ಕೊಪ್ಪಳ ಜಿಲ್ಲೆ ಕುಷ್ಟಗಿ ಪಟ್ಟಣದಲ್ಲಿ ಪುಟ್ಟ ಬಾಲಕಿ ತನ್ನ ಎಂಟನೇ ವರ್ಷದ ಹುಟ್ಟು ಹಬ್ಬವನ್ನ ತಂದೆಯ ಸಮಾಧಿ ಬಳಿ ಆಚರಣೆ ಮಾಡಿಕೊಂಡಿದ್ದಾಳೆ. ಈ ಘಟನೆ ಮನಕಲಕುವಂತಿತ್ತು. ಪುಟ್ಟ ಬಾಲಕಿ ಸ್ಪಂದನ ಸಮಾಧಿ ಬಳಿ ಕೇಕ್ ಕಟ್ ಮಾಡೋ ವಿಡಿಯೋ ಸದ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಪ್ಪನ ಸಮಾಧಿ ಬಳಿ ಕೇಕ್ ಕಟ್ ಮಾಡಿ, ಸಮಾಧಿಗೆ ಕೇಕ್ ಅರ್ಪಿಸಿದ ಮಗಳು
ಕೊಪ್ಪಳ: ಹೆಣ್ಣು ಮಕ್ಕಳಿಗೆ ತಂದೆನೇ ಎಲ್ಲಾ ಆಗಿರುತ್ತಾರೆ. ಅವರ ಫಸ್ಟ್ ಹೀರೋ, ಬೆಸ್ಟ್ ಫ್ರೆಂಡ್ ಎಲ್ಲವೂ ತಂದೆನೇ. ಆದ್ರೆ ಅಂತಹ ಅಪ್ಪನನ್ನು ಕಳೆದುಕೊಂಡ ಮಗಳು ನಿಜಕ್ಕೂ ಅವರ ನೆನಪಲ್ಲೇ ಬೆಳೆಯುತ್ತಿರುತ್ತಾರೆ. ಅವರ ಕಷ್ಟ, ಸುಖ ಎಲ್ಲವನ್ನೂ ಮರೆಯಾದ ಅಪ್ಪನ ಬಳಿ ಹೇಳಿಕೊಳ್ಳಲು ಅವರ ಸಮಾಧಿ ಬಳಿ ಬಂದು ಮಾತನಾಡುವುದು. ಯಾರು ಇಲ್ಲದ ಸ್ಥಳಗಳಲ್ಲಿ ಅಪ್ಪ ನನ್ನ ಜೊತೆ ಇದ್ದಾರೆ ಎಂದು ಮಾತನಾಡುವುದನ್ನು ಮಾಡುತ್ತಿರುತ್ತಾರೆ. ಈಗ ಅದೇ ರೀತಿ ತಂದೆಯನ್ನು ಕಳೆದುಕೊಂಡ ಪುಟ್ಟ ಮಗಳು ತಂದೆಯ ಸಮಾಧಿ ಬಳಿ ಕೇಕ್ ಕಟ್ ಮಾಡಿ ಹುಟ್ಟು ಹಬ್ಬ ಆಚರಣೆ ಮಾಡಿದ ಘಟನೆ ಕೊಪ್ಪಳದಲ್ಲಿ ನಡೆದಿದ್ದು ಮನ ಮಿಡಿಯುವಂತಿದೆ.
ಕೊಪ್ಪಳ ಜಿಲ್ಲೆ ಕುಷ್ಟಗಿ ಪಟ್ಟಣದಲ್ಲಿ ಪುಟ್ಟ ಬಾಲಕಿ ತನ್ನ ಎಂಟನೇ ವರ್ಷದ ಹುಟ್ಟು ಹಬ್ಬವನ್ನ ತಂದೆಯ ಸಮಾಧಿ ಬಳಿ ಆಚರಣೆ ಮಾಡಿಕೊಂಡಿದ್ದಾಳೆ. ಈ ಘಟನೆ ಮನಕಲಕುವಂತಿತ್ತು. ಪುಟ್ಟ ಬಾಲಕಿ ಸ್ಪಂದನ ಸಮಾಧಿ ಬಳಿ ಕೇಕ್ ಕಟ್ ಮಾಡೋ ವಿಡಿಯೋ ಸದ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸ್ಪಂದನ ತಂದೆ ಮಹೇಶ್ ಕೊನಸಾಗರ ಕಳೆದ ಮೇ ತಿಂಗಳಲ್ಲಿ ಮಹಾಮಾರಿ ಕೊರೊನಾದಿಂದ ಮೃತಪಟ್ಟಿದ್ರು. ತಂದೆಯ ನೆನಪಲ್ಲಿ ಸ್ಪಂದನ ತನ್ನ ಹುಟ್ಟು ಹಬ್ಬವನ್ನು ತಂದೆಯ ಸಮಾಧಿ ಬಳಿ ಆಚರಿಸಿಕೊಂಡಿದ್ದಾರೆ. ತಂದೆಯ ಸಮಾಧಿ ಬಳಿ ಕೇಕ್ ಕತ್ತರಿಸಿ ನೀವು ಇಲ್ಲ ಎನ್ನುವ ಭಾವನೆಯೇ ಇಲ್ಲ. ನೀವು ನಮ್ಮ ಜೊತೆಗಿದ್ದೀರಿ ಎನ್ನುವಂತೆ ತನ್ನ ಎಂಟನೇ ವರ್ಷದ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ಹಾಗೂ ತಂದೆಯ ಸಮಾಧಿಗೆ ಕೇಕ್ ಅರ್ಪಿಸಿದ್ದಾರೆ.