸಿನಿಮಾ ಮತ್ತಷ್ಟು ಜನರಿಗೆ ತಲುಪಲು ಸಹಕಾರಿಯಾಗಲಿದೆ.

ಕಿಚ್ಚ ಸುದೀಪ್​ ಅವರ ಅಭಿಮಾನಿ ಬಳಗ ತುಂಬಾನೇ ದೊಡ್ಡದಿದೆ. ಹಿಂದಿ, ತೆಲುಗು ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿರುವ ಅವರು ಪರಭಾಷೆಯಲ್ಲೂ ಅಭಿಮಾನಿ ಬಳಗ ಹೊಂದಿದ್ದಾರೆ. ಬಾಲಿವುಡ್​ನ ಖ್ಯಾತ ನಟ ಸಲ್ಮಾನ್​ ಖಾನ್ ಜತೆ​​ಗೂ ಸುದೀಪ್​ಗೂ ಉತ್ತಮ ಫ್ರೆಂಡ್​ಶಿಪ್​ ಇದೆ. ‘ದಬಾಂಗ್​ 3’ ರಿಲೀಸ್​ ಆದ ನಂತರದಲ್ಲಿ ಸುದೀಪ್​ಗೆ ಸಲ್ಮಾನ್​ ಖಾನ್​ ಬಿಎಂಡಬ್ಲ್ಯು ಕಾರ್​ಅನ್ನು ಉಡುಗರೆಯಾಗಿ ನೀಡಿದ್ದರು.

ಇದನ್ನೂ ಓದಿ:ಸುದೀಪ್​ಗೆ ನೀರಜ್​ ಚೋಪ್ರಾ ಕಡೆಯಿಂದ ಹುಟ್ಟುಹಬ್ಬದ ಶುಭಾಶಯ; ‘ವಿಕ್ರಾಂತ್ ರೋಣ’ಗೂ ವಿಶೇಷ ವಿಶ್ 

ಅಕ್ರಮ ಹಣ ವರ್ಗಾವಣೆ ಪ್ರಕರಣ; ‘ವಿಕ್ರಾಂತ್​ ರೋಣ’ ನಟಿ ಜಾಕ್ವೆಲಿನ್​ ಫರ್ನಾಂಡಿಸ್ ವಿಚಾರಣೆ

Published On - 10:25 pm, Sat, 4 September 21

ತಾಜಾ ಸುದ್ದಿ
ಮೃತ ರೇಣುಕಾ ತಾಯಿ, ಪತ್ನಿ ಕಣ್ಣೀರು: ಸಾಂತ್ವನ ಹೇಳಿದ ರಂಭಾಪುರಿ ಶ್ರೀಗಳು
ಮೃತ ರೇಣುಕಾ ತಾಯಿ, ಪತ್ನಿ ಕಣ್ಣೀರು: ಸಾಂತ್ವನ ಹೇಳಿದ ರಂಭಾಪುರಿ ಶ್ರೀಗಳು
ಪವಿತ್ರಾ ಮನೆಯಲ್ಲಿ ಸ್ಥಳ ಮಹಜರು ವೇಳೆ ನಗ್ತಾ ಸಾಗಿದ ಆರೋಪಿ ಪವನ್
ಪವಿತ್ರಾ ಮನೆಯಲ್ಲಿ ಸ್ಥಳ ಮಹಜರು ವೇಳೆ ನಗ್ತಾ ಸಾಗಿದ ಆರೋಪಿ ಪವನ್
ರೇಣುಕಾ ಸ್ವಾಮಿ ಪ್ರಕರಣ: ಕಾರು ಚಾಲಕನ ಕುಟುಂಬದ ಗೋಳು ಕೇಳೋರ್ಯಾರು?
ರೇಣುಕಾ ಸ್ವಾಮಿ ಪ್ರಕರಣ: ಕಾರು ಚಾಲಕನ ಕುಟುಂಬದ ಗೋಳು ಕೇಳೋರ್ಯಾರು?
ಪೆಟ್ರೋಲ್ -ಡೀಸೆಲ್ ದರ ಏರಿಕೆ ವಿರುದ್ಧ ನಾರಿಯರು ಕಿಡಿ
ಪೆಟ್ರೋಲ್ -ಡೀಸೆಲ್ ದರ ಏರಿಕೆ ವಿರುದ್ಧ ನಾರಿಯರು ಕಿಡಿ
ರೇಣುಕಾ ಸ್ವಾಮಿ ಅಪಹರಣಕ್ಕೆ ಬಳಕೆ ಆಗಿದ್ದ ಕಾರು ಜಪ್ತಿ; ಇಲ್ಲಿದೆ ವಿಡಿಯೋ..
ರೇಣುಕಾ ಸ್ವಾಮಿ ಅಪಹರಣಕ್ಕೆ ಬಳಕೆ ಆಗಿದ್ದ ಕಾರು ಜಪ್ತಿ; ಇಲ್ಲಿದೆ ವಿಡಿಯೋ..
ಬಳ್ಳಾರಿ: ನೋಬಲ್ ಬುಕ್ ಆಫ್ ರೆಕಾರ್ಡ್ಸ್​​​ಗೆ ಸೇರಿದ 4 ತಿಂಗಳ ಮಗು ಸಾಯಿರಾ
ಬಳ್ಳಾರಿ: ನೋಬಲ್ ಬುಕ್ ಆಫ್ ರೆಕಾರ್ಡ್ಸ್​​​ಗೆ ಸೇರಿದ 4 ತಿಂಗಳ ಮಗು ಸಾಯಿರಾ
ಶ್ವಾಸಕೋಶದ ಸಾಮರ್ಥ್ಯ ಹೆಚ್ಚಿಸುವ ಆಸನ ಅರ್ಧ ಚಕ್ರಾಸನ
ಶ್ವಾಸಕೋಶದ ಸಾಮರ್ಥ್ಯ ಹೆಚ್ಚಿಸುವ ಆಸನ ಅರ್ಧ ಚಕ್ರಾಸನ
ಪವಿತ್ರಾ ಗೌಡ ಮನೆಯಲ್ಲಿ ಮಹಜರು; ಹೇಗಿದೆ ಕೊಲೆ ಆರೋಪಿಯ ಬಂಗಲೆ?
ಪವಿತ್ರಾ ಗೌಡ ಮನೆಯಲ್ಲಿ ಮಹಜರು; ಹೇಗಿದೆ ಕೊಲೆ ಆರೋಪಿಯ ಬಂಗಲೆ?
ವಿಡಿಯೋ: ಆದಿಚುಂಚನಗಿರಿಗೆ ಸೆಂಟ್ರಲ್ ಮಿನಿಸ್ಟರ್ ಕುಮಾರಣ್ಣ ಖಡಕ್​ ಎಂಟ್ರಿ
ವಿಡಿಯೋ: ಆದಿಚುಂಚನಗಿರಿಗೆ ಸೆಂಟ್ರಲ್ ಮಿನಿಸ್ಟರ್ ಕುಮಾರಣ್ಣ ಖಡಕ್​ ಎಂಟ್ರಿ
ತೈಲ ​​​ದರ ಏರಿಕೆ: ಕಿವಿಗೆ ಹೂ, ಕೈಯಲ್ಲಿ ಚಿಪ್ಪು ಹಿಡಿದು ಸಿಟಿ ರವಿ ಧರಣಿ
ತೈಲ ​​​ದರ ಏರಿಕೆ: ಕಿವಿಗೆ ಹೂ, ಕೈಯಲ್ಲಿ ಚಿಪ್ಪು ಹಿಡಿದು ಸಿಟಿ ರವಿ ಧರಣಿ