ದೊಡ್ಡ ಪತ್ರೆ ತಂಬುಳಿಯನ್ನು ಹೇಗೆ ಮಾಡ್ತಾರೆ ನೋಡಿ; ವಿಧಾನ ಸುಲಭವಿದೆ
ಅಜೀರ್ಣವಾಗಿದ್ದರೆ ಮತ್ತು ನಾಲಗೆಯಲ್ಲಿ ಅಗ್ರವಿದ್ದರೆ ಯಾವುದಾದರೊಂದು ಬಗೆಯ ತಂಬುಳಿ ಸೇವಿಸದರೆ ಅಜೀರ್ಣ ಹಾಗೂ ಅಗ್ರ ನಿವಾರಣೆಯಾಗುತ್ತದೆ.
ದೊಡ್ಡ ಪತ್ರೆ ತಂಬುಳಿ ನಾಲಿಗೆ ಹೆಚ್ಚು ರುಚಿ ಕೊಡುವ ಭಕ್ಷ್ಯವಾಗಿದೆ. ಇದನ್ನು ಮಲೆನಾಡು ಭಾಗದಲ್ಲಿ ಹೆಚ್ಚು ಮಾಡುತ್ತಾರೆ. ಇದರ ಜೊತೆಗೆ ಧಾರವಾಡದಲ್ಲೂ ಬಹಳಷ್ಟು ಜನ ಇಷ್ಟಪಡುತ್ತಾರೆ. ಸಾಮಾನ್ಯವಾಗಿ ತಂಬುಳಿಯನ್ನು ಬೇಸಿಗೆಯಲ್ಲಿ ಸವಿಯುತ್ತಾರೆ. ಅಜೀರ್ಣವಾಗಿದ್ದರೆ ಮತ್ತು ನಾಲಗೆಯಲ್ಲಿ ಅಗ್ರವಿದ್ದರೆ ಯಾವುದಾದರೊಂದು ಬಗೆಯ ತಂಬುಳಿ ಸೇವಿಸದರೆ ಅಜೀರ್ಣ ಹಾಗೂ ಅಗ್ರ ನಿವಾರಣೆಯಾಗುತ್ತದೆ. ಮಜ್ಜಿಗೆಯಿಂದ ಸಿದ್ಧಪಡಿಸುವ ತಂಬುಳಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ತಂಬುಳಿಯಲ್ಲಿ ಹಲವು ವಿಧಗಳಿವೆ. ಒಂದೊಂದು ಆರೋಗ್ಯ ಸಮಸ್ಯೆಗೆ ಒಂದೊಂದು ಬಗೆಯ ತಂಬುಳಿ ಪ್ರಯೋಜನಕಾರಿಯಾಗಿದೆ. ದೊಡ್ಡ ಪತ್ರೆ ತಂಬುಳಿ ಕೂಡಾ ಆರೋಗ್ಯಕ್ಕೆ ಒಳ್ಳೆಯದು.
ರುಚಿ ರುಚಿಯಾದ ದೊಡ್ಡ ಪತ್ರೆ ತಂಬುಳಿಯನ್ನು ಹೇಗೆ ಮಾಡುತ್ತಾರೆ ಎಂಬುವುದನ್ನು ವಿಡಿಯೋದಲ್ಲಿ ತಿಳಿಸಲಾಗಿದೆ. ಇದಕ್ಕೆ ಬೇಕಾಗುವ ಸಾಮಾಗ್ರಿಗಳು ಹೀಗಿವೆ- ದೊಡ್ಡ ಪತ್ರೆ, ಕರಿ ಮೆಣಸು, ಜೀರಿಗೆ, ಅಜ್ವಾನ, ಹಸಿಮೆಣಸಿನ ಕಾಯಿ, ಕರಿಬೇವು, ಕೊತ್ತಂಬರಿ ಸೊಪ್ಪು, ಶುಂಠಿ, ಕಾಯಿ ತುರಿ, ಸಕ್ಕರೆ, ಉಪ್ಪು, ಮೊಸರು ಮತ್ತು ಮಸಾಲೆಗಳು. ಊಟಕ್ಕೆ ಅನ್ನದ ಜೊತೆ ಸವಿಯಲು ದೊಡ್ಡ ಪತ್ರೆ ತಂಬುಳಿಯನ್ನು ತಕ್ಷಣ ಮಾಡಬಹುದು.
ಇದನ್ನೂ ಓದಿ
Health Tips: ಯಕೃತ್ತು ಆರೋಗ್ಯ ಸುಧಾರಿಸಲು ಸೇವಿಸಬೇಕಾದ ಆಹಾರ ಪದಾರ್ಥಗಳು
Health Tips: ದೇಹದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಈ ಸರಳ ವಿಧಾನವನ್ನು ಅನುಸರಿಸಿ
(Ingredients for Mexican Mint Thumbuli and how to prepare it)