ಉತ್ತರ ಪ್ರದೇಶದಲ್ಲಿರುವ ಕನ್ನಡದ ಐಎಎಸ್ ಅಧಿಕಾರಿ ಸುಹಾಸ್ ಟೊಕಿಯೋ ಒಲಂಪಿಕ್ಸ್ನಲ್ಲಿ ರವಿವಾರ ಇತಿಹಾಸ ಸೃಷ್ಟಿಸಲಿದ್ದಾರೆ
ಒಂದು ಪಕ್ಷ ಸೋತರೂ, ಉತ್ತರ ಪ್ರದೇಶದ ಗೌತಮ ಬುದ್ಧ ನಗರದ (ನೊಯಿಡಾ) ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ 38-ವರ್ಷ ವಯಸ್ಸಿನ ವಿಕಾಸ್ ಅವರು ಬೆಳ್ಳಿ ಪದಕ ಗೆದ್ದು ಪ್ಯಾರಾ ಒಲಂಪಿಕ್ಸ್ನಲ್ಲಿ ಪದಕವೊಂದನ್ನು ಮೊಟ್ಟ ಮೊದಲ ಐ ಎ ಎಸ್ ಅಧಿಕಾರಿ ಎನಿಸಿಕೊಳ್ಳಲಿದ್ದಾರೆ.
ಉತ್ತರ ಪ್ರದೇಶ ಕೇಡರ್ ಐ ಎ ಎಸ್ ಅಧಿಕಾರಿಯಾಗಿರುವ ಕನ್ನಡಿಗ ಸುಹಾಸ್ ಲಲಿನಕೆರೆ ಯತಿರಾಜ್ ಇತಿಹಾಸ ಸೃಷ್ಟಿಸುವ ಹೊಸ್ತಿಲಲ್ಲಿದ್ದಾರೆ. ಟೋಕಿಯೋ ಪ್ಯಾರಾಒಲಂಪಿಕ್ಸ್ ಬ್ಯಾಡ್ಮಿಂಟನ್ ಸ್ಫರ್ಧೆಯಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಲು ಕೇವಲ ಒಂದು ಹರ್ಡಲ್ ಮಾತ್ರ ಬಾಕಿ ಇದ್ದು, ನಾಳೆ ಅಂದರೆ ರವಿವಾರದಂದು ನಡೆಯಲಿರುವ ಫೈನಲ್ ನಲ್ಲಿ ಅವರು ಟಾಪ್ ಸೀಡ್ ಫ್ರಾನ್ಸಿನ ಲುಕಾಸ್ ಮಾಜರ್ ಅವರನ್ನು ಸೋಲಿಸಿದರೆ ಬಂಗಾರ ತಮ್ಮ ಕೊರಳಿಗೆ ಹಾಕಿಕೊಂಡು ಇತಿಹಾಸ ನಿರ್ಮಿಸಲಿದ್ದಾರೆ.
ಒಂದು ಪಕ್ಷ ಸೋತರೂ, ಉತ್ತರ ಪ್ರದೇಶದ ಗೌತಮ ಬುದ್ಧ ನಗರದ (ನೊಯಿಡಾ) ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ 38-ವರ್ಷ ವಯಸ್ಸಿನ ವಿಕಾಸ್ ಅವರು ಬೆಳ್ಳಿ ಪದಕ ಗೆದ್ದು ಪ್ಯಾರಾ ಒಲಂಪಿಕ್ಸ್ನಲ್ಲಿ ಪದಕವೊಂದನ್ನು ಮೊಟ್ಟ ಮೊದಲ ಐ ಎ ಎಸ್ ಅಧಿಕಾರಿ ಎನಿಸಿಕೊಳ್ಳಲಿದ್ದಾರೆ.
ಎಸ್ಎಲ್4 ಕೆಟೆಗೆರಿಯಲ್ಲಿ ವಿಶ್ವದ ಮೂರನೇ ಕ್ರಮಾಂಕದ ಆಟಗಾರನಾಗಿರುವ ಸುಹಾಸ್ ಅವರು ಶನಿವಾರ ಆಡಿದ ಸೆಮಿಫೈನಲ್ ಪಂದ್ಯವೂ ಸೇರಿದಂತೆ ಮೂರು ಪಂದ್ಯಗಳನ್ನು ಗೆದ್ದಿದ್ದಾರೆ.
ಕಾಲಿನಿಂದ ಊನರಾಗಿರುವ ಸುಹಾಸ್ ಅವರ ಸಾಧನೆ ಮತ್ತು ಪ್ರಗತಿಯನ್ನು ಬಹಳ ಕುತೂಹಲದಿಂದ ಗಮನಿಸುತ್ತಿರುವ ಐಎಎಸ್ ಅಧಿಕಾರಿಗಳ ಸಂಘ ಟ್ವೀಟ್ಮೂಲಕ ಅಭಿನಂಧಿಸುತ್ತಾ ಹಾರೈಸುತ್ತಿದೆ.
https://twitter.com/IASassociation/status/1433993969495470080?s=20
ಸುಹಾಸ ಹಾಸನದವರಾದರೂ ಓದಿ ಬೆಳೆದಿದ್ದು ಶಿವಮೊಗ್ಗದಲ್ಲಿ. ಸುರತ್ಕಲ್ ನ ನ್ಯಾಶನಲ್ ಇನ್ಸ್ಸ್ಟಿಟ್ಯೂಟ್ ಅಫ್ ಟೆಕ್ನಾಲಜಿಯಲ್ಲಿ ಕಂಪ್ಯೂಟರ್ ಸೈನ್ಸ್ ಇಂಜಿನೀಯರಿಂಗ್ ಪದವಿ ಪಡೆದ ಮೇಲೆ ಯುಪಿಎಸ್ಸಿ ನಡೆಸುವ ಐ ಎ ಎಸ್ ಪರೀಕ್ಷೆ ಬರೆದು ಉತ್ತಮ ಱಂಕ್ನೊಂದಿಗೆ ಪಾಸು ಮಾಡಿ ಉತ್ತರ ಪ್ರದೇಶದ ಬೇರೆ ಬೇರೆ ಜಿಲ್ಲೆಗಳಲ್ಲಿ ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟ್ ಸೇವೆ ಸಲ್ಲಿಸುತ್ತಿದ್ದಾರೆ.
#Cheer4Suhas ಹ್ಯಾಷ್ಟ್ಯಾಗ್ ನೊಂದಿಗೆ ಅನೇಕ ಜನ ಮತ್ತು ವಾಟ್ಸ್ಯಾಪ್ ಗ್ರೂಪ್ಗಳು ಸುಹಾಸ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಿವೆ. ನೀವೂ ಅಭಿನಂದಿಸಿ ಹಾರೈಸಿ.
ಇದನ್ನೂ ಓದಿ: Tokyo Paralympics: ಬ್ಯಾಡ್ಮಿಂಟನ್‌ನಲ್ಲಿ ಚಿನ್ನ ಗೆದ್ದ ಪ್ರಮೋದ್ ಭಗತ್! ಕಂಚು ಗೆದ್ದ ಮನೋಜ್ ಸರ್ಕಾರ್