AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಘರ್ಷ ಮರೆತು ಒಂದಾದ ರಾಜ್​-ವಿಷ್ಣು ಫ್ಯಾನ್ಸ್​; ಪುತ್ಥಳಿ ತೆರವು ಕಾರ್ಯಕ್ಕೆ ಮುಂದಾದ ಬಿಬಿಎಂಪಿ ವಿರುದ್ಧ ಆಕ್ರೋಶ

‘ನ್ಯಾಯಾಲಯದ ಆದೇಶದ ಮೇಲೆ ನಮಗೂ ಗೌರವವಿದೆ. ಆದರೆ ಪ್ರತಿಮೆ ಅಭಿಮಾನಿಗಳ ಹಕ್ಕು ಎಂಬುದನ್ನು ಸಾಬೀತುಪಡಿಸಲು ಕಾಲಾವಕಾಶ ಬಂದಿದೆ’ ಎಂದು ರಾಜ್​ಕುಮಾರ್​ ಮತ್ತು ವಿಷ್ಣುವರ್ಧನ್ ಅಭಿಮಾನಿಗಳು ಒಂದಾಗುತ್ತಿದ್ದಾರೆ.

ಸಂಘರ್ಷ ಮರೆತು ಒಂದಾದ ರಾಜ್​-ವಿಷ್ಣು ಫ್ಯಾನ್ಸ್​; ಪುತ್ಥಳಿ ತೆರವು ಕಾರ್ಯಕ್ಕೆ ಮುಂದಾದ ಬಿಬಿಎಂಪಿ ವಿರುದ್ಧ ಆಕ್ರೋಶ
ಡಾ. ರಾಜ್​ಕುಮಾರ್​, ಡಾ. ವಿಷ್ಣುವರ್ಧನ್
TV9 Web
| Updated By: ಮದನ್​ ಕುಮಾರ್​|

Updated on: Sep 05, 2021 | 9:40 AM

Share

ಇಬ್ಬರು ಸ್ಟಾರ್​ ನಟರ ಅಭಿಮಾನಿಗಳ ನಡುವೆ ಸಣ್ಣ-ಪುಟ್ಟ ಕಿರಿಕ್​ಗಳು ಆಗುವುದು ಸಹಜ. ಎಲ್ಲ ಚಿತ್ರರಂಗದಲ್ಲೂ ಅದು ನಡೆದುಕೊಂಡು ಬಂದಿದೆ. ಕರುನಾಡಿನಲ್ಲಿ ಡಾ. ರಾಜ್​ಕುಮಾರ್​ ಮತ್ತು ಡಾ. ವಿಷ್ಣುವರ್ಧನ್​ ಅಭಿಮಾನಿಗಳ ನಡುವೆ ಕೆಲವೊಮ್ಮೆ ಘರ್ಷಣೆ ನಡೆದ ಉದಾಹರಣೆ ಕೂಡ ಇದೆ. ಆದರೆ ಅದನ್ನೆಲ್ಲ ಬದಿಗಿಟ್ಟು ಈಗ ಈ ಸ್ಟಾರ್​ ನಟರ ಅಭಿಮಾನಿಗಳು ಒಂದಾಗಿದ್ದಾರೆ. ತಮ್ಮ ನೆಚ್ಚಿನ ಹೀರೋಗಳ ಪುತ್ಥಳಿಗಳನ್ನು ಉಳಿಸಿಕೊಳ್ಳಲು ಜೊತೆಯಾಗಿ ಕೈ ಜೋಡಿಸಿದ್ದಾರೆ. ಈ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಇಂದು (ಸೆ.5) ಬೆಂಗಳೂರಿನ ರಾಜಾಜಿನಗರದ ‘ರಾಜ್​ ಕುಮಾರ್​ ಸಮುದಾಯ ಭವನ’ದಲ್ಲಿ 11 ಗಂಟೆಗೆ ಸುದ್ದಿಗೋಷ್ಠಿ ನಡೆಸುವುದಾಗಿ ರಾಜ್​ ಮತ್ತು ವಿಷ್ಣು ಅಭಿಮಾನಿಗಳು ತಿಳಿಸಿದ್ದಾರೆ.

‘ಬೆಂಗಳೂರು ನಗರದಲ್ಲಿ ಇರುವ ಮೇರುನಟರ ಎಲ್ಲ ಪ್ರತಿಮೆಗಳನ್ನು ತೆರವುಗೊಳಿಸಲು ಬಿಬಿಎಂಪಿಯವರು ಕೋರ್ಟ್​ ಆದೇಶದ ಮೇಲೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ನಮಗೂ ನ್ಯಾಯಾಲಯದ ಆದೇಶದ ಮೇಲೆ ಗೌರವವಿದೆ. ಆದರೆ ಪ್ರತಿಮೆ ಅಭಿಮಾನಿಗಳ ಹಕ್ಕು ಎಂಬುದನ್ನು ಸಾಬೀತುಪಡಿಸಲು ಕಾಲಾವಕಾಶ ಬಂದಿದೆ. ಬಹುಕಾಲದಿಂದ ರಾಜ್​ಕುಮಾರ್​ ಮತ್ತು ವಿಷ್ಣುವರ್ಧನ್​ ಅಭಿಮಾನಿಗಳ ಮಧ್ಯೆ ಸಂಘರ್ಷ ಏರ್ಪಟ್ಟಿರುತ್ತಿದ್ದವು. ಅದನ್ನೆಲ್ಲ ಮರೆತು ನಾವೆಲ್ಲರೂ ಒಂದೇ ವೇದಿಕೆಯಿಂದ ಒಗ್ಗಟ್ಟಾಗಿ ಬಿಬಿಎಂಪಿ ವಿರುದ್ಧ ಸಮರ ಸಾರಲು ಅಭಿಮಾನಗಳ ಸಮಾಗಮನವನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಇಬ್ಬರೂ ನಟರ ಅಭಿಮಾನಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನೆಚ್ಚಿನ ನಟರ ಅಭಿಮಾನಿಗಳು ಸಂಘಟನೆ ಕಟ್ಟಿಕೊಂಡು ಆಯಾ ಏರಿಯಾದಲ್ಲಿ ಪುತ್ಥಳಿಗಳನ್ನು ನಿರ್ಮಿಸಿದ್ದಾರೆ. ಆದರೆ, ಇದರಲ್ಲಿ ಬಹುತೇಕರು ಬಿಬಿಎಂಪಿಯಿಂದ ಒಪ್ಪಿಗೆ ಪಡೆದಿಲ್ಲ. ಈ ಕಾರಣಕ್ಕೆ ಪುತ್ಥಳಿಯ ತೆರವು ಕಾರ್ಯಾಚರಣೆಗೆ ಬಿಬಿಎಂಪಿ ಮುಂದಾಗಿದೆ. ರಾಜ್​ಕುಮಾರ್, ಶಂಕರ್ ನಾಗ್, ವಿಷ್ಣು ವರ್ಧನ್, ಬಸವಣ್ಣ ಹೀಗೆ ಅನೇಕರ ಪುತ್ಥಳಿ ಸ್ಥಾಪನೆಗೊಂಡಿದೆ. ಇವರ ಅಭಿಮಾನಿಗಳು ಬಿಬಿಎಂಪಿಯಿಂದ‌ ಅನುಮತಿ ಪಡೆದಿಲ್ಲ ಎಂಬುದು ಗೊತ್ತಾಗಿದೆ. ಆದಷ್ಟು ಬೇಗ ತೆರವು ಕಾರ್ಯಾಚರಣೆ ನಡೆಯಲಿದೆ. ಈಗಾಗಲೇ ಈ ಬಗ್ಗೆ ಬಿಬಿಎಂಪಿ ಸರ್ವೆ ಕಾರ್ಯ ಶುರುಮಾಡಿದೆ. ಸರ್ವೆಯಲ್ಲಿ ಅನೇಕ ಪುತ್ಥಳಿಗಳನ್ನು ಗುರುತಿಸಲಾಗಿದೆ.

ಈ ಬಗ್ಗೆ ನಟ ಅನಿರುದ್ಧ್​ ಇತ್ತೀಚೆಗೆ ಮಾತನಾಡಿದ್ದರು. ‘ಇಷ್ಟು ವರ್ಷ ಬಿಟ್ಟು ಈಗ ಪುತ್ತಳಿ ತೆರವು ಮಾಡುತ್ತಿರುವುದು ಕಷ್ಟಕರ ಸಂಗತಿ. ಅನಧಿಕೃತವಾಗಿ ಪುತ್ತಳಿ ನಿರ್ಮಾಣ ಮಾಡಿದ್ದು ತಪ್ಪಿರಬಹುದು. ಆದರೆ ನಿರ್ಮಾಣ ಸಮಯದಲ್ಲೇ ಈ ಬಗ್ಗೆ ಯೋಚಿಸಬೇಕಿತ್ತು. ಆ ಜವಾಬ್ದಾರಿ ಸರ್ಕಾರದ ಮೇಲಿತ್ತು. ಈಗಲೂ ನಗರದಲ್ಲಿರುವ ಪುತ್ತಳಿಗಳನ್ನು ತೆರವು ಮಾಡದೆ, ಸೂಕ್ತ ಸ್ಥಳದಲ್ಲಿ ಪ್ರತಿಮೆ ಸ್ಥಾಪನೆಗೆ ಅವಕಾಶ ಕೊಡಬಹುದು. ನನಗೆ ಸರ್ಕಾರದ ಮೇಲೆ ಭರವಸೆ ಇದೆ’ ಎಂದು ಅವರು ಹೇಳಿದ್ದರು.

ಇದನ್ನೂ ಓದಿ:

ಡಾ. ರಾಜ್​, ಅಂಬರೀಷ್​ಗೆ ಸಿಕ್ಕ ಸ್ಥಾನ ವಿಷ್ಣುವರ್ಧನ್​ಗೆ ಯಾಕಿಲ್ಲ? ಸಾಕ್ಷಿ ಸಹಿತ ಪ್ರಶ್ನೆ ಕೇಳಿದ ಅನಿರುದ್ಧ್

‘ಡಾ. ರಾಜ್​ಕುಮಾರ್​ ನೋಡಿ ಮೆಚ್ಚಿದ್ದ ಧಾರಾವಾಹಿ ಅದು’; ಅಪರೂಪದ ಕ್ಷಣ ನೆನಪಿಸಿಕೊಂಡ ಶ್ರೀದೇವಿ

ಬಿಬಿಎಂಪಿ ಕಚೇರಿ ಎದುರೇ ನಾಯಿಗಳಿಗೆ ಶಾಲು ಹೊದೆಸಿ ಸನ್ಮಾನಿಸಿದ ವಾಟಾಳ್!
ಬಿಬಿಎಂಪಿ ಕಚೇರಿ ಎದುರೇ ನಾಯಿಗಳಿಗೆ ಶಾಲು ಹೊದೆಸಿ ಸನ್ಮಾನಿಸಿದ ವಾಟಾಳ್!
ಧರ್ಮಶಾಲಾ: ಪ್ಯಾರಾಗ್ಲೈಡಿಂಗ್ ವೇಳೆ ಅಪಘಾತ, ವ್ಯಕ್ತಿ ಸಾವು
ಧರ್ಮಶಾಲಾ: ಪ್ಯಾರಾಗ್ಲೈಡಿಂಗ್ ವೇಳೆ ಅಪಘಾತ, ವ್ಯಕ್ತಿ ಸಾವು
ಚಂದ್ರ ಕುಂಭ ರಾಶಿಯಲ್ಲಿ ಸಂಚಾರ: ಇಂದಿನ ದಿನ ಭವಿಷ್ಯ ಇಲ್ಲಿದೆ
ಚಂದ್ರ ಕುಂಭ ರಾಶಿಯಲ್ಲಿ ಸಂಚಾರ: ಇಂದಿನ ದಿನ ಭವಿಷ್ಯ ಇಲ್ಲಿದೆ
ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಬಿ. ಸರೋಜಾದೇವಿ ಅಂತ್ಯಕ್ರಿಯೆಗೆ ಸಿದ್ಧತೆ
ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಬಿ. ಸರೋಜಾದೇವಿ ಅಂತ್ಯಕ್ರಿಯೆಗೆ ಸಿದ್ಧತೆ
ಸಿಎಂರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸಿಲ್ಲವಾದರೆ ಖಂಡನಾರ್ಹ: ರಾಜಣ್ಣ
ಸಿಎಂರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸಿಲ್ಲವಾದರೆ ಖಂಡನಾರ್ಹ: ರಾಜಣ್ಣ
ಟನಲ್ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ತೇಜಸ್ವಿ ಸೂರ್ಯಗೆ ಸಿಎಂ ತಿರುಗೇಟು
ಟನಲ್ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ತೇಜಸ್ವಿ ಸೂರ್ಯಗೆ ಸಿಎಂ ತಿರುಗೇಟು
ಬಿ.ಸಿ. ಪಾಟೀಲ್ ಸಿನಿಮಾಗೆ ಸಮಸ್ಯೆ ಆದಾಗ ಸಹಾಯ ಮಾಡಿದ್ದ ಬಿ. ಸರೋಜಾದೇವಿ
ಬಿ.ಸಿ. ಪಾಟೀಲ್ ಸಿನಿಮಾಗೆ ಸಮಸ್ಯೆ ಆದಾಗ ಸಹಾಯ ಮಾಡಿದ್ದ ಬಿ. ಸರೋಜಾದೇವಿ
ಪ್ರತಿಭಟನೆಯ ಭಾಗವಾಗೇ ನಿತಿನ್ ಗಡ್ಕರಿಗೆ ಪತ್ರ ಬರೆದಿರೋದು: ಸಿದ್ದರಾಮಯ್ಯ
ಪ್ರತಿಭಟನೆಯ ಭಾಗವಾಗೇ ನಿತಿನ್ ಗಡ್ಕರಿಗೆ ಪತ್ರ ಬರೆದಿರೋದು: ಸಿದ್ದರಾಮಯ್ಯ
ಕರ್ನಾಟಕದಲ್ಲಿ 3 ಲಕ್ಷ ಕೋಟಿ ರೂ. ವೆಚ್ಚದ ಕಾಮಗಾರಿ ಜಾರಿಯಲ್ಲಿವೆ: ಸಚಿವ
ಕರ್ನಾಟಕದಲ್ಲಿ 3 ಲಕ್ಷ ಕೋಟಿ ರೂ. ವೆಚ್ಚದ ಕಾಮಗಾರಿ ಜಾರಿಯಲ್ಲಿವೆ: ಸಚಿವ
ಕೀಟನಾಶಕ‌ ಮಿಶ್ರಿತ ನೀರು ಕುಡಿದು 12 ಮಂದಿ ಮಕ್ಕಳು ಅಸ್ವಸ್ಥ
ಕೀಟನಾಶಕ‌ ಮಿಶ್ರಿತ ನೀರು ಕುಡಿದು 12 ಮಂದಿ ಮಕ್ಕಳು ಅಸ್ವಸ್ಥ