ಬೆಳಗಾವಿಯಲ್ಲಿ ಬಿಜೆಪಿ ಶಾಸಕನ ಹುಟ್ಟು ಹಬ್ಬದ ವಿಡಿಯೋ ವೈರಲ್; ಹೂವಿನ ಮಳೆ ಸುರಿಸಿದ ಪೊಲೀಸರು
ಕಿತ್ತೂರು ಬಿಜೆಪಿ ಶಾಸಕ ಮಹಾಂತೇಶ್ ದೊಡ್ಡಗೌಡರ್ ಮನೆಯಲ್ಲಿ ನಡೆದಿದ್ದ ಹುಟ್ಟುಹಬ್ಬದ ಸಂಭ್ರಮದಲ್ಲಿ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದು, ಮಹರಾಜರಂತೆ ಕುರಿಸಿ ಹೂವಿನ ಸುರಿಮಳೆ ಸುರಿಸಿದ್ದಾರೆ.
ಬೆಳಗಾವಿ: ಶಾಸಕರ ಹುಟ್ಟುಹಬ್ಬದಲ್ಲಿ ಭಾಗಿಯಾಗಿದ್ದ, ಪೊಲೀಸ್ ಅಧಿಕಾರಿಗಳ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಿತ್ತೂರು ಬಿಜೆಪಿ ಶಾಸಕ ಮಹಾಂತೇಶ್ ದೊಡ್ಡಗೌಡರ್ ಮನೆಯಲ್ಲಿ ನಡೆದಿದ್ದ ಹುಟ್ಟುಹಬ್ಬದ ಸಂಭ್ರಮದಲ್ಲಿ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದು, ಮಹರಾಜರಂತೆ ಕುರಿಸಿ ಹೂವಿನ ಸುರಿಮಳೆ ಸುರಿಸಿದ್ದಾರೆ.
ಶಾಸಕ ಮಹಾಂತೇಶ್ ದೊಡ್ಡಗೌಡರ್ ಮತ್ತು ಪತ್ನಿಯನ್ನು ಕುರಿಸಿ, ಪೊಲೀಸ್ ಅಧಿಕಾರಿಗಳು ಹೂವಿನ ಮಳೆ ಸುರಿದಿದ್ದಾರೆ. ಬೈಲಹೊಂಗಲ ಡಿಎಸ್‌ಪಿ ಶಿವಾನಂದ ಕಟಗಿ, ಸಿಪಿಐ ಸಾತೇನಹಳ್ಳಿ, ನೇಸರಗಿ ಪೊಲೀಸ್ ಠಾಣೆ ಪಿಎಸ್ಐ ಶೀಗಿಹಳ್ಳಿ, ಎಸ್‌ಐ ವಿಶ್ವನಾಥ್ ಮಲ್ಲನ್ನವರ್, ಪೇದೆಗಳು ಮತ್ತು ಚಾಲಕರು ಶಾಸಕ ಮಹಾಂತೇಶ್ ದೊಡ್ಡಗೌಡರ್ ಹುಟ್ಟುಹಬ್ಬದಲ್ಲಿ ಭಾಗಿಯಾಗಿದ್ದಾರೆ.
ಇತ್ತೀಚೆಗೆ ರಾಜ್ಯದಲ್ಲಿ ಕಂಡುಬಂದ ವಿರಳ ಹುಟ್ಟು ಹಬ್ಬ ಆಚರಣೆ: ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಗದಗ ಜಿಲ್ಲೆಯಲ್ಲಿ ಇಂದು ಪ್ರವಾಸ ಕೈಗೊಂಡಿದ್ರು. ವಸತಿ ನಿಲಯಗಳಿಗೆ ಭೇಟಿ ಮಾಡಿ ಅಲ್ಲಿನ ಪರಿಸ್ಥಿತಿ ಪರಿಶೀಲನೆ ಮಾಡಿದ್ರು. ಈ ವೇಳೆ ಹಾಸ್ಟೆಲ್ನಲ್ಲಿ ಇರೋ ವಿದ್ಯಾರ್ಥಿಯೊಬ್ಬರ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕೊವಿಡ್ ಭಯದಲ್ಲಿದ್ದ ವಿದ್ಯಾರ್ಥಿನಿಯರಿಗೆ ಹುರಿದುಂಬಿಸಿದ್ರು.
ಗದಗ ನಗರದ ಹುಬ್ಬಳ್ಳಿ ರಸ್ತೆಯಲ್ಲಿರೋ ಸಮಾಜ ಕಲ್ಯಾಣ ಇಲಾಖೆ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿ ನಿಲಯಕ್ಕೆ ಭೇಟಿ ನೀಡಿ ವಸತಿ ನಿಲಯದ ವ್ಯವಸ್ಥೆ ಪರಿಶೀಲನೆ ಮಾಡಿದ್ರು. ವಸತಿ ನಿಲಯದ ಮಕ್ಕಳ ಜೊತೆ ಕೆಲ ಹೊತ್ತು ಸಚಿವ ಕೋಟ ಶ್ರೀನಿವಾಸ ಪೂಜಾರಿ ಕಾಲ ಕಳೆದ್ರು. ಇಂದು ಹಾಸ್ಟೆಲ್ ವಿದ್ಯಾರ್ಥಿನಿ ಸುನಿತಾ ಹುಟ್ಟುಹಬ್ಬ ಇತ್ತು. ಹೀಗಾಗಿ ಅಲ್ಲಿನ ವಿದ್ಯಾರ್ಥಿನಿಯರು ಕೇಕ್ ತಂದು ಹುಟ್ಟು ಹಬ್ಬದ ಆಚರಣೆ ಸಂಭ್ರಮದಲ್ಲಿ ಇದ್ರು. ಈ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯ ಅಪೇಕ್ಷೆ ಮೇರೆಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವ್ರೂ ಭಾಗಿಯಾಗಿದ್ರು. ಮಕ್ಕಳಿಂದ ಕೇಕ್ ಕಟ್ ಮಾಡಿಸಿ ಮಕ್ಕಳಿಗೆ ಕೇಕ್ ತಿನ್ನಿಸಿದ್ರು . ಹುಟ್ಟು ಹಬ್ಬ ಆಚರಿಸಿಕೊಂಡ ವಿದ್ಯಾರ್ಥಿನಿ ಸಚಿವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದಳು.
ಖುದ್ದು ಸಚಿವರೇ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಕ್ಕೆ ವಿದ್ಯಾರ್ಥಿನಿಗಳಿಗೆ ಖುಷಿಯಾಗಿದೆ. ಈ ಕಾರ್ಯಕ್ರಮದಲ್ಲಿ ಡಿಸಿ ಸುಂದರೇಶ್ ಬಾಬು, ಸಿಇಒ ಭರತ್, ಸಮಾಜ ಕಲ್ಯಾಣ ಅಧಿಕಾರಿ ಪ್ರಶಾಂತ್ ವರಗಪ್ಪನವರ, ಬಿಸಿಎಂ ಅಧಿಕಾರಿ ಬಸವರಾಜ್ ಬಳ್ಳಾರಿ ಸೇರಿ ಹಲವು ಅಧಿಕಾರಿಗಳು ಸಚಿವರಿಗೆ ಸಾಥ್ ನೀಡಿದ್ರು. ಹಾಸ್ಟೆಲ್ನಲ್ಲಿ ಕೆಲ ಅವ್ಯವಸ್ಥೆಗಳು ಸಚಿವ ಕೋಟ ಶ್ರೀನಿವಾಸ ಅವ್ರ ಗಮನಕ್ಕೆ ತರಲಾಯಿತು. ಬಿಸಿ ನೀರು ಇಲ್ಲದೇ ಚಳಿಯಲ್ಲೂ ಮಕ್ಕಳು ತಣ್ಣೀರು ಸ್ನಾನ ಮಾಡುತ್ತಿದ್ದಾರೆ ಎಂಬಂತಹ ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತರಲಾಯಿತು. ಈ ವೇಳೆ ಮಾತನಾಡಿದ ಸಚಿವರು ವಸತಿ ನಿಲಯದ ಸ್ವಚ್ಛತೆ ಹಾಗೂ ಊಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ರು. ಆದ್ರೆ, ಕೆಲ ಅವ್ಯವಸ್ಥೆ ಬಗ್ಗೆ ಅಸಮಾಧಾನ ಕೂಡ ವ್ಯಕ್ತಪಡಿಸಿದ್ರು. ಬಿಸಿ ನೀರು ಹಾಗೂ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿ ಸುಂದರೇಶಬಾಬು ಸೂಚನೆ ನೀಡುವುದಾಗಿ ಹೇಳಿದ್ರು.
ಇದನ್ನೂ ಓದಿ: ಹಾಸ್ಟೆಲ್ನಲ್ಲಿ ಕೇಕ್ ಕಟ್ ಮಾಡಿ, ವಿದ್ಯಾರ್ಥಿನಿಯ ಬರ್ಥ್ ಡೆ ಆಚರಿಸಿದ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ
ಅಪ್ಪನ ಸಮಾಧಿ ಬಳಿ ಕೇಕ್ ಕಟ್; ಸಮಾಧಿಗೆ ಕೇಕ್ ಅರ್ಪಿಸಿ, ಜನ್ಮ ದಿನ ಆಚರಿಸಿಕೊಂಡ ಬಾಲಕಿ, ಮನ ಮಿಡಿಯುವ ವಿಡಿಯೋ ವೈರಲ್
Published On - 11:50 am, Sat, 4 September 21