ರಜಿನಿಕಾಂತ್ ಸಂಬಂಧಿಯೆಂದು ಹೇಳುವ ವ್ಯಕ್ತಿಯೊಬ್ಬ ಜೀವನ ನಿರ್ವಹಣೆಗೆ ನಟನಿಂದ  ಸಹಾಯ ಸಿಗುವ ನಿರೀಕ್ಷೆಯಿಟ್ಟುಕೊಂಡಿದ್ದಾನೆ!

ರಜಿನಿಕಾಂತ್ ಸಂಬಂಧಿಯೆಂದು ಹೇಳುವ ವ್ಯಕ್ತಿಯೊಬ್ಬ ಜೀವನ ನಿರ್ವಹಣೆಗೆ ನಟನಿಂದ  ಸಹಾಯ ಸಿಗುವ ನಿರೀಕ್ಷೆಯಿಟ್ಟುಕೊಂಡಿದ್ದಾನೆ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 04, 2021 | 4:44 PM

ಚೇತನ್ ಹೇಳುತ್ತಿರುವುದು ಸತ್ಯವೇ ಆಗಿರಬಹುದು. ಆದರೆ ರಜಿನಿಯನ್ನೇ ನೆಚ್ಚಿಕೊಂಡು ಕೂರುವುದರಲ್ಲಿ ಏನು ಪ್ರಯೋಜನ? ಅವರ ಸಿಕ್ಕರೂ ಇವರ ಎಲ್ಲ ಕಷ್ಟಗಳು ತೀರುವಷ್ಟು ಸಹಾಯ ಮಾಡುತ್ತಾರೆ ಅಂತ ಏನು ಗ್ಯಾರಂಟಿ?

ಈ ವಿಡಿಯೋನಲ್ಲಿ ಟಿವಿ9 ವರದಿಗಾರನೊಂದಿಗೆ ಮಾತಾಡುತ್ತಿರುವ ವ್ಯಕ್ತಿಯ ಹೆಸರು ಚೇತನ್. ಇವರೇ ಹೇಳಿಕೊಳ್ಳುವ ಹಾಗೆ ಭಾರತದ ಮೆಗಾ ಸ್ಟಾರ್ ರಜಿನಿಕಾಂತ್ ಇವರಿಗೆ ಸಬಂಧದಲ್ಲಿ ಮಾವನಾಗಬೇಕು. ಆಫ್ ಕೋರ್ಸ್ ರಜನಿಕಾಂತ್ ತಮಿಳು ಚಿತ್ರರಂಗದಲ್ಲಿ ಸೂಪರ್ಸ್ಟಾರ್ ಅದರೂ ಕಳೆದ ಕೆಲ ದಶಕಗಳಿಂದ ಚೆನ್ನೈನಲ್ಲಿ ಅವರು ವಾಸವಾಗಿದ್ದರೂ, ಮೂಲತಃ ಕನ್ನಡಿಗರು ಮತ್ತು ನಟನಾಗುವ ಮೊದಲು ಬಿಟಿಎಸ್ನಲ್ಲಿ ಕಂಡಕ್ಟರ್ ಅಗಿ ಕೆಲಸ ಮಾಡಿದವರು. ಓಕೆ, ಅವರ ಬಗ್ಗೆ ವಿದೇಶಗಳಲ್ಲಿರುವ ಜನರಿಗೂ ಗೊತ್ತಿರುವುದರಿಂದ ಅದರ ಅವಶ್ಯಕತೆಯಿಲ್ಲ. ಹಾಗಾಗಿ, ಚೇತನ್ ಸಮಸ್ಯೆ ಏನು ಅವರು ರಜಿನಿಯಿಂದ ಏನು ನಿರೀಕ್ಷಿಸುತ್ತಿದ್ದಾರೆ ಅಂತ ತಿಳಿದುಕೊಳ್ಳೋಣ.

ರಜಿನಿ ತನ್ನ ಸಂಬಂಧಿಯಾಗಿದ್ದರೂ ಅವರನ್ನು ಭೇಟಿ ಮಾಡುವುದು ಚೇತನ್ಗೆಸಾಧ್ಯವಾಗುತ್ತಿಲ್ಲವಂತೆ. ಕೊರೋನಾ ಪಿಡುಗು ಹಬ್ಬಿದಾಗಿನಿಂದ ತುಂಬಾ ಕಷ್ಟದಲ್ಲಿರುವ ಕಾರಣ ಅವರನ್ನು ಭೇಟಿಯಾಗಿ ಬದುಕಿಗೆ ಏನಾದರೂ ದಾರಿ ಮಾಡಿಕೊಡಿ ಅಂತ ಕೇಳಬೇಕೆಂದುಕೊಂಡಿದ್ದೇನೆ ಎಂದು ಚೇತನ್ ಹೇಳುತ್ತಾರೆ. ಆದರೆ, ಮಧ್ಯದಲ್ಲಿರುವ ಜನ ಅವರನ್ನು ತಡೆಯುತ್ತಿದ್ದಾರಂತೆ. ತನ್ನ ತಂದೆ-ತಾಯಿಗಳನ್ನು ಕಳಿಸಿದರೂ ಭೇಟಿಯಾಗುವುದಕ್ಕೆ ರಜಿನಿಕಾಂತ್ ಅವರ ಸುತ್ತಮುತ್ತ ಇರುವ ಜನ ಅವಾಕಾಶ ಕಲ್ಪಿಸಲಿಲ್ಲ ಎಂದು ಚೇತನ್ ಹೇಳುತ್ತಾರೆ.

ಕೊವಿಡ್-19 ಪಿಡುಗುನಿಂದಾಗಿ ಸಾಲ-ಸೋಲ ಮಾಡಿ ಸಾಲಗಾರ ಕಣ್ತಪ್ಪಿಸಿ ತಿರುಗಾಡುತ್ತಿರುವುದಾಗಿ ಹೇಳುವ ಚೇತನ್, ತಾನು ನಟನಿಂದ ಭಿಕ್ಷೆ ಕೇಳುತ್ತಿಲ್ಲ್ಲ ಬದುಕಲು ಒಂದು ದಾರಿ ತೋರಿಸುವಂತೆ ಕೇಳುತ್ತಿರುವುದಾಗಿ ಹೇಳುತ್ತಿದ್ದಾರೆ. ಹೆಂಡತಿ-ಮಕ್ಕಳೊಂದಿಗೆ ಬದುಕಿನ ನಿರ್ವಹಣೆ ತುಂಬಾ ಕಷ್ಟವಾಗುತ್ತಿದೆ, ಅದರೆ ಒಮ್ಮೆ ರಜಿನಿಕಾಂತ್ ಅವರನ್ನು ಸಿಕ್ಕು ಮಾತಾಡಿದರೆ, ಅವರು ಖಂಡಿತ ಸಹಾಯ ಮಾಡುತ್ತಾರೆ ಎಂದು ಎಂಭ ವಿಶ್ವಾಸ ಚೇತನ್​ಗಿದೆ.

ಚೇತನ್ ಹೇಳುತ್ತಿರುವುದು ಸತ್ಯವೇ ಆಗಿರಬಹುದು. ಆದರೆ ರಜಿನಿಯನ್ನೇ ನೆಚ್ಚಿಕೊಂಡು ಕೂರುವುದರಲ್ಲಿ ಏನು ಪ್ರಯೋಜನ? ಅವರ ಸಿಕ್ಕರೂ ಇವರ ಎಲ್ಲ ಕಷ್ಟಗಳು ತೀರುವಷ್ಟು ಸಹಾಯ ಮಾಡುತ್ತಾರೆ ಅಂತ ಏನು ಗ್ಯಾರಂಟಿ? ಅವರು ಮಾಡುವ ಸಹಾಯದಿಂದ ಚೇತನ್ ಕುಟುಂಬ ಎಷ್ಟು ದಿನ ಬದುಕಬಲ್ಲದು?

ಹಾಗಾಗಿ, ನಾವೆಲ್ಲ ಸೇರಿ ಅವರಿಗೆ ಹೇಳಬಹುದಾದ ಕಿವಿಮಾತು ಏನೆಂದರೆ, ಯಾರಿಂದಲೂ ಸಹಾಯದ ನಿರೀಕ್ಷೆ ಇಟ್ಟುಕೊಳ್ಳದೆ, ನಿಮಗೆ ಸಿಗುವ ಕೆಲಸ ಮನಃಪೂರ್ವಕವಾಗಿ ಮಾಡಿ. ಅಣ್ಣಾವ್ರ ಹಾಡು ನೆನಪಿದೆ ತಾನೆ, ‘ಆಗದು ಎಂದು ಕೈಲಾಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ…ಮನಸ್ಸೊಂದಿದ್ದರೆ ಮಾರ್ಗವು ಉಂಟು ಕೆಚ್ಚೆದೆ ಇರಬೇಕು…’ ಇದನ್ನು ನೆನೆಪಿಸಿಕೊಳ್ಳಿ ಮತ್ತು ಈಗಿನಿಂದಲೇ ಯಾವುದೇ ಕೆಲಸ ಸಿಕ್ಕರೂ ಆದನ್ನು ಮಾಡಲಾರಂಭಿಸಿ.

ಶ್ರಮಜೀವಿಗಳಿಗೆ ದೇವರು ಸಹಾಯ ಮಾಡುತ್ತಾನೆ, ಮೈಗಳ್ಳರಿಗಲ್ಲ. ಇದನ್ನು ಯಾವತ್ತೂ ನೆನಪಿಡಿ.

ಇದನ್ನೂ ಓದಿ:  ಬೆಳಗಾವಿಯಲ್ಲಿ ಬಿಜೆಪಿ ಶಾಸಕನ ಹುಟ್ಟು ಹಬ್ಬದ ವಿಡಿಯೋ ವೈರಲ್; ಹೂವಿನ ಮಳೆ ಸುರಿಸಿದ ಪೊಲೀಸರು