ಹಾಸ್ಟೆಲ್​ನಲ್ಲಿ ಕೇಕ್​ ಕಟ್​ ಮಾಡಿ, ವಿದ್ಯಾರ್ಥಿನಿಯ ಬರ್ಥ್ ​​ಡೆ ಆಚರಿಸಿದ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ

ಗದಗ ನಗರದ ಹುಬ್ಬಳ್ಳಿ ರಸ್ತೆಯಲ್ಲಿರೋ ಸಮಾಜ ಕಲ್ಯಾಣ ಇಲಾಖೆ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿ ನಿಲಯಕ್ಕೆ ಭೇಟಿ ನೀಡಿ ವಸತಿ ನಿಲಯದ ವ್ಯವಸ್ಥೆ ಪರಿಶೀಲನೆ ಮಾಡಿದ್ರು.

ಹಾಸ್ಟೆಲ್​ನಲ್ಲಿ ಕೇಕ್​ ಕಟ್​ ಮಾಡಿ, ವಿದ್ಯಾರ್ಥಿನಿಯ ಬರ್ಥ್ ​​ಡೆ ಆಚರಿಸಿದ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ
ಹಾಸ್ಟೆಲ್​ನಲ್ಲಿ ಕೇಕ್​ ಕಟ್​ ಮಾಡಿ, ವಿದ್ಯಾರ್ಥಿನಿಯ ಬರ್ಥ್ ​​ಡೆ ಆಚರಿಸಿದ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ

ಗದಗ: ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಗದಗ ಜಿಲ್ಲೆಯಲ್ಲಿ ಇಂದು ಪ್ರವಾಸ ಕೈಗೊಂಡಿದ್ರು. ವಸತಿ ನಿಲಯಗಳಿಗೆ ಭೇಟಿ ಮಾಡಿ ಅಲ್ಲಿನ ಪರಿಸ್ಥಿತಿ ಪರಿಶೀಲನೆ ಮಾಡಿದ್ರು. ಈ ವೇಳೆ ಹಾಸ್ಟೆಲ್​ನಲ್ಲಿ ಇರೋ ವಿದ್ಯಾರ್ಥಿಯೊಬ್ಬರ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕೊವಿಡ್ ಭಯದಲ್ಲಿದ್ದ ವಿದ್ಯಾರ್ಥಿನಿಯರಿಗೆ ಹುರಿದುಂಬಿಸಿದ್ರು.

ಗದಗ ನಗರದ ಹುಬ್ಬಳ್ಳಿ ರಸ್ತೆಯಲ್ಲಿರೋ ಸಮಾಜ ಕಲ್ಯಾಣ ಇಲಾಖೆ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿ ನಿಲಯಕ್ಕೆ ಭೇಟಿ ನೀಡಿ ವಸತಿ ನಿಲಯದ ವ್ಯವಸ್ಥೆ ಪರಿಶೀಲನೆ ಮಾಡಿದ್ರು. ವಸತಿ ನಿಲಯದ ಮಕ್ಕಳ ಜೊತೆ ಕೆಲ ಹೊತ್ತು ಸಚಿವ ಕೋಟ ಶ್ರೀನಿವಾಸ ಪೂಜಾರಿ ಕಾಲ ಕಳೆದ್ರು. ಇಂದು ಹಾಸ್ಟೆಲ್‌ ವಿದ್ಯಾರ್ಥಿನಿ ಸುನಿತಾ ಹುಟ್ಟುಹಬ್ಬ ಇತ್ತು. ಹೀಗಾಗಿ ಅಲ್ಲಿನ ವಿದ್ಯಾರ್ಥಿನಿಯರು ಕೇಕ್ ತಂದು ಹುಟ್ಟು ಹಬ್ಬದ ಆಚರಣೆ ಸಂಭ್ರಮದಲ್ಲಿ ಇದ್ರು. ಈ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯ ಅಪೇಕ್ಷೆ ಮೇರೆಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವ್ರೂ ಭಾಗಿಯಾಗಿದ್ರು. ಮಕ್ಕಳಿಂದ ಕೇಕ್ ಕಟ್ ಮಾಡಿಸಿ ಮಕ್ಕಳಿಗೆ ಕೇಕ್ ತಿನ್ನಿಸಿದ್ರು . ಹುಟ್ಟು ಹಬ್ಬ ಆಚರಿಸಿಕೊಂಡ ವಿದ್ಯಾರ್ಥಿನಿ ಸಚಿವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದ್ಲು.

ಖುದ್ದು ಸಚಿವರೇ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಕ್ಕೆ ವಿದ್ಯಾರ್ಥಿನಿಗಳಿಗೆ ಖುಷಿಯಾಗಿದೆ. ಈ ಕಾರ್ಯಕ್ರಮದಲ್ಲಿ ಡಿಸಿ ಸುಂದರೇಶ್ ಬಾಬು, ಸಿಇಒ ಭರತ್, ಸಮಾಜ ಕಲ್ಯಾಣ ಅಧಿಕಾರಿ ಪ್ರಶಾಂತ್ ವರಗಪ್ಪನವರ, ಬಿಸಿಎಂ ಅಧಿಕಾರಿ ಬಸವರಾಜ್ ಬಳ್ಳಾರಿ ಸೇರಿ ಹಲವು ಅಧಿಕಾರಿಗಳು ಸಚಿವರಿಗೆ ಸಾಥ್ ನೀಡಿದ್ರು. ಹಾಸ್ಟೆಲ್​ನಲ್ಲಿ ಕೆಲ ಅವ್ಯವಸ್ಥೆಗಳು ಸಚಿವ ಕೋಟ ಶ್ರೀನಿವಾಸ ಅವ್ರ ಗಮನಕ್ಕೆ ತರಲಾಯಿತು. ಬಿಸಿ ನೀರು ಇಲ್ಲದೇ ಚಳಿಯಲ್ಲೂ ಮಕ್ಕಳು ತಣ್ಣೀರು ಸ್ನಾನ ಮಾಡುತ್ತಿದ್ದಾರೆ ಎಂಬಂತಹ ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತರಲಾಯಿತು. ಈ ವೇಳೆ ಮಾತನಾಡಿದ ಸಚಿವರು ವಸತಿ ನಿಲಯದ ಸ್ವಚ್ಛತೆ ಹಾಗೂ ಊಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ರು. ಆದ್ರೆ, ಕೆಲ ಅವ್ಯವಸ್ಥೆ ಬಗ್ಗೆ ಅಸಮಾಧಾನ ಕೂಡ ವ್ಯಕ್ತಪಡಿಸಿದ್ರು. ಬಿಸಿ ನೀರು ಹಾಗೂ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿ ಸುಂದರೇಶಬಾಬು ಸೂಚನೆ ನೀಡುವುದಾಗಿ ಹೇಳಿದ್ರು.

kota srinivasa pujari 1

ಹಾಸ್ಟೆಲ್​ನಲ್ಲಿ ಕೇಕ್​ ಕಟ್​ ಮಾಡಿ, ವಿದ್ಯಾರ್ಥಿನಿಯ ಬರ್ಥ್ ​​ಡೆ ಆಚರಿಸಿದ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ

ಇದನ್ನೂ ಓದಿ: ಸಿದ್ಧಾರ್ಥ್​ ಶುಕ್ಲಾ ಆಸ್ತಿ ಮೌಲ್ಯ ಎಷ್ಟು, ಅವರ ಬಳಿ ಇದ್ದ ಕಾರುಗಳಾವವು? ಇಲ್ಲಿದೆ ಮಾಹಿತಿ

Click on your DTH Provider to Add TV9 Kannada