ಚಿರು ಮಗನಿಗೆ ರಾಯನ್ ಎನ್ನುವ ಹೆಸರು ಸೂಚಿಸಿದ್ದು ಯಾರು? ಇಲ್ಲಿದೆ ಉತ್ತರ
ಮೇಘನಾ ಮಗನ ನಾಮಕರಣ ಕಾರ್ಯಕ್ರಮಕ್ಕೆ ಮೇಘನಾ ತಂದೆ ಸುಂದರ್ ರಾಜ್ ಸೇರಿ ಕುಟುಂಬದ ಎಲ್ಲರೂ ಹಾಜರಿ ಹಾಕಿದ್ದರು. ಖಾಸಗಿ ಹೋಟೆಲ್ನಲ್ಲಿ ಈ ಕಾರ್ಯಕ್ರಮ ನಡೆದಿದೆ.
ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಮಗನಿಗೆ ರಾಯನ್ ರಾಜ್ ಸರ್ಜಾ ಎಂದು ನಾಮಕರಣ ಮಾಡಲಾಗಿದೆ. ರಾಯನ್ ಎಂದರೆ ಅರ್ಥ ಏನು ಎನ್ನುವ ಪ್ರಶ್ನೆಗೆ ಮೇಘನಾ ರಾಜ್ ಕಡೆಯಿಂದ ಉತ್ತರ ಸಿಕ್ಕಿದೆ. ಸ್ವರ್ಗದ ಬಾಗಿಲನ್ನು ತೆರೆದುಕೊಟ್ಟ ಯುವರಾಜ ಎನ್ನುವ ಅರ್ಥವನ್ನು ರಾಯನ್ ಹೆಸರು ಹೊಂದಿದೆ. ಹಾಗಾದರೆ ಈ ಹೆಸರನ್ನು ಸೂಚಿಸಿದವರು ಯಾರು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.
ಮೇಘನಾ ಮಗನ ನಾಮಕರಣ ಕಾರ್ಯಕ್ರಮಕ್ಕೆ ಮೇಘನಾ ತಂದೆ ಸುಂದರ್ ರಾಜ್ ಸೇರಿ ಕುಟುಂಬದ ಎಲ್ಲರೂ ಹಾಜರಿ ಹಾಕಿದ್ದರು. ಖಾಸಗಿ ಹೋಟೆಲ್ನಲ್ಲಿ ಈ ಕಾರ್ಯಕ್ರಮ ನಡೆದಿದೆ. ರಾಯನ್ ಎನ್ನುವ ಹೆಸರು ಎಲ್ಲರ ಗಮನ ಸೆಳೆದಿದೆ. ಈ ಹೆಸರನ್ನು ಸೂಚಿಸಿದ್ದು ರಾಯನ್ ಚಿಕ್ಕಪ್ಪ, ನಟ ಧ್ರುವ ಸರ್ಜಾ ಅನ್ನೋದು ವಿಶೇಷ.
ಇದನ್ನೂ ಓದಿ: ಚರ್ಚ್ನಲ್ಲಿ ಚಿರು-ಮೇಘನಾ ರಾಜ್ ಪುತ್ರನ ನಾಮಕರಣ; ಕ್ರೈಸ್ತ ಸಂಪ್ರದಾಯದ ವಿಡಿಯೋ ಇಲ್ಲಿದೆ
ಚಿರು ಫೋಟೋ ನೋಡಿದರೆ ಅಳು ನಿಲ್ಲಿಸ್ತಾನೆ ಮೇಘನಾ ಪುತ್ರ ರಾಯನ್ ರಾಜ್ ಸರ್ಜಾ
Latest Videos